وه‌رگێڕانی ماناكانی قورئانی پیرۆز - وەرگێڕاوی کەنادی - حەمزە بتور

ژمارەی پەڕە:close

external-link copy
54 : 11

اِنْ نَّقُوْلُ اِلَّا اعْتَرٰىكَ بَعْضُ اٰلِهَتِنَا بِسُوْٓءٍ ؕ— قَالَ اِنِّیْۤ اُشْهِدُ اللّٰهَ وَاشْهَدُوْۤا اَنِّیْ بَرِیْٓءٌ مِّمَّا تُشْرِكُوْنَ ۟ۙ

ನೀನು ನಮ್ಮ ಕೆಲವು ದೇವರುಗಳ ಕೆಟ್ಟ ವಶೀಕರಣಕ್ಕೆ ಒಳಗಾಗಿದ್ದೀಯಾ ಎಂದು ಮಾತ್ರ ನಮಗೆ ಹೇಳಲಿಕ್ಕಿರುವುದು.” ಹೂದ್ ಹೇಳಿದರು: “ನೀವು (ಅಲ್ಲಾಹನೊಂದಿಗೆ) ಸಹಭಾಗಿಯಾಗಿ ಮಾಡುತ್ತಿರುವ ಎಲ್ಲಾ ದೇವರುಗಳಿಂದಲೂ ನಾನು ಸಂಪೂರ್ಣ ದೂರವಾಗಿದ್ದೇನೆಂದು ಅಲ್ಲಾಹನನ್ನು ಸಾಕ್ಷಿಯಾಗಿಟ್ಟು ಹೇಳುತ್ತೇನೆ. ನೀವೂ ಅದಕ್ಕೆ ಸಾಕ್ಷಿಗಳಾಗಿರಿ. info
التفاسير:

external-link copy
55 : 11

مِنْ دُوْنِهٖ فَكِیْدُوْنِیْ جَمِیْعًا ثُمَّ لَا تُنْظِرُوْنِ ۟

ಅಲ್ಲಾಹನ ಹೊರತು. ನೀವೆಲ್ಲರೂ ಸೇರಿ ನನ್ನ ವಿರುದ್ಧ ತಂತ್ರ ಪ್ರಯೋಗಿಸಿರಿ. ನಂತರ ನನಗೆ ಸ್ವಲ್ಪವೂ ಕಾಲಾವಕಾಶ ನೀಡಬೇಡಿ. info
التفاسير:

external-link copy
56 : 11

اِنِّیْ تَوَكَّلْتُ عَلَی اللّٰهِ رَبِّیْ وَرَبِّكُمْ ؕ— مَا مِنْ دَآبَّةٍ اِلَّا هُوَ اٰخِذٌ بِنَاصِیَتِهَا ؕ— اِنَّ رَبِّیْ عَلٰی صِرَاطٍ مُّسْتَقِیْمٍ ۟

ನಾನು ನನ್ನ ಮತ್ತು ನಿಮ್ಮ ಪರಿಪಾಲಕನಾದ ಅಲ್ಲಾಹನಲ್ಲಿ ಭರವಸೆಯಿಟ್ಟಿದ್ದೇನೆ. ಎಲ್ಲಾ ಜೀವರಾಶಿಗಳ ಮಂದಲೆಯು ಅವನ ಹಿಡಿತದಲ್ಲಿದೆ. ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ಸರಿಯಾದ ಮಾರ್ಗದಲ್ಲಿದ್ದಾನೆ. info
التفاسير:

external-link copy
57 : 11

فَاِنْ تَوَلَّوْا فَقَدْ اَبْلَغْتُكُمْ مَّاۤ اُرْسِلْتُ بِهٖۤ اِلَیْكُمْ ؕ— وَیَسْتَخْلِفُ رَبِّیْ قَوْمًا غَیْرَكُمْ ۚ— وَلَا تَضُرُّوْنَهٗ شَیْـًٔا ؕ— اِنَّ رَبِّیْ عَلٰی كُلِّ شَیْءٍ حَفِیْظٌ ۟

ನೀವು ವಿಮುಖರಾಗುವುದಾದರೆ, ನಾನಂತೂ ನಿಮಗೆ ತಲುಪಿಸಬೇಕೆಂದು ಕಳುಹಿಸಲಾದ ಸಂದೇಶಗಳನ್ನು ನಿಮಗೆ ತಲುಪಿಸಿದ್ದೇನೆ. ನನ್ನ ಪರಿಪಾಲಕನು (ಅಲ್ಲಾಹು) ನಿಮ್ಮ ಹೊರತಾದ ಬೇರೆ ಜನರನ್ನು ಉತ್ತರಾಧಿಕಾರಿಗಳಾಗಿ ತರುವನು. ಅವನಿಗೆ ಯಾವುದೇ ತೊಂದರೆ ಮಾಡಲು ನಿಮಗೆ ಸಾಧ್ಯವಿಲ್ಲ. ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ಎಲ್ಲಾ ವಸ್ತುಗಳ ಸಂರಕ್ಷಕನಾಗಿದ್ದಾನೆ.” info
التفاسير:

external-link copy
58 : 11

وَلَمَّا جَآءَ اَمْرُنَا نَجَّیْنَا هُوْدًا وَّالَّذِیْنَ اٰمَنُوْا مَعَهٗ بِرَحْمَةٍ مِّنَّا ۚ— وَنَجَّیْنٰهُمْ مِّنْ عَذَابٍ غَلِیْظٍ ۟

ನಮ್ಮ ಆಜ್ಞೆಯು ಬಂದಾಗ ನಾವು ಹೂದರನ್ನು ಮತ್ತು ಅವರ ಜೊತೆಯಲ್ಲಿದ್ದ ಸತ್ಯವಿಶ್ವಾಸಿಗಳನ್ನು ನಮ್ಮ ದಯೆಯಿಂದ ರಕ್ಷಿಸಿದೆವು. ನಾವು ಅವರನ್ನು ಕಠೋರ ಶಿಕ್ಷೆಯಿಂದ ಪಾರು ಮಾಡಿದೆವು. info
التفاسير:

external-link copy
59 : 11

وَتِلْكَ عَادٌ جَحَدُوْا بِاٰیٰتِ رَبِّهِمْ وَعَصَوْا رُسُلَهٗ وَاتَّبَعُوْۤا اَمْرَ كُلِّ جَبَّارٍ عَنِیْدٍ ۟

ಅವರೇ ಆದ್ ಗೋತ್ರದವರು. ಅವರು ಅವರ ಪರಿಪಾಲಕನ (ಅಲ್ಲಾಹನ) ವಚನಗಳನ್ನು ತಿರಸ್ಕರಿಸಿದರು, ಅವನ ಸಂದೇಶವಾಹಕರನ್ನು ನಿಷೇಧಿಸಿದರು ಮತ್ತು ಎಲ್ಲಾ ದುಷ್ಟ ಸ್ವೇಚ್ಛಾಚಾರಿಗಳನ್ನು ಹಿಂಬಾಲಿಸಿದರು. info
التفاسير:

external-link copy
60 : 11

وَاُتْبِعُوْا فِیْ هٰذِهِ الدُّنْیَا لَعْنَةً وَّیَوْمَ الْقِیٰمَةِ ؕ— اَلَاۤ اِنَّ عَادًا كَفَرُوْا رَبَّهُمْ ؕ— اَلَا بُعْدًا لِّعَادٍ قَوْمِ هُوْدٍ ۟۠

ಇಹಲೋಕದಲ್ಲೂ ಪುನರುತ್ಥಾನ ದಿನದಲ್ಲೂ ಶಾಪವು ಅವರನ್ನು ಹಿಂಬಾಲಿಸುವುದು. ತಿಳಿಯಿರಿ! ನಿಶ್ಚಯವಾಗಿಯೂ ಆದ್ ಗೋತ್ರದವರು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ನಿಷೇಧಿಸಿದರು. ತಿಳಿಯಿರಿ! ಹೂದರ ಜನತೆಯಾಗಿದ್ದ ಆದ್ ಗೋತ್ರದವರು (ಅಲ್ಲಾಹನ ದಯೆಯಿಂದ) ದೂರವಾಗಿದ್ದಾರೆ. info
التفاسير:

external-link copy
61 : 11

وَاِلٰی ثَمُوْدَ اَخَاهُمْ صٰلِحًا ۘ— قَالَ یٰقَوْمِ اعْبُدُوا اللّٰهَ مَا لَكُمْ مِّنْ اِلٰهٍ غَیْرُهٗ ؕ— هُوَ اَنْشَاَكُمْ مِّنَ الْاَرْضِ وَاسْتَعْمَرَكُمْ فِیْهَا فَاسْتَغْفِرُوْهُ ثُمَّ تُوْبُوْۤا اِلَیْهِ ؕ— اِنَّ رَبِّیْ قَرِیْبٌ مُّجِیْبٌ ۟

ನಾವು ಸಮೂದ್ ಗೋತ್ರದವರ ಬಳಿಗೆ ಅವರ ಸಹೋದರ ಸ್ವಾಲಿಹರನ್ನು ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅರಾಧಿಸಲು ಅರ್ಹರಾದ ಬೇರೆ ದೇವರಿಲ್ಲ. ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದನು ಮತ್ತು ಅಲ್ಲೇ ನಿಮಗೆ ವಾಸ್ತವ್ಯವನ್ನು ಮಾಡಿಕೊಟ್ಟನು. ಆದ್ದರಿಂದ ಅವನಲ್ಲಿ ಕ್ಷಮೆಯಾಚಿಸಿರಿ. ನಂತರ ಅವನ ಕಡೆಗೆ ಪಶ್ಚಾತ್ತಾಪದಿಂದ ತಿರುಗಿರಿ. ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ಬಹಳ ಸಮೀಪದಲ್ಲಿರುವವನು ಮತ್ತು (ಪ್ರಾರ್ಥನೆಗೆ) ಉತ್ತರ ನೀಡುವವನಾಗಿದ್ದಾನೆ.” info
التفاسير:

external-link copy
62 : 11

قَالُوْا یٰصٰلِحُ قَدْ كُنْتَ فِیْنَا مَرْجُوًّا قَبْلَ هٰذَاۤ اَتَنْهٰىنَاۤ اَنْ نَّعْبُدَ مَا یَعْبُدُ اٰبَآؤُنَا وَاِنَّنَا لَفِیْ شَكٍّ مِّمَّا تَدْعُوْنَاۤ اِلَیْهِ مُرِیْبٍ ۟

ಅವರು ಹೇಳಿದರು: “ಓ ಸ್ವಾಲಿಹ್! ಇದಕ್ಕೆ ಮುಂಚೆ ನಾವು ನಿನ್ನಲ್ಲಿ ಬಹಳಷ್ಟು ನಿರೀಕ್ಷೆಗಳನ್ನಿಟ್ಟಿದ್ದೆವು. ನಮ್ಮ ಪೂರ್ವಜರು ಆರಾಧಿಸಿದ್ದನ್ನು ಆರಾಧಿಸಬಾರದೆಂದು ನೀನು ನಮಗೆ ಹೇಳುತ್ತಿರುವೆಯಾ? ನೀನು ನಮ್ಮನ್ನು ಯಾವ ಧರ್ಮದ ಕಡೆಗೆ ಕರೆಯುತ್ತಿರುವೆಯೋ ಅದರ ಬಗ್ಗೆ ನಮಗೆ ಗೊಂದಲಪೂರ್ಣ ಸಂಶಯಗಳಿವೆ.” info
التفاسير: