വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
154 : 2

وَلَا تَقُوْلُوْا لِمَنْ یُّقْتَلُ فِیْ سَبِیْلِ اللّٰهِ اَمْوَاتٌ ؕ— بَلْ اَحْیَآءٌ وَّلٰكِنْ لَّا تَشْعُرُوْنَ ۟

ನೀವು ಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾದವರನ್ನು ಮೃತರೆಂದು ಹೇಳಬೇಡಿರಿ. ಅವರು ಜೀವಂತವಾಗಿದ್ದಾರೆ. ಆದರೆ ನೀವು (ಅವರ ಜೀವನವನ್ನು) ಗ್ರಹಿಸಲಾರಿರಿ. info
التفاسير:

external-link copy
155 : 2

وَلَنَبْلُوَنَّكُمْ بِشَیْءٍ مِّنَ الْخَوْفِ وَالْجُوْعِ وَنَقْصٍ مِّنَ الْاَمْوَالِ وَالْاَنْفُسِ وَالثَّمَرٰتِ ؕ— وَبَشِّرِ الصّٰبِرِیْنَ ۟ۙ

ಒಂದಲ್ಲ ಒಂದು ಬಗೆಯ ಭಯ, ಶಂಕೆ, ಹಸಿವು ಮತ್ತು ಸೊತ್ತು ಸಂಪತ್ತುಗಳ ನಷ್ಟ ಹಾಗೂ ಪ್ರಾಣಹಾನಿಗಳ ಮೂಲಕವು ಹಾಗೂ ಫಲೊತ್ಪಾದನೆಗಳ ಕೊರತೆಯ ಮೂಲಕವೂ ನಾವು ನಿಮ್ಮನ್ನು ಖಂಡಿತ ಪರೀಕ್ಷೆಗೊಳಪಡಿಸುತ್ತೇವೆ. ಮತ್ತು ಇಂತಹಾ ಪರಿಸ್ಥಿತಿಯಲ್ಲಿ ಸಹನಶೀಲರಾಗಿರುವವರಿಗೆ ನೀವು ಸುವಾರ್ತೆಯನ್ನೀಡಿರಿ. info
التفاسير:

external-link copy
156 : 2

الَّذِیْنَ اِذَاۤ اَصَابَتْهُمْ مُّصِیْبَةٌ ۙ— قَالُوْۤا اِنَّا لِلّٰهِ وَاِنَّاۤ اِلَیْهِ رٰجِعُوْنَ ۟ؕ

ಇಂತಹವರೇ ತಮಗೆ ವಿಪತ್ತು ಬಾಧಿಸಿದಾಗ ನಾವು ಅಲ್ಲಾಹನ ಅಧೀನಕ್ಕೆ ಸೇರಿದವರು ಮತ್ತು ನಾವು ಅವನೆಡೆಗೇ ಮರಳುವವರಿದ್ದೇವೆ ಎಂದು ಹೇಳುತ್ತಾರೆ. info
التفاسير:

external-link copy
157 : 2

اُولٰٓىِٕكَ عَلَیْهِمْ صَلَوٰتٌ مِّنْ رَّبِّهِمْ وَرَحْمَةٌ ۫— وَاُولٰٓىِٕكَ هُمُ الْمُهْتَدُوْنَ ۟

ಇಂತವರ ಮೇಲೆ ತಮ್ಮ ಪ್ರಭುವಿನ ಅನುಗ್ರಹಗಳು ಮತ್ತು ಕಾರುಣ್ಯವು ಇರುವುದು. ಮತ್ತು ಇವರೇ ಸನ್ಮಾರ್ಗ ಪ್ರಾಪ್ತರಾಗಿದ್ದವರಾಗಿದ್ದಾರೆ. info
التفاسير:

external-link copy
158 : 2

اِنَّ الصَّفَا وَالْمَرْوَةَ مِنْ شَعَآىِٕرِ اللّٰهِ ۚ— فَمَنْ حَجَّ الْبَیْتَ اَوِ اعْتَمَرَ فَلَا جُنَاحَ عَلَیْهِ اَنْ یَّطَّوَّفَ بِهِمَا ؕ— وَمَنْ تَطَوَّعَ خَیْرًا ۙ— فَاِنَّ اللّٰهَ شَاكِرٌ عَلِیْمٌ ۟

ನಿಶ್ಚಯವಾಗಿ ಸಫಾ ಮತ್ತು ಮರ್ವಾ ಅಲ್ಲಾಹನ ಲಾಂಛನಗಳಲ್ಲಿ ಸೇರಿವೆ ಆದ್ದರಿಂದ ಪವಿತ್ರ ಕಾಬಾ (ಕಾಬಾಭವನ) ದ ಹಜ್ಜ್ ಮತ್ತು ಉಮ್ರಾ ಕೈಗೊಳ್ಳುವವನ ಮೇಲೆ ಅವುಗಳ ಪ್ರದಕ್ಷಣೆ ಮಾಡುವುದರಿಂದ ಯಾವ ದೋಷವು ಇರುವುದಿಲ್ಲ. ಸ್ವಇಚ್ಛೆಯಿಂದ ಒಳಿತನ್ನು ಮಾಡುವವರ ಪಾಲಿಗೆ ಅಲ್ಲಾಹನು ಮೆಚ್ಚುವವನೂ ಸರ್ವಜ್ಞನೂ ಆಗಿದ್ದಾನೆ. info
التفاسير:

external-link copy
159 : 2

اِنَّ الَّذِیْنَ یَكْتُمُوْنَ مَاۤ اَنْزَلْنَا مِنَ الْبَیِّنٰتِ وَالْهُدٰی مِنْ بَعْدِ مَا بَیَّنّٰهُ لِلنَّاسِ فِی الْكِتٰبِ ۙ— اُولٰٓىِٕكَ یَلْعَنُهُمُ اللّٰهُ وَیَلْعَنُهُمُ اللّٰعِنُوْنَ ۟ۙ

ನಾವು ಅವತೀರ್ಣಗೊಳಿಸಿದಂತಹ ನಮ್ಮ ಸುಸ್ಪಷ್ಟ ಪುರಾವೆ ಹಾಗೂ ಮಾರ್ಗದರ್ಶನವನ್ನು ಜನರಿಗಾಗಿ ನಾವು ನಮ್ಮ ಗ್ರಂಥದಲ್ಲಿ ವಿವರಿಸಿಕೊಟ್ಟ ಬಳಿಕವೂ ಯಾರು ಮರೆಮಾಚುತ್ತಾರೋ, ಅವರ ಮೇಲೆ ಅಲ್ಲಾಹನು ಶಪಿಸುತ್ತಾನೆ. ಶಪಿಸುವವರೆಲ್ಲಾ ಶಪಿಸುತ್ತಾರೆ. info
التفاسير:

external-link copy
160 : 2

اِلَّا الَّذِیْنَ تَابُوْا وَاَصْلَحُوْا وَبَیَّنُوْا فَاُولٰٓىِٕكَ اَتُوْبُ عَلَیْهِمْ ۚ— وَاَنَا التَّوَّابُ الرَّحِیْمُ ۟

ಆದರೆ ಪಶ್ಚಾತ್ತಾಪಪಟ್ಟು ಮರುಳುವವರ, ಹಾಗೂ ಸುಧಾರಣೆ ಮಾಡಿಕೊಳ್ಳುವವರ ಮತ್ತು ಬಚ್ಚಿಟ್ಟಿದ್ದನ್ನು ಸ್ಪಷ್ಟವಾಗಿ ವಿವರಿಸಿ ಕೊಡುವವರ ಪಶ್ಚಾತ್ತಾಪವನ್ನು ನಾನು ಸ್ವೀಕರಿಸುತ್ತೇನೆ ಮತ್ತು ನಾನು ಪಶ್ಚಾತ್ತಾಪ ಸ್ವೀಕರಿಸುವವನೂ, ಕರುಣಾನಿಧಿಯು ಆಗಿರುವೆನು. info
التفاسير:

external-link copy
161 : 2

اِنَّ الَّذِیْنَ كَفَرُوْا وَمَاتُوْا وَهُمْ كُفَّارٌ اُولٰٓىِٕكَ عَلَیْهِمْ لَعْنَةُ اللّٰهِ وَالْمَلٰٓىِٕكَةِ وَالنَّاسِ اَجْمَعِیْنَ ۟ۙ

ಖಂಡಿತವಾಗಿಯೂ ಸತ್ಯನಿಷೇಧಿಸಿದವರು ಮತ್ತು ಸತ್ಯನಿಷೇಧಿಗಳಾಗಿದ್ದ ಸ್ಥಿತಿಯಲ್ಲೇ ಮರಣ ಹೊಂದಿದವರ ಮೇಲೆ ಅಲ್ಲಾಹನ ಹಾಗೂ ದೂತರ, ಮತ್ತು ಸರ್ವ ಮನುಷ್ಯರ ಶಾಪವಿರುವುದು. info
التفاسير:

external-link copy
162 : 2

خٰلِدِیْنَ فِیْهَا ۚ— لَا یُخَفَّفُ عَنْهُمُ الْعَذَابُ وَلَا هُمْ یُنْظَرُوْنَ ۟

ಅವರು ಅದರಲ್ಲಿ (ಆ ಶಾಪದಲ್ಲಿ) ಶಾಶ್ವತವಾಗಿರುವರು. ಅವರಿಂದ ಯಾತನೆಯನ್ನು ಹಗುರಗೊಳಿಸಲಾಗದು ಮತ್ತು ಅವರಿಗೆ ಕಾಲಾವಕಾಶವನ್ನು ನೀಡಲಾಗದು. info
التفاسير:

external-link copy
163 : 2

وَاِلٰهُكُمْ اِلٰهٌ وَّاحِدٌ ۚ— لَاۤ اِلٰهَ اِلَّا هُوَ الرَّحْمٰنُ الرَّحِیْمُ ۟۠

ನಿಮ್ಮ ಆರಾಧ್ಯನು ಏಕೈಕ ಆರಾಧ್ಯನು ಆ ಪರಮ ದಯಾಮಯನು ಕರುಣಾನಿಧಿಯೂ ಆಗಿರುವವನ ಹೊರತು ಯಾವ ನೈಜ ಆರಾಧ್ಯನಿಲ್ಲ. info
التفاسير: