ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
50 : 40

قَالُوْۤا اَوَلَمْ تَكُ تَاْتِیْكُمْ رُسُلُكُمْ بِالْبَیِّنٰتِ ؕ— قَالُوْا بَلٰی ؕ— قَالُوْا فَادْعُوْا ۚ— وَمَا دُعٰٓؤُا الْكٰفِرِیْنَ اِلَّا فِیْ ضَلٰلٍ ۟۠

ಕಾವಲುಗಾರರು ಕೇಳುವರು: “ನಿಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಸಂದೇಶವಾಹಕರುಗಳು ಬಂದಿರಲಿಲ್ಲವೇ?” ಅವರು ಉತ್ತರಿಸುವರು: “ಹೌದು.” ಕಾವಲುಗಾರರು ಹೇಳುವರು: “ಹಾಗಾದರೆ ನೀವೇ ಕರೆದು ಪ್ರಾರ್ಥಿಸಿ. ಸತ್ಯನಿಷೇಧಿಗಳ ಪ್ರಾರ್ಥನೆಯು ವ್ಯರ್ಥವಲ್ಲದೆ ಇನ್ನೇನೂ ಅಲ್ಲ.” info
التفاسير:

external-link copy
51 : 40

اِنَّا لَنَنْصُرُ رُسُلَنَا وَالَّذِیْنَ اٰمَنُوْا فِی الْحَیٰوةِ الدُّنْیَا وَیَوْمَ یَقُوْمُ الْاَشْهَادُ ۟ۙ

ನಿಶ್ಚಯವಾಗಿಯೂ ನಾವು ನಮ್ಮ ಸಂದೇಶವಾಹಕರುಗಳಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಇಹಲೋಕದಲ್ಲೂ, ಸಾಕ್ಷಿಗಳು ಎದ್ದು ನಿಲ್ಲುವ ದಿನದಲ್ಲೂ (ಪುನರುತ್ಥಾನ ದಿನದಲ್ಲೂ) ಸಹಾಯ ಮಾಡುವೆವು. info
التفاسير:

external-link copy
52 : 40

یَوْمَ لَا یَنْفَعُ الظّٰلِمِیْنَ مَعْذِرَتُهُمْ وَلَهُمُ اللَّعْنَةُ وَلَهُمْ سُوْٓءُ الدَّارِ ۟

ಅಕ್ರಮಿಗಳಿಗೆ ಅವರ ನೆಪಗಳು ಉಪಕಾರ ಮಾಡದ ದಿನ! ಅವರಿಗೆ ಶಾಪವಿದೆ ಮತ್ತು ಅವರಿಗೆ ನಿಕೃಷ್ಟ ಭವನವಿದೆ. info
التفاسير:

external-link copy
53 : 40

وَلَقَدْ اٰتَیْنَا مُوْسَی الْهُدٰی وَاَوْرَثْنَا بَنِیْۤ اِسْرَآءِیْلَ الْكِتٰبَ ۟ۙ

ನಾವು ಮೂಸಾರಿಗೆ ಸನ್ಮಾರ್ಗವನ್ನು ನೀಡಿದೆವು ಮತ್ತು ಇಸ್ರಾಯೇಲ್ ಮಕ್ಕಳನ್ನು ಗ್ರಂಥದ ವಾರಸುದಾರರಾಗಿ ಮಾಡಿದೆವು. info
التفاسير:

external-link copy
54 : 40

هُدًی وَّذِكْرٰی لِاُولِی الْاَلْبَابِ ۟

ಅದು ಬುದ್ಧಿವಂತರಿಗೆ ಸನ್ಮಾರ್ಗದರ್ಶಿ ಮತ್ತು ಉಪದೇಶವಾಗಿತ್ತು. info
التفاسير:

external-link copy
55 : 40

فَاصْبِرْ اِنَّ وَعْدَ اللّٰهِ حَقٌّ وَّاسْتَغْفِرْ لِذَنْۢبِكَ وَسَبِّحْ بِحَمْدِ رَبِّكَ بِالْعَشِیِّ وَالْاِبْكَارِ ۟

ಆದ್ದರಿಂದ ನೀವು ತಾಳ್ಮೆಯಿಂದಿರಿ. ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ನಿಮ್ಮ ತಪ್ಪಿಗಾಗಿ ಕ್ಷಮೆಯಾಚಿಸಿರಿ. ಸಂಜೆ ಹಾಗೂ ಮುಂಜಾನೆ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ತುತಿಸುತ್ತಾ ಅವರ ಪರಿಶುದ್ಧಿಯನ್ನು ಕೊಂಡಾಡಿರಿ. info
التفاسير:

external-link copy
56 : 40

اِنَّ الَّذِیْنَ یُجَادِلُوْنَ فِیْۤ اٰیٰتِ اللّٰهِ بِغَیْرِ سُلْطٰنٍ اَتٰىهُمْ ۙ— اِنْ فِیْ صُدُوْرِهِمْ اِلَّا كِبْرٌ مَّا هُمْ بِبَالِغِیْهِ ۚ— فَاسْتَعِذْ بِاللّٰهِ ؕ— اِنَّهٗ هُوَ السَّمِیْعُ الْبَصِیْرُ ۟

ನಿಶ್ಚಯವಾಗಿಯೂ ತಮ್ಮ ಬಳಿಗೆ ಬಂದ ಯಾವುದೇ ಸ್ಪಷ್ಟ ಪುರಾವೆಯಿಲ್ಲದೆ ಅಲ್ಲಾಹನ ವಚನಗಳ ವಿಷಯದಲ್ಲಿ ತರ್ಕಿಸುವವರು ಯಾರೋ ಅವರ ಹೃದಯಗಳಲ್ಲಿ ಅಹಂಕಾರವಲ್ಲದೆ ಬೇರೇನೂ ಇಲ್ಲ. ಅವರು ಅಲ್ಲಿಗೆ ತಲುಪುವುದೂ ಇಲ್ಲ.[1] ಆದ್ದರಿಂದ ನೀವು ಅಲ್ಲಾಹನಲ್ಲಿ ಅಭಯ ಯಾಚಿಸಿರಿ. ನಿಶ್ಚಯವಾಗಿಯೂ ಅವನು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ. info

[1] ಅಂದರೆ ಸತ್ಯವು ನಾಶವಾಗಬೇಕು ಮತ್ತು ಅಸತ್ಯವು ರಾರಾಜಿಸಬೇಕೆಂಬ ಅವರ ಉದ್ದೇಶವು ಈಡೇರುವುದಿಲ್ಲ.

التفاسير:

external-link copy
57 : 40

لَخَلْقُ السَّمٰوٰتِ وَالْاَرْضِ اَكْبَرُ مِنْ خَلْقِ النَّاسِ وَلٰكِنَّ اَكْثَرَ النَّاسِ لَا یَعْلَمُوْنَ ۟

ನಿಶ್ಚಯವಾಗಿಯೂ ಭೂಮ್ಯಾಕಾಶಗಳ ಸೃಷ್ಟಿಯು ಮನುಷ್ಯನನ್ನು ಸೃಷ್ಟಿಸುವುದಕ್ಕಿಂತಲೂ ಎಷ್ಟೋ ದೊಡ್ಡದಾಗಿದೆ. ಆದರೆ ಜನರಲ್ಲಿ ಹೆಚ್ಚಿನವರು ಅರ್ಥಮಾಡಿಕೊಳ್ಳುವುದಿಲ್ಲ. info
التفاسير:

external-link copy
58 : 40

وَمَا یَسْتَوِی الْاَعْمٰی وَالْبَصِیْرُ ۙ۬— وَالَّذِیْنَ اٰمَنُوْا وَعَمِلُوا الصّٰلِحٰتِ وَلَا الْمُسِیْٓءُ ؕ— قَلِیْلًا مَّا تَتَذَكَّرُوْنَ ۟

ಕಣ್ಣು ಕಾಣುವವನು ಮತ್ತು ಕಣ್ಣು ಕಾಣದವನು ಸಮಾನರಲ್ಲ. ಸತ್ಯವಿಶ್ವಾಸವಿಟ್ಟು ಸತ್ಕರ್ಮವೆಸಗಿದವರು ಮತ್ತು ದುಷ್ಕರ್ಮವೆಸಗಿದವರು ಸಮಾನರಲ್ಲ. ನೀವು ಸ್ವಲ್ಪವೇ ಉಪದೇಶವನ್ನು ಸ್ವೀಕರಿಸುತ್ತೀರಿ. info
التفاسير: