Traducción de los significados del Sagrado Corán - Traducción al Canarés- Hamza Batur

Número de página:close

external-link copy
114 : 20

فَتَعٰلَی اللّٰهُ الْمَلِكُ الْحَقُّ ۚ— وَلَا تَعْجَلْ بِالْقُرْاٰنِ مِنْ قَبْلِ اَنْ یُّقْضٰۤی اِلَیْكَ وَحْیُهٗ ؗ— وَقُلْ رَّبِّ زِدْنِیْ عِلْمًا ۟

ಅಲ್ಲಾಹು ಅತ್ಯುನ್ನತನು ಮತ್ತು ನಿಜವಾದ ಸಾರ್ವಭೌಮನಾಗಿದ್ದಾನೆ. ಕುರ್‌ಆನಿನ ದೇವವಾಣಿಯನ್ನು ನಿಮಗೆ ಓದಿಕೊಟ್ಟು ಮುಗಿಸುವುದಕ್ಕೆ ಮುನ್ನ ನೀವು ಅದನ್ನು ಪಠಿಸಲು ಆತುರಪಡಬೇಡಿ. “ನನ್ನ ಪರಿಪಾಲಕನೇ! ನನಗೆ ಜ್ಞಾನವನ್ನು ಹೆಚ್ಚಿಸು” ಎಂದು ಪ್ರಾರ್ಥಿಸಿರಿ. info
التفاسير:

external-link copy
115 : 20

وَلَقَدْ عَهِدْنَاۤ اِلٰۤی اٰدَمَ مِنْ قَبْلُ فَنَسِیَ وَلَمْ نَجِدْ لَهٗ عَزْمًا ۟۠

ನಾವು ಆದಮರಿಗೆ ಮೊದಲೇ ದೃಢ ಆಜ್ಞೆಯನ್ನು ನೀಡಿದ್ದೆವು. ಆದರೆ ಅವರು ಅದನ್ನು ಮರೆತರು. ನಾವು ಅವರಲ್ಲಿ ಯಾವುದೇ ದೃಢನಿರ್ಧಾರವನ್ನು ಕಂಡಿಲ್ಲ. info
التفاسير:

external-link copy
116 : 20

وَاِذْ قُلْنَا لِلْمَلٰٓىِٕكَةِ اسْجُدُوْا لِاٰدَمَ فَسَجَدُوْۤا اِلَّاۤ اِبْلِیْسَ ؕ— اَبٰی ۟

“ನೀವು ಆದಮರಿಗೆ ಸಾಷ್ಟಾಂಗ ಮಾಡಿರಿ” ಎಂದು ನಾವು ದೇವದೂತರಿಗೆ ಆಜ್ಞಾಪಿಸಿದ ಸಂದರ್ಭ. ಅವರು ಸಾಷ್ಟಾಂಗ ಮಾಡಿದರು; ಆದರೆ ಇಬ್ಲೀಸನ ಹೊರತು. ಅವನು ನಿರಾಕರಿಸಿದನು. info
التفاسير:

external-link copy
117 : 20

فَقُلْنَا یٰۤاٰدَمُ اِنَّ هٰذَا عَدُوٌّ لَّكَ وَلِزَوْجِكَ فَلَا یُخْرِجَنَّكُمَا مِنَ الْجَنَّةِ فَتَشْقٰی ۟

ಆಗ ನಾವು ಹೇಳಿದೆವು: “ಓ ಆದಮ್! ಈತ ನಿಮ್ಮ ಮತ್ತು ನಿಮ್ಮ ಪತ್ನಿಯ ವೈರಿಯಾಗಿದ್ದಾನೆ. ಈತ ನಿಮ್ಮನ್ನು ಸ್ವರ್ಗದಿಂದ ಹೊರಹೋಗುವಂತೆ ಮಾಡುವ ಪ್ರಸಂಗ ಬರದಿರಲಿ. ಹಾಗೇನಾದರೂ ಆದರೆ ನೀವು ಕಷ್ಟ ಅನುಭವಿಸುವಿರಿ. info
التفاسير:

external-link copy
118 : 20

اِنَّ لَكَ اَلَّا تَجُوْعَ فِیْهَا وَلَا تَعْرٰی ۟ۙ

ಇಲ್ಲಿ ನಿಮಗೆ ಖಂಡಿತ ಹಸಿವೆಯೋ ನಗ್ನತೆಯೋ ಇಲ್ಲ. info
التفاسير:

external-link copy
119 : 20

وَاَنَّكَ لَا تَظْمَؤُا فِیْهَا وَلَا تَضْحٰی ۟

ಇಲ್ಲಿ ನಿಮಗೆ ದಾಹವೋ ಬಿಸಿಲಿನ ತಾಪವೋ ಇಲ್ಲ. info
التفاسير:

external-link copy
120 : 20

فَوَسْوَسَ اِلَیْهِ الشَّیْطٰنُ قَالَ یٰۤاٰدَمُ هَلْ اَدُلُّكَ عَلٰی شَجَرَةِ الْخُلْدِ وَمُلْكٍ لَّا یَبْلٰی ۟

ಆದರೆ ಶೈತಾನನು ಅವರಿಗೆ ದುಷ್ಪ್ರೇರಣೆ ಮಾಡಿದನು: “ಓ ಆದಮ್! ನಾನು ನಿಮಗೆ ಶಾಶ್ವತ ಬದುಕನ್ನು ನೀಡುವ ಒಂದು ಮರದ ಕುರಿತು ಮತ್ತು ಎಂದೂ ಹಳೆಯದಾಗದ ಸಾಮ್ರಾಜ್ಯದ ಕುರಿತು ತಿಳಿಸಿಕೊಡಲೇ?” info
التفاسير:

external-link copy
121 : 20

فَاَكَلَا مِنْهَا فَبَدَتْ لَهُمَا سَوْاٰتُهُمَا وَطَفِقَا یَخْصِفٰنِ عَلَیْهِمَا مِنْ وَّرَقِ الْجَنَّةِ ؗ— وَعَصٰۤی اٰدَمُ رَبَّهٗ فَغَوٰی ۪۟ۖ

ನಂತರ ಅವರಿಬ್ಬರು (ಆದಮ್ ಮತ್ತು ಹವ್ವಾ) ಆ ಮರದ ಹಣ್ಣನ್ನು ತಿಂದರು. ಆಗ ಅವರಿಗೆ ಅವರ ಗುಹ್ಯಭಾಗಗಳು ಪ್ರಕಟವಾದವು. ಅವರು ಸ್ವರ್ಗದ ಎಲೆಗಳನ್ನು ಜೋಡಿಸಿ ತಮ್ಮ ದೇಹಗಳನ್ನು ಮುಚ್ಚತೊಡಗಿದರು. ಆದಮ್ ತನ್ನ ಪರಿಪಾಲಕನ (ಅಲ್ಲಾಹನ) ಆಜ್ಞೋಲ್ಲಂಘನೆ ಮಾಡಿದರು. ಆದ್ದರಿಂದ ಅವರು ತಪ್ಪಿ ನಡೆದರು. info
التفاسير:

external-link copy
122 : 20

ثُمَّ اجْتَبٰهُ رَبُّهٗ فَتَابَ عَلَیْهِ وَهَدٰی ۟

ನಂತರ ಅವರ ಪರಿಪಾಲಕನು (ಅಲ್ಲಾಹು) ಅವರನ್ನು ಆರಿಸಿದನು. ಅವರ ಪಶ್ಚಾತ್ತಾಪವನ್ನು ಸ್ವೀಕರಿಸಿ ಅವರಿಗೆ ಮಾರ್ಗದರ್ಶನ ಮಾಡಿದನು. info
التفاسير:

external-link copy
123 : 20

قَالَ اهْبِطَا مِنْهَا جَمِیْعًا بَعْضُكُمْ لِبَعْضٍ عَدُوٌّ ۚ— فَاِمَّا یَاْتِیَنَّكُمْ مِّنِّیْ هُدًی ۙ۬— فَمَنِ اتَّبَعَ هُدَایَ فَلَا یَضِلُّ وَلَا یَشْقٰی ۟

ಅಲ್ಲಾಹು ಹೇಳಿದನು: “ನೀವಿಬ್ಬರೂ ಒಟ್ಟಿಗೆ ಇಲ್ಲಿಂದ ಇಳಿಯಿರಿ. ನೀವು ಪರಸ್ಪರ ವೈರಿಗಳಾಗಿದ್ದೀರಿ. ನನ್ನ ಕಡೆಯಿಂದ ನಿಮಗೆ ಮಾರ್ಗದರ್ಶನವು ಬರುವಾಗ, ಯಾರು ನನ್ನ ಮಾರ್ಗದರ್ಶನವನ್ನು ಅನುಸರಿಸುತ್ತಾನೋ ಅವನು ದಾರಿತಪ್ಪುವುದಿಲ್ಲ ಮತ್ತು ಕಷ್ಟ ಅನುಭವಿಸುವುದಿಲ್ಲ. info
التفاسير:

external-link copy
124 : 20

وَمَنْ اَعْرَضَ عَنْ ذِكْرِیْ فَاِنَّ لَهٗ مَعِیْشَةً ضَنْكًا وَّنَحْشُرُهٗ یَوْمَ الْقِیٰمَةِ اَعْمٰی ۟

ಆದರೆ ಯಾರು ನನ್ನ ಸ್ಮರಣೆಯನ್ನು ಕಡೆಗಣಿಸಿ ವಿಮುಖನಾಗುತ್ತಾನೋ—ನಿಶ್ಚಯವಾಗಿಯೂ ಅವನಿಗೆ ಇಕ್ಕಟ್ಟಾದ ಜೀವನವಿರುವುದು. ಪುನರುತ್ಥಾನ ದಿನದಂದು ನಾವು ಅವನನ್ನು ಕುರುಡನಾಗಿ ಎಬ್ಬಿಸುವೆವು.” info
التفاسير:

external-link copy
125 : 20

قَالَ رَبِّ لِمَ حَشَرْتَنِیْۤ اَعْمٰی وَقَدْ كُنْتُ بَصِیْرًا ۟

ಅವನು ಕೇಳುವನು: “ನನ್ನ ಪರಿಪಾಲಕನೇ! ನೀನು ನನ್ನನ್ನು ಕುರುಡನಾಗಿ ಏಕೆ ಎಬ್ಬಿಸಿದೆ? ನನಗೆ ಕಣ್ಣು ಕಾಣುತ್ತಿತ್ತಲ್ಲವೇ?” info
التفاسير: