Përkthimi i kuptimeve të Kuranit Fisnik - Përkthimi kanadezisht - Hamza Betur

Numri i faqes:close

external-link copy
170 : 2

وَاِذَا قِیْلَ لَهُمُ اتَّبِعُوْا مَاۤ اَنْزَلَ اللّٰهُ قَالُوْا بَلْ نَتَّبِعُ مَاۤ اَلْفَیْنَا عَلَیْهِ اٰبَآءَنَا ؕ— اَوَلَوْ كَانَ اٰبَآؤُهُمْ لَا یَعْقِلُوْنَ شَیْـًٔا وَّلَا یَهْتَدُوْنَ ۟

“ಅಲ್ಲಾಹು ಅವತೀರ್ಣಗೊಳಿಸಿದ್ದನ್ನು ಅನುಸರಿಸಿರಿ” ಎಂದು ಅವರೊಡನೆ ಹೇಳಲಾದರೆ, ಅವರು ಹೇಳುತ್ತಾರೆ: “ಇಲ್ಲ, ನಮ್ಮ ಪೂರ್ವಜರು ಯಾವ ಮಾರ್ಗದಲ್ಲಿರುವುದನ್ನು ನಾವು ಕಂಡೆವೋ ಅದನ್ನೇ ನಾವು ಅನುಸರಿಸುತ್ತೇವೆ.”[1] ಅವರ ಪೂರ್ವಜರು ಏನೂ ತಿಳಿಯದವರು ಮತ್ತು ಸನ್ಮಾರ್ಗ ಪಡೆಯದವರಾಗಿದ್ದರೂ ಸಹ. info

[1] ಇಂತಹ ಜನರು ಇಂದು ಕೂಡ ಇದ್ದಾರೆ. ಧರ್ಮದಲ್ಲಿ ಯಾವುದೇ ಪುರಾವೆಯಿಲ್ಲದ ನವೀನಾಚಾರಗಳನ್ನು ತೊರೆಯಿರಿ ಎಂದು ಅವರೊಡನೆ ಹೇಳಿದರೆ, ಇವೆಲ್ಲವನ್ನೂ ನಮ್ಮ ಪೂರ್ವಜರು ಆಚರಿಸುತ್ತಿದ್ದರು; ನಾವು ಅವರನ್ನು ಹಿಂಬಾಲಿಸಿ ಅವರ ಮಾರ್ಗದಲ್ಲಿ ಚಲಿಸುತ್ತೇವೆ ಎಂದು ಅವರು ಹೇಳುತ್ತಾರೆ.

التفاسير:

external-link copy
171 : 2

وَمَثَلُ الَّذِیْنَ كَفَرُوْا كَمَثَلِ الَّذِیْ یَنْعِقُ بِمَا لَا یَسْمَعُ اِلَّا دُعَآءً وَّنِدَآءً ؕ— صُمٌّۢ بُكْمٌ عُمْیٌ فَهُمْ لَا یَعْقِلُوْنَ ۟

ಸತ್ಯನಿಷೇಧಿಗಳ ಉದಾಹರಣೆಯು ಕರೆ ಮತ್ತು ಕೂಗನ್ನು ಮಾತ್ರ ಕೇಳುವ ಜಾನುವಾರುಗಳ ಮುಂದೆ ಕಿರಿಚುವ ವ್ಯಕ್ತಿಯಂತೆ. ಅವರು ಕಿವುಡರು, ಮೂಕರು ಮತ್ತು ಕುರುಡರು. ಆದ್ದರಿಂದ ಅವರು ಅರ್ಥಮಾಡಿಕೊಳ್ಳುವುದಿಲ್ಲ. info
التفاسير:

external-link copy
172 : 2

یٰۤاَیُّهَا الَّذِیْنَ اٰمَنُوْا كُلُوْا مِنْ طَیِّبٰتِ مَا رَزَقْنٰكُمْ وَاشْكُرُوْا لِلّٰهِ اِنْ كُنْتُمْ اِیَّاهُ تَعْبُدُوْنَ ۟

ಓ ಸತ್ಯವಿಶ್ವಾಸಿಗಳೇ! ನಾವು ನಿಮಗೆ ನೀಡಿದ ಶುದ್ಧ ವಸ್ತುಗಳಿಂದ ತಿನ್ನಿರಿ ಮತ್ತು ಅಲ್ಲಾಹನಿಗೆ ಕೃತಜ್ಞರಾಗಿರಿ; ನೀವು ಅವನನ್ನು ಮಾತ್ರ ಆರಾಧಿಸುವವರಾಗಿದ್ದರೆ. info
التفاسير:

external-link copy
173 : 2

اِنَّمَا حَرَّمَ عَلَیْكُمُ الْمَیْتَةَ وَالدَّمَ وَلَحْمَ الْخِنْزِیْرِ وَمَاۤ اُهِلَّ بِهٖ لِغَیْرِ اللّٰهِ ۚ— فَمَنِ اضْطُرَّ غَیْرَ بَاغٍ وَّلَا عَادٍ فَلَاۤ اِثْمَ عَلَیْهِ ؕ— اِنَّ اللّٰهَ غَفُوْرٌ رَّحِیْمٌ ۟

ಅವನು ನಿಮಗೆ ಶವ, ರಕ್ತ, ಹಂದಿ ಮಾಂಸ ಮತ್ತು ಅಲ್ಲಾಹೇತರರ ಹೆಸರನ್ನು ಘೋಷಿಸಲಾದ ವಸ್ತುಗಳನ್ನು ಮಾತ್ರ ನಿಷೇಧಿಸಿದ್ದಾನೆ.[1] ಆದರೆ ಯಾರಾದರೂ (ಇವುಗಳನ್ನು ಸೇವಿಸಲು) ನಿರ್ಬಂಧಿತನಾದರೆ ಅವನ ಮೇಲೆ ದೋಷವಿಲ್ಲ. ಆದರೆ ಅವನು ಅಗತ್ಯಕ್ಕಿಂತ ಹೆಚ್ಚು ಸೇವಿಸಬಾರದು ಮತ್ತು (ಅಲ್ಲಾಹು ಅನುಮತಿಸಿದ) ಎಲ್ಲೆಯನ್ನು ಮೀರಬಾರದು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ. info

[1] ಇಲ್ಲಿ ನಾಲ್ಕು ನಿಷೇಧಿತ ವಸ್ತುಗಳ ಬಗ್ಗೆ ಉಲ್ಲೇಖಿಸಲಾಗಿದೆ. ವಚನದಲ್ಲಿ "ಇನ್ನಮಾ" (ಮಾತ್ರ) ಎಂಬ ಪದ ಬಳಸಿರುವುದರಿಂದ ನಿಷೇಧಿತ ವಸ್ತುಗಳು ನಾಲ್ಕಕ್ಕೆ ಮಾತ್ರ ಸೀಮಿತ ಎಂದು ಅರ್ಥ ಮಾಡಿಕೊಳ್ಳಬಾರದು. ನಿಷೇಧಿತ ವಸ್ತುಗಳು ಈ ನಾಲ್ಕಕ್ಕೆ ಸೀಮಿತವಲ್ಲ. ಇದು ಸಂದರ್ಭಕ್ಕೆ ಅನುಗುಣವಾಗಿ ಅವತೀರ್ಣವಾದ ವಚನವಾಗಿರುವುದರಿಂದ ಇದರಲ್ಲಿ ನಾಲ್ಕು ವಸ್ತುಗಳನ್ನು ಮಾತ್ರ ನಿಷಿದ್ಧವೆಂದು ಹೇಳಲಾಗಿದೆ.

التفاسير:

external-link copy
174 : 2

اِنَّ الَّذِیْنَ یَكْتُمُوْنَ مَاۤ اَنْزَلَ اللّٰهُ مِنَ الْكِتٰبِ وَیَشْتَرُوْنَ بِهٖ ثَمَنًا قَلِیْلًا ۙ— اُولٰٓىِٕكَ مَا یَاْكُلُوْنَ فِیْ بُطُوْنِهِمْ اِلَّا النَّارَ وَلَا یُكَلِّمُهُمُ اللّٰهُ یَوْمَ الْقِیٰمَةِ وَلَا یُزَكِّیْهِمْ ۖۚ— وَلَهُمْ عَذَابٌ اَلِیْمٌ ۟

ನಿಶ್ಚಯವಾಗಿಯೂ ಅಲ್ಲಾಹು ಅವತೀರ್ಣಗೊಳಿಸಿದ ಗ್ರಂಥವನ್ನು ಬಚ್ಚಿಡುವವರು ಮತ್ತು ಅದನ್ನು ಅಲ್ಪ ಬೆಲೆಗೆ ಮಾರುವವರು ಯಾರೋ—ಅವರು ತಮ್ಮ ಉದರಗಳಲ್ಲಿ ಅಗ್ನಿಯನ್ನಲ್ಲದೆ ಬೇರೇನನ್ನೂ ತುಂಬಿಸುವುದಿಲ್ಲ. ಪುನರುತ್ಥಾನ ದಿನದಂದು ಅಲ್ಲಾಹು ಅವರೊಡನೆ ಮಾತನಾಡುವುದಿಲ್ಲ ಮತ್ತು ಅವರನ್ನು ಶುದ್ಧೀಕರಿಸುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ. info
التفاسير:

external-link copy
175 : 2

اُولٰٓىِٕكَ الَّذِیْنَ اشْتَرَوُا الضَّلٰلَةَ بِالْهُدٰی وَالْعَذَابَ بِالْمَغْفِرَةِ ۚ— فَمَاۤ اَصْبَرَهُمْ عَلَی النَّارِ ۟

ಅವರೇ ಸನ್ಮಾರ್ಗದ ಬದಲಿಗೆ ದುರ್ಮಾರ್ಗವನ್ನು ಮತ್ತು ಕ್ಷಮೆಯ ಬದಲಿಗೆ ಶಿಕ್ಷೆಯನ್ನು ಖರೀದಿಸಿದವರು. ಅವರು ನರಕ ಶಿಕ್ಷೆಯನ್ನು ಎಷ್ಟರಮಟ್ಟಿಗೆ ಸಹಿಸಿಕೊಳ್ಳುವರು! info
التفاسير:

external-link copy
176 : 2

ذٰلِكَ بِاَنَّ اللّٰهَ نَزَّلَ الْكِتٰبَ بِالْحَقِّ ؕ— وَاِنَّ الَّذِیْنَ اخْتَلَفُوْا فِی الْكِتٰبِ لَفِیْ شِقَاقٍ بَعِیْدٍ ۟۠

ಅದೇಕೆಂದರೆ, ಅಲ್ಲಾಹು ಗ್ರಂಥವನ್ನು ಸತ್ಯ ಸಮೇತ ಅವತೀರ್ಣಗೊಳಿಸಿದ್ದನು. ಗ್ರಂಥದ ವಿಷಯದಲ್ಲಿ ಭಿನ್ನಮತದಲ್ಲಿರುವವರು ವಿದೂರ ಮನಸ್ತಾಪದಲ್ಲಿದ್ದಾರೆ. info
التفاسير: