Qurani Kərimin mənaca tərcüməsi - Kannad dilinə tərcümə - Həmzə Batur.

Səhifənin rəqəmi:close

external-link copy
102 : 6

ذٰلِكُمُ اللّٰهُ رَبُّكُمْ ۚ— لَاۤ اِلٰهَ اِلَّا هُوَ ۚ— خَالِقُ كُلِّ شَیْءٍ فَاعْبُدُوْهُ ۚ— وَهُوَ عَلٰی كُلِّ شَیْءٍ وَّكِیْلٌ ۟

ಅವನೇ ನಿಮ್ಮ ಪರಿಪಾಲಕನಾದ ಅಲ್ಲಾಹು. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಎಲ್ಲಾ ವಸ್ತುಗಳ ಸೃಷ್ಟಿಕರ್ತನಾಗಿದ್ದಾನೆ. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ. ಅವನು ಎಲ್ಲಾ ವಸ್ತುಗಳ ಮೇಲ್ವಿಚಾರಕನಾಗಿದ್ದಾನೆ. info
التفاسير:

external-link copy
103 : 6

لَا تُدْرِكُهُ الْاَبْصَارُ ؗ— وَهُوَ یُدْرِكُ الْاَبْصَارَ ۚ— وَهُوَ اللَّطِیْفُ الْخَبِیْرُ ۟

ದೃಷ್ಟಿಗಳು ಅವನನ್ನು ತಲುಪುವುದಿಲ್ಲ. ಆದರೆ ಅವನು ದೃಷ್ಟಿಗಳನ್ನು ತಲುಪುತ್ತಾನೆ.[1] ಅವನು ಸೂಕ್ಷ್ಮಗ್ರಾಹಿ ಮತ್ತು ಸೂಕ್ಷ್ಮಜ್ಞಾನಿಯಾಗಿದ್ದಾನೆ. info

[1] ಭೂಲೋಕದಲ್ಲಿ ಯಾರಿಗೂ ಅಲ್ಲಾಹನನ್ನು ನೋಡಲು ಸಾಧ್ಯವಿಲ್ಲ. ಆದರೆ ಪರಲೋಕದಲ್ಲಿ ಸತ್ಯವಿಶ್ವಾಸಿಗಳು ಅಲ್ಲಾಹನನ್ನು ನೋಡುತ್ತಾರೆ.

التفاسير:

external-link copy
104 : 6

قَدْ جَآءَكُمْ بَصَآىِٕرُ مِنْ رَّبِّكُمْ ۚ— فَمَنْ اَبْصَرَ فَلِنَفْسِهٖ ۚ— وَمَنْ عَمِیَ فَعَلَیْهَا ؕ— وَمَاۤ اَنَا عَلَیْكُمْ بِحَفِیْظٍ ۟

ನಿಮಗೆ ನಿಮ್ಮ ಪರಿಪಾಲಕನಿಂದ ಕಣ್ತೆರೆಸುವಂತಹ ಪುರಾವೆಗಳು ಬಂದಿವೆ. ಆದ್ದರಿಂದ ಯಾರು ಅದನ್ನು ನೋಡುತ್ತಾನೋ ಅದರ ಒಳಿತು ಅವನಿಗೇ ಆಗಿದೆ. ಯಾರು ಕುರುಡನಾಗುತ್ತಾನೋ ಅದರ ದೋಷವು ಅವನಿಗೇ ಆಗಿದೆ. (ಹೇಳಿರಿ): “ನಾನು ನಿಮ್ಮ ಕಾವಲುಗಾರನಲ್ಲ.” info
التفاسير:

external-link copy
105 : 6

وَكَذٰلِكَ نُصَرِّفُ الْاٰیٰتِ وَلِیَقُوْلُوْا دَرَسْتَ وَلِنُبَیِّنَهٗ لِقَوْمٍ یَّعْلَمُوْنَ ۟

ಈ ರೀತಿ ನಾವು ನಾನಾ ವಿಧಗಳಲ್ಲಿ ವಚನಗಳನ್ನು ವಿವರಿಸಿಕೊಡುತ್ತೇವೆ. “ನೀವು (ಯಹೂದಿ-ಕ್ರೈಸ್ತರಿಂದ) ಕಲಿತು ಬಂದಿದ್ದೀರಿ” ಎಂದು ಸತ್ಯನಿಷೇಧಿಗಳು ಹೇಳುವುದಕ್ಕಾಗಿ ಮತ್ತು ತಿಳುವಳಿಕೆಯಿರುವ ಜನರಿಗೆ ಇದನ್ನು ವಿವರಿಸಿಕೊಡುವುದಕ್ಕಾಗಿ.[1] info

[1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಯಹೂದಿ-ಕ್ರೈಸ್ತರಿಂದ ಕಲಿತು ಬಂದು ಪ್ರವಚನ ಮಾಡುತ್ತಾರೆಂದು ಸತ್ಯನಿಷೇಧಿಗಳು ಆರೋಪಿಸುತ್ತಿದ್ದರು.

التفاسير:

external-link copy
106 : 6

اِتَّبِعْ مَاۤ اُوْحِیَ اِلَیْكَ مِنْ رَّبِّكَ ۚ— لَاۤ اِلٰهَ اِلَّا هُوَ ۚ— وَاَعْرِضْ عَنِ الْمُشْرِكِیْنَ ۟

ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಅವತೀರ್ಣವಾದ ಸಂದೇಶವನ್ನು ಹಿಂಬಾಲಿಸಿರಿ. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಬಹುದೇವಾರಾಧಕರಿಂದ ವಿಮುಖರಾಗಿರಿ. info
التفاسير:

external-link copy
107 : 6

وَلَوْ شَآءَ اللّٰهُ مَاۤ اَشْرَكُوْا ؕ— وَمَا جَعَلْنٰكَ عَلَیْهِمْ حَفِیْظًا ۚ— وَمَاۤ اَنْتَ عَلَیْهِمْ بِوَكِیْلٍ ۟

ಅಲ್ಲಾಹು ಇಚ್ಛಿಸುತ್ತಿದ್ದರೆ ಅವರು ಸಹಭಾಗಿತ್ವ (ಶಿರ್ಕ್) ಮಾಡುತ್ತಿರಲಿಲ್ಲ. ನಾವು ನಿಮ್ಮನ್ನು ಅವರಿಗೆ ಕಾವಲುಗಾರನಾಗಿ ಮಾಡಿಲ್ಲ. ನೀವು ಅವರ ಮೇಲ್ನೋಟ ವಹಿಸಬೇಕಾದವರೂ ಅಲ್ಲ. info
التفاسير:

external-link copy
108 : 6

وَلَا تَسُبُّوا الَّذِیْنَ یَدْعُوْنَ مِنْ دُوْنِ اللّٰهِ فَیَسُبُّوا اللّٰهَ عَدْوًا بِغَیْرِ عِلْمٍ ؕ— كَذٰلِكَ زَیَّنَّا لِكُلِّ اُمَّةٍ عَمَلَهُمْ ۪— ثُمَّ اِلٰی رَبِّهِمْ مَّرْجِعُهُمْ فَیُنَبِّئُهُمْ بِمَا كَانُوْا یَعْمَلُوْنَ ۟

ಅವರು ಅಲ್ಲಾಹನನ್ನು ಬಿಟ್ಟು ಕರೆದು ಪ್ರಾರ್ಥಿಸುವ ಆ ದೇವರುಗಳನ್ನು ದೂಷಿಸಬೇಡಿ. ಇದರಿಂದ ಅವರು ತಿಳುವಳಿಕೆಯಿಲ್ಲದೆ ದ್ವೇಷದಿಂದ ಅಲ್ಲಾಹನನ್ನು ದೂಷಿಸಬಹುದು. ಈ ರೀತಿ ನಾವು ಪ್ರತಿಯೊಂದು ಸಮುದಾಯದವರಿಗೂ ಅವರ ಕರ್ಮಗಳನ್ನು ಅಲಂಕರಿಸಿ ತೋರಿಸಿದ್ದೇವೆ. ನಂತರ ಅವರನ್ನು ಅವರ ಪರಿಪಾಲಕನ ಬಳಿಗೆ ಮರಳಿಸಲಾಗುವುದು. ಆಗ ಅವರು ಮಾಡುತ್ತಿದ್ದ ಕರ್ಮಗಳ ಬಗ್ಗೆ ಅವನು ಅವರಿಗೆ ತಿಳಿಸಿಕೊಡುವನು. info
التفاسير:

external-link copy
109 : 6

وَاَقْسَمُوْا بِاللّٰهِ جَهْدَ اَیْمَانِهِمْ لَىِٕنْ جَآءَتْهُمْ اٰیَةٌ لَّیُؤْمِنُنَّ بِهَا ؕ— قُلْ اِنَّمَا الْاٰیٰتُ عِنْدَ اللّٰهِ وَمَا یُشْعِرُكُمْ ۙ— اَنَّهَاۤ اِذَا جَآءَتْ لَا یُؤْمِنُوْنَ ۟

ಅವರಿಗೆ ಒಂದು ದೃಷ್ಟಾಂತವು ಬಂದರೆ ಅವರು ಅದರಲ್ಲಿ ಖಂಡಿತ ವಿಶ್ವಾಸವಿಡುತ್ತಾರೆಂದು ಅವರು ಅಲ್ಲಾಹನ ಮೇಲೆ ಪ್ರಬಲವಾಗಿ ಆಣೆ ಮಾಡುತ್ತಾ ಹೇಳಿದರು. ಹೇಳಿರಿ: “ದೃಷ್ಟಾಂತಗಳು ಅಲ್ಲಾಹನ ಬಳಿ ಮಾತ್ರವಿದೆ.” ನಿಮಗೇನು ಗೊತ್ತು? ಅದು ಬಂದರೂ ಕೂಡ ಅವರು ವಿಶ್ವಾಸವಿಡಲಾರರು. info
التفاسير:

external-link copy
110 : 6

وَنُقَلِّبُ اَفْـِٕدَتَهُمْ وَاَبْصَارَهُمْ كَمَا لَمْ یُؤْمِنُوْا بِهٖۤ اَوَّلَ مَرَّةٍ وَّنَذَرُهُمْ فِیْ طُغْیَانِهِمْ یَعْمَهُوْنَ ۟۠

ಅವರು ಇದರಲ್ಲಿ (ಈ ಕುರ್‌ಆನ್‍ನಲ್ಲಿ) ಪ್ರಥಮ ಬಾರಿ ವಿಶ್ವಾಸವಿಡದಂತೆಯೇ (ಈಗಲೂ) ನಾವು ಅವರ ಹೃದಯಗಳನ್ನು ಮತ್ತು ಕಣ್ಣುಗಳನ್ನು ತಿರುಗಿಸಿಬಿಡುವೆವು. ಅವರು ಅವರ ಅತಿರೇಕಗಳಲ್ಲಿ ಅಂಧವಾಗಿ ವಿಹರಿಸುವಂತೆ ನಾವು ಅವರನ್ನು ಬಿಟ್ಟುಬಿಡುವೆವು. info
التفاسير: