[1] ಇಸ್ರಾಯೇಲ್ ಮಕ್ಕಳು ಈಜಿಪ್ಟಿನಿಂದ ಬರುವಾಗ ಈಜಿಪ್ಟಿನ ಜನರಿಂದ ಅವರು ಸಾಲವಾಗಿ ಪಡೆದ ಆಭರಣಗಳನ್ನು ಕೂಡ ತಂದಿದ್ದರು. ಆದರೆ ಆ ಆಭರಣಗಳನ್ನು ಉಪಯೋಗಿಸುವುದು ನಿಷಿದ್ಧವಾಗಿದ್ದರಿಂದ ಅವರು ಅದನ್ನು ಬೆಂಕಿಗೆಸೆದರು. ಸಾಮಿರಿ ಕೂಡ ತನ್ನಲ್ಲಿರುವ ಆಭರಣಗಳನ್ನು ಎಸೆದನು. ನಂತರ ಅವನು ಅದರಿಂದ ಒಂದು ಕರುವಿನ ಮೂರ್ತಿಯನ್ನು ಮಾಡಿದನು. ಆ ಮೂರ್ತಿ ಹೇಗಿತ್ತೆಂದರೆ ಗಾಳಿ ಅದರೊಳಗೆ ಹೊಕ್ಕಾಗ ಅದರಿಂದ ಒಂದು ರೀತಿಯ ಧ್ವನಿ ಬರುತ್ತಿತ್ತು. ಸಾಮಿರಿ ಆ ಮೂರ್ತಿಯನ್ನು ಜನರಿಗೆ ತೋರಿಸಿ, “ಮೂಸಾ ಅಲ್ಲಾಹನನ್ನು ಭೇಟಿಯಾಗಲು ತೂರ್ ಪರ್ವತಕ್ಕೆ ಹೋಗಿದ್ದಾರೆ. ಆದರೆ ಅವರಿಗೆ ಮರೆತುಹೋಗಿದೆ. ವಾಸ್ತವವಾಗಿ ಅವರು ದೇವರು ಇಲ್ಲೇ ಇದ್ದಾನೆ” ಎನ್ನುತ್ತಾ ಅವರನ್ನು ದಾರಿತಪ್ಪಿಸಿದನು.
[1] ಅಂದರೆ ಅವರು ದಾರಿತಪ್ಪಿದ್ದನ್ನು ಕಂಡಾಗ ನೀನು ಅವರಿಗೆ ಬುದ್ಧಿವಾದ ಹೇಳಿದೆ. ಆದರೆ ಅವರು ಅದನ್ನು ಸ್ವೀಕರಿಸದೆ ಇದ್ದಾಗ ನೀನು ನೇರವಾಗಿ ನನ್ನ ಬಳಿಗೆ ತೂರ್ ಪರ್ವತಕ್ಕೆ ಬಂದು ನನಗೆ ವಿಷಯ ತಿಳಿಸಬೇಕಾಗಿತ್ತು. ನೀನು ಕೂಡ ನನ್ನ ಆದೇಶವನ್ನು ಉಲ್ಲಂಘಿಸಿರುವೆ. (ಅಂದರೆ ನೀನು ಸರಿಯಾದ ರೀತಿಯಲ್ಲಿ ನನ್ನ ಪ್ರತಿನಿಧಿಯಾಗಿರಲಿಲ್ಲ).
[1] ವಾಸ್ತವವಾಗಿ ಹಾರೂನ್ (ಅವರ ಮೇಲೆ ಶಾಂತಿಯಿರಲಿ) ತಮ್ಮ ಕರ್ತವ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದ್ದರು. ಅವರು ವಿಗ್ರಹಾರಾಧನೆಯನ್ನು ಸ್ಪಷ್ಟವಾಗಿ ವಿರೋಧಿಸಿದ್ದರು. ಆದರೆ ಎಷ್ಟೇ ತಿಳಿಹೇಳಿದರೂ ಜನರು ಅವರ ಮಾತನ್ನು ಕೇಳುತ್ತಿರಲಿಲ್ಲ. ನಂತರ ಪರಿಸ್ಥಿತಿ ಎಷ್ಟು ಗಂಭೀರವಾಯಿತೆಂದರೆ ಇಸ್ರಾಯೇಲ್ ಮಕ್ಕಳಲ್ಲಿ ಎರಡು ಗುಂಪುಗಳಾದವು. ಒಂದು ಗುಂಪು ಸಮರ್ಥಿಸಿದರೆ ಇನ್ನೊಂದು ಗುಂಪು ವಿರೋಧಿಸಿತು. ಈ ಎರಡು ಗುಂಪುಗಳು ಪರಸ್ಪರ ಹೊಡೆದಾಡುವ ಸ್ಥಿತಿಗೆ ತಲುಪಿತು.
[1] ಇಲ್ಲಿ ದೇವದೂತರು ಎಂದರೆ ಜಿಬ್ರೀಲ್ (ಅವರ ಮೇಲೆ ಶಾಂತಿಯಿರಲಿ). ಜಿಬ್ರೀಲರ ಕುದುರೆ ಹಾದುಹೋಗುವುದು ಕಂಡಾಗ ಸಾಮಿರಿ ಅದರ ಕಾಲುಗಳ ಅಡಿಯಿಂದ ಮಣ್ಣನ್ನು ತೆಗೆದು ಜೋಪಾನವಾಗಿಟ್ಟಿದ್ದನು. ಆ ಮಣ್ಣನ್ನು ಅವನು ಆಭರಣಗಳಿಂದ ನಿರ್ಮಿಸಿದ ಕರುವಿನ ಮೂರ್ತಿಗೆ ಹಾಕಿದಾಗ ಅದರಿಂದ ಒಂದು ಶಬ್ದ ಹೊರಬರಲು ಶುರುವಾಯಿತು.
[1] ಇದರ ನಂತರ ಅವನು ಜೀವನವಿಡೀ ಜನರನ್ನು ಕಂಡೊಡನೆ ನನ್ನನ್ನು ಮುಟ್ಟಬೇಡಿ, ನನ್ನಿಂದ ದೂರವಿರಿ ಎಂದು ಹೇಳುತ್ತಲೇ ಇದ್ದ. ಏಕೆಂದರೆ ಅವನನ್ನು ಯಾರಾದರೂ ಮುಟ್ಟಿದರೆ, ಅವನಿಗೂ ಮುಟ್ಟಿದವನಿಗೂ ಜ್ವರ ಬರುತ್ತಿತ್ತು. ನಂತರ ಅವನು ಜನವಾಸದಿಂದ ೂದೂರವಾಗಿ ಅಡವಿಗೆ ಹೋಗಿ ಮೃಗಗಳೊಡನೆ ವಾಸಿಸತೊಡಗಿದನು.