ការបកប្រែអត្ថន័យគួរអាន - ការបកប្រែជាភាសាកាណាដា - ប៉ាស៊ីរ ម៉ៃសូរី

លេខ​ទំព័រ:close

external-link copy
14 : 28

وَلَمَّا بَلَغَ اَشُدَّهٗ وَاسْتَوٰۤی اٰتَیْنٰهُ حُكْمًا وَّعِلْمًا ؕ— وَكَذٰلِكَ نَجْزِی الْمُحْسِنِیْنَ ۟

ಮೂಸ ತನ್ನ ಯೌವನಕ್ಕೆ ತಲುಪಿದಾಗ ಮತ್ತು ಸಂಪೂರ್ಣ ಶಕ್ತರಾದಾಗ ನಾವು ಅವರಿಗೆ ಯುಕ್ತಿ, ಜ್ಞಾನವನ್ನು ದಯಪಾಲಿಸಿದೆವು ಮತ್ತು ನಾವು ಸಜ್ಜನರಿಗೆ ಹೀಗೆ ಪ್ರತಿಫಲ ನೀಡುತ್ತೇವೆ. info
التفاسير:

external-link copy
15 : 28

وَدَخَلَ الْمَدِیْنَةَ عَلٰی حِیْنِ غَفْلَةٍ مِّنْ اَهْلِهَا فَوَجَدَ فِیْهَا رَجُلَیْنِ یَقْتَتِلٰنِ ؗ— هٰذَا مِنْ شِیْعَتِهٖ وَهٰذَا مِنْ عَدُوِّهٖ ۚ— فَاسْتَغَاثَهُ الَّذِیْ مِنْ شِیْعَتِهٖ عَلَی الَّذِیْ مِنْ عَدُوِّهٖ ۙ— فَوَكَزَهٗ مُوْسٰی فَقَضٰی عَلَیْهِ ؗ— قَالَ هٰذَا مِنْ عَمَلِ الشَّیْطٰنِ ؕ— اِنَّهٗ عَدُوٌّ مُّضِلٌّ مُّبِیْنٌ ۟

ಒಮ್ಮೆ ಪಟ್ಟಣದ ನಿವಾಸಿಗಳು ಅಲಕ್ಷö್ಯತೆಯಲ್ಲಿದ್ದಂತಹ ಸಂದರ್ಭದಲ್ಲಿ ಮೂಸಾರವರು ಪೇಟೆಯಲ್ಲಿ ಪ್ರವೇಶಿದರು. ಆಗ ಅವರು ಅಲ್ಲಿ ಇಬ್ಬರು. ವ್ಯಕ್ತಿಗಳು ಪರಸ್ಪರ ಹೊಡೆದಾಡುತ್ತಿರುವುದಾಗಿ ಕಂಡರು. ಒಬ್ಬನು ಅವರ ಜನಾಂಗದವನಾಗಿದ್ದರೆ ಮತ್ತೊಬ್ಬನು ಅವರ ಶತ್ರು ಜನಾಂಗಕ್ಕೆ ಸೇರಿದವನಾಗಿದ್ದನು ಅವರ ಜನಾಂಗದಿAದ ಇರುವವನು ಅವನ ಶತ್ರುಗಳಿಂದ ಇರುವವನ ವಿರುದ್ಧ ಅವರಲ್ಲಿ ಸಹಾಯ ಬೇಡಿದನು. ಆಗ ಮೂಸಾ ಅವನಿಗೆ ಮುಷ್ಠಿಯಿಂದ ಗುದ್ದಿದರು. ಅದರಿಂದ ಅವನು ಪ್ರಾಣ ಬಿಟ್ಟನು. ಆಗ ಮೂಸ ಹೇಳಿದರು: ಇದಂತು ಶೈತಾನಿನ ಕೃತ್ಯವಾಗಿದೆ. ನಿಜವಾಗಿಯೂ ಶೈತಾನನು ಶತ್ರು ಹಾಗೂ ಪ್ರತ್ಯಕ್ಷವಾಗಿ ದಾರಿಗೆಡಿಸುವವನಾಗಿದ್ದಾನೆ. info
التفاسير:

external-link copy
16 : 28

قَالَ رَبِّ اِنِّیْ ظَلَمْتُ نَفْسِیْ فَاغْفِرْ لِیْ فَغَفَرَ لَهٗ ؕ— اِنَّهٗ هُوَ الْغَفُوْرُ الرَّحِیْمُ ۟

ಅನಂತರ ಅವರು ಪ್ರಾರ್ಥಿಸ ತೊಡಗಿದರು: ಓ ನನ್ನ ಪ್ರಭುವೇ, ನಾನು ನನ್ನ ಮೇಲೆ ಅಕ್ರಮವೆಸಗಿದ್ದೇನೆ. ಆದ್ದರಿಂದ ನೀನು ನನ್ನನ್ನು ಕ್ಷಮಿಸು. ಆಗ ಅಲ್ಲಾಹನು ಅವರಿಗೆ ಕ್ಷಮಿಸಿದನು.ನಿಶ್ಚಯವಾಗಿಯು ಅವನು ಕ್ಷಮಾಶೀಲನು, ಕರುಣಾನಿಧಿಯು ಆಗಿದ್ದಾನೆ. info
التفاسير:

external-link copy
17 : 28

قَالَ رَبِّ بِمَاۤ اَنْعَمْتَ عَلَیَّ فَلَنْ اَكُوْنَ ظَهِیْرًا لِّلْمُجْرِمِیْنَ ۟

ಅವರು ಹೇಳಿದರು: ನನ್ನ ಪ್ರಭುವೇ, ನೀನು ನನ್ನ ಮೇಲೆ ಅನುಗ್ರಹಿಸಿರುವೆ. ಆದ್ದರಿಂದ ಇನ್ನು ಮೇಲೆ ನಾನೆಂದಿಗೂ ಅಪರಾಧಿಗಳಿಗೆ ಸಹಾಯಕನಾಗಲಾರೆ. info
التفاسير:

external-link copy
18 : 28

فَاَصْبَحَ فِی الْمَدِیْنَةِ خَآىِٕفًا یَّتَرَقَّبُ فَاِذَا الَّذِی اسْتَنْصَرَهٗ بِالْاَمْسِ یَسْتَصْرِخُهٗ ؕ— قَالَ لَهٗ مُوْسٰۤی اِنَّكَ لَغَوِیٌّ مُّبِیْنٌ ۟

ಅವರು ಮರುದಿನ ಬೆಳಗ್ಗೆಯೇ ಭಯಭೀತರಾಗಿರುವ ಸ್ಥೀತಿಯಲ್ಲಿ ಸುದ್ದಿ ತಿಳಿಯಲು ಪಟ್ಟಣಕ್ಕೆ ಹೋದರು. ಅಷ್ಟರಲ್ಲಿ ನಿನ್ನೆ ದಿನ ಅವರಲ್ಲಿ ಸಹಾಯ ಬೇಡಿದ ಅದೇ ವ್ಯಕ್ತಿಯು ಅವರನ್ನು ಸಹಾಯಕ್ಕೆ ಮೊರೆಯಿಡುತ್ತಿದ್ದಾನೆ! ಆಗ ಮೂಸಾ ಅವನಿಗೆ ಹೇಳಿದರು: ನೀನಂತು ಸುಸ್ಪಷ್ಟ ದಾರಿಗೆಟ್ಟವನಾಗಿರುವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. info
التفاسير:

external-link copy
19 : 28

فَلَمَّاۤ اَنْ اَرَادَ اَنْ یَّبْطِشَ بِالَّذِیْ هُوَ عَدُوٌّ لَّهُمَا ۙ— قَالَ یٰمُوْسٰۤی اَتُرِیْدُ اَنْ تَقْتُلَنِیْ كَمَا قَتَلْتَ نَفْسًا بِالْاَمْسِ ۗ— اِنْ تُرِیْدُ اِلَّاۤ اَنْ تَكُوْنَ جَبَّارًا فِی الْاَرْضِ وَمَا تُرِیْدُ اَنْ تَكُوْنَ مِنَ الْمُصْلِحِیْنَ ۟

ಅನಂತರ ಅವರು ತಮಗಿಬ್ಬರಿಗೂ ಶತ್ರುವಾದವನ ಮೇಲೆ ಕೈ ಮಾಡಲು ಬಯಸಿದಾಗ ಮೊರೆಯಿಟ್ಟವನು ಹೇಳಿದನು: ಓ ಮೂಸಾ, ನಿನ್ನೆ ನೀವು ಒಬ್ಬ ವ್ಯಕ್ತಿಯನ್ನು ಕೊಂದ ಹಾಗೆಯೇ ನನ್ನನ್ನೂ ಕೊಲ್ಲಬಯಸುತ್ತಿರುವಿರಾ? ನೀವು ಭೂಮಿಯಲ್ಲಿ ವಿದ್ವಂಸಕರಾಗಿರಲೆAದು ಬಯಸುತ್ತಿರುವಿರಿ. ಮತ್ತು ಸುಧಾರಕರಲ್ಲಿ ಆಗಲು ನೀವು ಬಯಸುವುದಿಲ್ಲ. info
التفاسير:

external-link copy
20 : 28

وَجَآءَ رَجُلٌ مِّنْ اَقْصَا الْمَدِیْنَةِ یَسْعٰی ؗ— قَالَ یٰمُوْسٰۤی اِنَّ الْمَلَاَ یَاْتَمِرُوْنَ بِكَ لِیَقْتُلُوْكَ فَاخْرُجْ اِنِّیْ لَكَ مِنَ النّٰصِحِیْنَ ۟

ನಗರದ ಕೊನೆಯಿಂದ ವ್ಯಕ್ತಿಯೊಬ್ಬ ಓಡುತ್ತಾ ಬಂದು ಹೇಳಿದನು: ಓ ಮೂಸಾ, ಸರದಾರರು ನಿಮ್ಮ ಹತ್ಯೆಗಾಗಿ ಗೂಢಾಲೋಚನೆ ಮಾಡುತ್ತಿದ್ದಾರೆ. ಆದ್ದರಿಂದ ನೀವು ಕೂಡಲೇ ಹೊರಟುಬಿಡಿ. ನಿಜವಾಗಿಯೂ ನಾನು ನಿಮ್ಮ ಹಿತೈಷಿಯರಲ್ಲಾಗಿದ್ದೇನೆ. info
التفاسير:

external-link copy
21 : 28

فَخَرَجَ مِنْهَا خَآىِٕفًا یَّتَرَقَّبُ ؗ— قَالَ رَبِّ نَجِّنِیْ مِنَ الْقَوْمِ الظّٰلِمِیْنَ ۟۠

ನಗರದ ಕೊನೆಯಿಂದ ವ್ಯಕ್ತಿಯೊಬ್ಬ ಓಡುತ್ತಾ ಬಂದು ಹೇಳಿದನು: ಓ ಮೂಸಾ, ಸರದಾರರು ನಿಮ್ಮ ಹತ್ಯೆಗಾಗಿ ಗೂಢಾಲೋಚನೆ ಮಾಡುತ್ತಿದ್ದಾರೆ. ಆದ್ದರಿಂದ ನೀವು ಕೂಡಲೇ ಹೊರಟುಬಿಡಿ. ನಿಜವಾಗಿಯೂ ನಾನು ನಿಮ್ಮ ಹಿತೈಷಿಯರಲ್ಲಾಗಿದ್ದೇನೆ. info
التفاسير: