വിശുദ്ധ ഖുർആൻ പരിഭാഷ - കന്നഡ പരിഭാഷ - ബഷീർ മൈസൂരി

പേജ് നമ്പർ:close

external-link copy
197 : 2

اَلْحَجُّ اَشْهُرٌ مَّعْلُوْمٰتٌ ۚ— فَمَنْ فَرَضَ فِیْهِنَّ الْحَجَّ فَلَا رَفَثَ وَلَا فُسُوْقَ وَلَا جِدَالَ فِی الْحَجِّ ؕ— وَمَا تَفْعَلُوْا مِنْ خَیْرٍ یَّعْلَمْهُ اللّٰهُ ؔؕ— وَتَزَوَّدُوْا فَاِنَّ خَیْرَ الزَّادِ التَّقْوٰی ؗ— وَاتَّقُوْنِ یٰۤاُولِی الْاَلْبَابِ ۟

ಹಜ್ಜಿನ ಮಾಸಗಳು ನಿಶ್ಚಿತವಾಗಿವೆ. ಆದ್ದರಿಂದ ಯಾರು ಆ ಮಾಸಗಳಲ್ಲಿ ಹಜ್ಜನ್ನು ಅನಿವಾರ್ಯವಾಗಿಸುತ್ತಾನೋ ಅವನು ಹಜ್ಜಿನ ಅವಧಿಯಲ್ಲಿ ತನ್ನ ಪತ್ನಿಯೊಂದಿಗೆ ಸರಸಸಲ್ಲಾಪವಾಗಲಿ, ಪಾಪವಾಗಲಿ, ಜಗಳವಾಗಲಿ ಮಾಡುವುದರಿಂದ ದೂರವಿರಬೇಕು ಮತ್ತು ನೀವು ಮಾಡುವ ಯಾವುದೇ ಒಳಿತಾಗಲೀ ಅದನ್ನು ಅಲ್ಲಾಹನು ಅರಿಯುತ್ತಾನೆ ಮತ್ತು ನೀವು ಯಾತ್ರಾ ಸಾಮಗ್ರಿಗಳ ಸಿದ್ಧತೆ ಮಾಡಿರಿ. ಎಲ್ಲಕ್ಕಿಂತ ಅತ್ಯತ್ತಮ ಯಾತ್ರಾ ಸಾಮಗ್ರಿಯು ಅಲ್ಲಾಹನ ಭಯಭಕ್ತಿಯಾಗಿದೆ. ಮತ್ತು ಓ ಬುದ್ಧಿ ಜೀವಿಗಳೇ, ನನ್ನನ್ನೇ ಭಯಪಡಿರಿ. info
التفاسير:

external-link copy
198 : 2

لَیْسَ عَلَیْكُمْ جُنَاحٌ اَنْ تَبْتَغُوْا فَضْلًا مِّنْ رَّبِّكُمْ ؕ— فَاِذَاۤ اَفَضْتُمْ مِّنْ عَرَفٰتٍ فَاذْكُرُوا اللّٰهَ عِنْدَ الْمَشْعَرِ الْحَرَامِ ۪— وَاذْكُرُوْهُ كَمَا هَدٰىكُمْ ۚ— وَاِنْ كُنْتُمْ مِّنْ قَبْلِهٖ لَمِنَ الضَّآلِّیْنَ ۟

ನೀವು ನಿಮ್ಮ ಪ್ರಭುವಿನ ಅನುಗ್ರಹವನ್ನು (ವ್ಯಾಪಾರ ವ್ಯವಹಾರಗಳಿಂದ) ಅರಸುವುದರಿಂದ ನಿಮ್ಮ ಮೇಲೆ ಯಾವುದೇ ದೋಷವಿಲ್ಲ. ಇನ್ನು ನೀವು ಅರಫಾತ್‌ನಿಂದ ಮರಳಿದಾಗ ಮಶ್‌ಅರುಲ್ ಹರಾಮ್‌ನಲ್ಲಿ (ಮುಜ್‌ದಲಿಫಾ ಮೈದಾನದಲ್ಲಿ) ಅಲ್ಲಾಹನನ್ನು ಸ್ಮರಿಸಿರಿ ಮತ್ತು ಅವನು ನಿಮಗೆ ಮಾರ್ಗದರ್ಶನ ನೀಡಿದ ಪ್ರಕಾರವೇ ನೀವು ಅವನನ್ನು ಸ್ಮರಿಸಿರಿ. ವಸ್ತುತಃ ನೀವು ಇದಕ್ಕೆ ಮೊದಲು ಮಾರ್ಗ ಭ್ರಷ್ಟರಾಗಿದ್ದೀರಿ. info
التفاسير:

external-link copy
199 : 2

ثُمَّ اَفِیْضُوْا مِنْ حَیْثُ اَفَاضَ النَّاسُ وَاسْتَغْفِرُوا اللّٰهَ ؕ— اِنَّ اللّٰهَ غَفُوْرٌ رَّحِیْمٌ ۟

ತರುವಾಯ ನೀವು (ಖುರೈಷರೇ) ಜನರು ಎಲ್ಲಿಂದ ಮರುಳುತ್ತಾರೋ ಅಲ್ಲಿಂದಲೇ ಮರಳಿರಿ ಹಾಗೂ ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. info
التفاسير:

external-link copy
200 : 2

فَاِذَا قَضَیْتُمْ مَّنَاسِكَكُمْ فَاذْكُرُوا اللّٰهَ كَذِكْرِكُمْ اٰبَآءَكُمْ اَوْ اَشَدَّ ذِكْرًا ؕ— فَمِنَ النَّاسِ مَنْ یَّقُوْلُ رَبَّنَاۤ اٰتِنَا فِی الدُّنْیَا وَمَا لَهٗ فِی الْاٰخِرَةِ مِنْ خَلَاقٍ ۟

ನೀವು ಹಜ್ಜಿನ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ನೀವು ನಿಮ್ಮ ಪೂರ್ವಜರನ್ನು ಸ್ಮರಿಸುವಂತೆ ಅಥವಾ ಅದಕ್ಕಿಂತಲೂ ಹೆಚ್ಚಾಗಿ ಅಲ್ಲಾಹನನ್ನು ಸ್ಮರಿಸಿರಿ. ಆದರೆ ಜನರ ಪೈಕಿ ಕೆಲವರು; ನಮ್ಮ ಪ್ರಭುವೇ ನಮಗೆ ಈ ಇಹಲೋಕದಲ್ಲೇ (ಅನುಗ್ರಹವನ್ನು) ದಯಪಾಲಿಸು ಎಂದು ಹೇಳುವವರಿದ್ದಾರೆ. ಅಂಥವರಿಗೆ ಪರಲೋಕದಲ್ಲಿ ಯಾವುದೇ ಪಾಲು ಇರುವುದಿಲ್ಲ. info
التفاسير:

external-link copy
201 : 2

وَمِنْهُمْ مَّنْ یَّقُوْلُ رَبَّنَاۤ اٰتِنَا فِی الدُّنْیَا حَسَنَةً وَّفِی الْاٰخِرَةِ حَسَنَةً وَّقِنَا عَذَابَ النَّارِ ۟

ಇನ್ನು ಅವರ ಪೈಕಿ ಕೆಲವರು ಓ ನಮ್ಮ ಪ್ರಭುವೇ, ನಮಗೆ ಇಹಲೋಕದಲ್ಲಿ ಒಳಿತನ್ನು ನೀಡು ಮತ್ತು ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನಮ್ಮನ್ನು ನರಕಾಗ್ನಿಯ ಯಾತನೆಯಿಂದ ರಕ್ಷಿಸು ಎಂದು ಬೇಡುವವರಿದ್ದಾರೆ. info
التفاسير:

external-link copy
202 : 2

اُولٰٓىِٕكَ لَهُمْ نَصِیْبٌ مِّمَّا كَسَبُوْا ؕ— وَاللّٰهُ سَرِیْعُ الْحِسَابِ ۟

ಇಂತಹವರಿಗೆ (ಇಹಪರಗಳಲ್ಲಿ) ಅವರು ಸಂಪಾದಿಸಿರುವುದರಲ್ಲಿ ಒಂದು ಪಾಲು (ಪುಣ್ಯದ ರೂಪದಲ್ಲಿ) ಇರುವುದು ಮತ್ತು ಅಲ್ಲಾಹನು ಲೆಕ್ಕವಿಚಾರಣೆಯಲ್ಲಿ ಶೀಘ್ರನಾಗಿದ್ದಾನೆ. info
التفاسير: