Qurani Kərimin mənaca tərcüməsi - Kannad dilinə tərcümə - Həmzə Batur.

Səhifənin rəqəmi:close

external-link copy
143 : 6

ثَمٰنِیَةَ اَزْوَاجٍ ۚ— مِنَ الضَّاْنِ اثْنَیْنِ وَمِنَ الْمَعْزِ اثْنَیْنِ ؕ— قُلْ ءٰٓالذَّكَرَیْنِ حَرَّمَ اَمِ الْاُنْثَیَیْنِ اَمَّا اشْتَمَلَتْ عَلَیْهِ اَرْحَامُ الْاُنْثَیَیْنِ ؕ— نَبِّـُٔوْنِیْ بِعِلْمٍ اِنْ كُنْتُمْ صٰدِقِیْنَ ۟ۙ

ಎಂಟು ಜೋಡಿಗಳನ್ನು (ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣುಗಳನ್ನು ಅವನು ಸೃಷ್ಟಿಸಿದ್ದಾನೆ). ಕುರಿಗಳಲ್ಲಿ ಎರಡು (ಗಂಡು ಮತ್ತು ಹೆಣ್ಣು) ಹಾಗೂ ಮೇಕೆಗಳಲ್ಲಿ ಎರಡು (ಗಂಡು ಮತ್ತು ಹೆಣ್ಣು). ಕೇಳಿರಿ: “(ಅವುಗಳಲ್ಲಿ) ಅಲ್ಲಾಹು ನಿಷೇಧಿಸಿದ್ದು ಎರಡು ಗಂಡುಗಳನ್ನೋ ಅಥವಾ ಎರಡು ಹೆಣ್ಣುಗಳನ್ನೋ? ಅಥವಾ ಎರಡು ಹೆಣ್ಣುಗಳ ಗರ್ಭಗಳಲ್ಲಿರುವುದನ್ನೋ? ನೀವು ಸತ್ಯವಂತರಾಗಿದ್ದರೆ ಸಾಕ್ಷ್ಯಾಧಾರಗಳೊಂದಿಗೆ ತಿಳಿಸಿಕೊಡಿ.” info
التفاسير:

external-link copy
144 : 6

وَمِنَ الْاِبِلِ اثْنَیْنِ وَمِنَ الْبَقَرِ اثْنَیْنِ ؕ— قُلْ ءٰٓالذَّكَرَیْنِ حَرَّمَ اَمِ الْاُنْثَیَیْنِ اَمَّا اشْتَمَلَتْ عَلَیْهِ اَرْحَامُ الْاُنْثَیَیْنِ ؕ— اَمْ كُنْتُمْ شُهَدَآءَ اِذْ وَصّٰىكُمُ اللّٰهُ بِهٰذَا ۚ— فَمَنْ اَظْلَمُ مِمَّنِ افْتَرٰی عَلَی اللّٰهِ كَذِبًا لِّیُضِلَّ النَّاسَ بِغَیْرِ عِلْمٍ ؕ— اِنَّ اللّٰهَ لَا یَهْدِی الْقَوْمَ الظّٰلِمِیْنَ ۟۠

ಒಂಟೆಯಿಂದ ಎರಡು (ಗಂಡು ಮತ್ತು ಹೆಣ್ಣು) ಮತ್ತು ಹಸುವಿನಿಂದ ಎರಡು (ಗಂಡು ಮತ್ತು ಹೆಣ್ಣು). ಕೇಳಿರಿ: “(ಅವುಗಳಲ್ಲಿ) ಅಲ್ಲಾಹು ನಿಷೇಧಿಸಿದ್ದು ಎರಡು ಗಂಡುಗಳನ್ನೋ ಅಥವಾ ಎರಡು ಹೆಣ್ಣುಗಳನ್ನೋ? ಅಥವಾ ಎರಡು ಹೆಣ್ಣುಗಳ ಗರ್ಭಗಳಲ್ಲಿರುವುದನ್ನೋ? ಅಲ್ಲಾಹು ಇದನ್ನು ಆದೇಶಿಸುವಾಗ ನೀವು ಉಪಸ್ಥಿತರಿದ್ದಿರಾ? ಯಾವುದೇ ಜ್ಞಾನವಿಲ್ಲದೆ, ಜನರನ್ನು ದಾರಿ ತಪ್ಪಿಸುವುದಕ್ಕಾಗಿ ಅಲ್ಲಾಹನ ಬಗ್ಗೆ ಸುಳ್ಳು ಆರೋಪಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ನಿಶ್ಚಯವಾಗಿಯೂ ಅಕ್ರಮವೆಸಗುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.” info
التفاسير:

external-link copy
145 : 6

قُلْ لَّاۤ اَجِدُ فِیْ مَاۤ اُوْحِیَ اِلَیَّ مُحَرَّمًا عَلٰی طَاعِمٍ یَّطْعَمُهٗۤ اِلَّاۤ اَنْ یَّكُوْنَ مَیْتَةً اَوْ دَمًا مَّسْفُوْحًا اَوْ لَحْمَ خِنْزِیْرٍ فَاِنَّهٗ رِجْسٌ اَوْ فِسْقًا اُهِلَّ لِغَیْرِ اللّٰهِ بِهٖ ۚ— فَمَنِ اضْطُرَّ غَیْرَ بَاغٍ وَّلَا عَادٍ فَاِنَّ رَبَّكَ غَفُوْرٌ رَّحِیْمٌ ۟

ಹೇಳಿರಿ: “ಆಹಾರ ಸೇವಿಸುವವನಿಗೆ ನಿಷೇಧಿಸಲಾದ ಏನನ್ನೂ ನನಗೆ ನೀಡಲಾದ ದೇವವಾಣಿಯಲ್ಲಿ ನಾನು ಕಾಣುವುದಿಲ್ಲ. ಅದು ಶವ, ಅಥವಾ ಹರಿಯುವ ರಕ್ತ, ಅಥವಾ ಹಂದಿ ಮಾಂಸವಾಗಿದ್ದರೆ ಹೊರತು. ಏಕೆಂದರೆ ಅದು ಹೊಲಸಾಗಿದೆ. ಅಥವಾ ಅಲ್ಲಾಹೇತರರ ಹೆಸರಲ್ಲಿ (ಹರಕೆಯಾಗಿ) ಘೋಷಿಸಲಾದ ಕಾರಣ ನಿಷಿದ್ಧವಾದ ವಸ್ತುಗಳ ಹೊರತು. ಆದರೆ ಯಾರಾದರೂ (ಇವುಗಳನ್ನು ಸೇವಿಸಲು) ನಿರ್ಬಂಧಿತನಾದರೆ ಅವನ ಮೇಲೆ ದೋಷವಿಲ್ಲ. ಆದರೆ ಅವನು ಅಗತ್ಯಕ್ಕಿಂತ ಹೆಚ್ಚು ಸೇವಿಸಬಾರದು ಮತ್ತು (ಅಲ್ಲಾಹು ಅನುಮತಿಸಿದ) ಎಲ್ಲೆಯನ್ನು ಮೀರಬಾರದು. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಕ್ಷಮಿಸುವವನು ಮತ್ತು ಕರುಣೆ ತೋರುವವನಾಗಿದ್ದಾನೆ.” info
التفاسير:

external-link copy
146 : 6

وَعَلَی الَّذِیْنَ هَادُوْا حَرَّمْنَا كُلَّ ذِیْ ظُفُرٍ ۚ— وَمِنَ الْبَقَرِ وَالْغَنَمِ حَرَّمْنَا عَلَیْهِمْ شُحُوْمَهُمَاۤ اِلَّا مَا حَمَلَتْ ظُهُوْرُهُمَاۤ اَوِ الْحَوَایَاۤ اَوْ مَا اخْتَلَطَ بِعَظْمٍ ؕ— ذٰلِكَ جَزَیْنٰهُمْ بِبَغْیِهِمْ ۖؗ— وَاِنَّا لَصٰدِقُوْنَ ۟

ನಾವು ಯಹೂದಿಗಳಿಗೆ ಉಗುರುಗಳಿರುವ ಎಲ್ಲಾ ಪ್ರಾಣಿಗಳನ್ನು ನಿಷೇಧಿಸಿದ್ದೆವು. ಹಸು, ಮೇಕೆ ಮುಂತಾದ ಪ್ರಾಣಿಗಳ ಕೊಬ್ಬುಗಳನ್ನು ನಾವು ಅವರಿಗೆ ನಿಷೇಧಿಸಿದ್ದೆವು. ಆದರೆ ಅವುಗಳ ಬೆನ್ನಲ್ಲಿರುವ ಅಥವಾ ಕರುಳುಗಳಲ್ಲಿರುವ ಅಥವಾ ಮೂಳೆಗಳಿಗೆ ಅಂಟಿಕೊಂಡಿರುವ ಕೊಬ್ಬುಗಳ ಹೊರತು. ಇದು ಅವರ ಅತಿರೇಕಕ್ಕೆ ನಾವು ನೀಡಿದ ಶಿಕ್ಷೆಯಾಗಿದೆ. ನಿಶ್ಚಯವಾಗಿಯೂ ನಾವು ಸತ್ಯವಂತರಾಗಿದ್ದೇವೆ. info
التفاسير: