ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
23 : 42

ذٰلِكَ الَّذِیْ یُبَشِّرُ اللّٰهُ عِبَادَهُ الَّذِیْنَ اٰمَنُوْا وَعَمِلُوا الصّٰلِحٰتِ ؕ— قُلْ لَّاۤ اَسْـَٔلُكُمْ عَلَیْهِ اَجْرًا اِلَّا الْمَوَدَّةَ فِی الْقُرْبٰی ؕ— وَمَنْ یَّقْتَرِفْ حَسَنَةً نَّزِدْ لَهٗ فِیْهَا حُسْنًا ؕ— اِنَّ اللّٰهَ غَفُوْرٌ شَكُوْرٌ ۟

ಅದು ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಕರ್ಮವೆಸಗಿದ ತನ್ನ ದಾಸರಿಗೆ ಅಲ್ಲಾಹು ನೀಡುವ ಸುವಾರ್ತೆಯಾಗಿದೆ. ಹೇಳಿರಿ: “ಅದಕ್ಕಾಗಿ ನಾನು ನಿಮ್ಮೊಂದಿಗೆ ಯಾವುದೇ ಪ್ರತಿಫಲವನ್ನು ಬೇಡುವುದಿಲ್ಲ. ಆದರೆ ಹತ್ತಿರದ ಸಂಬಂಧಿಕರಲ್ಲಿರುವ ಪ್ರೀತಿಯ ಹೊರತು.”[1] ಯಾರು ಒಳಿತು ಮಾಡುತ್ತಾನೋ ಅವನಿಗೆ ನಾವು ಅದರಿಂದಾಗಿ ಒಳಿತನ್ನು ಹೆಚ್ಚಿಸಿಕೊಡುವೆವು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಕೃತಜ್ಞನಾಗಿದ್ದಾನೆ. info

[1] ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಮತ್ತು ಕುರೈಶರ ನಡುವೆ ಕುಟುಂಬ ಸಂಬಂಧವಿತ್ತು. ಈ ವಚನದ ಅರ್ಥವೇನೆಂದರೆ, ಈ ಸಂದೇಶವನ್ನು ನಿಮಗೆ ತಲುಪಿಸಿ ನಿಮಗೆ ಉಪದೇಶ ನೀಡಿದ್ದಕ್ಕೆ ನಾನು ನಿಮ್ಮಿಂದ ಯಾವುದೇ ಉಪಕಾರ ಬಯಸುವುದಿಲ್ಲ. ನೀವು ನನ್ನ ಸಂದೇಶ ಸ್ವೀಕರಿಸದಿದ್ದರೂ ಪರವಾಗಿಲ್ಲ. ಆದರೆ ನನ್ನ ಮತ್ತು ನಿಮ್ಮ ನಡುವೆ ಕುಟುಂಬ ಸಂಬಂಧವಿದೆ. ಕನಿಷ್ಠ ಅದನ್ನಾದರೂ ಗೌರವಿಸಿ ನನ್ನನ್ನು ಅವಮಾನಿಸುವುದು, ನನಗೆ ಕಿರುಕುಳ ಮತ್ತು ಹಿಂಸೆ ಕೊಡುವುದನ್ನು ನಿಲ್ಲಿಸಿ. ನನ್ನ ಕರ್ತವ್ಯವನ್ನು ನಿರ್ವಹಿಸಲು ನನ್ನನ್ನು ಬಿಟ್ಟುಬಿಡಿ.

التفاسير: