ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
67 : 40

هُوَ الَّذِیْ خَلَقَكُمْ مِّنْ تُرَابٍ ثُمَّ مِنْ نُّطْفَةٍ ثُمَّ مِنْ عَلَقَةٍ ثُمَّ یُخْرِجُكُمْ طِفْلًا ثُمَّ لِتَبْلُغُوْۤا اَشُدَّكُمْ ثُمَّ لِتَكُوْنُوْا شُیُوْخًا ۚ— وَمِنْكُمْ مَّنْ یُّتَوَفّٰی مِنْ قَبْلُ وَلِتَبْلُغُوْۤا اَجَلًا مُّسَمًّی وَّلَعَلَّكُمْ تَعْقِلُوْنَ ۟

ಅವನೇ ನಿಮ್ಮನ್ನು ಮಣ್ಣಿನಿಂದ, ನಂತರ ವೀರ್ಯದಿಂದ, ನಂತರ ಭ್ರೂಣದಿಂದ ಸೃಷ್ಟಿಸಿದವನು. ನಂತರ ಅವನು ನಿಮ್ಮನ್ನು ಒಂದು ಶಿಶುವನ್ನಾಗಿ ಹೊರತರುವನು. ನಂತರ ನೀವು ನಿಮ್ಮ ಪೂರ್ಣ ಯೌವನವನ್ನು ತಲುಪಿ, ನಂತರ ನೀವು ಮುದುಕರಾಗುವುದಕ್ಕಾಗಿ (ಅವನು ನಿಮ್ಮನ್ನು ಬೆಳೆಸುತ್ತಾನೆ). ನಿಮ್ಮಲ್ಲಿ ಕೆಲವರು ಇದಕ್ಕೆ ಮೊದಲೇ ಮರಣವನ್ನಪ್ಪುತ್ತಾರೆ. ನೀವು ನಿಮ್ಮ ನಿಶ್ಚಿತ ಅವಧಿಯನ್ನು ತಲುಪುವುದಕ್ಕಾಗಿ (ಅವನು ನಿಮ್ಮನ್ನು ಬಿಟ್ಟುಬಿಡುತ್ತಾನೆ). ನೀವು ಆಲೋಚಿಸುವುದಕ್ಕಾಗಿ. info
التفاسير:

external-link copy
68 : 40

هُوَ الَّذِیْ یُحْیٖ وَیُمِیْتُ ۚ— فَاِذَا قَضٰۤی اَمْرًا فَاِنَّمَا یَقُوْلُ لَهٗ كُنْ فَیَكُوْنُ ۟۠

ಅವನೇ ಜೀವ ಮತ್ತು ಮರಣವನ್ನು ನೀಡುವವನು. ಅವನು ಒಂದು ವಿಷಯವನ್ನು ತೀರ್ಮಾನಿಸಿದರೆ, ಅದರೊಂದಿಗೆ “ಉಂಟಾಗು” ಎನ್ನುತ್ತಾನೆ. ತಕ್ಷಣ ಅದು ಉಂಟಾಗುತ್ತದೆ! info
التفاسير:

external-link copy
69 : 40

اَلَمْ تَرَ اِلَی الَّذِیْنَ یُجَادِلُوْنَ فِیْۤ اٰیٰتِ اللّٰهِ ؕ— اَنّٰی یُصْرَفُوْنَ ۟ۙۛ

ಅಲ್ಲಾಹನ ವಚನಗಳ ವಿಷಯದಲ್ಲಿ ತರ್ಕಿಸುವವರನ್ನು ನೀವು ನೋಡಿಲ್ಲವೇ? ಅವರು ತಿರುಗಿಸಲ್ಪಡುತ್ತಿರುವುದು ಹೇಗೆ? info
التفاسير:

external-link copy
70 : 40

الَّذِیْنَ كَذَّبُوْا بِالْكِتٰبِ وَبِمَاۤ اَرْسَلْنَا بِهٖ رُسُلَنَا ۛ۫— فَسَوْفَ یَعْلَمُوْنَ ۟ۙ

ಅವರು ಗ್ರಂಥವನ್ನು ಮತ್ತು ನಾವು ನಮ್ಮ ಸಂದೇಶವಾಹಕರೊಡನೆ ಕಳುಹಿಸಿರುವುದನ್ನು ನಿಷೇಧಿಸಿದ್ದಾರೆ. ಅವರು ಸದ್ಯವೇ ತಿಳಿಯುವರು. info
التفاسير:

external-link copy
71 : 40

اِذِ الْاَغْلٰلُ فِیْۤ اَعْنَاقِهِمْ وَالسَّلٰسِلُ ؕ— یُسْحَبُوْنَ ۟ۙ

ಅವರ ಕೊರಳುಗಳಲ್ಲಿ ಬೇಡಿಗಳು ಮತ್ತು ಸಂಕೋಲೆಗಳಿರುವ ಸ್ಥಿತಿಯಲ್ಲಿ ಅವರನ್ನು ಎಳೆದೊಯ್ಯಲಾಗುವುದು. info
التفاسير:

external-link copy
72 : 40

فِی الْحَمِیْمِ ۙ۬— ثُمَّ فِی النَّارِ یُسْجَرُوْنَ ۟ۚ

ಕುದಿಯುವ ನೀರಿನಲ್ಲಿ. ನಂತರ ಅವರನ್ನು ನರಕಾಗ್ನಿಯಲ್ಲಿ ಉರಿಸಲಾಗುವುದು. info
التفاسير:

external-link copy
73 : 40

ثُمَّ قِیْلَ لَهُمْ اَیْنَ مَا كُنْتُمْ تُشْرِكُوْنَ ۟ۙ

ನಂತರ ಅವರೊಂದಿಗೆ ಕೇಳಲಾಗುವುದು: “ನೀವು (ಅಲ್ಲಾಹನಿಗೆ) ಸಹಭಾಗಿಗಳನ್ನಾಗಿ ಮಾಡಿದವರು (ನಿಮ್ಮ ದೇವರುಗಳು) ಎಲ್ಲಿದ್ದಾರೆ? info
التفاسير:

external-link copy
74 : 40

مِنْ دُوْنِ اللّٰهِ ؕ— قَالُوْا ضَلُّوْا عَنَّا بَلْ لَّمْ نَكُنْ نَّدْعُوْا مِنْ قَبْلُ شَیْـًٔا ؕ— كَذٰلِكَ یُضِلُّ اللّٰهُ الْكٰفِرِیْنَ ۟

ಅಲ್ಲಾಹನನ್ನು ಬಿಟ್ಟು.” ಅವರು ಹೇಳುವರು: “ಅವರು ನಮ್ಮನ್ನು ತೊರೆದಿದ್ದಾರೆ. ಅಲ್ಲ, ವಾಸ್ತವವಾಗಿ ನಾವು ಇದಕ್ಕೆ ಮೊದಲು ಯಾರನ್ನೂ ಕರೆದು ಪ್ರಾರ್ಥಿಸುತ್ತಿರಲಿಲ್ಲ.” ಈ ರೀತಿ ಅಲ್ಲಾಹು ಸತ್ಯನಿಷೇಧಿಗಳನ್ನು ದಾರಿತಪ್ಪಿಸುವನು. info
التفاسير:

external-link copy
75 : 40

ذٰلِكُمْ بِمَا كُنْتُمْ تَفْرَحُوْنَ فِی الْاَرْضِ بِغَیْرِ الْحَقِّ وَبِمَا كُنْتُمْ تَمْرَحُوْنَ ۟ۚ

(ಅವರೊಡನೆ ಹೇಳಲಾಗುವುದು): “ಈ ಶಿಕ್ಷೆಯು ಏಕೆಂದರೆ ನೀವು ಭೂಮಿಯಲ್ಲಿ ಅನ್ಯಾಯವಾಗಿ ಮೆರೆಯುತ್ತಿದ್ದಿರಿ ಮತ್ತು ಅಹಂಕಾರದಿಂದ ವರ್ತಿಸುತ್ತಿದ್ದಿರಿ. info
التفاسير:

external-link copy
76 : 40

اُدْخُلُوْۤا اَبْوَابَ جَهَنَّمَ خٰلِدِیْنَ فِیْهَا ۚ— فَبِئْسَ مَثْوَی الْمُتَكَبِّرِیْنَ ۟

ನರಕದ ಬಾಗಿಲುಗಳನ್ನು ಅದರಲ್ಲಿ ಶಾಶ್ವತವಾಗಿ ವಾಸಿಸುವುದಕ್ಕಾಗಿ ಪ್ರವೇಶಿಸಿರಿ. ಅಹಂಕಾರಿಗಳ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ!” info
التفاسير:

external-link copy
77 : 40

فَاصْبِرْ اِنَّ وَعْدَ اللّٰهِ حَقٌّ ۚ— فَاِمَّا نُرِیَنَّكَ بَعْضَ الَّذِیْ نَعِدُهُمْ اَوْ نَتَوَفَّیَنَّكَ فَاِلَیْنَا یُرْجَعُوْنَ ۟

ನೀವು ತಾಳ್ಮೆಯಿಂದಿರಿ. ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ನಾವು ಅವರಿಗೆ ವಾಗ್ದಾನ ಮಾಡುವ ಶಿಕ್ಷೆಗಳಲ್ಲಿ ಕೆಲವನ್ನು ನಾವು ನಿಮಗೆ ತೋರಿಸಿಕೊಟ್ಟರೂ ಅಥವಾ (ಅದಕ್ಕಿಂತ ಮೊದಲೇ) ನಾವು ನಿಮ್ಮನ್ನು ಮೃತಪಡಿಸಿದರೂ ಅವರು ಮರಳಿ ಬರುವುದು ನಮ್ಮ ಬಳಿಗೇ ಆಗಿದೆ. info
التفاسير: