വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
49 : 2

وَاِذْ نَجَّیْنٰكُمْ مِّنْ اٰلِ فِرْعَوْنَ یَسُوْمُوْنَكُمْ سُوْٓءَ الْعَذَابِ یُذَبِّحُوْنَ اَبْنَآءَكُمْ وَیَسْتَحْیُوْنَ نِسَآءَكُمْ ؕ— وَفِیْ ذٰلِكُمْ بَلَآءٌ مِّنْ رَّبِّكُمْ عَظِیْمٌ ۟

ಮತ್ತು ನಾವು ನಿಮ್ಮನ್ನು ಫಿರ್‌ಔನಿನ ಜನರಿಂದ ಕಾಪಾಡಿದ ಸಂಧರ್ಭವನ್ನು ಸ್ಮರಿಸಿರಿ ಅವರು ನಿಮಗೆ ಘೋರ ಶಿಕ್ಷೆಕೊಟ್ಟು ಪೀಡಿಸುತ್ತಿದ್ದರು ಹಾಗೂ ನಿಮ್ಮ ಗಂಡು ಸಂತತಿಗಳನ್ನು ವಧಿಸುತ್ತಿದ್ದರು ಮತ್ತು ಹೆಣ್ಣು ಸಂತತಿಗಳನ್ನು ಜೀವಂತವಾಗಿ ಬಿಡುತ್ತಿದ್ದರು. ನಿಮಗೆ ಆ ಪರಿಸ್ಥಿತಿಯಲ್ಲಿ ನಿಮ್ಮ ಪ್ರಭುವಿನ ಕಡೆಯಿಂದ ಮಹಾ ಪರೀಕ್ಷೆಯಿತ್ತು. info
التفاسير:

external-link copy
50 : 2

وَاِذْ فَرَقْنَا بِكُمُ الْبَحْرَ فَاَنْجَیْنٰكُمْ وَاَغْرَقْنَاۤ اٰلَ فِرْعَوْنَ وَاَنْتُمْ تَنْظُرُوْنَ ۟

ಮತ್ತು ನಾವು ನಿಮಗಾಗಿ ಕಡಲನ್ನು ಇಬ್ಭಾಗಿಸಿ ದಾರಿ ಮಾಡಿದ ಸಂಧರ್ಭವನ್ನು ಸ್ಮರಿಸಿರಿ. ನಾವು ನಿಮ್ಮನ್ನು ರಕ್ಷಿಸಿದೆವು ಹಾಗೂ ನಿಮ್ಮ ಕಣ್ಣಮುಂದೆಯೇ ಫಿರ್‌ಔನನ ಜನರನ್ನು ಮುಳುಗಿಸಿಬಿಟ್ಟೆವು. info
التفاسير:

external-link copy
51 : 2

وَاِذْ وٰعَدْنَا مُوْسٰۤی اَرْبَعِیْنَ لَیْلَةً ثُمَّ اتَّخَذْتُمُ الْعِجْلَ مِنْ بَعْدِهٖ وَاَنْتُمْ ظٰلِمُوْنَ ۟

ಮತ್ತು ನಾವು ಮೂಸಾ(ಅ)ರವರಿಗೆ ನಲ್ವತ್ತು ರಾತ್ರಿಗಳ ವಾಗ್ದಾನವನ್ನು ಮಾಡಿದ ಸಂಧರ್ಭವನ್ನು ಸ್ಮರಿಸಿರಿ. ತರುವಾಯ ನೀವು ಕರುವನ್ನು (ದೇವರನ್ನಾಗಿ) ಆರಾಧಿಸತೊಡಗಿದಿರಿ ಮತ್ತು ತಮ್ಮ ಪಾಲಿಗೆ ಅಕ್ರಮಿಗಳಾಗಿಬಿಟ್ಟಿರಿ. info
التفاسير:

external-link copy
52 : 2

ثُمَّ عَفَوْنَا عَنْكُمْ مِّنْ بَعْدِ ذٰلِكَ لَعَلَّكُمْ تَشْكُرُوْنَ ۟

ಆದರೆ ಇಷ್ಟಾದ ಬಳಿಕವೂ ನೀವು ಕೃತಜ್ಞತೆ ತೋರಬಹುದೆಂದು ನಾವು ನಿಮ್ಮನ್ನು ಕ್ಷಮಿಸಿ ಬಿಟ್ಟೆವು info
التفاسير:

external-link copy
53 : 2

وَاِذْ اٰتَیْنَا مُوْسَی الْكِتٰبَ وَالْفُرْقَانَ لَعَلَّكُمْ تَهْتَدُوْنَ ۟

ಮತ್ತು ನೀವು ಸನ್ಮಾರ್ಗ ಪಡೆಯಲ್ಲಿಕ್ಕಾಗಿ ನಾವು ಮೂಸರಿಗೆ ಗ್ರಂಥÀವನ್ನೂ (ತೌರಾತ್) ಸತ್ಯ ಅಸತ್ಯತೆನ್ನು ಬೇರ್ಪಡಿಸುವ ಮಾನದಂಡವನ್ನು ದಯಪಾಲಿಸದೆವು. info
التفاسير:

external-link copy
54 : 2

وَاِذْ قَالَ مُوْسٰی لِقَوْمِهٖ یٰقَوْمِ اِنَّكُمْ ظَلَمْتُمْ اَنْفُسَكُمْ بِاتِّخَاذِكُمُ الْعِجْلَ فَتُوْبُوْۤا اِلٰی بَارِىِٕكُمْ فَاقْتُلُوْۤا اَنْفُسَكُمْ ؕ— ذٰلِكُمْ خَیْرٌ لَّكُمْ عِنْدَ بَارِىِٕكُمْ ؕ— فَتَابَ عَلَیْكُمْ ؕ— اِنَّهٗ هُوَ التَّوَّابُ الرَّحِیْمُ ۟

ಮೂಸ(ಅ) ತನ್ನ ಜನರಿಗೆ ಹೇಳಿದ (ಸಂಧರ್ಭವನ್ನು ಸ್ಮರಿಸಿರಿ). ಓ ನನ್ನ ಜನರೇ, ಕರುವನ್ನು ಆರಾಧ್ಯನನ್ನಾಗಿ ಮಾಡಿಕೊಳ್ಳುವ ಮೂಲಕ ನೀವು ಸ್ವತಃ ನಿಮ್ಮ ಮೇಲೆ ಅನ್ಯಾಯ ಮಾಡಿಕೊಂಡಿರುವಿರಿ. ಈಗ ನೀವು ನಿಮ್ಮನ್ನು ಸೃಷ್ಟಿಸಿದವನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ. ಮತ್ತು ನೀವು ಸ್ವತಃ ನಿಮ್ಮನ್ನೇ ವಧಿಸಿರಿ. ಇದು ನಿಮ್ಮ ಪಾಲಿಗೆ ಸೃಷ್ಟಿಸಿದವನ ಬಳಿ ಅತ್ಯುತ್ತಮವಾಗಿದೆ. ಆಗ ಅವನು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಿದನು. ನಿಸ್ಸಂಶಯವಾಗಿಯು ಅವನು ಪಶ್ಚಾತ್ತಾಪ ಸ್ವೀಕರಿಸುವವನು, ಕರುಣಾನಿಧಿಯು ಆಗಿರುವನು. info
التفاسير:

external-link copy
55 : 2

وَاِذْ قُلْتُمْ یٰمُوْسٰی لَنْ نُّؤْمِنَ لَكَ حَتّٰی نَرَی اللّٰهَ جَهْرَةً فَاَخَذَتْكُمُ الصّٰعِقَةُ وَاَنْتُمْ تَنْظُرُوْنَ ۟

ಓ ಮೂಸಾ(ಅ) “ನಾವು ಅಲ್ಲಾಹನನ್ನು ಪ್ರತ್ಯಕ್ಷವಾಗಿ ಕಾಣುವವರೆಗೂ ವಿಶ್ವಾಸವಿಡಲಾರೆವು ಎಂದು ನೀವು ಮೂಸಾ(ಅ)ರವರಿಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ಆಗ ನೀವು ನೋಡುತ್ತಿದ್ದಂತೆಯೇ ಸಿಡಿಲು ನಿಮ್ಮ ಮೇಲೆ ಎರೆಗಿಬಿಟ್ಟಿತ್ತು(ಅದು ನಿಮ್ಮ ಮರಣಕ್ಕೆ ಕಾರಣವಾಯಿತು). info
التفاسير:

external-link copy
56 : 2

ثُمَّ بَعَثْنٰكُمْ مِّنْ بَعْدِ مَوْتِكُمْ لَعَلَّكُمْ تَشْكُرُوْنَ ۟

ಆದರೆ ನೀವು ಕೃತಜ್ಞತೆ ತೋರಬಹುದೆಂದು, ನಿಮ್ಮ ಮರಣದ ಬಳಿಕ ನಾವು ನಿಮ್ಮನ್ನು ಜೀವಂತಗೊಳಿಸಿ ಎಬ್ಬಿಸಿದೆವು. info
التفاسير:

external-link copy
57 : 2

وَظَلَّلْنَا عَلَیْكُمُ الْغَمَامَ وَاَنْزَلْنَا عَلَیْكُمُ الْمَنَّ وَالسَّلْوٰی ؕ— كُلُوْا مِنْ طَیِّبٰتِ مَا رَزَقْنٰكُمْ ؕ— وَمَا ظَلَمُوْنَا وَلٰكِنْ كَانُوْۤا اَنْفُسَهُمْ یَظْلِمُوْنَ ۟

ನಾವು ನಿಮ್ಮ ಮೇಲೆ ಮೋಡವನ್ನು ನೆರಳನ್ನಾಗಿ ಮಾಡಿದೆವು. ಮತ್ತು ನಿಮ್ಮ ಮೇಲೆ ಮನ್ನಾ(೧) ಮತ್ತು ಲಾವಕ್ಕಿಯನ್ನು ಇಳಿಸಿಕೊಟ್ಟೆವು. ಮತ್ತು ನಾವು ನಿಮಗೆ ಆಹಾರವಾಗಿ ನೀಡಿರುವಂತಹ ಶುದ್ಧವಾದವುಗಳನ್ನು ತಿನ್ನಿರಿ ಎಂದೆವು. ಅವರು (ಕೃತಘ್ನರಾಗಿ) ನಮ್ಮ ಮೇಲೆ ಅಕ್ರಮವೆಸಗಲಿಲ್ಲ. ವಸ್ತುತಃ ಅವರು ಸ್ವತಃ ತಮ್ಮ ಮೇಲೆಯೇ ಅಕ್ರಮವೆಸಗುತ್ತಿದ್ದರು. info
التفاسير: