ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
78 : 28

قَالَ اِنَّمَاۤ اُوْتِیْتُهٗ عَلٰی عِلْمٍ عِنْدِیْ ؕ— اَوَلَمْ یَعْلَمْ اَنَّ اللّٰهَ قَدْ اَهْلَكَ مِنْ قَبْلِهٖ مِنَ الْقُرُوْنِ مَنْ هُوَ اَشَدُّ مِنْهُ قُوَّةً وَّاَكْثَرُ جَمْعًا ؕ— وَلَا یُسْـَٔلُ عَنْ ذُنُوْبِهِمُ الْمُجْرِمُوْنَ ۟

ಕಾರೂನ್ ಹೇಳಿದನು: ಇವೆಲ್ಲವೂ ನನ್ನ ಬಳಿ ಇರುವ ಜ್ಞಾನದ ಆಧಾರದಲ್ಲೇ ನನಗೆ ನೀಡಲಾಗಿದೆ. ಅವನ ಮೊದಲು ಅವನಿಗಿಂತ ಹೆಚ್ಚು ಶಕ್ತಿಸಾಮರ್ಥ್ಯವುಳ್ಳ ವರೂ, ಜನ ಬಲವುಳ್ಳವರಾಗಿದ್ದಂತಹ ಅದೆಷ್ಟೋ ಜನಾಂಗಗಳನ್ನು ಅಲ್ಲಾಹನು ನಾಶ ಮಾಡಿರುವುದು ಇವನಿಗೆ ತಿಳಿದಿಲ್ಲವೇ? ಅಪರಾಧಿಗಳನ್ನು (ಶಿಕ್ಷಿಸಲು) ಅವರ ಪಾಪಗಳ ಕುರಿತು ವಿಚಾರಿಸಲಾಗುವುದಿಲ್ಲ. info
التفاسير:

external-link copy
79 : 28

فَخَرَجَ عَلٰی قَوْمِهٖ فِیْ زِیْنَتِهٖ ؕ— قَالَ الَّذِیْنَ یُرِیْدُوْنَ الْحَیٰوةَ الدُّنْیَا یٰلَیْتَ لَنَا مِثْلَ مَاۤ اُوْتِیَ قَارُوْنُ ۙ— اِنَّهٗ لَذُوْ حَظٍّ عَظِیْمٍ ۟

ಹಾಗೆಯೇ ಕಾರೂನ್ ತನ್ನ ಆಢಂಬರದೊAದಿಗೆ ತನ್ನ ಸಮೂಹದ ಮುಂದಿನಿAದ ಹೊರಟಿದನು. ಆಗ ಐಹಿಕ ಜೀವನವನ್ನು ಬಯಸುವವರು ಹೇಳಿದರು: ಕಾರೂನನಿಗೆ ನೀಡಲಾದುದು ನಮಗೂ ಸಿಗುತ್ತಿದ್ದರೆ! ನಿಜವಾಗಿಯು ಅವನಂತು ಮಹಾ ಸೌಭಾಗ್ಯವಂತನಾಗಿದ್ದಾನೆ. info
التفاسير:

external-link copy
80 : 28

وَقَالَ الَّذِیْنَ اُوْتُوا الْعِلْمَ وَیْلَكُمْ ثَوَابُ اللّٰهِ خَیْرٌ لِّمَنْ اٰمَنَ وَعَمِلَ صَالِحًا ۚ— وَلَا یُلَقّٰىهَاۤ اِلَّا الصّٰبِرُوْنَ ۟

ಜ್ಞಾನವಿದ್ದವರು ಹೀಗೆ ಹೇಳದಿರು: ನಿಮ್ಮ ನಾಶವೇ, ಸತ್ಯವಿಶ್ವಾಸವಿರಿಸಿರಿ ಮತ್ತು ಸತ್ಕರ್ಮಗಳನ್ನು ಕೈಗೊಂಡವರ ಪಾಲಿಗೆ ಅಲ್ಲಾಹನ ಪುಣ್ಯಫಲವೇ ಉತ್ತಮ ಇದು ಸಹನೆವಹಿಸಿದವರಿಗೇ ಲಭಿಸುತ್ತದೆ. info
التفاسير:

external-link copy
81 : 28

فَخَسَفْنَا بِهٖ وَبِدَارِهِ الْاَرْضَ ۫— فَمَا كَانَ لَهٗ مِنْ فِئَةٍ یَّنْصُرُوْنَهٗ مِنْ دُوْنِ اللّٰهِ ؗۗ— وَمَا كَانَ مِنَ الْمُنْتَصِرِیْنَ ۟

ಕೊನೆಗೆ ನಾವು ಅವನನ್ನು ಅವನ ಅರಮನೆಯನ್ನು ಭೂಮಿಯೊಳಗೆ ಹುದುಗಿಸಿಬಿಟ್ಟೆವು ಅಲ್ಲಾಹನ ಹೊರತು ಅವನ ಸಹಾಯಕ್ಕಾಗಿ ಯಾವುದೇ ಕೂಟವು ಇರಲಿಲ್ಲ. ಮಾತ್ರವಲ್ಲ ಅವನಿಗೆ ಸ್ವಯಂ ಪ್ರತೀಕಾರ ಹೊಂದಲೂ ಸಾಧ್ಯವಾಗಲಿಲ್ಲ. info
التفاسير:

external-link copy
82 : 28

وَاَصْبَحَ الَّذِیْنَ تَمَنَّوْا مَكَانَهٗ بِالْاَمْسِ یَقُوْلُوْنَ وَیْكَاَنَّ اللّٰهَ یَبْسُطُ الرِّزْقَ لِمَنْ یَّشَآءُ مِنْ عِبَادِهٖ وَیَقْدِرُ ۚ— لَوْلَاۤ اَنْ مَّنَّ اللّٰهُ عَلَیْنَا لَخَسَفَ بِنَا ؕ— وَیْكَاَنَّهٗ لَا یُفْلِحُ الْكٰفِرُوْنَ ۟۠

ನಿನ್ನೆಯವರೆಗೆ ಅವನ ಸ್ಥಾನಮಾನಕ್ಕೆ ಹಂಬಲಿಸುತ್ತಿದ್ದವರು ಹೇಳತೊಡಗಿದರು: ಅಲ್ಲಾಹನೇ ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ ಹಾಗೂ ಸೀಮಿತಗೊಳಿಸುತ್ತಾನೆ. ಅಲ್ಲಾಹನು ನಮ್ಮ ಮೇಲೆ ಕೃಪೆತೋರದಿರುತ್ತಿದ್ದರೆ ನಮ್ಮನ್ನು ಸಹ ಹುದುಗಿಸಿಬಿಡುತ್ತಿದ್ದನು. ಅವಿಶ್ವಾಸಿಗಳು ಎಂದೂ ಯಶಸ್ಸು ಪಡೆಯಲಾರರು. info
التفاسير:

external-link copy
83 : 28

تِلْكَ الدَّارُ الْاٰخِرَةُ نَجْعَلُهَا لِلَّذِیْنَ لَا یُرِیْدُوْنَ عُلُوًّا فِی الْاَرْضِ وَلَا فَسَادًا ؕ— وَالْعَاقِبَةُ لِلْمُتَّقِیْنَ ۟

ನಾವು ಪರಲೋಕದ ಭವನವನ್ನು ಭೂಮಿಯಲ್ಲಿ ಯಾವುದೇ ಹಿರಿಮೆಯನ್ನಾಗಲೀ, ಕ್ಷೆÆÃಭೆಯನ್ನಾಗಲೀ ಬಯಸದಂತಹವರಿಗೇ ನೀಡುವೆವು. ಮತ್ತು ಭಯಭಕ್ತಿಯುಳ್ಳವರಿಗೇ ಉತ್ತಮ ಪರಿಣಾಮವಿದೆ. info
التفاسير:

external-link copy
84 : 28

مَنْ جَآءَ بِالْحَسَنَةِ فَلَهٗ خَیْرٌ مِّنْهَا ۚ— وَمَنْ جَآءَ بِالسَّیِّئَةِ فَلَا یُجْزَی الَّذِیْنَ عَمِلُوا السَّیِّاٰتِ اِلَّا مَا كَانُوْا یَعْمَلُوْنَ ۟

ಯಾರು ಒಳಿತನ್ನು ತರುತ್ತಾನೋ ಅವನಿಗೆ ಅದಕ್ಕಿಂತಲೂ ಅತ್ಯುತ್ತಮವಾದು ದ್ದಿದೆ. ಮತ್ತು ಯಾರು ಕೆಡುಕನ್ನು ತರುತ್ತಾನೋ ಕೆಡುಕುಗಳನ್ನು ಮಾಡುವವರಿಗೆ ತಾವು ಮಾಡುತ್ತಿದ್ದುದರ ಪ್ರತಿಫಲವನ್ನೇ ನೀಡಲಾಗುವುದು. info
التفاسير: