ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
14 : 27

وَجَحَدُوْا بِهَا وَاسْتَیْقَنَتْهَاۤ اَنْفُسُهُمْ ظُلْمًا وَّعُلُوًّا ؕ— فَانْظُرْ كَیْفَ كَانَ عَاقِبَةُ الْمُفْسِدِیْنَ ۟۠

ಅವರು ಅಕ್ರಮ ಮತ್ತು ಅಹಂಕಾರದಿAದಾಗಿ ಅವುಗಳನ್ನು ನಿಷೇಧಿಸಿ ಬಿಟ್ಟರು. ವಸ್ತುತಃ ಅವರ ಹೃದಯಗಳು ದೃಢವಾಗಿ ನಂಬಿದ್ದವು. ಇನ್ನು ಕ್ಷೆÆÃಭೆ ಹರಡುವವರ ದುಷ್ಪರಿಣಾಮವು ಹೇಗಿತ್ತೆಂಬುದನ್ನು ನೋಡಿರಿ. info
التفاسير:

external-link copy
15 : 27

وَلَقَدْ اٰتَیْنَا دَاوٗدَ وَسُلَیْمٰنَ عِلْمًا ۚ— وَقَالَا الْحَمْدُ لِلّٰهِ الَّذِیْ فَضَّلَنَا عَلٰی كَثِیْرٍ مِّنْ عِبَادِهِ الْمُؤْمِنِیْنَ ۟

ನಿಶ್ಚಯವಾಗಿಯು ನಾವು ದಾವೂದ್ ಮತ್ತು ಸುಲೈಮಾನರಿಗೆ ಜ್ಞಾನವನ್ನು ದಯಪಾಲಿಸಿದೆವು ಮತ್ತು ಅವರಿಬ್ಬರು ಹೇಳಿದರು: ತನ್ನ ಅನೇಕ ಸತ್ಯವಿಶ್ವಾಸಿ ದಾಸರ ಮೇಲೆ ನಮಗೆ ಶ್ರೇಷ್ಠತೆ ನೀಡಿದಂತಹ ಅಲ್ಲಾಹನಿಗೆ ಸರ್ವಸ್ತುತಿಯು ಮೀಸಲು. info
التفاسير:

external-link copy
16 : 27

وَوَرِثَ سُلَیْمٰنُ دَاوٗدَ وَقَالَ یٰۤاَیُّهَا النَّاسُ عُلِّمْنَا مَنْطِقَ الطَّیْرِ وَاُوْتِیْنَا مِنْ كُلِّ شَیْءٍ ؕ— اِنَّ هٰذَا لَهُوَ الْفَضْلُ الْمُبِیْنُ ۟

ಸುಲೈಮಾನರು ದಾವೂದರ ವಾರೀಸುದಾರರಾದರು ಮತ್ತು ಹೇಳಿದರು: ಓ ಜನರೇ, ನಮಗೆ ಪಕ್ಷಿಗಳ ಮಾತನ್ನು ಕಲಿಸಲಾಗಿದೆ ಮತ್ತು ನಾವು ಎಲ್ಲಾ ವಸ್ತುಗಳಿಂದಲೂ ಕರುಣಿಸಲಾಗಿದ್ದೇವೆ. ನಿಸ್ಸಂಶಯವಾಗಿಯು ಇದು ಸುಸ್ಪಷ್ಟ ಅನುಗ್ರಹವಾಗಿದೆ. info
التفاسير:

external-link copy
17 : 27

وَحُشِرَ لِسُلَیْمٰنَ جُنُوْدُهٗ مِنَ الْجِنِّ وَالْاِنْسِ وَالطَّیْرِ فَهُمْ یُوْزَعُوْنَ ۟

ಸುಲೈಮಾನರಿಗಾಗಿ ಜಿನ್ನ್ (ಯಕ್ಷ) ಮನುಷ್ಯ ಮತ್ತು ಪಕ್ಷಿಗಳ ಸೈನ್ಯವನ್ನು ಒಟ್ಟುಗೂಡಿಸಲಾಯಿತು. ಮತ್ತು ಪ್ರತಿಯೊಂದು ವರ್ಗವನ್ನು ಸಂಪೂರ್ಣ ಶಿಸ್ತಿನೊಂದಿಗೆ ಇಡಲಾಯಿತು. info
التفاسير:

external-link copy
18 : 27

حَتّٰۤی اِذَاۤ اَتَوْا عَلٰی وَادِ النَّمْلِ ۙ— قَالَتْ نَمْلَةٌ یّٰۤاَیُّهَا النَّمْلُ ادْخُلُوْا مَسٰكِنَكُمْ ۚ— لَا یَحْطِمَنَّكُمْ سُلَیْمٰنُ وَجُنُوْدُهٗ ۙ— وَهُمْ لَا یَشْعُرُوْنَ ۟

ಹಾಗೆಯೇ ಅವರು ಇರುವೆಯ ಕಣಿವೆಗೆ ಬಂದಾಗ ಒಂದು ಇರುವೆಯು ಹೇಳಿತು: ಓ ಇರುವೆಗಳೇ, ನೀವು ನಿಮ್ಮ ಬಿಲಗಳೊಳಗೆ ಸೇರಿಕೊಳ್ಳಿರಿ. ಸುಲೈಮಾನ್ ಮತ್ತು ಅವರ ಸೈನ್ಯವು ತಮಗರಿವಿಲ್ಲ ದಂತೆಯೇ ನಿಮ್ಮನ್ನು ತುಳಿಯದಂತಾಗದಿರಲಿ. info
التفاسير:

external-link copy
19 : 27

فَتَبَسَّمَ ضَاحِكًا مِّنْ قَوْلِهَا وَقَالَ رَبِّ اَوْزِعْنِیْۤ اَنْ اَشْكُرَ نِعْمَتَكَ الَّتِیْۤ اَنْعَمْتَ عَلَیَّ وَعَلٰی وَالِدَیَّ وَاَنْ اَعْمَلَ صَالِحًا تَرْضٰىهُ وَاَدْخِلْنِیْ بِرَحْمَتِكَ فِیْ عِبَادِكَ الصّٰلِحِیْنَ ۟

ಅದರ ಮಾತಿನಿಂದ ಪೈಗಂಬರ್ ಸುಲೈಮನರು ಮಂದಹಾಸ ನಗುಬೀರಿದರು ಮತ್ತು ಪ್ರಾರ್ಥಿಸಿದರು: ನನ್ನ ಪ್ರಭುವೇ, ನೀನು ನನ್ನ ಮೇಲೂ, ನನ್ನ ಮಾತಾಪಿತರ ಮೇಲೂ ದಯಪಾಲಿಸಿದಂತಹ ನಿನ್ನ ಅನುಗ್ರಹಕ್ಕೆ ನಾನು ಕೃತಜ್ಞತೆ ಸಲ್ಲಿಸಲು ಮತ್ತು ನೀನು ಮೆಚ್ಚುವಂತಹ ಸತ್ಕರ್ಮವೆಸಗಲು ನನಗೆ ಸ್ಪೂರ್ತಿ ನೀಡು ಮತ್ತು ನೀನು ನನ್ನನ್ನು ನಿನ್ನ ಸಜ್ಜನರಾದ ದಾಸರಲ್ಲಿ ಸೇರಿಸು. info
التفاسير:

external-link copy
20 : 27

وَتَفَقَّدَ الطَّیْرَ فَقَالَ مَا لِیَ لَاۤ اَرَی الْهُدْهُدَ ۖؗ— اَمْ كَانَ مِنَ الْغَآىِٕبِیْنَ ۟

ಅವರು ಪಕ್ಷಿಗಳನ್ನು ಪರಿಶೀಲಿಸಿದರು ಮತ್ತು ಹೇಳಿದರು: ಏನು ಸಮಾಚಾರ; ನಾನು ಹುದ್‌ಹುದ್‌ನನ್ನು (ಮರಕುಟಿಕ) ಕಾಣುತ್ತಿಲ್ಲವಲ್ಲ? ಅದು ಅನುಪಸ್ಥಿತಿ ಯಾಗಿದೆಯಲ್ಲವೇ? info
التفاسير:

external-link copy
21 : 27

لَاُعَذِّبَنَّهٗ عَذَابًا شَدِیْدًا اَوْ لَاَاذْبَحَنَّهٗۤ اَوْ لَیَاْتِیَنِّیْ بِسُلْطٰنٍ مُّبِیْنٍ ۟

ಖಂಡಿತ ನಾನದಕ್ಕೆ ಕಠಿಣ ಶಿಕ್ಷೆಯನ್ನು ವಿಧಿಸುತ್ತೇನೆ ಅಥವಾ ಅದನ್ನು ನಾನು ಕೊಯ್ದು ಬಿಡುತ್ತೇನೆ. ಇಲ್ಲವೇ ಅದು ನನ್ನ ಮುಂದೆ ಯಾವುದಾದರು ಸುಸ್ಪಷ್ಟ ಕಾರಣವನ್ನು ಹೇಳಬೇಕು. info
التفاسير:

external-link copy
22 : 27

فَمَكَثَ غَیْرَ بَعِیْدٍ فَقَالَ اَحَطْتُّ بِمَا لَمْ تُحِطْ بِهٖ وَجِئْتُكَ مِنْ سَبَاٍ بِنَبَاٍ یَّقِیْنٍ ۟

ಸ್ವಲ್ಪ ಹೊತ್ತಿನಲ್ಲೇ ಅದು ಬಂದು ಹೇಳಿತು: ನಾನು ನಿಮಗೆ ತಿಳಿದಿರದಂತಹ ಸಂಗತಿಯೊAದನ್ನು ತಿಳಿದಿದ್ದೇನೆ. ನಾನು 'ಸಬಾ ಪಟ್ಟಣದ' ಒಂದು ಖಾತರಿ ಸುದ್ಧಿಯನ್ನು ನಿಮ್ಮಲ್ಲಿಗೆ ತಂದಿರುತ್ತೇನೆ. info
التفاسير: