Përkthimi i kuptimeve të Kuranit Fisnik - Përkthimi kanadezisht - Hamza Betur

Numri i faqes:close

external-link copy
77 : 2

اَوَلَا یَعْلَمُوْنَ اَنَّ اللّٰهَ یَعْلَمُ مَا یُسِرُّوْنَ وَمَا یُعْلِنُوْنَ ۟

ಆದರೆ ಅವರು ಮುಚ್ಚಿಡುವುದನ್ನು ಮತ್ತು ಬಹಿರಂಗಪಡಿಸುವುದನ್ನು ಅಲ್ಲಾಹು ತಿಳಿಯುತ್ತಾನೆಂದು ಅವರಿಗೆ ತಿಳಿದಿಲ್ಲವೇ? info
التفاسير:

external-link copy
78 : 2

وَمِنْهُمْ اُمِّیُّوْنَ لَا یَعْلَمُوْنَ الْكِتٰبَ اِلَّاۤ اَمَانِیَّ وَاِنْ هُمْ اِلَّا یَظُنُّوْنَ ۟

ಅವರಲ್ಲಿ ಕೆಲವು ಅನಕ್ಷರಸ್ಥರಿದ್ದಾರೆ; ಅವರಿಗೆ ಗ್ರಂಥದಲ್ಲಿ ಏನಿದೆಯೆಂದೇ ತಿಳಿದಿಲ್ಲ. ಅವರು ಕೆಲವು ಗುಮಾನಿಗಳನ್ನಷ್ಟೇ ಹೊಂದಿದ್ದಾರೆ. ಅವರು ಕೇವಲ ಊಹಿಸುವುದನ್ನಷ್ಟೇ ಮಾಡುತ್ತಾರೆ. info
التفاسير:

external-link copy
79 : 2

فَوَیْلٌ لِّلَّذِیْنَ یَكْتُبُوْنَ الْكِتٰبَ بِاَیْدِیْهِمْ ۗ— ثُمَّ یَقُوْلُوْنَ هٰذَا مِنْ عِنْدِ اللّٰهِ لِیَشْتَرُوْا بِهٖ ثَمَنًا قَلِیْلًا ؕ— فَوَیْلٌ لَّهُمْ مِّمَّا كَتَبَتْ اَیْدِیْهِمْ وَوَیْلٌ لَّهُمْ مِّمَّا یَكْسِبُوْنَ ۟

ಆದ್ದರಿಂದ, ತಮ್ಮ ಕೈಗಳಿಂದ ಗ್ರಂಥವನ್ನು ಬರೆದು, ನಂತರ ಅದರ ಮೂಲಕ ತುಚ್ಛ ಬೆಲೆಯನ್ನು ಪಡೆಯಲು “ಇದು ಅಲ್ಲಾಹನಿಂದ ಬಂದಿದೆ” ಎಂದು ಹೇಳುವವರಿಗೆ ವಿನಾಶ ಕಾದಿದೆ. ಅವರ ಕೈಗಳು ಬರೆದಿರುವುದಕ್ಕೆ ಅವರಿಗೆ ವಿನಾಶವಿದೆ; ಅವರು ಸಂಪಾದಿಸಿರುವುದಕ್ಕೂ ಅವರಿಗೆ ವಿನಾಶವಿದೆ. info
التفاسير:

external-link copy
80 : 2

وَقَالُوْا لَنْ تَمَسَّنَا النَّارُ اِلَّاۤ اَیَّامًا مَّعْدُوْدَةً ؕ— قُلْ اَتَّخَذْتُمْ عِنْدَ اللّٰهِ عَهْدًا فَلَنْ یُّخْلِفَ اللّٰهُ عَهْدَهٗۤ اَمْ تَقُوْلُوْنَ عَلَی اللّٰهِ مَا لَا تَعْلَمُوْنَ ۟

ಅವರು ಹೇಳಿದರು: “ಬೆರಳೆಣಿಕೆಯ ಕೆಲವು ದಿನಗಳು ಮಾತ್ರ ನರಕಾಗ್ನಿಯು ನಮ್ಮನ್ನು ಸ್ಪರ್ಶಿಸುತ್ತದೆ.”[1] ಹೇಳಿರಿ: “ನೀವೇನಾದರೂ ಅಲ್ಲಾಹನಿಂದ ಕರಾರು ಪಡೆದಿದ್ದೀರಾ? ಹಾಗಿದ್ದರೆ ಅಲ್ಲಾಹು ಅವನ ಕರಾರನ್ನು ಎಂದಿಗೂ ಉಲ್ಲಂಘಿಸುವುದಿಲ್ಲ. ಅಥವಾ ನೀವು ಅಲ್ಲಾಹನ ಬಗ್ಗೆ ನಿಮಗೆ ಗೊತ್ತಿಲ್ಲದ್ದನ್ನು ಹೇಳುತ್ತಿದ್ದೀರಾ?” info

[1] ಅಂದರೆ ನಮ್ಮ ಪಾಪಗಳ ಕಾರಣ ನಾವು ನರಕಕ್ಕೆ ಹೋಗಬೇಕಾಗಿ ಬಂದರೂ ಅದು ಬೆರಳೆಣಿಕೆಯ ಕೆಲವು ದಿನಗಳವರೆಗೆ ಮಾತ್ರ.

التفاسير:

external-link copy
81 : 2

بَلٰی مَنْ كَسَبَ سَیِّئَةً وَّاَحَاطَتْ بِهٖ خَطِیْٓـَٔتُهٗ فَاُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟

ಹೌದು! ಯಾರು ಕೆಡುಕು ಮಾಡುತ್ತಾನೋ ಮತ್ತು ಯಾರನ್ನು ಅವನ ಪಾಪವು ಸುತ್ತುವರಿದಿದೆಯೋ—ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. info
التفاسير:

external-link copy
82 : 2

وَالَّذِیْنَ اٰمَنُوْا وَعَمِلُوا الصّٰلِحٰتِ اُولٰٓىِٕكَ اَصْحٰبُ الْجَنَّةِ ۚ— هُمْ فِیْهَا خٰلِدُوْنَ ۟۠

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. info
التفاسير:

external-link copy
83 : 2

وَاِذْ اَخَذْنَا مِیْثَاقَ بَنِیْۤ اِسْرَآءِیْلَ لَا تَعْبُدُوْنَ اِلَّا اللّٰهَ ۫— وَبِالْوَالِدَیْنِ اِحْسَانًا وَّذِی الْقُرْبٰی وَالْیَتٰمٰی وَالْمَسٰكِیْنِ وَقُوْلُوْا لِلنَّاسِ حُسْنًا وَّاَقِیْمُوا الصَّلٰوةَ وَاٰتُوا الزَّكٰوةَ ؕ— ثُمَّ تَوَلَّیْتُمْ اِلَّا قَلِیْلًا مِّنْكُمْ وَاَنْتُمْ مُّعْرِضُوْنَ ۟

“ಅಲ್ಲಾಹನನ್ನು ಬಿಟ್ಟು ಬೇರೆ ಯಾರನ್ನೂ ಆರಾಧಿಸಬೇಡಿ, ಮಾತಾಪಿತರಿಗೆ, ಸಂಬಂಧಿಕರಿಗೆ, ಅನಾಥರಿಗೆ ಹಾಗೂ ಬಡವರಿಗೆ ಒಳಿತು ಮಾಡಿರಿ; ಜನರೊಡನೆ ಒಳ್ಳೆಯ ಮಾತನ್ನು ಆಡಿರಿ; ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ" ಎಂದು (ಆದೇಶಿಸುತ್ತಾ) ನಾವು ಇಸ್ರಾಯೇಲ್ ಮಕ್ಕಳಿಂದ ಕರಾರು ಪಡೆದ ಸಂದರ್ಭ. ನಂತರ, ನಿಮ್ಮಲ್ಲಿ ಕೆಲವರ ಹೊರತು ಉಳಿದವರೆಲ್ಲವರೂ ನಿರ್ಲಕ್ಷಿಸುತ್ತಾ ವಿಮುಖರಾದಿರಿ. info
التفاسير: