ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
56 : 27

فَمَا كَانَ جَوَابَ قَوْمِهٖۤ اِلَّاۤ اَنْ قَالُوْۤا اَخْرِجُوْۤا اٰلَ لُوْطٍ مِّنْ قَرْیَتِكُمْ ۚ— اِنَّهُمْ اُنَاسٌ یَّتَطَهَّرُوْنَ ۟

ಆಗ ಜನರ ಪ್ರತಿಕ್ರಿಯೆಯು “ನೀವು ಲೂತರ ಕುಟುಂಬವನ್ನು ನಿಮ್ಮ ನಾಡಿನಿಂದ ಗಡಿಪಾರು ಮಾಡಿರಿ. ಅವರಂತು ಮಹಾ ಪರಿಶುದ್ಧರಾಗಲು ಹೊರಟಿದ್ದಾರೆ” ಎಂಬುದರ ಹೊರತು ಇನ್ನೇನಿರಲಿಲ್ಲ. info
التفاسير:

external-link copy
57 : 27

فَاَنْجَیْنٰهُ وَاَهْلَهٗۤ اِلَّا امْرَاَتَهٗ ؗ— قَدَّرْنٰهَا مِنَ الْغٰبِرِیْنَ ۟

ಕೊನೆಗೆ ನಾವು ಅವರ ಪತ್ನಿಯ ಹೊರತು ಅವರನ್ನು ಮತ್ತು ಅವರ ಕುಟುಂಬದವರನ್ನು ರಕ್ಷಿದಿದೆವು. ಅವಳು ಹಿಂದುಳಿಯುವರಲ್ಲಿ ಆಗುವಳೆಂದು ನಾವು ನಿಶ್ಚಯಿಸಿಬಿಟ್ಟಿದ್ದೆವು. info
التفاسير:

external-link copy
58 : 27

وَاَمْطَرْنَا عَلَیْهِمْ مَّطَرًا ۚ— فَسَآءَ مَطَرُ الْمُنْذَرِیْنَ ۟۠

ಮತ್ತು ನಾವು ಅವರ ಮೇಲೆ ಒಂದು ಮಳೆಯನ್ನು ಸುರಿಸಿದೆವು. ಎಚ್ಚರಿಕೆ ನೀಡಲಾದವರ ಮೇಲೆ ಅದು ಅತ್ಯಂತ ಕೆಟ್ಟ ಮಳೆಯಾಗಿತ್ತು. info
التفاسير:

external-link copy
59 : 27

قُلِ الْحَمْدُ لِلّٰهِ وَسَلٰمٌ عَلٰی عِبَادِهِ الَّذِیْنَ اصْطَفٰی ؕ— ءٰٓاللّٰهُ خَیْرٌ اَمَّا یُشْرِكُوْنَ ۟

(ಓ ಪೈಗಂಬರರೇ) ಹೇಳಿರಿ: ಸರ್ವಸ್ತುತಿಯು ಅಲ್ಲಹನಿಗೇ ಮೀಸಲು ಮತ್ತು ಅವನು ಆಯ್ದುಕೊಂಡ ದಾಸರ ಮೇಲೆ ಶಾಂತಿಯಿರಲಿ. ಅಲ್ಲಾಹನು ಉತ್ತಮನೋ ಅಥವಾ ಅವರು ಸಹಭಾಗಿಗಳನ್ನಾಗಿ ಮಾಡುತ್ತಿರುವ ದೇವರುಗಳೋ? info
التفاسير:

external-link copy
60 : 27

اَمَّنْ خَلَقَ السَّمٰوٰتِ وَالْاَرْضَ وَاَنْزَلَ لَكُمْ مِّنَ السَّمَآءِ مَآءً ۚ— فَاَنْۢبَتْنَا بِهٖ حَدَآىِٕقَ ذَاتَ بَهْجَةٍ ۚ— مَا كَانَ لَكُمْ اَنْ تُنْۢبِتُوْا شَجَرَهَا ؕ— ءَاِلٰهٌ مَّعَ اللّٰهِ ؕ— بَلْ هُمْ قَوْمٌ یَّعْدِلُوْنَ ۟ؕ

(ಓ ಪೈಗಂಬರರೇ) ಹೇಳಿರಿ: ಸರ್ವಸ್ತುತಿಯು ಅಲ್ಲಹನಿಗೇ ಮೀಸಲು ಮತ್ತು ಅವನು ಆಯ್ದುಕೊಂಡ ದಾಸರ ಮೇಲೆ ಶಾಂತಿಯಿರಲಿ. ಅಲ್ಲಾಹನು ಉತ್ತಮನೋ ಅಥವಾ ಅವರು ಸಹಭಾಗಿಗಳನ್ನಾಗಿ ಮಾಡುತ್ತಿರುವ ದೇವರುಗಳೋ? info
التفاسير:

external-link copy
61 : 27

اَمَّنْ جَعَلَ الْاَرْضَ قَرَارًا وَّجَعَلَ خِلٰلَهَاۤ اَنْهٰرًا وَّجَعَلَ لَهَا رَوَاسِیَ وَجَعَلَ بَیْنَ الْبَحْرَیْنِ حَاجِزًا ؕ— ءَاِلٰهٌ مَّعَ اللّٰهِ ؕ— بَلْ اَكْثَرُهُمْ لَا یَعْلَمُوْنَ ۟ؕ

ಭೂಮಿಯನ್ನು ಸ್ಥಿರತೆಯುಳ್ಳ ತಂಗುದಾಣವನ್ನಾಗಿ ಮಾಡಿಕೊಟ್ಟವನು ಮತ್ತು ಅದರ ನಡುವೆ ನದಿಗಳನ್ನು ಹರಿಸಿಕೊಟ್ಟವನು ಮತ್ತು ಅದಕ್ಕಾಗಿ ದೃಢ ಪರ್ವತಗಳನ್ನು ನಾಟಿದವನು ಮತ್ತು ಎರಡು ಸಮುದ್ರಗಳ ನಡುವೆ ತಡಯೊಂದನ್ನು ನಿಶ್ಚಯಿಸಿದವನು ಯಾರು? ಅಲ್ಲಾಹನೊಂದಿಗೆ ಇತರ ಆರಾಧ್ಯರೂ ಇದ್ದಾರೆಯೇ? ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ. info
التفاسير:

external-link copy
62 : 27

اَمَّنْ یُّجِیْبُ الْمُضْطَرَّ اِذَا دَعَاهُ وَیَكْشِفُ السُّوْٓءَ وَیَجْعَلُكُمْ خُلَفَآءَ الْاَرْضِ ؕ— ءَاِلٰهٌ مَّعَ اللّٰهِ ؕ— قَلِیْلًا مَّا تَذَكَّرُوْنَ ۟ؕ

ಅಥವಾ ಸಂಕಷ್ಟಕ್ಕೆ ಗುರಿಯಾದವನು ಕರೆದು ಬೇಡಿದಾಗ ಅವನ ಕರೆಗೆ ಓಗೊಟ್ಟು ಅವನ ಸಂಕಷ್ಟವನ್ನು ನೀಗಿಸುವವನು ಯಾರು?ಮತ್ತು ನಿಮ್ಮನ್ನು ಭೂಮಿಯ ಉತ್ತರಾಧಿಕಾರಿಗಳಾಗಿ ನಿಶ್ಚಯಿಸುವವನು ಯಾರು? ಅಲ್ಲಾಹನೊಂದಿಗೆ ಬೇರೆ ಆರಾಧ್ಯನಿದ್ದಾನೆಯೇ? ಅತ್ಯಲ್ಪವೇ ನೀವು ಉಪದೇಶಗಳನ್ನು ಸ್ವೀಕರಿಸುತ್ತೀರಿ. info
التفاسير:

external-link copy
63 : 27

اَمَّنْ یَّهْدِیْكُمْ فِیْ ظُلُمٰتِ الْبَرِّ وَالْبَحْرِ وَمَنْ یُّرْسِلُ الرِّیٰحَ بُشْرًاۢ بَیْنَ یَدَیْ رَحْمَتِهٖ ؕ— ءَاِلٰهٌ مَّعَ اللّٰهِ ؕ— تَعٰلَی اللّٰهُ عَمَّا یُشْرِكُوْنَ ۟ؕ

ನಿಮ್ಮನ್ನು ನೆಲ ಮತ್ತು ಸಮುದ್ರದ ಅಂಧಕಾರಗಳಲ್ಲಿ ದಾರಿ ತೋರಿಸುವವನು ಯಾರು? ತನ್ನ ಕರುಣೆಗೆ ಮುಂಚೆಯೇ ಸುವಾರ್ತೆ ನೀಡುವಂತಹ ಮಾರುತಗಳನ್ನು ಕಳುಹಿಸುವವನು ಯಾರು? ಅಲ್ಲಾಹನೊಂದಿಗೆ ಬೇರೆ ಆರಾಧ್ಯನಿದ್ದಾನೆಯೇ? ಅವರು ಕಲ್ಪಿಸಿಕೊಳ್ಳುತ್ತಿರುವ ಸಹಭಾಗಿತ್ವದಿಂದ ಅವನು ಅದೆಷ್ಟೋ ಉನ್ನತನಾಗಿದ್ದಾನೆ. info
التفاسير: