クルアーンの対訳 - カンナダ語対訳 - Hamza Batur

ページ番号:close

external-link copy
171 : 4

یٰۤاَهْلَ الْكِتٰبِ لَا تَغْلُوْا فِیْ دِیْنِكُمْ وَلَا تَقُوْلُوْا عَلَی اللّٰهِ اِلَّا الْحَقَّ ؕ— اِنَّمَا الْمَسِیْحُ عِیْسَی ابْنُ مَرْیَمَ رَسُوْلُ اللّٰهِ وَكَلِمَتُهٗ ۚ— اَلْقٰىهَاۤ اِلٰی مَرْیَمَ وَرُوْحٌ مِّنْهُ ؗ— فَاٰمِنُوْا بِاللّٰهِ وَرُسُلِهٖ ۫— وَلَا تَقُوْلُوْا ثَلٰثَةٌ ؕ— اِنْتَهُوْا خَیْرًا لَّكُمْ ؕ— اِنَّمَا اللّٰهُ اِلٰهٌ وَّاحِدٌ ؕ— سُبْحٰنَهٗۤ اَنْ یَّكُوْنَ لَهٗ وَلَدٌ ۘ— لَهٗ مَا فِی السَّمٰوٰتِ وَمَا فِی الْاَرْضِ ؕ— وَكَفٰی بِاللّٰهِ وَكِیْلًا ۟۠

ಓ ಗ್ರಂಥದವರೇ! ನೀವು ನಿಮ್ಮ ಧರ್ಮದಲ್ಲಿ ಹದ್ದುಮೀರಿ ವರ್ತಿಸಬೇಡಿ. ಅಲ್ಲಾಹನ ಬಗ್ಗೆ ಸತ್ಯವನ್ನಲ್ಲದೆ ಬೇರೇನನ್ನೂ ಹೇಳಬೇಡಿ. ಮರ್ಯಮರ ಮಗ ಮಸೀಹ ಈಸಾ ಅಲ್ಲಾಹನ ಸಂದೇಶವಾಹಕರು, ಮರ್ಯಮರಿಗೆ ಅವನು ಹಾಕಿಕೊಟ್ಟ ಅವನ ವಚನ ಮತ್ತು ಅವನ ಕಡೆಯ ಒಂದು ಆತ್ಮವಾಗಿದ್ದಾರೆ. ಆದ್ದರಿಂದ ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರುಗಳಲ್ಲಿ ವಿಶ್ವಾಸವಿಡಿರಿ. ಮೂರು ಎಂದು ಹೇಳಬೇಡಿ.[1] ಹಾಗೆ ಹೇಳುವುದನ್ನು ನಿಲ್ಲಿಸಿದರೆ ನಿಮಗೇ ಒಳ್ಳೆಯದು. ಅಲ್ಲಾಹು ಏಕೈಕ ದೇವನಾಗಿದ್ದಾನೆ. ಮಕ್ಕಳು ಉಂಟಾಗುತ್ತಾರೆ ಎಂಬುದರಿಂದ ಅವನು ಎಷ್ಟೋ ಪರಿಶುದ್ಧನಾಗಿದ್ದಾನೆ. ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅವನಿಗೆ ಸೇರಿದ್ದು. ಕಾರ್ಯನಿರ್ವಾಹಕನಾಗಿ ಅಲ್ಲಾಹು ಸಾಕು. info

[1] ಕ್ರೈಸ್ತರು ತಿಯೇಕತ್ವದಲ್ಲಿ ನಂಬಿಕೆಯಿಡುತ್ತಾರೆ. ತ್ರಿಯೇಕತ್ವ ಎಂದರೆ ತಂದೆ, ಮಗ ಮತ್ತು ಪವಿತ್ರಾತ್ಮ—ಇವರು ಮೂವರೂ ಒಂದೇ ಮತ್ತು ಇವರು ಮೂವರೂ ದೇವರುಗಳು ಎಂಬ ನಂಬಿಕೆ.

التفاسير:

external-link copy
172 : 4

لَنْ یَّسْتَنْكِفَ الْمَسِیْحُ اَنْ یَّكُوْنَ عَبْدًا لِّلّٰهِ وَلَا الْمَلٰٓىِٕكَةُ الْمُقَرَّبُوْنَ ؕ— وَمَنْ یَّسْتَنْكِفْ عَنْ عِبَادَتِهٖ وَیَسْتَكْبِرْ فَسَیَحْشُرُهُمْ اِلَیْهِ جَمِیْعًا ۟

ಅಲ್ಲಾಹನ ದಾಸನಾಗಿರಲು ಮಸೀಹರಿಗೆ ಯಾವುದೇ ತಿರಸ್ಕಾರವಿಲ್ಲ. (ಅಲ್ಲಾಹನ) ಸಾಮೀಪ್ಯವನ್ನು ಗಳಿಸಿದ ದೇವದೂತರುಗಳಿಗೂ ತಿರಸ್ಕಾರವಿಲ್ಲ.ಅಲ್ಲಾಹನನ್ನು ಆರಾಧಿಸಲು ತಿರಸ್ಕಾರ ಮಾಡುವವರು ಮತ್ತು ಅಹಂಕಾರಪಡುವವರು ಯಾರೋ—ಅವರೆಲ್ಲರನ್ನೂ ಅವನು ತನ್ನ ಬಳಿಗೆ ಒಟ್ಟುಗೂಡಿಸುವನು. info
التفاسير:

external-link copy
173 : 4

فَاَمَّا الَّذِیْنَ اٰمَنُوْا وَعَمِلُوا الصّٰلِحٰتِ فَیُوَفِّیْهِمْ اُجُوْرَهُمْ وَیَزِیْدُهُمْ مِّنْ فَضْلِهٖ ۚ— وَاَمَّا الَّذِیْنَ اسْتَنْكَفُوْا وَاسْتَكْبَرُوْا فَیُعَذِّبُهُمْ عَذَابًا اَلِیْمًا ۙ۬— وَّلَا یَجِدُوْنَ لَهُمْ مِّنْ دُوْنِ اللّٰهِ وَلِیًّا وَّلَا نَصِیْرًا ۟

ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರ ಪ್ರತಿಫಲವನ್ನು ಅವನು ಅವರಿಗೆ ಪೂರ್ಣವಾಗಿ ನೀಡುವನು ಮತ್ತು ತನ್ನ ಅನುಗ್ರಹದಿಂದ ಅವರಿಗೆ ಹೆಚ್ಚುವರಿಯನ್ನು ದಯಪಾಲಿಸುವನು. ಆದರೆ ತಿರಸ್ಕಾರ ಮಾಡುವವರು ಮತ್ತು ಅಹಂಕಾರಪಡುವವರು ಯಾರೋ—ಅವರಿಗೆ ಅವನು ಯಾತನಾಮಯ ಶಿಕ್ಷೆಯನ್ನು ನೀಡುವನು. ಅವರು ಅಲ್ಲಾಹನ ಹೊರತು ಯಾವುದೇ ರಕ್ಷಕನನ್ನು ಅಥವಾ ಸಹಾಯಕನನ್ನು ಕಾಣಲಾರರು. info
التفاسير:

external-link copy
174 : 4

یٰۤاَیُّهَا النَّاسُ قَدْ جَآءَكُمْ بُرْهَانٌ مِّنْ رَّبِّكُمْ وَاَنْزَلْنَاۤ اِلَیْكُمْ نُوْرًا مُّبِیْنًا ۟

ಓ ಮನುಷ್ಯರೇ! ನಿಶ್ಚಯವಾಗಿಯೂ ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟವಾದ ಸಾಕ್ಷ್ಯವು ಬಂದಿದೆ. ನಾವು ನಿಮಗೆ ಸ್ಪಷ್ಟ ಬೆಳಕನ್ನು ಇಳಿಸಿಕೊಟ್ಟಿದ್ದೇವೆ. info
التفاسير:

external-link copy
175 : 4

فَاَمَّا الَّذِیْنَ اٰمَنُوْا بِاللّٰهِ وَاعْتَصَمُوْا بِهٖ فَسَیُدْخِلُهُمْ فِیْ رَحْمَةٍ مِّنْهُ وَفَضْلٍ ۙ— وَّیَهْدِیْهِمْ اِلَیْهِ صِرَاطًا مُّسْتَقِیْمًا ۟ؕ

ಅಲ್ಲಾಹನಲ್ಲಿ ವಿಶ್ವಾಸವಿಟ್ಟು ಅವನನ್ನು ಬಿಗಿಯಾಗಿ ಹಿಡಿದುಕೊಳ್ಳುವವರು ಯಾರೋ—ಅವರನ್ನು ಅವನು ತನ್ನ ದಯೆ ಮತ್ತು ಅನುಗ್ರಹದಲ್ಲಿ ಸೇರಿಸುವನು. ಅವರನ್ನು ತನ್ನ ಬಳಿಗೆ ನೇರಮಾರ್ಗದಲ್ಲಿ ಮುನ್ನಡೆಸುವನು. info
التفاسير: