وه‌رگێڕانی ماناكانی قورئانی پیرۆز - وەرگێڕاوی کەنادی - حەمزە بتور

ژمارەی پەڕە:close

external-link copy
29 : 11

وَیٰقَوْمِ لَاۤ اَسْـَٔلُكُمْ عَلَیْهِ مَالًا ؕ— اِنْ اَجْرِیَ اِلَّا عَلَی اللّٰهِ وَمَاۤ اَنَا بِطَارِدِ الَّذِیْنَ اٰمَنُوْا ؕ— اِنَّهُمْ مُّلٰقُوْا رَبِّهِمْ وَلٰكِنِّیْۤ اَرٰىكُمْ قَوْمًا تَجْهَلُوْنَ ۟

ಓ ನನ್ನ ಜನರೇ! ಇದಕ್ಕೆ ಪ್ರತಿಫಲವಾಗಿ ನಾನು ನಿಮ್ಮಲ್ಲಿ ಹಣವನ್ನು ಕೇಳುವುದಿಲ್ಲ. ನನಗೆ ಪ್ರತಿಫಲ ನೀಡಬೇಕಾದ ಹೊಣೆಯಿರುವುದು ಅಲ್ಲಾಹನಿಗೆ ಮಾತ್ರ. ನಾನು ಸತ್ಯವಿಶ್ವಾಸಿಗಳನ್ನು ದೂರ ಮಾಡುವುದಿಲ್ಲ.[1] ನಿಶ್ಚಯವಾಗಿಯೂ ಅವರು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ಭೇಟಿಯಾಗುವರು. ಆದರೆ ನಾನು ನಿಮ್ಮನ್ನು ತಿಳುವಳಿಕೆಯಿಲ್ಲದ ಜನರಂತೆ ಕಾಣುತ್ತಿದ್ದೇನೆ. info

[1] ಆ ಕೆಳವರ್ಗದ ಜನರನ್ನು ನಿನ್ನ ಸಭೆಯಿಂದ ದೂರವಿಟ್ಟರೆ ನಾವು ನಿನ್ನ ಸಭೆಗೆ ಬರುತ್ತೇವೆ, ನಿನ್ನ ಮಾತನ್ನು ಕೇಳುತ್ತೇವೆ ಎಂದು ಮುಖಂಡರು ಹೇಳಿದಾಗ, ನೂಹ್ (ಅವರ ಮೇಲೆ ಶಾಂತಿಯಿರಲಿ) ಈ ಉತ್ತರವನ್ನು ನೀಡಿದರು.

التفاسير:

external-link copy
30 : 11

وَیٰقَوْمِ مَنْ یَّنْصُرُنِیْ مِنَ اللّٰهِ اِنْ طَرَدْتُّهُمْ ؕ— اَفَلَا تَذَكَّرُوْنَ ۟

ಓ ನನ್ನ ಜನರೇ! ನಾನು ಅವರನ್ನು ದೂರ ಮಾಡಿದರೆ ಅಲ್ಲಾಹನ ಶಿಕ್ಷೆಯಿಂದ ನನ್ನನ್ನು ರಕ್ಷಿಸುವವರು ಯಾರು? ನೀವು ಉಪದೇಶವನ್ನು ಸ್ವೀಕರಿಸುವುದಿಲ್ಲವೇ? info
التفاسير:

external-link copy
31 : 11

وَلَاۤ اَقُوْلُ لَكُمْ عِنْدِیْ خَزَآىِٕنُ اللّٰهِ وَلَاۤ اَعْلَمُ الْغَیْبَ وَلَاۤ اَقُوْلُ اِنِّیْ مَلَكٌ وَّلَاۤ اَقُوْلُ لِلَّذِیْنَ تَزْدَرِیْۤ اَعْیُنُكُمْ لَنْ یُّؤْتِیَهُمُ اللّٰهُ خَیْرًا ؕ— اَللّٰهُ اَعْلَمُ بِمَا فِیْۤ اَنْفُسِهِمْ ۖۚ— اِنِّیْۤ اِذًا لَّمِنَ الظّٰلِمِیْنَ ۟

ಅಲ್ಲಾಹನ ಖಜಾನೆಗಳು ನನ್ನ ಬಳಿಯಿವೆ ಎಂದು ನಾನು ನಿಮಗೆ ಹೇಳುವುದಿಲ್ಲ. ನನಗೆ ಅದೃಶ್ಯ ಜ್ಞಾನವಿಲ್ಲ. ನಾನೊಬ್ಬ ದೇವದೂತನೆಂದು ನಾನು ಹೇಳುವುದಿಲ್ಲ. ನಿಮ್ಮ ಕಣ್ಣುಗಳು ಕೀಳಾಗಿ ಕಾಣುವ ಈ ಜನರಿಗೆ ಅಲ್ಲಾಹು ಒಳ್ಳೆಯದು ಮಾಡಲಾರನೆಂದು ನಾನು ಹೇಳುವುದಿಲ್ಲ. ಅವರ ಮನಸ್ಸಿನಲ್ಲಿ ಏನಿದೆಯೆಂದು ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ. ನಾನು ಇಂತಹ ಮಾತುಗಳನ್ನು ಹೇಳಿದರೆ ನಿಶ್ಚಯವಾಗಿಯೂ ನಾನು ಅಕ್ರಮಿಗಳಲ್ಲಿ ಸೇರಿಬಿಡುವೆನು.” info
التفاسير:

external-link copy
32 : 11

قَالُوْا یٰنُوْحُ قَدْ جَادَلْتَنَا فَاَكْثَرْتَ جِدَالَنَا فَاْتِنَا بِمَا تَعِدُنَاۤ اِنْ كُنْتَ مِنَ الصّٰدِقِیْنَ ۟

ಜನರು ಹೇಳಿದರು: “ಓ ನೂಹ್! ನೀನು ನಮ್ಮೊಂದಿಗೆ ತರ್ಕಿಸಿರುವೆ. ಬಹಳ ಚೆನ್ನಾಗಿ ತರ್ಕಿಸಿರುವೆ. ನೀನು ಸತ್ಯವನ್ನೇ ಹೇಳುವವನಾಗಿದ್ದರೆ ನಮ್ಮನ್ನು ಹೆದರಿಸುವ ಆ ಶಿಕ್ಷೆಯನ್ನು ಈಗಲೇ ತಂದು ತೋರಿಸು.” info
التفاسير:

external-link copy
33 : 11

قَالَ اِنَّمَا یَاْتِیْكُمْ بِهِ اللّٰهُ اِنْ شَآءَ وَمَاۤ اَنْتُمْ بِمُعْجِزِیْنَ ۟

ನೂಹ್ ಹೇಳಿದರು: “ಅದನ್ನು ಅಲ್ಲಾಹನೇ ತರುತ್ತಾನೆ. ಅವನು ತರಲಿಚ್ಛಿಸಿದರೆ! ನಿಮಗೆ ಅವನನ್ನು ಸೋಲಿಸಲು ಸಾಧ್ಯವಿಲ್ಲ. info
التفاسير:

external-link copy
34 : 11

وَلَا یَنْفَعُكُمْ نُصْحِیْۤ اِنْ اَرَدْتُّ اَنْ اَنْصَحَ لَكُمْ اِنْ كَانَ اللّٰهُ یُرِیْدُ اَنْ یُّغْوِیَكُمْ ؕ— هُوَ رَبُّكُمْ ۫— وَاِلَیْهِ تُرْجَعُوْنَ ۟ؕ

ಅಲ್ಲಾಹು ನಿಮ್ಮನ್ನು ದಾರಿತಪ್ಪಿಸಲು ಉದ್ದೇಶಿಸಿದರೆ, ನಾನು ನಿಮಗೆ ಉಪದೇಶ ಮಾಡಲು ಬಯಸಿದರೂ ನನ್ನ ಉಪದೇಶವು ನಿಮಗೆ ಉಪಕಾರ ಮಾಡುವುದಿಲ್ಲ. ಅವನೇ ನಿಮ್ಮ ಪರಿಪಾಲಕನು. ನಿಮ್ಮನ್ನು ಅವನ ಬಳಿಗೇ ಮರಳಿಸಲಾಗುವುದು.” info
التفاسير:

external-link copy
35 : 11

اَمْ یَقُوْلُوْنَ افْتَرٰىهُ ؕ— قُلْ اِنِ افْتَرَیْتُهٗ فَعَلَیَّ اِجْرَامِیْ وَاَنَا بَرِیْٓءٌ مِّمَّا تُجْرِمُوْنَ ۟۠

“ಇದನ್ನು ಅವರು (ಪ್ರವಾದಿ) ಸ್ವಯಂ ರಚಿಸಿ ತಂದಿದ್ದಾರೆ” ಎಂದು ಅವರು ಹೇಳುತ್ತಿದ್ದಾರೆಯೇ? ಹೇಳಿರಿ: “ನಾನು ಇದನ್ನು ಸ್ವಯಂ ರಚಿಸಿ ತಂದಿದ್ದರೆ ನಾನು ಮಾಡಿದ ಅಪರಾಧವನ್ನು ನಾನೇ ಅನುಭವಿಸಬೇಕಾಗಿದೆ. ಅದರೆ, ನೀವು ಮಾಡುವ ಅಪರಾಧಗಳಿಂದ ನಾನು ಹೊಣೆಮುಕ್ತನಾಗಿದ್ದೇನೆ.” info
التفاسير:

external-link copy
36 : 11

وَاُوْحِیَ اِلٰی نُوْحٍ اَنَّهٗ لَنْ یُّؤْمِنَ مِنْ قَوْمِكَ اِلَّا مَنْ قَدْ اٰمَنَ فَلَا تَبْتَىِٕسْ بِمَا كَانُوْا یَفْعَلُوْنَ ۟ۚ

ನೂಹರಿಗೆ ದೇವವಾಣಿ ನೀಡಲಾಯಿತು: “ಈಗಾಗಲೇ ವಿಶ್ವಾಸವಿಟ್ಟವರ ಹೊರತು ನಿಮ್ಮ ಜನರಲ್ಲಿ ಬೇರೆ ಯಾರೂ ವಿಶ್ವಾಸವಿಡುವುದಿಲ್ಲ; ಆದ್ದರಿಂದ ಅವರು ಮಾಡುತ್ತಿರುವ ದುಷ್ಕರ್ಮಗಳ ಬಗ್ಗೆ ನೀವು ಬೇಸರಗೊಳ್ಳಬೇಡಿ. info
التفاسير:

external-link copy
37 : 11

وَاصْنَعِ الْفُلْكَ بِاَعْیُنِنَا وَوَحْیِنَا وَلَا تُخَاطِبْنِیْ فِی الَّذِیْنَ ظَلَمُوْا ۚ— اِنَّهُمْ مُّغْرَقُوْنَ ۟

ನಮ್ಮ ಕಣ್ಣುಗಳ ಮುಂದೆ ನಮ್ಮ ದೇವವಾಣಿಯಂತೆ ಒಂದು ನಾವೆಯನ್ನು ನಿರ್ಮಿಸಿರಿ. ಅಕ್ರಮಿಗಳ ಬಗ್ಗೆ ನನ್ನೊಂದಿಗೆ ಮಾತನಾಡಬೇಡಿ. ನಿಶ್ಚಯವಾಗಿಯೂ ಅವರು (ಜಲಪ್ರಳಯದಲ್ಲಿ) ಮುಳುಗಿ ನಾಶವಾಗುವರು.” info
التفاسير: