Qurani Kərimin mənaca tərcüməsi - Kannad dilinə tərcümə - Həmzə Batur.

Səhifənin rəqəmi:close

external-link copy
45 : 6

فَقُطِعَ دَابِرُ الْقَوْمِ الَّذِیْنَ ظَلَمُوْا ؕ— وَالْحَمْدُ لِلّٰهِ رَبِّ الْعٰلَمِیْنَ ۟

ಅಕ್ರಮವೆಸಗಿದ ಜನರನ್ನು ಬೇರು ಸಹಿತ ನಿರ್ಮೂಲನ ಮಾಡಲಾಯಿತು. ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ. info
التفاسير:

external-link copy
46 : 6

قُلْ اَرَءَیْتُمْ اِنْ اَخَذَ اللّٰهُ سَمْعَكُمْ وَاَبْصَارَكُمْ وَخَتَمَ عَلٰی قُلُوْبِكُمْ مَّنْ اِلٰهٌ غَیْرُ اللّٰهِ یَاْتِیْكُمْ بِهٖ ؕ— اُنْظُرْ كَیْفَ نُصَرِّفُ الْاٰیٰتِ ثُمَّ هُمْ یَصْدِفُوْنَ ۟

ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹು ನಿಮ್ಮ ಶ್ರವಣಶಕ್ತಿ ಮತ್ತು ದೃಷ್ಟಿಯನ್ನು ತೆಗೆದು, ನಿಮ್ಮ ಹೃದಯಗಳಿಗೆ ಮೊಹರು ಹಾಕಿದರೆ, ಅಲ್ಲಾಹನ ಹೊರತು ಅದನ್ನು ತಂದುಕೊಡುವ ದೇವರು ಯಾರು?” ನಾವು ಅವರಿಗೆ ನಮ್ಮ ವಚನಗಳನ್ನು ಹೇಗೆ ವಿವರಿಸಿಕೊಡುತ್ತಿದ್ದೇವೆಂದು ನೋಡಿರಿ. ಅದರ ನಂತರವೂ ಅವರು ವಿಮುಖರಾಗುತ್ತಿದ್ದಾರೆ. info
التفاسير:

external-link copy
47 : 6

قُلْ اَرَءَیْتَكُمْ اِنْ اَتٰىكُمْ عَذَابُ اللّٰهِ بَغْتَةً اَوْ جَهْرَةً هَلْ یُهْلَكُ اِلَّا الْقَوْمُ الظّٰلِمُوْنَ ۟

ಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹನ ಶಿಕ್ಷೆಯು ಹಠಾತ್ತನೆ ಬಂದರೆ, ಅಥವಾ ಬಹಿರಂಗವಾಗಿ ಬಂದರೆ, ಅಕ್ರಮವೆಸಗಿದ ಜನರ ಹೊರತು ಬೇರೆ ಯಾರಾದರೂ ನಾಶವಾಗುವರೇ?” info
التفاسير:

external-link copy
48 : 6

وَمَا نُرْسِلُ الْمُرْسَلِیْنَ اِلَّا مُبَشِّرِیْنَ وَمُنْذِرِیْنَ ۚ— فَمَنْ اٰمَنَ وَاَصْلَحَ فَلَا خَوْفٌ عَلَیْهِمْ وَلَا هُمْ یَحْزَنُوْنَ ۟

ಶುಭವಾರ್ತೆ ತಿಳಿಸಲು ಮತ್ತು ಮುನ್ನೆಚ್ಚರಿಕೆ ನೀಡಲು ಮಾತ್ರ ನಾವು ಸಂದೇಶವಾಹಕರನ್ನು ಕಳುಹಿಸುತ್ತೇವೆ. ಆದ್ದರಿಂದ ಯಾರು ಸತ್ಯವಿಶ್ವಾಸವನ್ನು ಸ್ವೀಕರಿಸಿ ಸ್ವಯಂ ಸುಧಾರಿಸಿಕೊಳ್ಳುತ್ತಾನೋ—ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ. info
التفاسير:

external-link copy
49 : 6

وَالَّذِیْنَ كَذَّبُوْا بِاٰیٰتِنَا یَمَسُّهُمُ الْعَذَابُ بِمَا كَانُوْا یَفْسُقُوْنَ ۟

ಆದರೆ ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರು ಅವಿಧೇಯತೆ ತೋರಿದ ಕಾರಣ ಶಿಕ್ಷೆಯು ಅವರನ್ನು ಸ್ಪರ್ಶಿಸಲಿದೆ. info
التفاسير:

external-link copy
50 : 6

قُلْ لَّاۤ اَقُوْلُ لَكُمْ عِنْدِیْ خَزَآىِٕنُ اللّٰهِ وَلَاۤ اَعْلَمُ الْغَیْبَ وَلَاۤ اَقُوْلُ لَكُمْ اِنِّیْ مَلَكٌ ۚ— اِنْ اَتَّبِعُ اِلَّا مَا یُوْحٰۤی اِلَیَّ ؕ— قُلْ هَلْ یَسْتَوِی الْاَعْمٰی وَالْبَصِیْرُ ؕ— اَفَلَا تَتَفَكَّرُوْنَ ۟۠

ಹೇಳಿರಿ: “ಅಲ್ಲಾಹನ ಖಜಾನೆಗಳು ನನ್ನ ವಶದಲ್ಲಿವೆಯೆಂದು ನಾನು ಹೇಳುವುದಿಲ್ಲ. ನನಗೆ ಅದೃಶ್ಯ ವಿಷಯಗಳು ತಿಳಿದಿಲ್ಲ. ನಾನೊಬ್ಬ ದೇವದೂತನೆಂದು ನಾನು ನಿಮಗೆ ಹೇಳುವುದಿಲ್ಲ. ನನಗೆ ದೇವವಾಣಿಯಾಗಿ ನೀಡಲಾದುದನ್ನು ಮಾತ್ರ ನಾನು ಅನುಸರಿಸುತ್ತೇನೆ.” ಕೇಳಿರಿ: “ಕಣ್ಣು ಕಾಣದವನು ಮತ್ತು ಕಣ್ಣು ಕಾಣುವವನು ಸಮಾನರೇ? ನೀವೇಕೆ ಆಲೋಚಿಸುವುದಿಲ್ಲ?” info
التفاسير:

external-link copy
51 : 6

وَاَنْذِرْ بِهِ الَّذِیْنَ یَخَافُوْنَ اَنْ یُّحْشَرُوْۤا اِلٰی رَبِّهِمْ لَیْسَ لَهُمْ مِّنْ دُوْنِهٖ وَلِیٌّ وَّلَا شَفِیْعٌ لَّعَلَّهُمْ یَتَّقُوْنَ ۟

ತಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ತಮ್ಮನ್ನು ಒಟ್ಟುಗೂಡಿಸಲಾಗುವುದು ಎಂದು ಭಯಪಡುವವರಿಗೆ ಇದರ (ಕುರ್‌ಆನಿನ) ಮೂಲಕ ಎಚ್ಚರಿಕೆ ನೀಡಿರಿ. ಅವರಿಗೆ ಅಲ್ಲಾಹನ ಹೊರತು ಬೇರೆ ರಕ್ಷಕರು ಅಥವಾ ಶಿಫಾರಸುಗಾರರಿಲ್ಲ. ಅವರು ದೇವಭಯವುಳ್ಳವರಾಗುವುದಕ್ಕಾಗಿ. info
التفاسير:

external-link copy
52 : 6

وَلَا تَطْرُدِ الَّذِیْنَ یَدْعُوْنَ رَبَّهُمْ بِالْغَدٰوةِ وَالْعَشِیِّ یُرِیْدُوْنَ وَجْهَهٗ ؕ— مَا عَلَیْكَ مِنْ حِسَابِهِمْ مِّنْ شَیْءٍ وَّمَا مِنْ حِسَابِكَ عَلَیْهِمْ مِّنْ شَیْءٍ فَتَطْرُدَهُمْ فَتَكُوْنَ مِنَ الظّٰلِمِیْنَ ۟

ತಮ್ಮ ಪರಿಪಾಲಕನ (ಅಲ್ಲಾಹನ) ಸಂಪ್ರೀತಿಯನ್ನು ಬಯಸುತ್ತಾ ಮುಂಜಾನೆ ಮತ್ತು ಸಂಜೆ ಅವನನ್ನು ಕರೆದು ಪ್ರಾರ್ಥಿಸುವವರನ್ನು ದೂರ ಮಾಡಬೇಡಿ.[1] ಅವರನ್ನು ವಿಚಾರಣೆ ಮಾಡುವ ಹೊಣೆ ನಿಮಗಿಲ್ಲ. ನಿಮ್ಮನ್ನು ವಿಚಾರಣೆ ಮಾಡುವ ಹೊಣೆ ಅವರಿಗಿಲ್ಲ. ನೀವು ಅವರನ್ನು ದೂರ ಮಾಡಿದರೆ, ನೀವು ಅಕ್ರಮಿಗಳಲ್ಲಿ ಸೇರಿ ಬಿಡುವಿರಿ. info

[1] ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಯಾಯಿಗಳಲ್ಲಿ ಗುಲಾಮರು, ಬಡವರು ಮತ್ತು ದಬ್ಬಾಳಿಕೆಗೆ ಒಳಗಾದವರು ಇದ್ದರು. ಇವರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಯಲ್ಲಿದ್ದುದರಿಂದ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬರಲು ಕುರೈಷ್ ಮುಖಂಡರಿಗೆ ಅಸಹ್ಯವಾಗುತ್ತಿತ್ತು. ಅವರನ್ನು ದೂರ ಮಾಡಿದರೆ ನಾವು ನಿಮ್ಮ ಬಳಿಗೆ ಬರುತ್ತೇವೆಂದು ಅವರು ಹೇಳುತ್ತಿದ್ದರು.

التفاسير: