[1] ಇದರ ಒಂದು ಅರ್ಥವೇನೆಂದರೆ ಅರಸನಿಗೆ ಒಂದು ಒಂಟೆ ಹೊರುವ ಧಾನ್ಯಗಳನ್ನು ಹೆಚ್ಚಿಗೆ ಕೊಡುವುದು ಕಷ್ಟದ ವಿಷಯವೇನಲ್ಲ. ಇನ್ನೊಂದು ಅರ್ಥವೇನೆಂದರೆ ನಾವು ಈಗಾಗಲೇ ತಂದಿರುವ ಧಾನ್ಯಗಳು ನಮಗೆ ಸುಲಭದಲ್ಲಿ ಸಿಕ್ಕಿದ ಧಾನ್ಯಗಳಾಗಿವೆ. ನಾವು ತಮ್ಮನನ್ನು ಕರೆದುಕೊಂಡು ಹೋದರೆ ನಮಗೆ ಇದಕ್ಕಿಂತಲೂ ಹೆಚ್ಚು ಧಾನ್ಯ ಸಿಗುತ್ತದೆ.
[1] ಸ್ಫುರದ್ರೂಪಿಗಳು ಮತ್ತು ಉತ್ತಮ ದೇಹದಾರ್ಢ್ಯವನ್ನು ಹೊಂದಿರುವ ತನ್ನ ಹನ್ನೊಂದು ಮಕ್ಕಳು ಒಟ್ಟೊಟ್ಟಿಗೆ ಪ್ರವೇಶ ಮಾಡುವಾಗ ಜನರು ಅವರನ್ನು ಕಂಡು ಬೆರಗಾಗುವರು ಮತ್ತು ಅಸೂಯೆಪಡುವರು. ಇದರಿಂದ ಅವರಿಗೆ ದೃಷ್ಟಿ ತಾಗುವ ಸಾಧ್ಯತೆಯಿದೆ. ಜನರ ದೃಷ್ಟಿಯಿಂದ ಅವರನ್ನು ಕಾಪಾಡಲು ಯಾಕೂಬ್ (ಅವರ ಮೇಲೆ ಶಾಂತಿಯಿರಲಿ) ಈ ಉಪಾಯವನ್ನು ಹೇಳಿದ್ದರು. ಆದರೆ ಇದರ ಹೊರತಾಗಿಯೂ ದೃಷ್ಟಿ ತಾಗಬೇಕೆಂದು ಅಲ್ಲಾಹನ ವಿಧಿಸಿದ್ದರೆ ಅದನ್ನು ತಡೆಗಟ್ಟಲು ಯಾರಿಗೂ ಸಾಧ್ಯವಿಲ್ಲ. ಇದು ಕೇವಲ ಒಂದು ಮುಂಜಾಗೃತಾ ಕ್ರಮ ಮಾತ್ರವಾಗಿದೆ.