ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
8 : 40

رَبَّنَا وَاَدْخِلْهُمْ جَنّٰتِ عَدْنِ ١لَّتِیْ وَعَدْتَّهُمْ وَمَنْ صَلَحَ مِنْ اٰبَآىِٕهِمْ وَاَزْوَاجِهِمْ وَذُرِّیّٰتِهِمْ ؕ— اِنَّكَ اَنْتَ الْعَزِیْزُ الْحَكِیْمُ ۟ۙ

ನಮ್ಮ ಪರಿಪಾಲಕನೇ! ನೀನು ಅವರನ್ನು, ಅವರ ಮಾತಾಪಿತರಲ್ಲಿ, ಪತ್ನಿಯರಲ್ಲಿ ಹಾಗೂ ಮಕ್ಕಳಲ್ಲಿರುವ ನೀತಿವಂತರನ್ನು ನೀನು ಅವರಿಗೆ ವಾಗ್ದಾನ ಮಾಡಿದ ಶಾಶ್ವತವಾಸಕ್ಕಿರುವ ಸ್ವರ್ಗಗಳಿಗೆ ಪ್ರವೇಶ ಮಾಡಿಸು. ನಿಶ್ಚಯವಾಗಿಯೂ ನೀನು ಪ್ರಬಲನು ಮತ್ತು ವಿವೇಕಪೂರ್ಣನಾಗಿರುವೆ. info
التفاسير:

external-link copy
9 : 40

وَقِهِمُ السَّیِّاٰتِ ؕ— وَمَنْ تَقِ السَّیِّاٰتِ یَوْمَىِٕذٍ فَقَدْ رَحِمْتَهٗ ؕ— وَذٰلِكَ هُوَ الْفَوْزُ الْعَظِیْمُ ۟۠

ಅವರನ್ನು ಕೆಡುಕುಗಳಿಂದ ರಕ್ಷಿಸು. ಆ ದಿನ ನೀನು ಯಾರನ್ನು ಕೆಡುಕುಗಳಿಂದ ರಕ್ಷಿಸುವೆಯೋ ಅವನಿಗೆ ನೀನು ಖಂಡಿತ ಕರುಣೆ ತೋರಿರುವೆ. ಅದೇ ಮಹಾ ಯಶಸ್ಸು.” info
التفاسير:

external-link copy
10 : 40

اِنَّ الَّذِیْنَ كَفَرُوْا یُنَادَوْنَ لَمَقْتُ اللّٰهِ اَكْبَرُ مِنْ مَّقْتِكُمْ اَنْفُسَكُمْ اِذْ تُدْعَوْنَ اِلَی الْاِیْمَانِ فَتَكْفُرُوْنَ ۟

ನಿಶ್ಚಯವಾಗಿಯೂ ಸತ್ಯನಿಷೇಧಿಗಳನ್ನು ಕರೆದು ಹೀಗೆ ಹೇಳಲಾಗುವುದು: “ನಿಮಗೆ ನಿಮ್ಮ ಮೇಲಿರುವ ಕೋಪಕ್ಕಿಂತಲೂ ಹೆಚ್ಚು ಕೋಪವು ನಿಮ್ಮನ್ನು ಸತ್ಯವಿಶ್ವಾಸದ ಕಡೆಗೆ ಕರೆಯಲಾಗುತ್ತಿದ್ದೂ ಸಹ ನೀವು ಸತ್ಯವನ್ನು ನಿಷೇಧಿಸುತ್ತಿದ್ದ ಸಂದರ್ಭ ಅಲ್ಲಾಹನಿಗೆ ನಿಮ್ಮ ಮೇಲಿತ್ತು.” info
التفاسير:

external-link copy
11 : 40

قَالُوْا رَبَّنَاۤ اَمَتَّنَا اثْنَتَیْنِ وَاَحْیَیْتَنَا اثْنَتَیْنِ فَاعْتَرَفْنَا بِذُنُوْبِنَا فَهَلْ اِلٰی خُرُوْجٍ مِّنْ سَبِیْلٍ ۟

ಅವರು ಹೇಳುವರು: “ನಮ್ಮ ಪರಿಪಾಲಕನೇ! ನೀನು ನಮ್ಮನ್ನು ಎರಡು ಬಾರಿ ಸಾವನ್ನಪ್ಪುವಂತೆ ಮಾಡಿದೆ ಮತ್ತು ನಮಗೆ ಎರಡು ಬಾರಿ ಜೀವವನ್ನು ನೀಡಿದೆ.[1] ನಾವು ನಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದೇವೆ. ಆದ್ದರಿಂದ ಹೊರಹೋಗಲು ಯಾವುದಾದರೂ ದಾರಿಯಿದೆಯೇ?” info

[1] ಮೊದಲನೇ ಸಾವು ಎಂದರೆ ಜನನಕ್ಕೆ ಮುನ್ನ ಇದ್ದಂತಹ ನಿರ್ಜೀವ ಸ್ಥಿತಿ. ಎರಡನೇ ಸಾವು ಮನುಷ್ಯನ ಸ್ವಾಭಾವಿಕ ಮರಣ. ಮೊದಲನೇ ಜೀವನವು ಇಹಲೋಕ ಜೀವನ ಮತ್ತು ಎರಡನೇ ಜೀವನವು ಪರಲೋಕ ಜೀವನ.

التفاسير:

external-link copy
12 : 40

ذٰلِكُمْ بِاَنَّهٗۤ اِذَا دُعِیَ اللّٰهُ وَحْدَهٗ كَفَرْتُمْ ۚ— وَاِنْ یُّشْرَكْ بِهٖ تُؤْمِنُوْا ؕ— فَالْحُكْمُ لِلّٰهِ الْعَلِیِّ الْكَبِیْرِ ۟

ಅದೇಕೆಂದರೆ, ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸಲಾದರೆ ನೀವು ನಿಷೇಧಿಸುತ್ತಿದ್ದಿರಿ ಮತ್ತು ಅವನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಲಾದರೆ ನೀವು ವಿಶ್ವಾಸವಿಡುತ್ತಿದ್ದಿರಿ. ಆದರೆ (ಇಂದು) ತೀರ್ಪು ನೀಡುವ ಅಧಿಕಾರವು ಅತ್ಯುನ್ನತನು ಮತ್ತು ಸರ್ವಶ್ರೇಷ್ಠನಾದ ಅಲ್ಲಾಹನಿಗಾಗಿದೆ. info
التفاسير:

external-link copy
13 : 40

هُوَ الَّذِیْ یُرِیْكُمْ اٰیٰتِهٖ وَیُنَزِّلُ لَكُمْ مِّنَ السَّمَآءِ رِزْقًا ؕ— وَمَا یَتَذَكَّرُ اِلَّا مَنْ یُّنِیْبُ ۟

ಅವನು ತನ್ನ ದೃಷ್ಟಾಂತಗಳನ್ನು ನಿಮಗೆ ತೋರಿಸಿಕೊಡುತ್ತಾನೆ ಮತ್ತು ಆಕಾಶದಿಂದ ನಿಮಗೆ ಉಪಜೀವನವನ್ನು ಇಳಿಸಿಕೊಡುತ್ತಾನೆ. (ಅಲ್ಲಾಹನ ಕಡೆಗೆ) ಮರಳುವವರು ಮಾತ್ರ ಉಪದೇಶವನ್ನು ಸ್ವೀಕರಿಸುತ್ತಾರೆ. info
التفاسير:

external-link copy
14 : 40

فَادْعُوا اللّٰهَ مُخْلِصِیْنَ لَهُ الدِّیْنَ وَلَوْ كَرِهَ الْكٰفِرُوْنَ ۟

ನೀವು ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸಿ ಅವನನ್ನು ಕರೆದು ಪ್ರಾರ್ಥಿಸಿರಿ. ಸತ್ಯನಿಷೇಧಿಗಳು ಅಸಹ್ಯಪಟ್ಟರೂ ಸಹ. info
التفاسير:

external-link copy
15 : 40

رَفِیْعُ الدَّرَجٰتِ ذُو الْعَرْشِ ۚ— یُلْقِی الرُّوْحَ مِنْ اَمْرِهٖ عَلٰی مَنْ یَّشَآءُ مِنْ عِبَادِهٖ لِیُنْذِرَ یَوْمَ التَّلَاقِ ۟ۙ

ಅವನು ಉನ್ನತ ಪದವಿಗಳನ್ನು ಹೊಂದಿರುವವನು ಮತ್ತು ಸಿಂಹಾಸನದ ಒಡೆಯನಾಗಿದ್ದಾನೆ. ಅವನು ತನ್ನ ದಾಸರಲ್ಲಿ ಅವನು ಇಚ್ಛಿಸುವವರಿಗೆ ದೇವವಾಣಿಯನ್ನು ನೀಡುತ್ತಾನೆ. ಭೇಟಿಯ ದಿನದ ಬಗ್ಗೆ ಅವರು ಜನರಿಗೆ ಎಚ್ಚರಿಕೆ ನೀಡಲೆಂದು. info
التفاسير:

external-link copy
16 : 40

یَوْمَ هُمْ بَارِزُوْنَ ۚ۬— لَا یَخْفٰی عَلَی اللّٰهِ مِنْهُمْ شَیْءٌ ؕ— لِمَنِ الْمُلْكُ الْیَوْمَ ؕ— لِلّٰهِ الْوَاحِدِ الْقَهَّارِ ۟

ಜನರೆಲ್ಲರೂ ಬಯಲಿಗೆ ಬರುವ ದಿನ. ಅವರಿಗೆ ಸಂಬಂಧಿಸಿದ ಯಾವುದೇ ವಿಷಯವು ಅಲ್ಲಾಹನಿಂದ ಮರೆಯಾಗಿರುವುದಿಲ್ಲ. ಇಂದು ಸಾರ್ವಭೌಮತ್ವವು ಯಾರಿಗೆ? ಏಕೈಕನು ಮತ್ತು ಸರ್ವಾಧಿಕಾರಿಯಾದ ಅಲ್ಲಾಹನಿಗೆ. info
التفاسير: