ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
29 : 28

فَلَمَّا قَضٰی مُوْسَی الْاَجَلَ وَسَارَ بِاَهْلِهٖۤ اٰنَسَ مِنْ جَانِبِ الطُّوْرِ نَارًا ۚ— قَالَ لِاَهْلِهِ امْكُثُوْۤا اِنِّیْۤ اٰنَسْتُ نَارًا لَّعَلِّیْۤ اٰتِیْكُمْ مِّنْهَا بِخَبَرٍ اَوْ جَذْوَةٍ مِّنَ النَّارِ لَعَلَّكُمْ تَصْطَلُوْنَ ۟

ಪೈಗಂಬರ್ ಮೂಸಾರವರು ನಿರ್ಧಿಷ್ಟ ಅವಧಿಯನ್ನು ಪೂರ್ತಿಗೊಳಿಸಿ ತನ್ನ ಮನೆಯವರನ್ನು ಕರೆದುಕೊಂಡು ಹೊರಟಾಗ ತೂರ್ ಪರ್ವತದ ಒಂದು ಕಡೆಯಿಂದ ಬೆಂಕಿಯನ್ನು ಕಂಡರು. ಅವರು ತನ್ನ ಪತ್ನಿಗೆ ಹೇಳಿದರು: ನಿಲ್ಲಿರಿ, ನಾನೊಂದು ಬೆಂಕಿಯನ್ನು ಕಂಡಿರುವೆನು. ಬಹುಷಃ ನಾನು ಅಲ್ಲಿಂದ ಏನಾದರೂ ಸುದ್ದಿಯನ್ನು ತರುವೆ ಇಲ್ಲವೇ ನಿಮಗೆ ಚಳಿ ಕಾಯಿಸಿಕೊಳ್ಳಲು ಬೆಂಕಿಯ ಕೆಂಡವೊAದನ್ನು ತರುವೆನು. info
التفاسير:

external-link copy
30 : 28

فَلَمَّاۤ اَتٰىهَا نُوْدِیَ مِنْ شَاطِئِ الْوَادِ الْاَیْمَنِ فِی الْبُقْعَةِ الْمُبٰرَكَةِ مِنَ الشَّجَرَةِ اَنْ یّٰمُوْسٰۤی اِنِّیْۤ اَنَا اللّٰهُ رَبُّ الْعٰلَمِیْنَ ۟ۙ

. ಹಾಗೆಯೇ ಅವರು ಅಲ್ಲಿ ತಲುಪಿದಾಗ ಆ ಅನುಗ್ರಹೀತ ಭೂಮಿಯ ಬಲಭಾಗದ ಮರದಿಂದ “ಓ ಮೂಸಾ” ನಾನು ಸರ್ವಲೋಕಗಳ ಪ್ರಭುವಾದ ಅಲ್ಲಾಹನಾಗಿದ್ದೇನೆ ಎಂದು ಕೂಗಿ ಕರೆಯಲಾಯಿತು. info
التفاسير:

external-link copy
31 : 28

وَاَنْ اَلْقِ عَصَاكَ ؕ— فَلَمَّا رَاٰهَا تَهْتَزُّ كَاَنَّهَا جَآنٌّ وَّلّٰی مُدْبِرًا وَّلَمْ یُعَقِّبْ ؕ— یٰمُوْسٰۤی اَقْبِلْ وَلَا تَخَفْ ۫— اِنَّكَ مِنَ الْاٰمِنِیْنَ ۟

ಮತ್ತು ನೀವು ನಿಮ್ಮ ಲಾಠಿಯನ್ನು ಕೆಳಗೆ ಹಾಕಿ ಬಿಡಿ ಎಂದು ಹೇಳಲಾಯಿತು. ಅನಂತರ ಅವರು ಅದನ್ನು ಸರ್ಪವೆಂಬAತೆ ತೆವಳುತ್ತಿರುವುದಾಗಿ ಕಂಡಾಗ ಅವರು ಬೆನ್ನು ತಿರುಗಿಸಿ ಓಟ ಕಿತ್ತರು ಮತ್ತು ತಿರುಗಿ ನೋಡಲಿಲ್ಲ. ನಾವು ಹೇಳಿದೆವು: ಓ ಮೂಸಾ, ಮುಂದೆ ಬನ್ನಿ ಮತ್ತು ಭಯಪಡಬೇಡಿ. ನಿಶ್ಚಯವಾಗಿಯು ನೀವು ಎಲ್ಲಾ ರೀತಿಯಿಂದಲೂ ನಿರ್ಭಯರಾಗಿರುವಿರಿ. info
التفاسير:

external-link copy
32 : 28

اُسْلُكْ یَدَكَ فِیْ جَیْبِكَ تَخْرُجْ بَیْضَآءَ مِنْ غَیْرِ سُوْٓءٍ ؗ— وَّاضْمُمْ اِلَیْكَ جَنَاحَكَ مِنَ الرَّهْبِ فَذٰنِكَ بُرْهَانٰنِ مِنْ رَّبِّكَ اِلٰی فِرْعَوْنَ وَمَلَاۡىِٕهٖ ؕ— اِنَّهُمْ كَانُوْا قَوْمًا فٰسِقِیْنَ ۟

ನಿಮ್ಮ ಕೈಯನ್ನು ನೀವು ಎದೆಪಟ್ಟಿಯೊಳಗೆ ಹಾಕಿರಿ. ಅದು ಯಾವುದೇ ರೋಗವಿಲ್ಲದೆ ಬೆಳ್ಳಗೆ ಮಿಂಚುತ್ತಿರುವ ಸ್ಥಿತಿಯಲ್ಲಿ ಹೊರಬರುವುದು ಮತ್ತು ಭಯದಿಂದ (ಮುಕ್ತಿ ಹೊಂದಲು) ನಿಮ್ಮ ಬಾಹುಗಳನ್ನು ಬಿಗಿದುಕೊಳ್ಳಿರಿ. ನಿಮ್ಮ ಪ್ರಭುವಿನಿಂದ ಫಿರ್‌ಔನ್ ಮತ್ತು ಅವನ ಆಸ್ಥಾನದವರ ಮುಂದಿಡಲಿಕ್ಕಾಗಿ ಇವೆರಡೂ ನಿದರ್ಶನಗಳಾಗಿವೆ. ನಿಜವಾಗಿಯು ಅವರು ಆಜ್ಞೋಲ್ಲಂಘಕ ಜನರಾಗಿದ್ದಾರೆ. info
التفاسير:

external-link copy
33 : 28

قَالَ رَبِّ اِنِّیْ قَتَلْتُ مِنْهُمْ نَفْسًا فَاَخَافُ اَنْ یَّقْتُلُوْنِ ۟

ಮೂಸಾ(ಅ) ಹೇಳಿದರು: ನನ್ನ ಪ್ರಭುವೇ, ನಾನು ಅವರ ಪೈಕಿಯ ಒಬ್ಬ ವ್ಯಕ್ತಿಯನ್ನು ಕೊಂದಿರುವೆನು. ಈಗ ಅವರು ನನ್ನನ್ನು ಕೊಂದುಬಿಡಬಹುದೆAದು ನಾನು ಭಯಪಡುತ್ತೇನೆ. info
التفاسير:

external-link copy
34 : 28

وَاَخِیْ هٰرُوْنُ هُوَ اَفْصَحُ مِنِّیْ لِسَانًا فَاَرْسِلْهُ مَعِیَ رِدْاً یُّصَدِّقُنِیْۤ ؗ— اِنِّیْۤ اَخَافُ اَنْ یُّكَذِّبُوْنِ ۟

ನನ್ನ ಸಹೋದರ ಹಾರೂನ್ ನನಗಿಂತಲೂ ನಿರರ್ಗಳವಾಗಿ ಮಾತನಾಡುವವನಾಗಿದ್ದಾನೆ. ಅದ್ದರಿಂದ ಅವನನ್ನು ನನ್ನ ಜೊತೆ ನನ್ನನ್ನು ಸಮರ್ಥಿಸುವಂತಹ ಒಬ್ಬ ಸಹಾಯಕನನ್ನಾಗಿ ಮಾಡಿ ಕಳುಹಿಸು. ನಿಶ್ಚಯವಾಗಿಯು ನನ್ನನ್ನು ಅವರು ಸುಳ್ಳಾಗಿಸುವರೆಂದು ನಾನು ಭಯಪಡುತ್ತೇನೆ. info
التفاسير:

external-link copy
35 : 28

قَالَ سَنَشُدُّ عَضُدَكَ بِاَخِیْكَ وَنَجْعَلُ لَكُمَا سُلْطٰنًا فَلَا یَصِلُوْنَ اِلَیْكُمَا ۚۛ— بِاٰیٰتِنَا ۚۛ— اَنْتُمَا وَمَنِ اتَّبَعَكُمَا الْغٰلِبُوْنَ ۟

ಅಲ್ಲಾಹನು ಹೇಳಿದನು: ನಾವು ನಿನ್ನ ಸಹೋದರನ ಮೂಲಕ ನಿನ್ನ ಬಾಹುವನ್ನು ಬಲಪಡಿಸಲಿದ್ದೇವೆ ಮತ್ತು ನಿಮಗಿಬ್ಬರಿಗೂ ವಿಜಯವನ್ನು ಕರುಣಿಸುವೆವು. ನಮ್ಮ ದೃಷ್ಟಾಂತಗಳ ನಿಮಿತ್ತ ಫಿರ್‌ಔನಿಯರು ನಿಮ್ಮೆಡೆಗೆ ತಲುಪಲಾರರು. ನೀವಿಬ್ಬರೂ ಮತ್ತು ನಿಮ್ಮನ್ನು ಅನುಸರಿಸುವವರೇ ಮೇಲುಗೈ ಸಾಧಿಸಲಿದ್ದಾರೆ. info
التفاسير: