ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

external-link copy
71 : 10

وَاتْلُ عَلَیْهِمْ نَبَاَ نُوْحٍ ۘ— اِذْ قَالَ لِقَوْمِهٖ یٰقَوْمِ اِنْ كَانَ كَبُرَ عَلَیْكُمْ مَّقَامِیْ وَتَذْكِیْرِیْ بِاٰیٰتِ اللّٰهِ فَعَلَی اللّٰهِ تَوَكَّلْتُ فَاَجْمِعُوْۤا اَمْرَكُمْ وَشُرَكَآءَكُمْ ثُمَّ لَا یَكُنْ اَمْرُكُمْ عَلَیْكُمْ غُمَّةً ثُمَّ اقْضُوْۤا اِلَیَّ وَلَا تُنْظِرُوْنِ ۟

ಅವರಿಗೆ ನೂಹರ ಸಮಾಚಾರವನ್ನು ಓದಿಕೊಡಿ. ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ಓ ನನ್ನ ಜನರೇ! ನಾನು ನಿಮ್ಮ ನಡುವೆಯಿರುವುದು ಮತ್ತು ನಾನು ಅಲ್ಲಾಹನ ವಚನಗಳನ್ನು ಪಠಿಸಿ ಉಪದೇಶ ನೀಡುವುದು ನಿಮಗೆ ದೊಡ್ಡ ಹೊರೆಯಂತೆ ಕಾಣುತ್ತಿದ್ದರೆ, ನಾನಂತೂ ಅಲ್ಲಾಹನಲ್ಲಿ ಭರವಸೆಯಿದ್ದೇನೆ; ನೀವು ನಿಮ್ಮೆಲ್ಲಾ ಷಡ್ಯಂತ್ರಗಳನ್ನು ಒಟ್ಟುಗೂಡಿಸಿ ನಿಮ್ಮ ಸಹಭಾಗಿಗಳನ್ನು (ದೇವರುಗಳನ್ನು) ಕರೆಯಿರಿ. ನಂತರ ನಿಮ್ಮ ಷಡ್ಯಂತ್ರವು (ಫಲಿಸುತ್ತದೋ ಇಲ್ಲವೋ ಎಂಬ) ವಿಷಯದಲ್ಲಿ ನಿಮಗೆ ಯಾವುದೇ ಅಸ್ಪಷ್ಟತೆ ಇರದಂತೆ ನೋಡಿಕೊಳ್ಳಿ. ನಂತರ ನೀವು ಅದನ್ನು ನನ್ನ ಮೇಲೆ ಪ್ರಯೋಗಿಸಿರಿ. ನನಗೆ ಸ್ವಲ್ಪವೂ ಕಾಲಾವಕಾಶ ನೀಡಬೇಡಿ. info
التفاسير: