Traducción de los significados del Sagrado Corán - Traducción al Canarés- Hamza Batur

Número de página:close

external-link copy
38 : 20

اِذْ اَوْحَیْنَاۤ اِلٰۤی اُمِّكَ مَا یُوْحٰۤی ۟ۙ

ನಿಮಗೆ ಈಗ ತಿಳಿಸಲಾಗುವ (ಈ ಕೆಳಗಿನ) ವಿಷಯವನ್ನು ನಾವು ನಿಮ್ಮ ತಾಯಿಗೆ ತೋಚುವಂತೆ ಮಾಡಿದ ಸಂದರ್ಭ. info
التفاسير:

external-link copy
39 : 20

اَنِ اقْذِفِیْهِ فِی التَّابُوْتِ فَاقْذِفِیْهِ فِی الْیَمِّ فَلْیُلْقِهِ الْیَمُّ بِالسَّاحِلِ یَاْخُذْهُ عَدُوٌّ لِّیْ وَعَدُوٌّ لَّهٗ ؕ— وَاَلْقَیْتُ عَلَیْكَ مَحَبَّةً مِّنِّیْ ۚ۬— وَلِتُصْنَعَ عَلٰی عَیْنِیْ ۟ۘ

ಆ ಮಗುವನ್ನು (ಮೂಸಾರನ್ನು) ಒಂದು ಪೆಟ್ಟಿಗೆಯಲ್ಲಿಟ್ಟು ಹೊಳೆಗೆ ಎಸೆಯಿರಿ. ಹೊಳೆಯು ಆ ಪೆಟ್ಟಿಗೆಯನ್ನು ದಡಕ್ಕೆ ಒಯ್ಯುತ್ತದೆ. ಆಗ ನನ್ನ ಮತ್ತು ಆ ಮಗುವಿನ ವೈರಿ ಆ ಮಗುವನ್ನು ಎತ್ತಿಕೊಳ್ಳುವನು. (ಓ ಮೂಸಾ) ನಾನು ನನ್ನ ಕಡೆಯ ವಿಶೇಷ ಪ್ರೀತಿಯನ್ನು ನಿಮ್ಮ ಮೇಲೆ ಇಟ್ಟಿದ್ದೆನು. ನೀವು ನನ್ನ ಕಣ್ಣುಗಳ ಮುಂದೆ ಬೆಳೆದು ದೊಡ್ಡವನಾಗುವುದಕ್ಕಾಗಿ. info
التفاسير:

external-link copy
40 : 20

اِذْ تَمْشِیْۤ اُخْتُكَ فَتَقُوْلُ هَلْ اَدُلُّكُمْ عَلٰی مَنْ یَّكْفُلُهٗ ؕ— فَرَجَعْنٰكَ اِلٰۤی اُمِّكَ كَیْ تَقَرَّ عَیْنُهَا وَلَا تَحْزَنَ ؕ۬— وَقَتَلْتَ نَفْسًا فَنَجَّیْنٰكَ مِنَ الْغَمِّ وَفَتَنّٰكَ فُتُوْنًا ۫۬— فَلَبِثْتَ سِنِیْنَ فِیْۤ اَهْلِ مَدْیَنَ ۙ۬— ثُمَّ جِئْتَ عَلٰی قَدَرٍ یّٰمُوْسٰی ۟

ನಿಮ್ಮ ಸಹೋದರಿ ನಡೆಯುತ್ತಾ ಬಂದ ಸಂದರ್ಭ. ಅವಳು ಹೇಳಿದಳು: “ಈ ಮಗುವಿನ ಲಾಲನೆ-ಪಾಲನೆ ಮಾಡುವ ಒಬ್ಬರನ್ನು ನಾನು ನಿಮಗೆ ತೋರಿಸಿಕೊಡಲೇ?” ಹೀಗೆ ನಾವು ನಿಮ್ಮನ್ನು ನಿಮ್ಮ ತಾಯಿಗೆ ಹಿಂದಿರುಗಿಸಿದೆವು. ಆಕೆಯ ಕಣ್ಮನ ತಣಿಯುವುದಕ್ಕಾಗಿ ಮತ್ತು ಆಕೆ ದುಃಖಪಡದಿರುವುದಕ್ಕಾಗಿ. ನೀವು ಒಬ್ಬ ವ್ಯಕ್ತಿಯನ್ನು ಕೊಂದಿರಿ. ಆಗ ನಾವು ನಿಮ್ಮನ್ನು ಆ ಸಂಕಟದಿಂದ ಪಾರು ಮಾಡಿದೆವು. ನಾವು ನಿಮ್ಮನ್ನು ಅನೇಕ ವಿಧಗಳಿಂದ ಪರೀಕ್ಷಿಸಿದೆವು. ನಂತರ ನೀವು ಮದ್ಯನ್ ಗೋತ್ರದವರೊಡನೆ ಹಲವಾರು ವರ್ಷ ವಾಸಿಸಿದಿರಿ. ಓ ಮೂಸಾ! ನಂತರ ನನ್ನ ನಿರ್ಣಯದಂತೆ ನೀವು ಇಲ್ಲಿಗೆ ಬಂದಿದ್ದೀರಿ. info
التفاسير:

external-link copy
41 : 20

وَاصْطَنَعْتُكَ لِنَفْسِیْ ۟ۚ

ನಾನು ನಿಮ್ಮನ್ನು ಸ್ವತಃ ನನಗಾಗಿ ಆಯ್ಕೆ ಮಾಡಿದ್ದೇನೆ. info
التفاسير:

external-link copy
42 : 20

اِذْهَبْ اَنْتَ وَاَخُوْكَ بِاٰیٰتِیْ وَلَا تَنِیَا فِیْ ذِكْرِیْ ۟ۚ

ನೀವು ನಿಮ್ಮ ಸಹೋದರನನ್ನು ಕರೆದುಕೊಂಡು ನನ್ನ ದೃಷ್ಟಾಂತಗಳೊಂದಿಗೆ ಹೊರಡಿರಿ. ನನ್ನನ್ನು ಸ್ಮರಿಸುವ ವಿಷಯದಲ್ಲಿ ಉದಾಸೀನರಾಗಬೇಡಿ. info
التفاسير:

external-link copy
43 : 20

اِذْهَبَاۤ اِلٰی فِرْعَوْنَ اِنَّهٗ طَغٰی ۟ۚۖ

ನೀವಿಬ್ಬರೂ ಫರೋಹನ ಬಳಿಗೆ ಹೋಗಿರಿ. ಖಂಡಿತವಾಗಿಯೂ ಅವನು ಅತಿರೇಕಿಯಾಗಿದ್ದಾನೆ. info
التفاسير:

external-link copy
44 : 20

فَقُوْلَا لَهٗ قَوْلًا لَّیِّنًا لَّعَلَّهٗ یَتَذَكَّرُ اَوْ یَخْشٰی ۟

ಅವನೊಡನೆ ಮೃದುವಾಗಿ ಮಾತನಾಡಿರಿ. ಅವನು ಉಪದೇಶ ಸ್ವೀಕರಿಸಬಹುದು ಅಥವಾ ಭಯಪಡಬಹುದು.” info
التفاسير:

external-link copy
45 : 20

قَالَا رَبَّنَاۤ اِنَّنَا نَخَافُ اَنْ یَّفْرُطَ عَلَیْنَاۤ اَوْ اَنْ یَّطْغٰی ۟

ಅವರಿಬ್ಬರು ಹೇಳಿದರು: “ನಮ್ಮ ಪರಿಪಾಲಕನೇ! ಅವನು ನಮ್ಮ ಮೇಲೆ ದಬ್ಬಾಳಿಕೆ ಮಾಡಬಹುದು ಅಥವಾ ಅತಿರೇಕವೆಸಬಹುದೆಂದು ನಮಗೆ ಭಯವಾಗುತ್ತಿದೆ.” info
التفاسير:

external-link copy
46 : 20

قَالَ لَا تَخَافَاۤ اِنَّنِیْ مَعَكُمَاۤ اَسْمَعُ وَاَرٰی ۟

ಅಲ್ಲಾಹು ಹೇಳಿದನು: “ಹೆದರಬೇಡಿ. ನಾನು ಖಂಡಿತ ನಿಮ್ಮ ಜೊತೆಗಿದ್ದೇನೆ. ನಾನು ಕೇಳುತ್ತಲೂ, ನೋಡುತ್ತಲೂ ಇದ್ದೇನೆ. info
التفاسير:

external-link copy
47 : 20

فَاْتِیٰهُ فَقُوْلَاۤ اِنَّا رَسُوْلَا رَبِّكَ فَاَرْسِلْ مَعَنَا بَنِیْۤ اِسْرَآءِیْلَ ۙ۬— وَلَا تُعَذِّبْهُمْ ؕ— قَدْ جِئْنٰكَ بِاٰیَةٍ مِّنْ رَّبِّكَ ؕ— وَالسَّلٰمُ عَلٰی مَنِ اتَّبَعَ الْهُدٰی ۟

ನೀವಿಬ್ಬರೂ ಅವನ ಬಳಿಗೆ ಹೋಗಿ, ಅವನೊಡನೆ ಹೇಳಿರಿ: “ನಿಶ್ಚಯವಾಗಿಯೂ ನಾವು ನಿಮ್ಮ ಪರಿಪಾಲಕನ (ಅಲ್ಲಾಹನ) ಸಂದೇಶವಾಹಕರಾಗಿದ್ದೇವೆ. ಆದ್ದರಿಂದ ಇಸ್ರಾಯೇಲ್ ಮಕ್ಕಳನ್ನು ನಮ್ಮ ಜೊತೆಗೆ ಕಳುಹಿಸಿಕೊಡಿ. ಅವರನ್ನು ಹಿಂಸೆ ನೀಡಬೇಡಿ. ನಾವು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ಒಂದು ದೃಷ್ಟಾಂತದೊಂದಿಗೆ ನಿಮ್ಮ ಬಳಿಗೆ ಬಂದಿದ್ದೇವೆ. ಸನ್ಮಾರ್ಗವನ್ನು ಅನುಸರಿಸುವವರ ಮೇಲೆ (ಅಲ್ಲಾಹನ) ಸಂರಕ್ಷಣೆಯಿದೆ. info
التفاسير:

external-link copy
48 : 20

اِنَّا قَدْ اُوْحِیَ اِلَیْنَاۤ اَنَّ الْعَذَابَ عَلٰی مَنْ كَذَّبَ وَتَوَلّٰی ۟

ಸತ್ಯವನ್ನು ನಿಷೇಧಿಸಿದವರಿಗೆ ಮತ್ತು (ಅದರಿಂದ) ವಿಮುಖರಾದವರಿಗೆ ಶಿಕ್ಷೆಯಿದೆಯೆಂದು ನಿಶ್ಚಯವಾಗಿಯೂ ನಮಗೆ ದೇವವಾಣಿ ನೀಡಲಾಗಿದೆ.” info
التفاسير:

external-link copy
49 : 20

قَالَ فَمَنْ رَّبُّكُمَا یٰمُوْسٰی ۟

ಫರೋಹ ಕೇಳಿದನು: “ಓ ಮೂಸಾ! ನಿಮ್ಮಿಬ್ಬರ ಪರಿಪಾಲಕ ಯಾರು?” info
التفاسير:

external-link copy
50 : 20

قَالَ رَبُّنَا الَّذِیْۤ اَعْطٰی كُلَّ شَیْءٍ خَلْقَهٗ ثُمَّ هَدٰی ۟

ಮೂಸಾ ಹೇಳಿದರು: “ಪ್ರತಿಯೊಂದು ವಸ್ತುವಿಗೂ ಅದರ ವಿಶಿಷ್ಟ ರೂಪ ಮತ್ತು ಆಕೃತಿಯನ್ನು ನೀಡಿ ನಂತರ ಅದಕ್ಕೆ ಮಾರ್ಗದರ್ಶನ ಮಾಡಿದವನೇ ನಮ್ಮ ಪರಿಪಾಲಕ.” info
التفاسير:

external-link copy
51 : 20

قَالَ فَمَا بَالُ الْقُرُوْنِ الْاُوْلٰی ۟

ಫರೋಹ ಕೇಳಿದನು: “ಸರಿ. ಹಾಗಾದರೆ ಹಿಂದಿನ ತಲೆಮಾರುಗಳ ಅವಸ್ಥೆಯೇನು?” info
التفاسير: