ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
45 : 42

وَتَرٰىهُمْ یُعْرَضُوْنَ عَلَیْهَا خٰشِعِیْنَ مِنَ الذُّلِّ یَنْظُرُوْنَ مِنْ طَرْفٍ خَفِیٍّ ؕ— وَقَالَ الَّذِیْنَ اٰمَنُوْۤا اِنَّ الْخٰسِرِیْنَ الَّذِیْنَ خَسِرُوْۤا اَنْفُسَهُمْ وَاَهْلِیْهِمْ یَوْمَ الْقِیٰمَةِ ؕ— اَلَاۤ اِنَّ الظّٰلِمِیْنَ فِیْ عَذَابٍ مُّقِیْمٍ ۟

ಅವಮಾನದಿಂದ ಶರಣಾಗತರಾದ ಸ್ಥಿತಿಯಲ್ಲಿ ಅವರನ್ನು ಅದರ (ನರಕಾಗ್ನಿಯ) ಮುಂದೆ ಪ್ರದರ್ಶಿಸಲಾಗುವುದನ್ನು ನೀವು ನೋಡುವಿರಿ. ಅವರು ಕುಡಿನೋಟದಿಂದ ನೋಡುತ್ತಿರುವರು. ಸತ್ಯವಿಶ್ವಾಸಿಗಳು ಹೇಳುವರು: “ಪುನರುತ್ಥಾನ ದಿನದಂದು ಯಾರು ತಮ್ಮನ್ನು ಮತ್ತು ತಮ್ಮ ಸಂಬಂಧಿಕರನ್ನು ಕಳೆದುಕೊಳ್ಳುತ್ತಾರೋ ಅವರೇ ನಷ್ಟ ಹೊಂದಿದವರು. ತಿಳಿಯಿರಿ! ನಿಶ್ಚಯವಾಗಿಯೂ ಅಕ್ರಮಿಗಳು ಶಾಶ್ವತ ಶಿಕ್ಷೆಯಲ್ಲಿದ್ದಾರೆ.” info
التفاسير:

external-link copy
46 : 42

وَمَا كَانَ لَهُمْ مِّنْ اَوْلِیَآءَ یَنْصُرُوْنَهُمْ مِّنْ دُوْنِ اللّٰهِ ؕ— وَمَنْ یُّضْلِلِ اللّٰهُ فَمَا لَهٗ مِنْ سَبِیْلٍ ۟ؕ

ಅಲ್ಲಾಹನ ಹೊರತು ಅವರಿಗೆ ಸಹಾಯ ಮಾಡುವ ಬೇರೆ ಯಾವ ರಕ್ಷಕರೂ ಅವರಿಗಿಲ್ಲ. ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಯಾವುದೇ ದಾರಿಯಿಲ್ಲ. info
التفاسير:

external-link copy
47 : 42

اِسْتَجِیْبُوْا لِرَبِّكُمْ مِّنْ قَبْلِ اَنْ یَّاْتِیَ یَوْمٌ لَّا مَرَدَّ لَهٗ مِنَ اللّٰهِ ؕ— مَا لَكُمْ مِّنْ مَّلْجَاٍ یَّوْمَىِٕذٍ وَّمَا لَكُمْ مِّنْ نَّكِیْرٍ ۟

ಅಲ್ಲಾಹನ ಕಡೆಯ ಒಂದು ದಿನವು ಬರುವುದಕ್ಕೆ ಮೊದಲೇ ನಿಮ್ಮ ಪರಿಪಾಲಕನ (ಅಲ್ಲಾಹನ) ಕರೆಗೆ ಉತ್ತರ ನೀಡಿರಿ. ಆ ದಿನವನ್ನು ದೂರೀಕರಿಸಲು ಯಾರಿಗೂ ಸಾಧ್ಯವಿಲ್ಲ. ಅಂದು ನಿಮಗೆ ಯಾವುದೇ ಆಶ್ರಯತಾಣವಿಲ್ಲ ಮತ್ತು ಅಡಗಿ ಕುಳಿತು ಆಜ್ಞಾತರಾಗಲೂ ನಿಮಗೆ ಸಾಧ್ಯವಿಲ್ಲ. info
التفاسير:

external-link copy
48 : 42

فَاِنْ اَعْرَضُوْا فَمَاۤ اَرْسَلْنٰكَ عَلَیْهِمْ حَفِیْظًا ؕ— اِنْ عَلَیْكَ اِلَّا الْبَلٰغُ ؕ— وَاِنَّاۤ اِذَاۤ اَذَقْنَا الْاِنْسَانَ مِنَّا رَحْمَةً فَرِحَ بِهَا ۚ— وَاِنْ تُصِبْهُمْ سَیِّئَةٌ بِمَا قَدَّمَتْ اَیْدِیْهِمْ فَاِنَّ الْاِنْسَانَ كَفُوْرٌ ۟

ಅವರೇನಾದರೂ ವಿಮುಖರಾದರೆ ನಾವು ನಿಮ್ಮನ್ನು ಅವರ ಮೇಲೆ ಕಾವಲುಗಾರರಾಗಿ ಕಳುಹಿಸಿಲ್ಲ. ನಿಮ್ಮ ಕರ್ತವ್ಯವು ಸಂದೇಶವನ್ನು ತಲುಪಿಸುವುದು ಮಾತ್ರವಾಗಿದೆ. ನಿಶ್ಚಯವಾಗಿಯೂ ನಾವು ಮನುಷ್ಯನಿಗೆ ನಮ್ಮ ಕಡೆಯ ದಯೆಯ ರುಚಿಯನ್ನು ತೋರಿಸಿದರೆ ಅವನು ಸಂತೋಷಪಡುತ್ತಾನೆ. ಅವರ ಕೈಗಳು ಮುಂದಕ್ಕೆ ಕಳುಹಿಸಿರುವ ಕರ್ಮಗಳ ಪ್ರತಿಫಲವಾಗಿ ಅವರಿಗೆ ಏನಾದರೂ ವಿಪತ್ತು ಸಂಭವಿಸಿದರೆ ನಿಶ್ಚಯವಾಗಿಯೂ ಮನುಷ್ಯನು ಕೃತಘ್ನನಾಗಿ ಬಿಡುತ್ತಾನೆ. info
التفاسير:

external-link copy
49 : 42

لِلّٰهِ مُلْكُ السَّمٰوٰتِ وَالْاَرْضِ ؕ— یَخْلُقُ مَا یَشَآءُ ؕ— یَهَبُ لِمَنْ یَّشَآءُ اِنَاثًا وَّیَهَبُ لِمَنْ یَّشَآءُ الذُّكُوْرَ ۟ۙ

ಭೂಮ್ಯಾಕಾಶಗಳ ಸಾರ್ವಭೌಮತ್ವವು ಅಲ್ಲಾಹನಿಗೆ ಸೇರಿದ್ದು. ಅವನು ಇಚ್ಛಿಸುವುದನ್ನು ಅವನು ಸೃಷ್ಟಿಸುತ್ತಾನೆ. ಅವನು ಇಚ್ಛಿಸುವವರಿಗೆ ಹೆಣ್ಣು ಮಕ್ಕಳನ್ನು ಕರುಣಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಗಂಡು ಮಕ್ಕಳನ್ನು ಕರುಣಿಸುತ್ತಾನೆ. info
التفاسير:

external-link copy
50 : 42

اَوْ یُزَوِّجُهُمْ ذُكْرَانًا وَّاِنَاثًا ۚ— وَیَجْعَلُ مَنْ یَّشَآءُ عَقِیْمًا ؕ— اِنَّهٗ عَلِیْمٌ قَدِیْرٌ ۟

ಅಥವಾ ಅವರಿಗೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಜೊತೆಯಾಗಿ ಕರುಣಿಸುತ್ತಾನೆ. ಅವನು ಇಚ್ಛಿಸುವವರನ್ನು ಬಂಜೆಯಾಗಿ ಮಾಡುತ್ತಾನೆ. ನಿಶ್ಚಯವಾಗಿಯೂ ಅವನು ಸರ್ವಜ್ಞನು ಮತ್ತು ಸರ್ವಶಕ್ತನಾಗಿದ್ದಾನೆ. info
التفاسير:

external-link copy
51 : 42

وَمَا كَانَ لِبَشَرٍ اَنْ یُّكَلِّمَهُ اللّٰهُ اِلَّا وَحْیًا اَوْ مِنْ وَّرَآئِ حِجَابٍ اَوْ یُرْسِلَ رَسُوْلًا فَیُوْحِیَ بِاِذْنِهٖ مَا یَشَآءُ ؕ— اِنَّهٗ عَلِیٌّ حَكِیْمٌ ۟

ಅಲ್ಲಾಹು ಒಬ್ಬ ಮನುಷ್ಯನೊಡನೆ ನೇರವಾಗಿ ಮಾತನಾಡುವುದು ಅಸಂಭವ್ಯವಾಗಿದೆ. ದೇವವಾಣಿಯ ಮೂಲಕ, ಅಥವಾ ಒಂದು ಪರದೆಯ ಹಿಂದಿನಿಂದ, ಅಥವಾ ಒಬ್ಬ ದೇವದೂತನನ್ನು ಕಳುಹಿಸಿ, ಆ ದೇವದೂತನು ಅಲ್ಲಾಹನ ಆಜ್ಞೆಯಂತೆ ಅಲ್ಲಾಹು ಇಚ್ಛಿಸುವುದನ್ನು ಸಂದೇಶವಾಗಿ ನೀಡುವ ಹೊರತು. ನಿಶ್ಚಯವಾಗಿಯೂ ಅಲ್ಲಾಹು ಅತ್ಯುನ್ನತನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير: