ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
26 : 10

لِلَّذِیْنَ اَحْسَنُوا الْحُسْنٰی وَزِیَادَةٌ ؕ— وَلَا یَرْهَقُ وُجُوْهَهُمْ قَتَرٌ وَّلَا ذِلَّةٌ ؕ— اُولٰٓىِٕكَ اَصْحٰبُ الْجَنَّةِ ۚ— هُمْ فِیْهَا خٰلِدُوْنَ ۟

ಒಳಿತು ಮಾಡಿದವರಿಗೆ ಅತ್ಯುತ್ತಮ ಪ್ರತಿಫಲವಿದೆ ಮತ್ತು ಹೆಚ್ಚಳವೂ[1] ಇದೆ. ಅವರ ಮುಖಗಳನ್ನು ಅಂಧಕಾರ ಮತ್ತು ಅಪಮಾನವು ಆವರಿಸುವುದಿಲ್ಲ. ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. info

[1] ಇಲ್ಲಿ ಹೆಚ್ಚಳವೆಂದು ಹೇಳಿರುವುದು ಅಲ್ಲಾಹನ ಆದರಣೀಯ ಮುಖದರ್ಶನವಾಗಿದೆ. ಸ್ವರ್ಗದಲ್ಲಿ ಸತ್ಯವಿಶ್ವಾಸಿಗಳು ಅಲ್ಲಾಹನನ್ನು ನೇರವಾಗಿ ನೋಡುವರು.

التفاسير:

external-link copy
27 : 10

وَالَّذِیْنَ كَسَبُوا السَّیِّاٰتِ جَزَآءُ سَیِّئَةٍ بِمِثْلِهَا ۙ— وَتَرْهَقُهُمْ ذِلَّةٌ ؕ— مَا لَهُمْ مِّنَ اللّٰهِ مِنْ عَاصِمٍ ۚ— كَاَنَّمَاۤ اُغْشِیَتْ وُجُوْهُهُمْ قِطَعًا مِّنَ الَّیْلِ مُظْلِمًا ؕ— اُولٰٓىِٕكَ اَصْحٰبُ النَّارِ ۚ— هُمْ فِیْهَا خٰلِدُوْنَ ۟

ಕೆಡುಕುಗಳನ್ನು ಮಾಡಿದವರು ಯಾರೋ—ಅವರ ಕೆಡುಕಿಗೆ ಸಮಾನವಾದ ಶಿಕ್ಷೆಯು ಅವರಿಗೆ ದೊರೆಯಲಿದೆ ಮತ್ತು ಅಪಮಾನವು ಅವರನ್ನು ಆವರಿಸಲಿದೆ. ಅಲ್ಲಾಹನ ಶಿಕ್ಷೆಯಿಂದ ಅವರನ್ನು ರಕ್ಷಿಸುವವರು ಯಾರೂ ಇಲ್ಲ. ಕಾರ್ಗತ್ತಲ ರಾತ್ರಿಯ ತುಣುಕುಗಳು ಅವರ ಮುಖಗಳನ್ನು ಆವರಿಸಿಕೊಂಡಿದೆಯೋ ಎಂಬಂತೆ (ಅವರು ಕಪ್ಪಾಗಿರುವರು). ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. info
التفاسير:

external-link copy
28 : 10

وَیَوْمَ نَحْشُرُهُمْ جَمِیْعًا ثُمَّ نَقُوْلُ لِلَّذِیْنَ اَشْرَكُوْا مَكَانَكُمْ اَنْتُمْ وَشُرَكَآؤُكُمْ ۚ— فَزَیَّلْنَا بَیْنَهُمْ وَقَالَ شُرَكَآؤُهُمْ مَّا كُنْتُمْ اِیَّانَا تَعْبُدُوْنَ ۟

ನಾವು ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ. ನಂತರ ನಾವು ಬಹುದೇವಾರಾಧಕರೊಡನೆ ಹೇಳುವೆವು: “ನೀವು ಮತ್ತು ನಿಮ್ಮ ಸಹಭಾಗಿಗಳು (ದೇವರುಗಳು) ಅಲ್ಲೇ ನಿಲ್ಲಿರಿ.” ನಂತರ ನಾವು ಅವರನ್ನು ಬೇರ್ಪಡಿಸುವೆವು. ಆಗ ಅವರ ಸಹಭಾಗಿಗಳು (ದೇವರುಗಳು) ಅವರೊಡನೆ ಹೇಳುವರು: “ನೀವು ನಮ್ಮನ್ನು ಆರಾಧಿಸುತ್ತಿರಲಿಲ್ಲ. info
التفاسير:

external-link copy
29 : 10

فَكَفٰی بِاللّٰهِ شَهِیْدًا بَیْنَنَا وَبَیْنَكُمْ اِنْ كُنَّا عَنْ عِبَادَتِكُمْ لَغٰفِلِیْنَ ۟

ನಮ್ಮ ಮತ್ತು ನಿಮ್ಮ ನಡುವೆ ಸಾಕ್ಷಿಯಾಗಿ ಅಲ್ಲಾಹು ಸಾಕು. ನೀವು ಮಾಡುತ್ತಿದ್ದ ಆರಾಧನೆಯ ಬಗ್ಗೆ ನಮಗೆ ಗೊತ್ತೇ ಇರಲಿಲ್ಲ.” info
التفاسير:

external-link copy
30 : 10

هُنَالِكَ تَبْلُوْا كُلُّ نَفْسٍ مَّاۤ اَسْلَفَتْ وَرُدُّوْۤا اِلَی اللّٰهِ مَوْلٰىهُمُ الْحَقِّ وَضَلَّ عَنْهُمْ مَّا كَانُوْا یَفْتَرُوْنَ ۟۠

ಅಲ್ಲಿ ಪ್ರತಿಯೊಬ್ಬನೂ ತಾನು ಈಗಾಗಲೇ ಮಾಡಿಟ್ಟ ಕರ್ಮಗಳನ್ನು ತನಿಖೆ ಮಾಡುವನು. ಅವರನ್ನು ಅವರ ನೈಜ ರಕ್ಷಕನಾದ ಅಲ್ಲಾಹನ ಬಳಿಗೆ ಮರಳಿಸಲಾಗುವುದು. ಅವರು ಆರೋಪಿಸುತ್ತಿದ್ದ ಸುಳ್ಳುಗಳೆಲ್ಲವೂ ಅವರಿಂದ ಮಾಯವಾಗಿ ಬಿಡುವುವು. info
التفاسير:

external-link copy
31 : 10

قُلْ مَنْ یَّرْزُقُكُمْ مِّنَ السَّمَآءِ وَالْاَرْضِ اَمَّنْ یَّمْلِكُ السَّمْعَ وَالْاَبْصَارَ وَمَنْ یُّخْرِجُ الْحَیَّ مِنَ الْمَیِّتِ وَیُخْرِجُ الْمَیِّتَ مِنَ الْحَیِّ وَمَنْ یُّدَبِّرُ الْاَمْرَ ؕ— فَسَیَقُوْلُوْنَ اللّٰهُ ۚ— فَقُلْ اَفَلَا تَتَّقُوْنَ ۟

ಕೇಳಿರಿ: “ಆಕಾಶದಿಂದ ಮತ್ತು ಭೂಮಿಯಿಂದ ನಿಮಗೆ ಆಹಾರವನ್ನು ಒದಗಿಸುವುದು ಯಾರು? ನಿಮ್ಮ ಶ್ರವಣ ಮತ್ತು ದೃಷ್ಟಿ ಯಾರ ನಿಯಂತ್ರಣದಲ್ಲಿದೆ? ನಿರ್ಜೀವಿಯಿಂದ ಜೀವಿಯನ್ನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವುದು ಯಾರು? ಜಗತ್ತಿನ ಎಲ್ಲಾ ವಿಷಯಗಳನ್ನು ನಿಯಂತ್ರಿಸುವುದು ಯಾರು?” ಆಗ ಅವರು ಹೇಳುವರು: “ಅಲ್ಲಾಹು.” ಕೇಳಿರಿ: “ಆದರೂ ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?” info
التفاسير:

external-link copy
32 : 10

فَذٰلِكُمُ اللّٰهُ رَبُّكُمُ الْحَقُّ ۚ— فَمَاذَا بَعْدَ الْحَقِّ اِلَّا الضَّلٰلُ ۚ— فَاَنّٰی تُصْرَفُوْنَ ۟

ಅವನೇ ನಿಮ್ಮ ನೈಜ ಪರಿಪಾಲಕನಾದ ಅಲ್ಲಾಹು. ಸತ್ಯದ ನಂತರ ದುರ್ಮಾರ್ಗವಲ್ಲದೆ ಇನ್ನೇನಿದೆ? ಹಾಗಿದ್ದೂ ನೀವು (ಸತ್ಯದಿಂದ) ತಿರುಗಿಸಲ್ಪಡುತ್ತಿರುವುದು ಹೇಗೆ? info
التفاسير:

external-link copy
33 : 10

كَذٰلِكَ حَقَّتْ كَلِمَتُ رَبِّكَ عَلَی الَّذِیْنَ فَسَقُوْۤا اَنَّهُمْ لَا یُؤْمِنُوْنَ ۟

ಈ ರೀತಿ ಆ ದುಷ್ಕರ್ಮಿಗಳಿಗೆ ಸಂಬಂಧಿಸಿದಂತೆ “ಅವರು ವಿಶ್ವಾಸವಿಡುವುದಿಲ್ಲ” ಎಂಬ ನಿಮ್ಮ ಪರಿಪಾಲಕನ (ಅಲ್ಲಾಹನ) ವಚನವು ಸತ್ಯವಾಗಿ ಪರಿಣಮಿಸಿದೆ. info
التفاسير: