[1] ಏಳು ಕೊಬ್ಬಿದ ಹಸುಗಳು ಎಂದರೆ ಸಮೃದ್ಧವಾದ ಏಳು ವರ್ಷಗಳು. ಏಳು ಬಡಕಲು ಹಸುಗಳು ಎಂದರೆ ಅದರ ನಂತರ ಬರುವ ಏಳು ಬರಗಾಲದ ವರ್ಷಗಳು. ಏಳು ಹಸಿರು ಪೈರುಗಳು ಎಂದರೆ ಭೂಮಿ ಫಲವತ್ತಾಗಿರುವ ಏಳು ವರ್ಷಗಳು ಮತ್ತು ಏಳು ಒಣಗಿದ ಪೈರುಗಳು ಎಂದರೆ ಭೂಮಿ ಬರಡಾಗಿರುವ ಏಳು ವರ್ಷಗಳು. ಭೂಮಿ ಫಲವತ್ತಾಗಿರುವ ಏಳು ಸಮೃದ್ಧಪೂರ್ಣ ವರ್ಷಗಳಲ್ಲಿ ಸತತವಾಗಿ ಕೃಷಿ ಮಾಡಿ, ತಿನ್ನಲು ಬೇಕಾದಷ್ಟು ಧಾನ್ಯಗಳನ್ನು ತೆಗೆದು ಉಳಿದವುಗಳನ್ನು ಅವುಗಳ ತೆನೆಗಳೊಂದಿಗೇ ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಮುಂದೆ ಬರುವ ಏಳು ಬರಗಾಲದ ವರ್ಷಗಳಲ್ಲಿ ಇವು ಉಪಯೋಗಕ್ಕೆ ಬರುತ್ತವೆ.