(ಓ ಪೈಗಂಬರರೇ) ಹೇಳಿರಿ: ಸರ್ವಸ್ತುತಿಯು ಅಲ್ಲಹನಿಗೇ ಮೀಸಲು ಮತ್ತು ಅವನು ಆಯ್ದುಕೊಂಡ ದಾಸರ ಮೇಲೆ ಶಾಂತಿಯಿರಲಿ. ಅಲ್ಲಾಹನು ಉತ್ತಮನೋ ಅಥವಾ ಅವರು ಸಹಭಾಗಿಗಳನ್ನಾಗಿ ಮಾಡುತ್ತಿರುವ ದೇವರುಗಳೋ?
(ಓ ಪೈಗಂಬರರೇ) ಹೇಳಿರಿ: ಸರ್ವಸ್ತುತಿಯು ಅಲ್ಲಹನಿಗೇ ಮೀಸಲು ಮತ್ತು ಅವನು ಆಯ್ದುಕೊಂಡ ದಾಸರ ಮೇಲೆ ಶಾಂತಿಯಿರಲಿ. ಅಲ್ಲಾಹನು ಉತ್ತಮನೋ ಅಥವಾ ಅವರು ಸಹಭಾಗಿಗಳನ್ನಾಗಿ ಮಾಡುತ್ತಿರುವ ದೇವರುಗಳೋ?
ಭೂಮಿಯನ್ನು ಸ್ಥಿರತೆಯುಳ್ಳ ತಂಗುದಾಣವನ್ನಾಗಿ ಮಾಡಿಕೊಟ್ಟವನು ಮತ್ತು ಅದರ ನಡುವೆ ನದಿಗಳನ್ನು ಹರಿಸಿಕೊಟ್ಟವನು ಮತ್ತು ಅದಕ್ಕಾಗಿ ದೃಢ ಪರ್ವತಗಳನ್ನು ನಾಟಿದವನು ಮತ್ತು ಎರಡು ಸಮುದ್ರಗಳ ನಡುವೆ ತಡಯೊಂದನ್ನು ನಿಶ್ಚಯಿಸಿದವನು ಯಾರು? ಅಲ್ಲಾಹನೊಂದಿಗೆ ಇತರ ಆರಾಧ್ಯರೂ ಇದ್ದಾರೆಯೇ? ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ.
ಅಥವಾ ಸಂಕಷ್ಟಕ್ಕೆ ಗುರಿಯಾದವನು ಕರೆದು ಬೇಡಿದಾಗ ಅವನ ಕರೆಗೆ ಓಗೊಟ್ಟು ಅವನ ಸಂಕಷ್ಟವನ್ನು ನೀಗಿಸುವವನು ಯಾರು?ಮತ್ತು ನಿಮ್ಮನ್ನು ಭೂಮಿಯ ಉತ್ತರಾಧಿಕಾರಿಗಳಾಗಿ ನಿಶ್ಚಯಿಸುವವನು ಯಾರು? ಅಲ್ಲಾಹನೊಂದಿಗೆ ಬೇರೆ ಆರಾಧ್ಯನಿದ್ದಾನೆಯೇ? ಅತ್ಯಲ್ಪವೇ ನೀವು ಉಪದೇಶಗಳನ್ನು ಸ್ವೀಕರಿಸುತ್ತೀರಿ.
ನಿಮ್ಮನ್ನು ನೆಲ ಮತ್ತು ಸಮುದ್ರದ ಅಂಧಕಾರಗಳಲ್ಲಿ ದಾರಿ ತೋರಿಸುವವನು ಯಾರು? ತನ್ನ ಕರುಣೆಗೆ ಮುಂಚೆಯೇ ಸುವಾರ್ತೆ ನೀಡುವಂತಹ ಮಾರುತಗಳನ್ನು ಕಳುಹಿಸುವವನು ಯಾರು? ಅಲ್ಲಾಹನೊಂದಿಗೆ ಬೇರೆ ಆರಾಧ್ಯನಿದ್ದಾನೆಯೇ? ಅವರು ಕಲ್ಪಿಸಿಕೊಳ್ಳುತ್ತಿರುವ ಸಹಭಾಗಿತ್ವದಿಂದ ಅವನು ಅದೆಷ್ಟೋ ಉನ್ನತನಾಗಿದ್ದಾನೆ.