Vertaling van de betekenissen Edele Qur'an - De Kannada vertaling - Hamza Batoer

Pagina nummer:close

external-link copy
89 : 11

وَیٰقَوْمِ لَا یَجْرِمَنَّكُمْ شِقَاقِیْۤ اَنْ یُّصِیْبَكُمْ مِّثْلُ مَاۤ اَصَابَ قَوْمَ نُوْحٍ اَوْ قَوْمَ هُوْدٍ اَوْ قَوْمَ صٰلِحٍ ؕ— وَمَا قَوْمُ لُوْطٍ مِّنْكُمْ بِبَعِیْدٍ ۟

ಓ ನನ್ನ ಜನರೇ! ನನ್ನೊಂದಿಗೆ ನೀವು ತೋರುತ್ತಿರುವ ಈ ವಿರೋಧವು ನೂಹರ ಜನರಿಗೆ, ಹೂದರ ಜನರಿಗೆ ಅಥವಾ ಸ್ವಾಲಿಹರ ಜನರಿಗೆ ಸಂಭವಿಸಿದ ದುರಂತವು ನಿಮಗೂ ಸಂಭವಿಸುವಂತಾಗಲು ಪ್ರೇರಕವಾಗದಿರಲಿ. ಲೂತರ ಜನರಂತೂ ನಿಮ್ಮಿಂದ ಹೆಚ್ಚು ದೂರದಲ್ಲಿಲ್ಲ. info
التفاسير:

external-link copy
90 : 11

وَاسْتَغْفِرُوْا رَبَّكُمْ ثُمَّ تُوْبُوْۤا اِلَیْهِ ؕ— اِنَّ رَبِّیْ رَحِیْمٌ وَّدُوْدٌ ۟

ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಿರಿ. ನಂತರ ಅವನ ಕಡೆಗೆ ಪಶ್ಚಾತ್ತಾಪದಿಂದ ತಿರುಗಿರಿ. ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ದಯೆ ತೋರುವವನು ಮತ್ತು ಅಕ್ಕರೆಯುಳ್ಳವನಾಗಿದ್ದಾನೆ.” info
التفاسير:

external-link copy
91 : 11

قَالُوْا یٰشُعَیْبُ مَا نَفْقَهُ كَثِیْرًا مِّمَّا تَقُوْلُ وَاِنَّا لَنَرٰىكَ فِیْنَا ضَعِیْفًا ۚ— وَلَوْلَا رَهْطُكَ لَرَجَمْنٰكَ ؗ— وَمَاۤ اَنْتَ عَلَیْنَا بِعَزِیْزٍ ۟

ಅವರು ಹೇಳಿದರು: “ಓ ಶುಐಬ್! ನೀನು ಹೇಳುವ ಮಾತುಗಳಲ್ಲಿ ಹೆಚ್ಚಿನದ್ದನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ನಿಶ್ಚಯವಾಗಿಯೂ ನೀನು ನಮ್ಮಲ್ಲಿ ಒಬ್ಬ ಬಲಹೀನ ವ್ಯಕ್ತಿಯಂತೆ ಕಾಣುತ್ತಿರುವೆ. ನಿನ್ನ ಗೋತ್ರದವರು ಇಲ್ಲದಿರುತ್ತಿದ್ದರೆ ನಾವು ನಿನ್ನನ್ನು ಕಲ್ಲೆಸೆದು ಕೊಲ್ಲುತ್ತಿದ್ದೆವು. ನಾವು ನಿನ್ನನ್ನು ಗೌರವಾರ್ಹ ವ್ಯಕ್ತಿಯೆಂದು ಪರಿಗಣಿಸುವುದಿಲ್ಲ.” info
التفاسير:

external-link copy
92 : 11

قَالَ یٰقَوْمِ اَرَهْطِیْۤ اَعَزُّ عَلَیْكُمْ مِّنَ اللّٰهِ ؕ— وَاتَّخَذْتُمُوْهُ وَرَآءَكُمْ ظِهْرِیًّا ؕ— اِنَّ رَبِّیْ بِمَا تَعْمَلُوْنَ مُحِیْطٌ ۟

ಶುಐಬ್ ಹೇಳಿದರು: “ಓ ನನ್ನ ಜನರೇ! ನಿಮ್ಮ ದೃಷ್ಟಿಯಲ್ಲಿ ಅಲ್ಲಾಹನಿಗಿಂತಲೂ ನನ್ನ ಗೋತ್ರದವರೇ ಹೆಚ್ಚು ಗೌರವಾನ್ವಿತರೇ? ನೀವಂತೂ ಅವನನ್ನು ನಿಮ್ಮ ಬೆನ್ನ ಹಿಂಭಾಗಕ್ಕೆ ಎಸೆದಿದ್ದೀರಿ. ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ನೀವು ಮಾಡುವ ಕರ್ಮಗಳನ್ನು ಆವರಿಸಿದ್ದಾನೆ. info
التفاسير:

external-link copy
93 : 11

وَیٰقَوْمِ اعْمَلُوْا عَلٰی مَكَانَتِكُمْ اِنِّیْ عَامِلٌ ؕ— سَوْفَ تَعْلَمُوْنَ ۙ— مَنْ یَّاْتِیْهِ عَذَابٌ یُّخْزِیْهِ وَمَنْ هُوَ كَاذِبٌ ؕ— وَارْتَقِبُوْۤا اِنِّیْ مَعَكُمْ رَقِیْبٌ ۟

ಓ ನನ್ನ ಜನರೇ! ನೀವು ನಿಮ್ಮ ಸ್ಥಾನದಲ್ಲಿ ಕರ್ಮವೆಸಗಿರಿ. ನಾನೂ ಕರ್ಮವೆಸಗುತ್ತೇನೆ. ಅವಮಾನಗೊಳಿಸುವ ಶಿಕ್ಷೆಯು ಯಾರಿಗೆ ಬರಲಿದೆ ಮತ್ತು ಯಾರು ಸುಳ್ಳು ಹೇಳುವವರು ಎಂದು ಸದ್ಯವೇ ನೀವು ತಿಳಿಯುವಿರಿ. ನೀವು ಕಾಯಿರಿ. ನಾನೂ ಕೂಡ ನಿಮ್ಮೊಂದಿಗೆ ಕಾಯುತ್ತೇನೆ.” info
التفاسير:

external-link copy
94 : 11

وَلَمَّا جَآءَ اَمْرُنَا نَجَّیْنَا شُعَیْبًا وَّالَّذِیْنَ اٰمَنُوْا مَعَهٗ بِرَحْمَةٍ مِّنَّا وَاَخَذَتِ الَّذِیْنَ ظَلَمُوا الصَّیْحَةُ فَاَصْبَحُوْا فِیْ دِیَارِهِمْ جٰثِمِیْنَ ۟ۙ

ನಮ್ಮ ಆಜ್ಞೆಯು ಬಂದಾಗ, ನಾವು ನಮ್ಮ ದಯೆಯಿಂದ ಶುಐಬರನ್ನು ಮತ್ತು ಅವರ ಜೊತೆಯಲ್ಲಿದ್ದ ಸತ್ಯವಿಶ್ವಾಸಿಗಳನ್ನು ರಕ್ಷಿಸಿದೆವು. ಆ ಅಕ್ರಮಿಗಳನ್ನು ಮಹಾ ಚೀತ್ಕಾರವು ಹಿಡಿದುಬಿಟ್ಟಿತು. ಅವರು ತಮ್ಮ ಮನೆಗಳಲ್ಲಿಯೇ ಬೋರಲು ಬಿದ್ದು ಸತ್ತರು. info
التفاسير:

external-link copy
95 : 11

كَاَنْ لَّمْ یَغْنَوْا فِیْهَا ؕ— اَلَا بُعْدًا لِّمَدْیَنَ كَمَا بَعِدَتْ ثَمُوْدُ ۟۠

ಅವರು ಅಲ್ಲಿ ವಾಸಿಸಲೇ ಇಲ್ಲ ಎಂಬಂತೆ ನಾಶವಾದರು. ತಿಳಿಯಿರಿ! ನಿಶ್ಚಯವಾಗಿಯೂ ಸಮೂದ್ ಗೋತ್ರದವರು (ಅಲ್ಲಾಹನ ದಯೆಯಿಂದ) ದೂರವಾದಂತೆ ಮದ್ಯನ್ ಗೋತ್ರದವರೂ (ಅಲ್ಲಾಹನ ದಯೆಯಿಂದ) ದೂರವಾದರು. info
التفاسير:

external-link copy
96 : 11

وَلَقَدْ اَرْسَلْنَا مُوْسٰی بِاٰیٰتِنَا وَسُلْطٰنٍ مُّبِیْنٍ ۟ۙ

ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳು ಮತ್ತು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಕಳುಹಿಸಿದೆವು. info
التفاسير:

external-link copy
97 : 11

اِلٰی فِرْعَوْنَ وَمَلَاۡىِٕهٖ فَاتَّبَعُوْۤا اَمْرَ فِرْعَوْنَ ۚ— وَمَاۤ اَمْرُ فِرْعَوْنَ بِرَشِیْدٍ ۟

ಫರೋಹ ಮತ್ತು ಅವನ ಜನರ ಮುಖಂಡರ ಬಳಿಗೆ. ಆದರೆ ಅವರು ಫರೋಹನ ಆಜ್ಞೆಯನ್ನು ಹಿಂಬಾಲಿಸಿದರು. ಫರೋಹನ ಆಜ್ಞೆಯು ವಿವೇಚನಾಯುಕ್ತವಾಗಿರಲಿಲ್ಲ. info
التفاسير: