ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
71 : 10

وَاتْلُ عَلَیْهِمْ نَبَاَ نُوْحٍ ۘ— اِذْ قَالَ لِقَوْمِهٖ یٰقَوْمِ اِنْ كَانَ كَبُرَ عَلَیْكُمْ مَّقَامِیْ وَتَذْكِیْرِیْ بِاٰیٰتِ اللّٰهِ فَعَلَی اللّٰهِ تَوَكَّلْتُ فَاَجْمِعُوْۤا اَمْرَكُمْ وَشُرَكَآءَكُمْ ثُمَّ لَا یَكُنْ اَمْرُكُمْ عَلَیْكُمْ غُمَّةً ثُمَّ اقْضُوْۤا اِلَیَّ وَلَا تُنْظِرُوْنِ ۟

ಅವರಿಗೆ ನೂಹರ ಸಮಾಚಾರವನ್ನು ಓದಿಕೊಡಿ. ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ಓ ನನ್ನ ಜನರೇ! ನಾನು ನಿಮ್ಮ ನಡುವೆಯಿರುವುದು ಮತ್ತು ನಾನು ಅಲ್ಲಾಹನ ವಚನಗಳನ್ನು ಪಠಿಸಿ ಉಪದೇಶ ನೀಡುವುದು ನಿಮಗೆ ದೊಡ್ಡ ಹೊರೆಯಂತೆ ಕಾಣುತ್ತಿದ್ದರೆ, ನಾನಂತೂ ಅಲ್ಲಾಹನಲ್ಲಿ ಭರವಸೆಯಿದ್ದೇನೆ; ನೀವು ನಿಮ್ಮೆಲ್ಲಾ ಷಡ್ಯಂತ್ರಗಳನ್ನು ಒಟ್ಟುಗೂಡಿಸಿ ನಿಮ್ಮ ಸಹಭಾಗಿಗಳನ್ನು (ದೇವರುಗಳನ್ನು) ಕರೆಯಿರಿ. ನಂತರ ನಿಮ್ಮ ಷಡ್ಯಂತ್ರವು (ಫಲಿಸುತ್ತದೋ ಇಲ್ಲವೋ ಎಂಬ) ವಿಷಯದಲ್ಲಿ ನಿಮಗೆ ಯಾವುದೇ ಅಸ್ಪಷ್ಟತೆ ಇರದಂತೆ ನೋಡಿಕೊಳ್ಳಿ. ನಂತರ ನೀವು ಅದನ್ನು ನನ್ನ ಮೇಲೆ ಪ್ರಯೋಗಿಸಿರಿ. ನನಗೆ ಸ್ವಲ್ಪವೂ ಕಾಲಾವಕಾಶ ನೀಡಬೇಡಿ. info
التفاسير:

external-link copy
72 : 10

فَاِنْ تَوَلَّیْتُمْ فَمَا سَاَلْتُكُمْ مِّنْ اَجْرٍ ؕ— اِنْ اَجْرِیَ اِلَّا عَلَی اللّٰهِ ۙ— وَاُمِرْتُ اَنْ اَكُوْنَ مِنَ الْمُسْلِمِیْنَ ۟

ಇದರ ನಂತರವೂ ನೀವು (ನನ್ನ ಸಂದೇಶಕ್ಕೆ ಕಿವಿಗೊಡದೆ) ವಿಮುಖರಾಗಿ ಹೋಗುವುದಾದರೆ, ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಬೇಡಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಅಲ್ಲಾಹು ಮಾತ್ರ. ನಾನು ಮುಸಲ್ಮಾನರಲ್ಲಿ (ಅಲ್ಲಾಹನಿಗೆ ಶರಣಾದವರಲ್ಲಿ) ಸೇರಬೇಕೆಂದು ನನಗೆ ಆಜ್ಞಾಪಿಸಲಾಗಿದೆ.” info
التفاسير:

external-link copy
73 : 10

فَكَذَّبُوْهُ فَنَجَّیْنٰهُ وَمَنْ مَّعَهٗ فِی الْفُلْكِ وَجَعَلْنٰهُمْ خَلٰٓىِٕفَ وَاَغْرَقْنَا الَّذِیْنَ كَذَّبُوْا بِاٰیٰتِنَا ۚ— فَانْظُرْ كَیْفَ كَانَ عَاقِبَةُ الْمُنْذَرِیْنَ ۟

ಆದರೆ ಅವರು ನೂಹರನ್ನು ನಿಷೇಧಿಸಿದರು. ಆಗ ನಾವು ನೂಹರನ್ನು ಮತ್ತು ನಾವೆಯಲ್ಲಿ ಅವರ ಜೊತೆಗಿದ್ದವರನ್ನು ರಕ್ಷಿಸಿ, ಅವರನ್ನು (ಭೂಮಿಯಲ್ಲಿ) ಉತ್ತರಾಧಿಕಾರಿಗಳನ್ನಾಗಿ ಮಾಡಿದೆವು. ನಮ್ಮ ವಚನಗಳನ್ನು ನಿಷೇಧಿಸಿದ ಜನರನ್ನು ನಾವು ಮುಳುಗಿಸಿ ಕೊಂದೆವು. ಎಚ್ಚರಿಕೆ ನೀಡಲಾದ ಆ ಜನರ ಅಂತ್ಯವು ಹೇಗಿತ್ತು ಎಂದು ನೋಡಿ. info
التفاسير:

external-link copy
74 : 10

ثُمَّ بَعَثْنَا مِنْ بَعْدِهٖ رُسُلًا اِلٰی قَوْمِهِمْ فَجَآءُوْهُمْ بِالْبَیِّنٰتِ فَمَا كَانُوْا لِیُؤْمِنُوْا بِمَا كَذَّبُوْا بِهٖ مِنْ قَبْلُ ؕ— كَذٰلِكَ نَطْبَعُ عَلٰی قُلُوْبِ الْمُعْتَدِیْنَ ۟

ನಂತರ, ಅವರ ಬಳಿಕ ನಾವು ಆಯಾ ಸಮುದಾಯಗಳಿಗೆ ಅನೇಕ ಸಂದೇಶವಾಹಕರುಗಳನ್ನು ಕಳುಹಿಸಿದೆವು. ಆ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದರು. ಆದರೂ, ಇದಕ್ಕೆ ಮೊದಲು ಅವರು ನಿಷೇಧಿಸಿದ ಆ ಸಂಗತಿಯಲ್ಲಿ ವಿಶ್ವಾಸವಿಡಲು ಅವರು ಸಿದ್ಧರಾಗಲಿಲ್ಲ. ಈ ರೀತಿ ನಾವು ಅತಿರೇಕಿಗಳ ಹೃದಯಗಳಿಗೆ ಮೊಹರು ಹಾಕುತ್ತೇವೆ. info
التفاسير:

external-link copy
75 : 10

ثُمَّ بَعَثْنَا مِنْ بَعْدِهِمْ مُّوْسٰی وَهٰرُوْنَ اِلٰی فِرْعَوْنَ وَمَلَاۡىِٕهٖ بِاٰیٰتِنَا فَاسْتَكْبَرُوْا وَكَانُوْا قَوْمًا مُّجْرِمِیْنَ ۟

ನಂತರ, ಅವರ ಬಳಿಕ ನಾವು ಮೂಸಾ ಮತ್ತು ಹಾರೂನರನ್ನು ನಮ್ಮ ದೃಷ್ಟಾಂತಗಳೊಂದಿಗೆ ಫರೋಹ ಹಾಗೂ ಅವನ ಜನರ ಮುಖಂಡರ ಬಳಿಗೆ ಕಳುಹಿಸಿದೆವು. ಆದರೆ ಅವರು ಅಹಂಕಾರದಿಂದ ವರ್ತಿಸಿದರು. ಅವರು ಅಪರಾಧಿಗಳಾದ ಜನರಾಗಿದ್ದರು. info
التفاسير:

external-link copy
76 : 10

فَلَمَّا جَآءَهُمُ الْحَقُّ مِنْ عِنْدِنَا قَالُوْۤا اِنَّ هٰذَا لَسِحْرٌ مُّبِیْنٌ ۟

ನಮ್ಮ ಕಡೆಯ ಸತ್ಯವು ಅವರ ಬಳಿಗೆ ಬಂದಾಗ ಅವರು ಹೇಳಿದರು: “ನಿಶ್ಚಯವಾಗಿಯೂ ಇದು ಸ್ಪಷ್ಟ ಮಾಟಗಾರಿಕೆಯಾಗಿದೆ.” info
التفاسير:

external-link copy
77 : 10

قَالَ مُوْسٰۤی اَتَقُوْلُوْنَ لِلْحَقِّ لَمَّا جَآءَكُمْ ؕ— اَسِحْرٌ هٰذَا ؕ— وَلَا یُفْلِحُ السّٰحِرُوْنَ ۟

ಮೂಸಾ ಹೇಳಿದರು: “ನೀವು ಈ ಸತ್ಯದ ಬಗ್ಗೆ ಅದು ನಿಮ್ಮ ಬಳಿಗೆ ಬಂದಾಗ ಹೀಗೆ ಹೇಳುವುದೇ? ಇದು ಮಾಟಗಾರಿಕೆಯೇ? ವಾಸ್ತವವಾಗಿ ಮಾಟಗಾರರು ಯಶಸ್ವಿಯಾಗುವುದಿಲ್ಲ.” info
التفاسير:

external-link copy
78 : 10

قَالُوْۤا اَجِئْتَنَا لِتَلْفِتَنَا عَمَّا وَجَدْنَا عَلَیْهِ اٰبَآءَنَا وَتَكُوْنَ لَكُمَا الْكِبْرِیَآءُ فِی الْاَرْضِ ؕ— وَمَا نَحْنُ لَكُمَا بِمُؤْمِنِیْنَ ۟

ಅವರು ಹೇಳಿದರು: “ನಮ್ಮ ಪೂರ್ವಜರು ಯಾವ ಮಾರ್ಗದಲ್ಲಿರುವುದನ್ನು ನಾವು ಕಂಡಿದ್ದೇವೆಯೋ ಆ ಮಾರ್ಗದಿಂದ ನಮ್ಮನ್ನು ತಿರುಗಿಸಲು ಮತ್ತು ಭೂಮಿಯಲ್ಲಿ ನಿಮಗಿಬ್ಬರಿಗೆ ಶ್ರೇಷ್ಠತೆ ದೊರೆಯುವಂತಾಗಲು ನೀವು ನಮ್ಮ ಬಳಿಗೆ ಬಂದಿದ್ದೀರಾ? ನಾವು ನಿಮ್ಮಿಬ್ಬರಲ್ಲಿ ಎಂದಿಗೂ ವಿಶ್ವಾಸವಿಡುವುದಿಲ್ಲ.” info
التفاسير: