ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
11 : 42

فَاطِرُ السَّمٰوٰتِ وَالْاَرْضِ ؕ— جَعَلَ لَكُمْ مِّنْ اَنْفُسِكُمْ اَزْوَاجًا وَّمِنَ الْاَنْعَامِ اَزْوَاجًا ۚ— یَذْرَؤُكُمْ فِیْهِ ؕ— لَیْسَ كَمِثْلِهٖ شَیْءٌ ۚ— وَهُوَ السَّمِیْعُ الْبَصِیْرُ ۟

ಅವನು ಭೂಮ್ಯಾಕಾಶಗಳ ಸೃಷ್ಟಿಕರ್ತನು. ಅವನು ನಿಮ್ಮಿಂದಲೇ ನಿಮಗೆ ಜೋಡಿಗಳನ್ನು ಮಾಡಿದನು. ಅವನು ಜಾನುವಾರುಗಳಿಂದಲೂ ಜೋಡಿಗಳನ್ನು ಮಾಡಿದನು. ಅದರ ಮೂಲಕ ಅವನು ನಿಮ್ಮನ್ನು ಹಬ್ಬಿಸುತ್ತಾನೆ. ಅವನಿಗೆ ಹೋಲಿಕೆಯಾಗಿ ಯಾವುದೂ ಇಲ್ಲ. ಅವನು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ. info
التفاسير:

external-link copy
12 : 42

لَهٗ مَقَالِیْدُ السَّمٰوٰتِ وَالْاَرْضِ ۚ— یَبْسُطُ الرِّزْقَ لِمَنْ یَّشَآءُ وَیَقْدِرُ ؕ— اِنَّهٗ بِكُلِّ شَیْءٍ عَلِیْمٌ ۟

ಭೂಮ್ಯಾಕಾಶಗಳ ಕೀಲಿಗಳು ಅವನಿಗೆ ಸೇರಿದ್ದು. ಅವನು ಇಚ್ಛಿಸುವವರಿಗೆ ಅವನು ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಅದನ್ನು ಇಕ್ಕಟ್ಟುಗೊಳಿಸುತ್ತಾನೆ. ನಿಶ್ಚಯವಾಗಿಯೂ ಅವನು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ. info
التفاسير:

external-link copy
13 : 42

شَرَعَ لَكُمْ مِّنَ الدِّیْنِ مَا وَصّٰی بِهٖ نُوْحًا وَّالَّذِیْۤ اَوْحَیْنَاۤ اِلَیْكَ وَمَا وَصَّیْنَا بِهٖۤ اِبْرٰهِیْمَ وَمُوْسٰی وَعِیْسٰۤی اَنْ اَقِیْمُوا الدِّیْنَ وَلَا تَتَفَرَّقُوْا فِیْهِ ؕ— كَبُرَ عَلَی الْمُشْرِكِیْنَ مَا تَدْعُوْهُمْ اِلَیْهِ ؕ— اَللّٰهُ یَجْتَبِیْۤ اِلَیْهِ مَنْ یَّشَآءُ وَیَهْدِیْۤ اِلَیْهِ مَنْ یُّنِیْبُ ۟ؕ

ಅಲ್ಲಾಹು ನೂಹರಿಗೆ ಸಂಸ್ಥಾಪಿಸಬೇಕೆಂದು ಆದೇಶಿಸಿದ, ನಿಮಗೆ ದೇವವಾಣಿಯ ಮೂಲಕ ಕಳುಹಿಸಿದ ಮತ್ತು ಇಬ್ರಾಹೀಮ್, ಮೂಸಾ, ಈಸಾ ಮುಂತಾದವರಿಗೆ ಆದೇಶಿಸಿದ ಅದೇ ಧರ್ಮವನ್ನು ನಾವು ನಿಮಗೆ ನಿಶ್ಚಯಿಸಿದ್ದೇವೆ. ಅಂದರೆ ನೀವು ಧರ್ಮವನ್ನು ಸಂಸ್ಥಾಪಿಸಿರಿ ಮತ್ತು ಅದರಲ್ಲಿ ಭಿನ್ನರಾಗಬೇಡಿ. ನೀವು ಆ ಬಹುದೇವವಿಶ್ವಾಸಿಗಳನ್ನು ಯಾವುದರ ಕಡೆಗೆ ಕರೆಯುತ್ತಿದ್ದೀರೋ ಅದು ಅವರಿಗೆ ಸಂಬಂಧಿಸಿದಂತೆ ಭಾರವಾಗಿದೆ. ಅಲ್ಲಾಹು ಅವನು ಇಚ್ಛಿಸುವವರನ್ನು ಅವನು ಆರಿಸಿಕೊಂಡವರಲ್ಲಿ ಸೇರಿಸುತ್ತಾನೆ ಮತ್ತು ಅವನ ಕಡೆಗೆ ತಿರುಗುವವರನ್ನು ಸರಿಯಾದ ಮಾರ್ಗದಲ್ಲಿ ಸೇರಿಸುತ್ತಾನೆ. info
التفاسير:

external-link copy
14 : 42

وَمَا تَفَرَّقُوْۤا اِلَّا مِنْ بَعْدِ مَا جَآءَهُمُ الْعِلْمُ بَغْیًا بَیْنَهُمْ ؕ— وَلَوْلَا كَلِمَةٌ سَبَقَتْ مِنْ رَّبِّكَ اِلٰۤی اَجَلٍ مُّسَمًّی لَّقُضِیَ بَیْنَهُمْ ؕ— وَاِنَّ الَّذِیْنَ اُوْرِثُوا الْكِتٰبَ مِنْ بَعْدِهِمْ لَفِیْ شَكٍّ مِّنْهُ مُرِیْبٍ ۟

ಅವರ ಬಳಿಗೆ ಜ್ಞಾನವು ಬಂದ ಬಳಿಕವೇ ಅವರು ಭಿನ್ನರಾದರು. (ಅದೂ ಕೂಡ) ಅವರು ಪರಸ್ಪರ ಹೊಂದಿದ್ದ ವಿರೋಧದಿಂದಾಗಿ. ಒಂದು ನಿಶ್ಚಿತ ಅವಧಿಯವರೆಗೆ ಮುಂದೂಡುತ್ತೇನೆ ಎಂಬ ನಿಮ್ಮ ಪರಿಪಾಲಕನ (ಅಲ್ಲಾಹನ) ವಚನವು ಮೊದಲೇ ಇಲ್ಲದಿರುತ್ತಿದ್ದರೆ ಅವರ ನಡುವೆ (ತಕ್ಷಣ) ತೀರ್ಪು ನೀಡಲಾಗುತ್ತಿತ್ತು. ಅವರ ನಂತರ ಗ್ರಂಥದ ವಾರಸುದಾರರಾದವರು ಯಾರೋ ನಿಶ್ಚಯವಾಗಿಯೂ ಅವರು ಅದರ ಬಗ್ಗೆ ಗೊಂದಲಪೂರ್ಣ ಸಂಶಯದಲ್ಲಿದ್ದಾರೆ. info
التفاسير:

external-link copy
15 : 42

فَلِذٰلِكَ فَادْعُ ۚ— وَاسْتَقِمْ كَمَاۤ اُمِرْتَ ۚ— وَلَا تَتَّبِعْ اَهْوَآءَهُمْ ۚ— وَقُلْ اٰمَنْتُ بِمَاۤ اَنْزَلَ اللّٰهُ مِنْ كِتٰبٍ ۚ— وَاُمِرْتُ لِاَعْدِلَ بَیْنَكُمْ ؕ— اَللّٰهُ رَبُّنَا وَرَبُّكُمْ ؕ— لَنَاۤ اَعْمَالُنَا وَلَكُمْ اَعْمَالُكُمْ ؕ— لَا حُجَّةَ بَیْنَنَا وَبَیْنَكُمْ ؕ— اَللّٰهُ یَجْمَعُ بَیْنَنَا ۚ— وَاِلَیْهِ الْمَصِیْرُ ۟ؕ

ನೀವು ಇದೇ ರೀತಿ ಜನರನ್ನು ಕರೆಯುತ್ತಿರಿ. ನಿಮಗೆ ಏನು ಆಜ್ಞಾಪಿಸಲಾಗಿದೆಯೋ ಅದರಲ್ಲಿ ದೃಢವಾಗಿ ನಿಲ್ಲಿರಿ. ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಬೇಡಿ. ಹೇಳಿರಿ: “ಅಲ್ಲಾಹು ಅವತೀರ್ಣಗೊಳಿಸಿದ ಎಲ್ಲಾ ಗ್ರಂಥಗಳಲ್ಲೂ ನಾನು ವಿಶ್ವಾಸವಿಟ್ಟಿದ್ದೇನೆ. ನಿಮ್ಮ ನಡುವೆ ನ್ಯಾಯದಿಂದ ವರ್ತಿಸಲು ನನಗೆ ಆಜ್ಞಾಪಿಸಲಾಗಿದೆ. ಅಲ್ಲಾಹನೇ ನಮ್ಮ ಮತ್ತು ನಿಮ್ಮ ಪರಿಪಾಲಕ. ನಮಗೆ ನಮ್ಮ ಕರ್ಮಗಳು ಮತ್ತು ನಿಮಗೆ ನಿಮ್ಮ ಕರ್ಮಗಳು. ನಮ್ಮ ಮತ್ತು ನಿಮ್ಮ ಮಧ್ಯೆ ಯಾವುದೇ ತರ್ಕವಿಲ್ಲ. ಅಲ್ಲಾಹು ನಮ್ಮನ್ನು ಪರಸ್ಪರ ಒಟ್ಟುಗೂಡಿಸುವನು. ಗಮ್ಯಸ್ಥಾನವು ಅವನ ಬಳಿಗೇ ಆಗಿದೆ.” info
التفاسير: