വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
225 : 2

لَا یُؤَاخِذُكُمُ اللّٰهُ بِاللَّغْوِ فِیْۤ اَیْمَانِكُمْ وَلٰكِنْ یُّؤَاخِذُكُمْ بِمَا كَسَبَتْ قُلُوْبُكُمْ ؕ— وَاللّٰهُ غَفُوْرٌ حَلِیْمٌ ۟

ಅನೈಚ್ಛಿಕ (ಅರ್ಥಶೂನ್ಯ) ಶಪಥಗಳ ನಿಮಿತ್ತ ಅಲ್ಲಾಹನು ನಿಮ್ಮನ್ನು ವಿಚಾರಿಸುವುದಿಲ್ಲ. ಆದರೆ ಅವನು ಉದ್ದೇಶಪೂರ್ವಕ ಶಪಥಗಳ ನಿಮಿತ್ತ ನಿಮ್ಮ ವಿಚಾರಣೆ ನಡೆಸುವನು ಮತ್ತು ಅಲ್ಲಾಹನು ಕ್ಷಮಾಶೀಲನೂ, ವಿವೇಕಪೂರ್ಣನೂ ಆಗಿರುವನು. info
التفاسير:

external-link copy
226 : 2

لِلَّذِیْنَ یُؤْلُوْنَ مِنْ نِّسَآىِٕهِمْ تَرَبُّصُ اَرْبَعَةِ اَشْهُرٍ ۚ— فَاِنْ فَآءُوْ فَاِنَّ اللّٰهَ غَفُوْرٌ رَّحِیْمٌ ۟

ತಮ್ಮ ಪತ್ನಿಯರೊಂದಿಗೆ (ಸಂಭೋಗ ಮಾಡುವುದಿಲ್ಲವೆಂಬ) ಪ್ರತಿಜ್ಞೆ ಮಾಡುವವರ ಪಾಲಿಗೆ ನಾಲ್ಕು ತಿಂಗಳ ಕಾಲಾವಧಿಯಿರುವುದು. ಇನ್ನು ಅವರು ಮರಳಿ ಬಂದರೆ ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುವನು. info
التفاسير:

external-link copy
227 : 2

وَاِنْ عَزَمُوا الطَّلَاقَ فَاِنَّ اللّٰهَ سَمِیْعٌ عَلِیْمٌ ۟

ಮತ್ತು ಅವರು ವಿವಾಹ ವಿಚ್ಛೇದನೆಯ ನಿರ್ಧಾರ ಮಾಡಿದ್ದರೆ ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞಾನಿಯೂ ಆಗಿರುವನು. info
التفاسير:

external-link copy
228 : 2

وَالْمُطَلَّقٰتُ یَتَرَبَّصْنَ بِاَنْفُسِهِنَّ ثَلٰثَةَ قُرُوْٓءٍ ؕ— وَلَا یَحِلُّ لَهُنَّ اَنْ یَّكْتُمْنَ مَا خَلَقَ اللّٰهُ فِیْۤ اَرْحَامِهِنَّ اِنْ كُنَّ یُؤْمِنَّ بِاللّٰهِ وَالْیَوْمِ الْاٰخِرِ ؕ— وَبُعُوْلَتُهُنَّ اَحَقُّ بِرَدِّهِنَّ فِیْ ذٰلِكَ اِنْ اَرَادُوْۤا اِصْلَاحًا ؕ— وَلَهُنَّ مِثْلُ الَّذِیْ عَلَیْهِنَّ بِالْمَعْرُوْفِ ۪— وَلِلرِّجَالِ عَلَیْهِنَّ دَرَجَةٌ ؕ— وَاللّٰهُ عَزِیْزٌ حَكِیْمٌ ۟۠

ಮತ್ತು ವಿಚ್ಛೇದಿತ ಸ್ತಿçÃಯರು ತಮ್ಮನ್ನು ಮೂರು ಆರ್ತವಗಳವರೆಗೆ ತಡೆದಿರಿಸಿಕೊಳ್ಳಲಿ ಮತ್ತು ಅವರು ಅಲ್ಲಾಹನಲ್ಲೂ, ಅಂತ್ಯದಿನದಲ್ಲೂ ವಿಶ್ವಾಸವಿರಿಸುವವರಾದರೆ ತಮ್ಮ ಗರ್ಭಾಶಯಗಳಲ್ಲಿ ಅಲ್ಲಾಹನು ಸೃಷ್ಟಿಸಿರುವುದನ್ನು ಮುಚ್ಚಿಡುವುದು ಅವರ ಪಾಲಿಗೆ ಧರ್ಮಸಮ್ಮತವಲ್ಲ. ಮತ್ತು ಅವರ ಪತಿಯರು ಹೊಂದಾಣಿಕೆಯನ್ನು ಬಯಸುವುದಾದರೆ ಆ ಅವಧಿಯೊಳಗೆ ಅವರನ್ನು ಮರಳಿ ಸ್ವೀಕರಿಸಲು ಹೆಚ್ಚು ಹಕ್ಕುಳ್ಳವರಾಗಿದ್ದಾರೆ. ಮತ್ತು ಸ್ತಿçÃಯರ ಮೇಲೆ ತಮ್ಮ ಪತಿಯರ ಹಕ್ಕುಗಳಿರುವ ಹಾಗೆ ಪತಿಯರ ಮೇಲೂ ನ್ಯಾಯೋಚಿತವಾಗಿ ಸ್ತಿçÃಯರ ಹಕ್ಕುಗಳಿವೆ. ಆದರೆ ಪುರುಷರಿಗೆ ಸ್ತಿçÃಯರಿಗಿಂತ ಒಂದು ದರ್ಜೆ ಹೆಚ್ಚಿದೆ. ಅಲ್ಲಾಹನು ಪ್ರಬಲನೂ, ಯುಕ್ತಿಪೂರ್ಣನೂ ಆಗಿದ್ದಾನೆ. info
التفاسير:

external-link copy
229 : 2

اَلطَّلَاقُ مَرَّتٰنِ ۪— فَاِمْسَاكٌ بِمَعْرُوْفٍ اَوْ تَسْرِیْحٌ بِاِحْسَانٍ ؕ— وَلَا یَحِلُّ لَكُمْ اَنْ تَاْخُذُوْا مِمَّاۤ اٰتَیْتُمُوْهُنَّ شَیْـًٔا اِلَّاۤ اَنْ یَّخَافَاۤ اَلَّا یُقِیْمَا حُدُوْدَ اللّٰهِ ؕ— فَاِنْ خِفْتُمْ اَلَّا یُقِیْمَا حُدُوْدَ اللّٰهِ ۙ— فَلَا جُنَاحَ عَلَیْهِمَا فِیْمَا افْتَدَتْ بِهٖ ؕ— تِلْكَ حُدُوْدُ اللّٰهِ فَلَا تَعْتَدُوْهَا ۚ— وَمَنْ یَّتَعَدَّ حُدُوْدَ اللّٰهِ فَاُولٰٓىِٕكَ هُمُ الظّٰلِمُوْنَ ۟

(ಮರಳಿ ಪಡೆಯಲು ಅನುಮತಿಯಿರುವ) ವಿಚ್ಛೇದನೆ (ಅಧಿಕವೆಂದರೆ) ಎರಡು ಬಾರಿಯಾಗಿರುತ್ತದೆ. ಅನಂತರ (ಪತಿಗೆ ಎರಡೇ ಮಾರ್ಗಗಳಿವೆ) ಒಂದು ಸದಾಚಾರದೊಂದಿಗೆ ತಡೆದಿರಿಸಿಕೊಳ್ಳಿರಿ ಇಲ್ಲವೇ ಒಳಿತಿನೊಂದಿಗೆ ವಿದಾಯ ಹೇಳಿರಿ. ನೀವು ಅವರಿಗೆ ನೀಡಿರುವ ವಧು ಧನದಿಂದ ಏನನ್ನಾದರೂ ಮರಳಿಪಡೆಯುವುÀದು ನಿಮಗೆ ಧರ್ಮ ಸಮ್ಮತವಲ್ಲ. ಆದರೆ (ವಿವಾಹ ಸಂಬAಧÀವನ್ನು ಬಾಕಿ ಉಳಿಸಿದರೆ) ಅಲ್ಲಾಹನು ಮೇರೆಗಳನ್ನು ದಂಪತಿಗಳು ನೆಲೆ ನಿಲ್ಲಿಸಲಾರೆವು ಎಂದು ಭಯಪಟ್ಟರೆ ಬೇರೆ ವಿಚಾರ. ಆದ್ದರಿಂದ ಅವರು ಅಲ್ಲಾಹನ ಮೇರೆಗಳನ್ನು ನೆಲೆ ನಿಲ್ಲಿಸಲಾರರೆÉಂದು ನೀವು ಭಯಪಟ್ಟರೆ ಪತ್ನಿಯು ಬಿಡುಗಡೆ ಪಡೆಯಲ್ಲಿಕ್ಕಾಗಿ ಮಹರ್ (ವಧು) ಧನವನ್ನು ಮರಳಿಸಿದರೆ ಈ ವಿಚಾರದಲ್ಲಿ ಅವರಿಬ್ಬರ ಮೇಲೆ ದೋಷವಿರುವುದಿಲ್ಲ. ಇವು ಅಲ್ಲಾಹನ ಮೇರೆಗಳು. ಜಾಗೃತೆ! ಇವುಗಳನ್ನು ಮೀರಬೇಡಿರಿ ಮತ್ತು ಯಾರು ಅಲ್ಲಾಹನ ಮೇರೆಗಳನ್ನು ಉಲ್ಲಂಘಿಸುತ್ತಾರೋ ಅವರು ಅಕ್ರಮಿಗಳಾಗಿರುತ್ತಾರೆ. info
التفاسير:

external-link copy
230 : 2

فَاِنْ طَلَّقَهَا فَلَا تَحِلُّ لَهٗ مِنْ بَعْدُ حَتّٰی تَنْكِحَ زَوْجًا غَیْرَهٗ ؕ— فَاِنْ طَلَّقَهَا فَلَا جُنَاحَ عَلَیْهِمَاۤ اَنْ یَّتَرَاجَعَاۤ اِنْ ظَنَّاۤ اَنْ یُّقِیْمَا حُدُوْدَ اللّٰهِ ؕ— وَتِلْكَ حُدُوْدُ اللّٰهِ یُبَیِّنُهَا لِقَوْمٍ یَّعْلَمُوْنَ ۟

ಇನ್ನು (ಮೂರನೆ ಸಲ) ಅವನು ಅವಳನ್ನು ವಿಚ್ಛೇದಿಸಿದರೆ ಇನ್ನು ಅವಳು ಬೇರೊಬ್ಬ ಪತಿಯನ್ನು ವಿವಾಹ ಮಾಡಿಕೊಳ್ಳುವವರೆಗೆ ಅವÀಳು ಅವನಿಗೆ ಧರ್ಮ ಸಮ್ಮತವಾಗುವುದಿಲ್ಲ. ಒಂದೊಮ್ಮೆ ಅವನು (ಎರಡನೇ ಪತಿ ಸಂಭೋಗದ ನಂತರ) ಸಹ ಅವಳನ್ನು ವಿಚ್ಛೇದಿಸಿದರೆ (ಮೊದಲನೇ ಪತಿಯೊಡನೆ) ಅವರಿಬ್ಬರೂ ಪರಸ್ಪರ ಹೊಂದಿಕೊಳ್ಳುವುದರಿAದ ಯಾವ ದೋಷವೂ ಇರುವುದಿಲ್ಲ. (ಆದರೆ) ಅವರು ಅಲ್ಲಾಹನ ಮೇರೆಗಳನ್ನು ನೆಲೆನಿಲ್ಲಿಸಬಲ್ಲೆವೆಂದು ದೃಢವಾಗಿ ಅರಿತಿರಬೇಕು ಮತ್ತು ಇವುಗಳು ಅಲ್ಲಾಹನ ಮೇರೆಗಳಾಗಿವೆ. ಅವನು ಇವುಗಳನ್ನು ತಿಳುವಳಿಕೆಯುಳ್ಳ ಜನರಿಗೆ ವಿವರಿಸಿ ಕೊಡುತ್ತಾನೆ. info
التفاسير: