ការបកប្រែអត្ថន័យគួរអាន - ការបកប្រែជាភាសាកាណាដា - ហាំហ្សះ បេតួរ

លេខ​ទំព័រ:close

external-link copy
7 : 10

اِنَّ الَّذِیْنَ لَا یَرْجُوْنَ لِقَآءَنَا وَرَضُوْا بِالْحَیٰوةِ الدُّنْیَا وَاطْمَاَنُّوْا بِهَا وَالَّذِیْنَ هُمْ عَنْ اٰیٰتِنَا غٰفِلُوْنَ ۟ۙ

ನಿಶ್ಚಯವಾಗಿಯೂ ನಮ್ಮನ್ನು ಭೇಟಿಯಾಗುವ ವಿಷಯದಲ್ಲಿ ನಂಬಿಕೆಯಿಲ್ಲದವರು, ಇಹಲೋಕ ಜೀವನವನ್ನೇ ನೆಚ್ಚಿ, ಅದರಲ್ಲೇ ನೆಮ್ಮದಿಯನ್ನು ಬಯಸುವವರು ಮತ್ತು ನಮ್ಮ ದೃಷ್ಟಾಂತಗಳ ಬಗ್ಗೆ ಅಜ್ಞರಾಗಿರುವವರು. info
التفاسير:

external-link copy
8 : 10

اُولٰٓىِٕكَ مَاْوٰىهُمُ النَّارُ بِمَا كَانُوْا یَكْسِبُوْنَ ۟

ಅವರು ಮಾಡಿದ ದುಷ್ಕರ್ಮಗಳ ಫಲವಾಗಿ ಅವರ ವಾಸಸ್ಥಳವು ನರಕವಾಗಿದೆ. info
التفاسير:

external-link copy
9 : 10

اِنَّ الَّذِیْنَ اٰمَنُوْا وَعَمِلُوا الصّٰلِحٰتِ یَهْدِیْهِمْ رَبُّهُمْ بِاِیْمَانِهِمْ ۚ— تَجْرِیْ مِنْ تَحْتِهِمُ الْاَنْهٰرُ فِیْ جَنّٰتِ النَّعِیْمِ ۟

ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರ ವಿಶ್ವಾಸದ ಕಾರಣದಿಂದಾಗಿ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಸನ್ಮಾರ್ಗವನ್ನು ತೋರಿಸುವನು. ಅವರು ತಮ್ಮ ತಳಭಾಗದಿಂದ ನದಿಗಳು ಹರಿಯುವ ಸುಖ-ಸಮೃದ್ಧವಾದ ಸ್ವರ್ಗೋದ್ಯಾನಗಳಲ್ಲಿ ವಾಸಿಸುವರು. info
التفاسير:

external-link copy
10 : 10

دَعْوٰىهُمْ فِیْهَا سُبْحٰنَكَ اللّٰهُمَّ وَتَحِیَّتُهُمْ فِیْهَا سَلٰمٌ ۚ— وَاٰخِرُ دَعْوٰىهُمْ اَنِ الْحَمْدُ لِلّٰهِ رَبِّ الْعٰلَمِیْنَ ۟۠

ಅಲ್ಲಿ ಅವರ ಪ್ರಾರ್ಥನೆಯು, “ಓ ಅಲ್ಲಾಹ್! ನಿನ್ನ ಪರಿಶುದ್ಧತೆಯನ್ನು ನಾವು ಕೊಂಡಾಡುತ್ತೇವೆ” ಎಂದಾಗಿರುವುದು; ಅಲ್ಲಿ ಅವರ ಅಭಿವಂದನೆಯು, “ಅಸ್ಸಲಾಂ ಅಲೈಕುಂ” (ನಿಮ್ಮ ಮೇಲೆ ಶಾಂತಿಯಿರಲಿ) ಎಂದಾಗಿರುವುದು ಮತ್ತು ಅವರ ಕೊನೆಯ ಪ್ರಾರ್ಥನೆಯು, “ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ” ಎಂದಾಗಿರುವುದು. info
التفاسير:

external-link copy
11 : 10

وَلَوْ یُعَجِّلُ اللّٰهُ لِلنَّاسِ الشَّرَّ اسْتِعْجَالَهُمْ بِالْخَیْرِ لَقُضِیَ اِلَیْهِمْ اَجَلُهُمْ ؕ— فَنَذَرُ الَّذِیْنَ لَا یَرْجُوْنَ لِقَآءَنَا فِیْ طُغْیَانِهِمْ یَعْمَهُوْنَ ۟

ಜನರು ಬೇಡುವ ಪ್ರಯೋಜನಗಳನ್ನು ನೀಡಲು ಅಲ್ಲಾಹು ತ್ವರೆ ಮಾಡುವಂತೆ, ಅವರು ಬೇಡುವ ಶಿಕ್ಷೆಗಳನ್ನು ನೀಡಲು ಕೂಡ ತ್ವರೆ ಮಾಡುತ್ತಿದ್ದರೆ ಅವರ ಜೀವಿತಾವಧಿಯು ಎಂದೋ ಮುಗಿದುಹೋಗುತ್ತಿತ್ತು. ನಮ್ಮನ್ನು ಭೇಟಿಯಾಗುವ ವಿಷಯದಲ್ಲಿ ನಂಬಿಕೆಯಿಲ್ಲದವರನ್ನು ನಾವು ಅವರ ಅತಿರೇಕಗಳೊಂದಿಗೆ ಅಂಧವಾಗಿ ವಿಹರಿಸಲು ಬಿಟ್ಟುಬಿಡುವೆವು. info
التفاسير:

external-link copy
12 : 10

وَاِذَا مَسَّ الْاِنْسَانَ الضُّرُّ دَعَانَا لِجَنْۢبِهٖۤ اَوْ قَاعِدًا اَوْ قَآىِٕمًا ۚ— فَلَمَّا كَشَفْنَا عَنْهُ ضُرَّهٗ مَرَّ كَاَنْ لَّمْ یَدْعُنَاۤ اِلٰی ضُرٍّ مَّسَّهٗ ؕ— كَذٰلِكَ زُیِّنَ لِلْمُسْرِفِیْنَ مَا كَانُوْا یَعْمَلُوْنَ ۟

ಮನುಷ್ಯನಿಗೆ ಕಷ್ಟ ಬಂದಾಗ ಅವನು ಪಾರ್ಶ್ವಕ್ಕೆ ಸರಿದು ಮಲಗಿಕೊಂಡು, ಕುಳಿತುಕೊಂಡು ಅಥವಾ ನಿಂತುಕೊಂಡು ನಮ್ಮನ್ನು (ಪದೇ ಪದೇ) ಕರೆದು ಪ್ರಾರ್ಥಿಸುತ್ತಾನೆ. ಆದರೆ ನಾವು ಅವನ ಕಷ್ಟವನ್ನು ನಿವಾರಿಸಿದಾಗ, ತನಗೆ ಬಂದ ಕಷ್ಟವನ್ನು ನಿವಾರಿಸಲು ಅವನು ನಮ್ಮನ್ನು ಕರೆಯಲೇ ಇಲ್ಲ ಎಂಬಂತೆ ಸಾಗಿಬಿಡುತ್ತಾನೆ. ಈ ರೀತಿ ಅತಿರೇಕಿಗಳಿಗೆ ಅವರು ಮಾಡುವ ಕರ್ಮಗಳನ್ನು ಅಲಂಕರಿಸಿಕೊಡಲಾಗಿದೆ. info
التفاسير:

external-link copy
13 : 10

وَلَقَدْ اَهْلَكْنَا الْقُرُوْنَ مِنْ قَبْلِكُمْ لَمَّا ظَلَمُوْا ۙ— وَجَآءَتْهُمْ رُسُلُهُمْ بِالْبَیِّنٰتِ وَمَا كَانُوْا لِیُؤْمِنُوْا ؕ— كَذٰلِكَ نَجْزِی الْقَوْمَ الْمُجْرِمِیْنَ ۟

ನಿಶ್ಚಯವಾಗಿಯೂ ನಿಮಗಿಂತ ಮೊದಲಿನ ಅನೇಕ ತಲೆಮಾರುಗಳು ಅಕ್ರಮವೆಸಗಿದಾಗ ನಾವು ಅವರನ್ನು ನಾಶ ಮಾಡಿದೆವು. ನಮ್ಮ ಸಂದೇಶವಾಹಕರು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆದರೂ ಅವರು ವಿಶ್ವಾಸವಿಡಲಿಲ್ಲ. ಅಪರಾಧಿಗಳಾದ ಜನರಿಗೆ ಈ ರೀತಿ ನಾವು ಪ್ರತಿಫಲವನ್ನು ನೀಡುವೆವು. info
التفاسير:

external-link copy
14 : 10

ثُمَّ جَعَلْنٰكُمْ خَلٰٓىِٕفَ فِی الْاَرْضِ مِنْ بَعْدِهِمْ لِنَنْظُرَ كَیْفَ تَعْمَلُوْنَ ۟

ನಂತರ ಅವರ ಬಳಿಕ ನಾವು ನಿಮ್ಮನ್ನು ಭೂಮಿಯಲ್ಲಿ ಉತ್ತರಾಧಿಕಾರಿಗಳನ್ನಾಗಿ ಮಾಡಿದೆವು. ನೀವು ಹೇಗೆ ಕರ್ಮವೆಸಗುತ್ತೀರಿ ಎಂದು ನೋಡಲು. info
التفاسير: