ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
15 : 12

فَلَمَّا ذَهَبُوْا بِهٖ وَاَجْمَعُوْۤا اَنْ یَّجْعَلُوْهُ فِیْ غَیٰبَتِ الْجُبِّ ۚ— وَاَوْحَیْنَاۤ اِلَیْهِ لَتُنَبِّئَنَّهُمْ بِاَمْرِهِمْ هٰذَا وَهُمْ لَا یَشْعُرُوْنَ ۟

ನಂತರ ಅವರು ಯೂಸುಫರೊಂದಿಗೆ ಹೊರಟು, ಅವನನ್ನು ಪಾಳು ಬಾವಿಯ ತಳಕ್ಕೆ ಎಸೆಯುವುದೆಂದು ಒಮ್ಮತದಿಂದ ನಿರ್ಧರಿಸಿದಾಗ, ನಾವು ಯೂಸುಫರಿಗೆ ಹೀಗೆ ದೇವವಾಣಿಯನ್ನು ನೀಡಿದೆವು: “ಅವರ ಈ ಕೃತ್ಯದ ಬಗ್ಗೆ ನೀವು ಖಂಡಿತ ಅವರಿಗೆ ತಿಳಿಸುವಿರಿ. ಆ ಸಂದರ್ಭದಲ್ಲಿ ಅವರಿಗೆ ಅದರ ನೆನಪೇ ಇರಲಾರದು.” info
التفاسير:

external-link copy
16 : 12

وَجَآءُوْۤ اَبَاهُمْ عِشَآءً یَّبْكُوْنَ ۟ؕ

ರಾತ್ರಿಯಾಗುತ್ತಲೇ ಅವರು ಅಳುತ್ತಾ ತಮ್ಮ ತಂದೆಯ ಬಳಿಗೆ ಬಂದರು. info
التفاسير:

external-link copy
17 : 12

قَالُوْا یٰۤاَبَانَاۤ اِنَّا ذَهَبْنَا نَسْتَبِقُ وَتَرَكْنَا یُوْسُفَ عِنْدَ مَتَاعِنَا فَاَكَلَهُ الذِّئْبُ ۚ— وَمَاۤ اَنْتَ بِمُؤْمِنٍ لَّنَا وَلَوْ كُنَّا صٰدِقِیْنَ ۟

ಅವರು ಹೇಳಿದರು: “ಅಪ್ಪಾ! ನಾವು ಓಟದ ಸ್ಪರ್ಧೆ ಮಾಡಿ ಓಡಿದೆವು. ಯೂಸುಫನನ್ನು ನಮ್ಮ ಸರಂಜಾಮುಗಳ ಬಳಿ ಬಿಟ್ಟಿದ್ದೆವು. ಆಗ ತೋಳ ಅವನನ್ನು ಕೊಂದು ತಿಂದಿತು. ನಾವು ಸತ್ಯ ಹೇಳುವವರಾಗಿದ್ದರೂ ಸಹ ನೀವು ನಮ್ಮನ್ನು ನಂಬಲಾರಿರಿ.” info
التفاسير:

external-link copy
18 : 12

وَجَآءُوْ عَلٰی قَمِیْصِهٖ بِدَمٍ كَذِبٍ ؕ— قَالَ بَلْ سَوَّلَتْ لَكُمْ اَنْفُسُكُمْ اَمْرًا ؕ— فَصَبْرٌ جَمِیْلٌ ؕ— وَاللّٰهُ الْمُسْتَعَانُ عَلٰی مَا تَصِفُوْنَ ۟

ಅವರು ಯೂಸುಫರ ಅಂಗಿಗೆ ನಕಲಿ ರಕ್ತವನ್ನು ಹಚ್ಚಿ ತಂದರು.[1] ತಂದೆ ಹೇಳಿದರು: “ಅಲ್ಲ, ವಾಸ್ತವವಾಗಿ ನೀವು ನಿಮ್ಮ ಮನಸ್ಸಿನಲ್ಲಿಯೇ ಒಂದು ವಿಷಯವನ್ನು ಕಲ್ಪಿಸಿ ತಂದಿದ್ದೀರಿ. ಆದ್ದರಿಂದ ತಾಳ್ಮೆಯಿಂದಿರುವುದೇ ಉತ್ತಮ. ನೀವು ವರ್ಣಿಸಿ ಹೇಳುವ ಈ ವಿಷಯದಲ್ಲಿ ನಾನು ಅಲ್ಲಾಹನಲ್ಲಿ ಮಾತ್ರ ಸಹಾಯ ಬೇಡುತ್ತೇನೆ.” info

[1] ಅವರೊಂದು ಕುರಿಯನ್ನು ಕೊಯ್ದು ಅದರ ರಕ್ತವನ್ನು ಯೂಸುಫರ ಬಟ್ಟೆಗೆ ಹಚ್ಚಿದರು. ಆದರೆ ಅಂಗಿಯನ್ನು ತೋಳ ತಿಂದ ರೀತಿಯಲ್ಲಿ ಹರಿಯಲು ಅವರು ಮರೆತು ಬಿಟ್ಟಿದ್ದರು.

التفاسير:

external-link copy
19 : 12

وَجَآءَتْ سَیَّارَةٌ فَاَرْسَلُوْا وَارِدَهُمْ فَاَدْلٰی دَلْوَهٗ ؕ— قَالَ یٰبُشْرٰی هٰذَا غُلٰمٌ ؕ— وَاَسَرُّوْهُ بِضَاعَةً ؕ— وَاللّٰهُ عَلِیْمٌۢ بِمَا یَعْمَلُوْنَ ۟

ಪ್ರಯಾಣಿಕರ ಒಂದು ತಂಡ ಅಲ್ಲಿಗೆ ಬಂತು. ಅವರು ನೀರು ತರುವವನನ್ನು (ನೀರಿಗಾಗಿ) ಕಳುಹಿಸಿದರು. ಅವನು ತನ್ನ ಬಕೆಟ್ಟನ್ನು ಇಳಿಸಿದನು. ನಂತರ ಕೂಗಿ ಹೇಳಿದನು: “ವಾಹ್! ಶುಭ ಸುದ್ದಿ! ಇಲ್ಲೊಬ್ಬ ಹುಡುಗ ಇದ್ದಾನೆ!” ಅವರು ಯೂಸುಫರನ್ನು ಮಾರಾಟದ ಸರಕಾಗಿ ಮಾಡಿ ಬಚ್ಚಿಟ್ಟರು. ಅವರು ಮಾಡುತ್ತಿರುವ ಕೆಲಸಗಳ ಬಗ್ಗೆ ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ. info
التفاسير:

external-link copy
20 : 12

وَشَرَوْهُ بِثَمَنٍ بَخْسٍ دَرَاهِمَ مَعْدُوْدَةٍ ۚ— وَكَانُوْا فِیْهِ مِنَ الزَّاهِدِیْنَ ۟۠

ಅವರು ಯೂಸುಫರನ್ನು ಚಿಲ್ಲರೆ ಕಾಸಿಗೆ—ಬೆರಳೆಣಿಕೆಯ ಬೆಳ್ಳಿ ನಾಣ್ಯಗಳಿಗೆ—ಮಾರಾಟ ಮಾಡಿದರು. ಅವರಿಗೆ ಯೂಸುಫರ ಬಗ್ಗೆ ಯಾವುದೇ ಆಸಕ್ತಿಯಿರಲಿಲ್ಲ. info
التفاسير:

external-link copy
21 : 12

وَقَالَ الَّذِی اشْتَرٰىهُ مِنْ مِّصْرَ لِامْرَاَتِهٖۤ اَكْرِمِیْ مَثْوٰىهُ عَسٰۤی اَنْ یَّنْفَعَنَاۤ اَوْ نَتَّخِذَهٗ وَلَدًا ؕ— وَكَذٰلِكَ مَكَّنَّا لِیُوْسُفَ فِی الْاَرْضِ ؗ— وَلِنُعَلِّمَهٗ مِنْ تَاْوِیْلِ الْاَحَادِیْثِ ؕ— وَاللّٰهُ غَالِبٌ عَلٰۤی اَمْرِهٖ وَلٰكِنَّ اَكْثَرَ النَّاسِ لَا یَعْلَمُوْنَ ۟

ಈಜಿಪ್ಟಿನಲ್ಲಿ ಅವರನ್ನು ಖರೀದಿಸಿದ ವ್ಯಕ್ತಿ[1] ತನ್ನ ಪತ್ನಿಯೊಂದಿಗೆ ಹೇಳಿದನು: “ಇವನೊಡನೆ ಗೌರವದಿಂದ ವರ್ತಿಸು. ಇವನಿಂದ ನಮಗೆ ಉಪಕಾರವಾಗಬಹುದು ಅಥವಾ ನಮಗೆ ಇವನನ್ನು ಮಗನಾಗಿ ಸ್ವೀಕರಿಸಿಕೊಳ್ಳಬಹುದು.” ಈ ರೀತಿ ನಾವು ಯೂಸುಫರಿಗೆ (ಈಜಿಪ್ಟಿನ) ಭೂಮಿಯಲ್ಲಿ ನೆಲೆಯನ್ನು ಮಾಡಿಕೊಟ್ಟೆವು. ಅವರಿಗೆ ಕನಸುಗಳ ವ್ಯಾಖ್ಯಾನವನ್ನು ಕಲಿಸಿಕೊಡುವುದಕ್ಕಾಗಿ. ಅಲ್ಲಾಹು ತನ್ನ ಎಲ್ಲಾ ವ್ಯವಹಾರಗಳಲ್ಲಿ ಅಜೇಯನಾಗಿದ್ದಾನೆ. ಆದರೆ ಜನರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ. info

[1] ಆ ಕಾಲದಲ್ಲಿ ರಯಾನ್ ಬಿನ್ ವಲೀದ್ ಎಂಬಾತ ಈಜಿಪ್ಟಿನ ಅರಸನಾಗಿದ್ದ ಮತ್ತು ಯೂಸುಫರನ್ನು (ಅವರ ಮೇಲೆ ಶಾಂತಿಯಿರಲಿ) ಖರೀದಿಸಿದ ವ್ಯಕ್ತಿ ಆತನ ಮಂತ್ರಿಯಾಗಿದ್ದ. ಅಝೀಝ್ ಎಂಬುದು ಈತನ ಬಿರುದಾಗಿತ್ತು. ಈತನ ಪತ್ನಿಯ ಹೆಸರು ರಾಈಲ್ ಅಥವಾ ಝಲೀಖಾ ಎಂದು ಹೇಳಲಾಗುತ್ತದೆ.

التفاسير:

external-link copy
22 : 12

وَلَمَّا بَلَغَ اَشُدَّهٗۤ اٰتَیْنٰهُ حُكْمًا وَّعِلْمًا ؕ— وَكَذٰلِكَ نَجْزِی الْمُحْسِنِیْنَ ۟

ನಂತರ ಯೂಸುಫ್ ಪ್ರೌಢರಾದಾಗ ನಾವು ಅವರಿಗೆ ವಿವೇಕ ಮತ್ತು ಜ್ಞಾನವನ್ನು ನೀಡಿದೆವು. ಒಳಿತು ಮಾಡುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುತ್ತೇವೆ. info
التفاسير: