ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
51 : 28

وَلَقَدْ وَصَّلْنَا لَهُمُ الْقَوْلَ لَعَلَّهُمْ یَتَذَكَّرُوْنَ ۟ؕ

ನಿಶ್ಚಯವಾಗಿಯು ಅವರು ಉಪದೇಶ ಸ್ವೀಕರಿಸಲೆಂದು ಅವರಿಗೆ ನಾವು ನಮ್ಮ ಸಂದೇಶವನ್ನು ನಿರಂತರವಾಗಿ ಕಳುಹಿಸಿದೆವು. info
التفاسير:

external-link copy
52 : 28

اَلَّذِیْنَ اٰتَیْنٰهُمُ الْكِتٰبَ مِنْ قَبْلِهٖ هُمْ بِهٖ یُؤْمِنُوْنَ ۟

ಇದಕ್ಕೆ ಮೊದಲು ನಾವು ಯಾರಿಗೆ ಗ್ರಂಥ ನೀಡಿದ್ದೇವೊ ಅವರು ಅದರಲ್ಲಿ ವಿಶ್ವಾಸವಿಡುತ್ತಾರೆ. info
التفاسير:

external-link copy
53 : 28

وَاِذَا یُتْلٰی عَلَیْهِمْ قَالُوْۤا اٰمَنَّا بِهٖۤ اِنَّهُ الْحَقُّ مِنْ رَّبِّنَاۤ اِنَّا كُنَّا مِنْ قَبْلِهٖ مُسْلِمِیْنَ ۟

ಮತ್ತು ಅವರಿಗೆ ಅದನ್ನು ಓದಿ ಹೇಳಲಾದಾಗ ಅವರು ಹೇಳುತ್ತಾರೆ: ನಾವು ಇದರಲ್ಲಿ ವಿಶ್ವಾಸವಿರಿಸಿದ್ದೇವೆ. ಇದು ನಮ್ಮ ಪ್ರಭುವಿನ ಕಡೆಯಿಂದಿರುವ ಸತ್ಯವಾಗಿದೆ. ನಿಶ್ಚಯವಾಗಿಯು ನಾವು ಇದಕ್ಕೆ ಮೊದಲೇ ವಿಧೇಯರಾಗಿದ್ದೆವು. info
التفاسير:

external-link copy
54 : 28

اُولٰٓىِٕكَ یُؤْتَوْنَ اَجْرَهُمْ مَّرَّتَیْنِ بِمَا صَبَرُوْا وَیَدْرَءُوْنَ بِالْحَسَنَةِ السَّیِّئَةَ وَمِمَّا رَزَقْنٰهُمْ یُنْفِقُوْنَ ۟

ಅವರು ಸಹನೆವಹಿಸಿರುವ ನಿಮಿತ್ತ ಎರಡು ಬಾರಿ ಪ್ರತಿಫಲವನ್ನು ನೀಡಲಾಗುವರು ಅವರು ಒಳಿತಿನಿಂದ ಕೆಡುಕನ್ನು ತಡೆಯುತ್ತಾರೆ. ಹಾಗೂ ನಾವು ಅವರಿಗೆ ನೀಡಿರುವುದರಿಂದ ಖರ್ಚು ಮಾಡುತ್ತಾರೆ. info
التفاسير:

external-link copy
55 : 28

وَاِذَا سَمِعُوا اللَّغْوَ اَعْرَضُوْا عَنْهُ وَقَالُوْا لَنَاۤ اَعْمَالُنَا وَلَكُمْ اَعْمَالُكُمْ ؗ— سَلٰمٌ عَلَیْكُمْ ؗ— لَا نَبْتَغِی الْجٰهِلِیْنَ ۟

ಅವರು ವ್ಯರ್ಥ ಮಾತು ಕೇಳಿದಾಗ ಅದರಿಂದ ವಿಮುಖರಾಗುತ್ತಾರೆ ಹಾಗೂ ಹೇಳುತ್ತಾರೆ ನಮ್ಮ ಕರ್ಮಗಳು ನಮಗಿರುವುವು ನಿಮ್ಮ ಕರ್ಮಗಳು ನಿಮಗಿರುವುವು. ನಿಮ್ಮ ಮೇಲೆ ಶಾಂತಿ ಇರಲಿ. ನಾವು ಅವಿವೇಕಿಗಳೊಂದಿಗೆ ತರ್ಕಿಸಲು (ಜಗಳವಾಡಲು) ಬಯಸುವುದಿಲ್ಲ. info
التفاسير:

external-link copy
56 : 28

اِنَّكَ لَا تَهْدِیْ مَنْ اَحْبَبْتَ وَلٰكِنَّ اللّٰهَ یَهْدِیْ مَنْ یَّشَآءُ ۚ— وَهُوَ اَعْلَمُ بِالْمُهْتَدِیْنَ ۟

ನೀವಿಚ್ಛಿಸುವವರನ್ನು ಸನ್ಮಾರ್ಗದಲ್ಲಿ ಮುನ್ನಡೆಸಲಾರಿರಿ ಆದರೆ ಅಲ್ಲಾಹನು ತಾನಿಚ್ಛಿದವರನ್ನು ಸನ್ಮಾರ್ಗದಲ್ಲಿ ಮುನ್ನೆಡೆಸುತ್ತಾನೆ. ಮತ್ತು ಸನ್ಮಾರ್ಗ ಪಡೆಯುವವರ ಕುರಿತು ಅವನು ಚೆನ್ನಾಗಿ ಬಲ್ಲನು. info
التفاسير:

external-link copy
57 : 28

وَقَالُوْۤا اِنْ نَّتَّبِعِ الْهُدٰی مَعَكَ نُتَخَطَّفْ مِنْ اَرْضِنَا ؕ— اَوَلَمْ نُمَكِّنْ لَّهُمْ حَرَمًا اٰمِنًا یُّجْبٰۤی اِلَیْهِ ثَمَرٰتُ كُلِّ شَیْءٍ رِّزْقًا مِّنْ لَّدُنَّا وَلٰكِنَّ اَكْثَرَهُمْ لَا یَعْلَمُوْنَ ۟

ಮಕ್ಕಾದ ಬಹುದೇವರಾಧಕರು ಹೇಳುತ್ತಾರೆ: ನಾವು ನಿಮ್ಮೊಂದಿಗೆ ಸನ್ಮಾರ್ಗವನ್ನು ಅನುಸರಿಸಿದರೆ ನಾವು ನಮ್ಮ ನಾಡಿನಿಂದ ಅಪಹರಿಸಲ್ಪಡುತ್ತೇವೆ. ಏನು ಎಲ್ಲಾ ವಿಧದ ಹಣ್ಣು-ಹಂಪಲುಗಳು ನಮ್ಮ ಕಡೆಯಿಂದ ಜೀವನಾಧಾರವಾಗಿ ಹರಿದು ಬರುತ್ತಿರುವ ಒಂದು ನಿರ್ಭಯ ತಾಣವಾದ ಹರಮ್‌ಅನ್ನು ನಾವು ಅವರಿಗೆ ಕರುಣಿಸಲಿಲ್ಲವೇ? ಆದರೆ ಅವರಲ್ಲಿ ಹೆಚ್ಚಿನವರು ಅರಿಯುವುದಿಲ್ಲ. info
التفاسير:

external-link copy
58 : 28

وَكَمْ اَهْلَكْنَا مِنْ قَرْیَةٍ بَطِرَتْ مَعِیْشَتَهَا ۚ— فَتِلْكَ مَسٰكِنُهُمْ لَمْ تُسْكَنْ مِّنْ بَعْدِهِمْ اِلَّا قَلِیْلًا ؕ— وَكُنَّا نَحْنُ الْوٰرِثِیْنَ ۟

ತಮ್ಮ ಸುಖಜೀವನಾಧಾರದಲ್ಲಿ ದುರಭಿಮಾನ ಪಟ್ಟುಕೊಳ್ಳುತ್ತಿದ್ದಂತಹ ಅದೆಷ್ಟೋ ನಾಡುಗಳನ್ನು ನಾವು ನಾಶಗೊಳಿಸಿದ್ದೇವೆ. ಇವು ಅವರ ಪಾಳುಬಿದ್ದಿರುವ ವಸತಿಗಳು; ಅವುಗಳಲ್ಲಿ ಅವರ ನಂತರ ಅತ್ಯಲ್ಪವಾಗಿಯೇ ವಾಸಿಸಲಾಯಿತು. ಕೊನೆಗೆ ನಾವೇ ವಾರಿಸುದಾರರಾದೆವು. info
التفاسير:

external-link copy
59 : 28

وَمَا كَانَ رَبُّكَ مُهْلِكَ الْقُرٰی حَتّٰی یَبْعَثَ فِیْۤ اُمِّهَا رَسُوْلًا یَّتْلُوْا عَلَیْهِمْ اٰیٰتِنَا ۚ— وَمَا كُنَّا مُهْلِكِی الْقُرٰۤی اِلَّا وَاَهْلُهَا ظٰلِمُوْنَ ۟

ನಿಮ್ಮ ಪ್ರಭುವು ನಾಡುಗಳ ಕೇಂದ್ರದಲ್ಲಿ ಅವರಿಗೆ ನಮ್ಮ ಸೂಕ್ತಿಗಳನ್ನು ಓದಿ ಹೇಳುವ ಓರ್ವ ಸಂದೇಶವಾಹಕನನ್ನು ಕಳುಹಿಸುವವರೆಗೆ ನಾಡುಗಳನ್ನು ನಾಶಪಡಿಸುವವನಲ್ಲ ಮತ್ತು ನಾವು ಅಕ್ರಮಿ ನಾಡುಗಳನ್ನೇ ನಾಶಗೊಳಿಸುತ್ತೇವೆ. info
التفاسير: