ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
78 : 40

وَلَقَدْ اَرْسَلْنَا رُسُلًا مِّنْ قَبْلِكَ مِنْهُمْ مَّنْ قَصَصْنَا عَلَیْكَ وَمِنْهُمْ مَّنْ لَّمْ نَقْصُصْ عَلَیْكَ ؕ— وَمَا كَانَ لِرَسُوْلٍ اَنْ یَّاْتِیَ بِاٰیَةٍ اِلَّا بِاِذْنِ اللّٰهِ ۚ— فَاِذَا جَآءَ اَمْرُ اللّٰهِ قُضِیَ بِالْحَقِّ وَخَسِرَ هُنَالِكَ الْمُبْطِلُوْنَ ۟۠

ನಿಮಗಿಂತ ಮುಂಚೆ ನಾವು ಅನೇಕ ಸಂದೇಶವಾಹಕರುಗಳನ್ನು ಕಳುಹಿಸಿದ್ದೇವೆ. ಅವರಲ್ಲಿ ಕೆಲವರ (ಸಮಾಚಾರಗಳನ್ನು) ನಾವು ನಿಮಗೆ ವಿವರಿಸಿದ್ದೇವೆ. ಅವರಲ್ಲಿ ಬೇರೆ ಕೆಲವರ ಬಗ್ಗೆ ನಾವು ನಿಮಗೆ ವಿವರಿಸಿಲ್ಲ. ಅಲ್ಲಾಹನ ಅಪ್ಪಣೆಯಿಲ್ಲದೆ ಒಂದು ದೃಷ್ಟಾಂತವನ್ನು ತರಲು ಯಾವುದೇ ಸಂದೇಶವಾಹಕರಿಗೂ ಸಾಧ್ಯವಿಲ್ಲ. ನಂತರ ಅಲ್ಲಾಹನ ಆಜ್ಞೆ ಬರುವಾಗ ನ್ಯಾಯಯುತವಾಗಿ ತೀರ್ಪು ನೀಡಲಾಗುವುದು. ಅಲ್ಲಿ ಮಿಥ್ಯವಾದಿಗಳು ನಷ್ಟ ಹೊಂದಿದವರಾಗುವರು. info
التفاسير:

external-link copy
79 : 40

اَللّٰهُ الَّذِیْ جَعَلَ لَكُمُ الْاَنْعَامَ لِتَرْكَبُوْا مِنْهَا وَمِنْهَا تَاْكُلُوْنَ ۟ؗ

ನಿಮಗಾಗಿ ಜಾನುವಾರುಗಳನ್ನು ಸೃಷ್ಟಿಸಿದವನು ಅಲ್ಲಾಹು. ಅವುಗಳಲ್ಲಿ ಕೆಲವು ಪ್ರಾಣಿಗಳ ಮೇಲೆ ನೀವು ಸವಾರಿ ಮಾಡುತ್ತೀರಿ ಮತ್ತು ಅವುಗಳಲ್ಲಿ ಕೆಲವನ್ನು ನೀವು ತಿನ್ನುತ್ತೀರಿ. info
التفاسير:

external-link copy
80 : 40

وَلَكُمْ فِیْهَا مَنَافِعُ وَلِتَبْلُغُوْا عَلَیْهَا حَاجَةً فِیْ صُدُوْرِكُمْ وَعَلَیْهَا وَعَلَی الْفُلْكِ تُحْمَلُوْنَ ۟ؕ

ಅವುಗಳಲ್ಲಿ ನಿಮಗೆ ಇನ್ನೂ ಅನೇಕ ಉಪಯೋಗಗಳಿವೆ. ನೀವು ಅವುಗಳ ಮೇಲೆ ಸವಾರಿ ಮಾಡಿ ನಿಮ್ಮ ಮನಸ್ಸಿನಲ್ಲಿರುವ ಅಗತ್ಯಗಳನ್ನು ತಲುಪುತ್ತೀರಿ. ನಿಮ್ಮನ್ನು ಅವುಗಳ ಬೆನ್ನುಗಳಲ್ಲೂ, ನಾವೆಗಳಲ್ಲೂ ಸಾಗಿಸಲಾಗುತ್ತಿದೆ. info
التفاسير:

external-link copy
81 : 40

وَیُرِیْكُمْ اٰیٰتِهٖ ۖۗ— فَاَیَّ اٰیٰتِ اللّٰهِ تُنْكِرُوْنَ ۟

ಅವನು ನಿಮಗೆ ಅವನ ದೃಷ್ಟಾಂತಗಳನ್ನು ತೋರಿಸಿಕೊಡುತ್ತಾನೆ. ಅಲ್ಲಾಹನ ದೃಷ್ಟಾಂತಗಳಲ್ಲಿ ಯಾವುದನ್ನು ನೀವು ನಿಷೇಧಿಸುತ್ತೀರಿ? info
التفاسير:

external-link copy
82 : 40

اَفَلَمْ یَسِیْرُوْا فِی الْاَرْضِ فَیَنْظُرُوْا كَیْفَ كَانَ عَاقِبَةُ الَّذِیْنَ مِنْ قَبْلِهِمْ ؕ— كَانُوْۤا اَكْثَرَ مِنْهُمْ وَاَشَدَّ قُوَّةً وَّاٰثَارًا فِی الْاَرْضِ فَمَاۤ اَغْنٰی عَنْهُمْ مَّا كَانُوْا یَكْسِبُوْنَ ۟

ಅವರು ಭೂಮಿಯಲ್ಲಿ ಸಂಚರಿಸಿ ಅವರಿಗಿಂತ ಮೊದಲಿನವರ ಅಂತ್ಯವು ಹೇಗಿತ್ತೆಂದು ನೋಡುವುದಿಲ್ಲವೇ? ಅವರು ಜನಸಂಖ್ಯೆಯಲ್ಲಿ ಇವರಿಗಿಂತ ಹೆಚ್ಚಿದ್ದರು ಮತ್ತು ಶಕ್ತಿ-ಸಾಮರ್ಥ್ಯದಲ್ಲಿ ಹಾಗೂ ಭೂಮಿಯಲ್ಲಿ ಸ್ಮಾರಕಗಳನ್ನು ಬಿಟ್ಟುಹೋಗುವುದರಲ್ಲಿ ಇವರಿಗಿಂತ ಹೆಚ್ಚು ಶ್ರೇಷ್ಠರಾಗಿದ್ದರು. ಆದರೆ ಅವರ ಯಾವುದೇ ಕೆಲಸಗಳು ಅವರ ಉಪಯೋಗಕ್ಕೆ ಬರಲಿಲ್ಲ. info
التفاسير:

external-link copy
83 : 40

فَلَمَّا جَآءَتْهُمْ رُسُلُهُمْ بِالْبَیِّنٰتِ فَرِحُوْا بِمَا عِنْدَهُمْ مِّنَ الْعِلْمِ وَحَاقَ بِهِمْ مَّا كَانُوْا بِهٖ یَسْتَهْزِءُوْنَ ۟

ಅವರ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಾಗ, ಅವರು ತಮ್ಮ ಬಳಿಯಿರುವ ಜ್ಞಾನದ ಬಗ್ಗೆ ಹಿಗ್ಗುತ್ತಿದ್ದರು. ಕೊನೆಗೆ ಅವರು ಯಾವುದನ್ನು ತಮಾಷೆ ಮಾಡುತ್ತಿದ್ದರೋ ಆ ಶಿಕ್ಷೆಯು ಅವರನ್ನು ಆವರಿಸಿಕೊಂಡಿತು. info
التفاسير:

external-link copy
84 : 40

فَلَمَّا رَاَوْا بَاْسَنَا قَالُوْۤا اٰمَنَّا بِاللّٰهِ وَحْدَهٗ وَكَفَرْنَا بِمَا كُنَّا بِهٖ مُشْرِكِیْنَ ۟

ನಮ್ಮ ಶಿಕ್ಷೆಯನ್ನು ಕಂಡಾಗ ಅವರು ಹೇಳಿದರು: “ನಾವು ಅಲ್ಲಾಹನಲ್ಲಿ ಮಾತ್ರ ವಿಶ್ವಾಸವಿಟ್ಟಿದ್ದೇವೆ ಮತ್ತು ಅವನೊಡನೆ ಸಹಭಾಗಿಯನ್ನಾಗಿ ಮಾಡುತ್ತಿದ್ದ (ಎಲ್ಲಾ ದೇವರುಗಳನ್ನು) ನಿಷೇಧಿಸಿದ್ದೇವೆ.” info
التفاسير:

external-link copy
85 : 40

فَلَمْ یَكُ یَنْفَعُهُمْ اِیْمَانُهُمْ لَمَّا رَاَوْا بَاْسَنَا ؕ— سُنَّتَ اللّٰهِ الَّتِیْ قَدْ خَلَتْ فِیْ عِبَادِهٖ ۚ— وَخَسِرَ هُنَالِكَ الْكٰفِرُوْنَ ۟۠

ಆದರೆ ನಮ್ಮ ಶಿಕ್ಷೆಯನ್ನು ಕಂಡಾಗ ಅವರ ಆ ವಿಶ್ವಾಸವು ಅವರಿಗೆ ಪ್ರಯೋಜನವಾಗಲಿಲ್ಲ. ಇದು ಅಲ್ಲಾಹು ತನ್ನ ದಾಸರ ವಿಷಯದಲ್ಲಿ ಅನುಸರಿಸಿಕೊಂಡು ಬಂದ ಕ್ರಮವಾಗಿದೆ. ಅಲ್ಲಿ ಸತ್ಯನಿಷೇಧಿಗಳೇ ನಷ್ಟ ಹೊಂದಿದರು. info
التفاسير: