[1] ಮೂಸಾ (ಅವರ ಮೇಲೆ ಶಾಂತಿಯಿರಲಿ) ಇಸ್ರಾಯೇಲ್ ಮಕ್ಕಳನ್ನು ಸಮುದ್ರ ದಾಟಿಸಿ ತೂರ್ ಪರ್ವತದ ಕಡೆಗೆ ಕರೆದೊಯ್ದರು. ಅವರು ಅಲ್ಲಾಹನನ್ನು ಭೇಟಿಯಾಗಿ ಅವನ ಪ್ರೀತಿ ಪಡೆಯಬೇಕೆಂಬ ಅತೀವ ಹಂಬಲದಿಂದ ಅನುಯಾಯಿಗಳನ್ನು ಹಿಂದೆ ಬಿಟ್ಟು ತರಾತುರಿಯಿಂದ ಪರ್ವತದ ಕಡೆಗೆ ಹೋದರು. ಅಲ್ಲಾಹು ಅದರ ಬಗ್ಗೆ ಕೇಳಿದಾಗ ಅವರು ನೀಡಿದ ಉತ್ತರವೇನೆಂದರೆ, “ನನಗೆ ನಿನ್ನ ಪ್ರೀತಿ ಪಡೆಯಬೇಕೆಂಬ ಅತೀವ ಹಂಬಲವಿದೆ, ಆದ್ದರಿಂದ ನಾನು ಬೇಗನೇ ಬಂದೆ. ನನ್ನ ಅನುಯಾಯಿಗಳು ನನ್ನ ಹಿಂದೆಯೇ ಬರುತ್ತಿದ್ದಾರೆ.” ಕೆಲವು ವ್ಯಾಖ್ಯಾನಕಾರರು ಹೇಳುವಂತೆ, ಅವರು ಅನುಯಾಯಿಗಳನ್ನು ಪರ್ವತದ ತಪ್ಪಲಿನಲ್ಲಿ ಬಿಟ್ಟು ಬಂದಿದ್ದರು. ಅವರು ನೀಡಿದ ಉತ್ತರ ಹೀಗಿತ್ತು: “ನನ್ನ ಅನುಯಾಯಿಗಳು ನನ್ನ ಹಿಂದೆ ಪರ್ವತದ ತಪ್ಪಲಿನಲ್ಲಿದ್ದಾರೆ. ಅವರು ನಾನು ಹಿಂದಿರುಗಿ ಬರುವುದನ್ನು ನಿರೀಕ್ಷಿಸುತ್ತಾ ಕಾಯುತ್ತಿದ್ದಾರೆ.”
[1] ಮೂಸಾ (ಅವರ ಮೇಲೆ ಶಾಂತಿಯಿರಲಿ) ಹೋದ ಬಳಿಕ ಸಾಮಿರಿ ಎಂಬ ಹೆಸರಿನ ವ್ಯಕ್ತಿ ಇಸ್ರಾಯೇಲ್ ಮಕ್ಕಳಿಗೆ ಒಂದು ಕರುವಿನ ರೂಪವನ್ನು ಮಾಡಿಕೊಟ್ಟು ಅದನ್ನು ಪೂಜಿಸುವಂತೆ ಹೇಳಿದನು. ಅವರು ಅದನ್ನು ಪೂಜಿಸಿದರು. ಈ ವಿಷಯವನ್ನು ಅಲ್ಲಾಹು ಮೂಸಾರಿಗೆ (ಅವರ ಮೇಲೆ ಶಾಂತಿಯಿರಲಿ) ತಿಳಿಸಿದನು.