ಅವರು ಅಕ್ರಮ ಮತ್ತು ಅಹಂಕಾರದಿAದಾಗಿ ಅವುಗಳನ್ನು ನಿಷೇಧಿಸಿ ಬಿಟ್ಟರು. ವಸ್ತುತಃ ಅವರ ಹೃದಯಗಳು ದೃಢವಾಗಿ ನಂಬಿದ್ದವು. ಇನ್ನು ಕ್ಷೆÆÃಭೆ ಹರಡುವವರ ದುಷ್ಪರಿಣಾಮವು ಹೇಗಿತ್ತೆಂಬುದನ್ನು ನೋಡಿರಿ.
ನಿಶ್ಚಯವಾಗಿಯು ನಾವು ದಾವೂದ್ ಮತ್ತು ಸುಲೈಮಾನರಿಗೆ ಜ್ಞಾನವನ್ನು ದಯಪಾಲಿಸಿದೆವು ಮತ್ತು ಅವರಿಬ್ಬರು ಹೇಳಿದರು: ತನ್ನ ಅನೇಕ ಸತ್ಯವಿಶ್ವಾಸಿ ದಾಸರ ಮೇಲೆ ನಮಗೆ ಶ್ರೇಷ್ಠತೆ ನೀಡಿದಂತಹ ಅಲ್ಲಾಹನಿಗೆ ಸರ್ವಸ್ತುತಿಯು ಮೀಸಲು.
ಸುಲೈಮಾನರು ದಾವೂದರ ವಾರೀಸುದಾರರಾದರು ಮತ್ತು ಹೇಳಿದರು: ಓ ಜನರೇ, ನಮಗೆ ಪಕ್ಷಿಗಳ ಮಾತನ್ನು ಕಲಿಸಲಾಗಿದೆ ಮತ್ತು ನಾವು ಎಲ್ಲಾ ವಸ್ತುಗಳಿಂದಲೂ ಕರುಣಿಸಲಾಗಿದ್ದೇವೆ. ನಿಸ್ಸಂಶಯವಾಗಿಯು ಇದು ಸುಸ್ಪಷ್ಟ ಅನುಗ್ರಹವಾಗಿದೆ.
ಹಾಗೆಯೇ ಅವರು ಇರುವೆಯ ಕಣಿವೆಗೆ ಬಂದಾಗ ಒಂದು ಇರುವೆಯು ಹೇಳಿತು: ಓ ಇರುವೆಗಳೇ, ನೀವು ನಿಮ್ಮ ಬಿಲಗಳೊಳಗೆ ಸೇರಿಕೊಳ್ಳಿರಿ. ಸುಲೈಮಾನ್ ಮತ್ತು ಅವರ ಸೈನ್ಯವು ತಮಗರಿವಿಲ್ಲ ದಂತೆಯೇ ನಿಮ್ಮನ್ನು ತುಳಿಯದಂತಾಗದಿರಲಿ.
ಅದರ ಮಾತಿನಿಂದ ಪೈಗಂಬರ್ ಸುಲೈಮನರು ಮಂದಹಾಸ ನಗುಬೀರಿದರು ಮತ್ತು ಪ್ರಾರ್ಥಿಸಿದರು: ನನ್ನ ಪ್ರಭುವೇ, ನೀನು ನನ್ನ ಮೇಲೂ, ನನ್ನ ಮಾತಾಪಿತರ ಮೇಲೂ ದಯಪಾಲಿಸಿದಂತಹ ನಿನ್ನ ಅನುಗ್ರಹಕ್ಕೆ ನಾನು ಕೃತಜ್ಞತೆ ಸಲ್ಲಿಸಲು ಮತ್ತು ನೀನು ಮೆಚ್ಚುವಂತಹ ಸತ್ಕರ್ಮವೆಸಗಲು ನನಗೆ ಸ್ಪೂರ್ತಿ ನೀಡು ಮತ್ತು ನೀನು ನನ್ನನ್ನು ನಿನ್ನ ಸಜ್ಜನರಾದ ದಾಸರಲ್ಲಿ ಸೇರಿಸು.
ಸ್ವಲ್ಪ ಹೊತ್ತಿನಲ್ಲೇ ಅದು ಬಂದು ಹೇಳಿತು: ನಾನು ನಿಮಗೆ ತಿಳಿದಿರದಂತಹ ಸಂಗತಿಯೊAದನ್ನು ತಿಳಿದಿದ್ದೇನೆ. ನಾನು 'ಸಬಾ ಪಟ್ಟಣದ' ಒಂದು ಖಾತರಿ ಸುದ್ಧಿಯನ್ನು ನಿಮ್ಮಲ್ಲಿಗೆ ತಂದಿರುತ್ತೇನೆ.