[1] ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಮತ್ತು ಕುರೈಶರ ನಡುವೆ ಕುಟುಂಬ ಸಂಬಂಧವಿತ್ತು. ಈ ವಚನದ ಅರ್ಥವೇನೆಂದರೆ, ಈ ಸಂದೇಶವನ್ನು ನಿಮಗೆ ತಲುಪಿಸಿ ನಿಮಗೆ ಉಪದೇಶ ನೀಡಿದ್ದಕ್ಕೆ ನಾನು ನಿಮ್ಮಿಂದ ಯಾವುದೇ ಉಪಕಾರ ಬಯಸುವುದಿಲ್ಲ. ನೀವು ನನ್ನ ಸಂದೇಶ ಸ್ವೀಕರಿಸದಿದ್ದರೂ ಪರವಾಗಿಲ್ಲ. ಆದರೆ ನನ್ನ ಮತ್ತು ನಿಮ್ಮ ನಡುವೆ ಕುಟುಂಬ ಸಂಬಂಧವಿದೆ. ಕನಿಷ್ಠ ಅದನ್ನಾದರೂ ಗೌರವಿಸಿ ನನ್ನನ್ನು ಅವಮಾನಿಸುವುದು, ನನಗೆ ಕಿರುಕುಳ ಮತ್ತು ಹಿಂಸೆ ಕೊಡುವುದನ್ನು ನಿಲ್ಲಿಸಿ. ನನ್ನ ಕರ್ತವ್ಯವನ್ನು ನಿರ್ವಹಿಸಲು ನನ್ನನ್ನು ಬಿಟ್ಟುಬಿಡಿ.