クルアーンの対訳 - カンナダ語対訳 - Hamza Batur

ページ番号:close

external-link copy
114 : 4

لَا خَیْرَ فِیْ كَثِیْرٍ مِّنْ نَّجْوٰىهُمْ اِلَّا مَنْ اَمَرَ بِصَدَقَةٍ اَوْ مَعْرُوْفٍ اَوْ اِصْلَاحٍ بَیْنَ النَّاسِ ؕ— وَمَنْ یَّفْعَلْ ذٰلِكَ ابْتِغَآءَ مَرْضَاتِ اللّٰهِ فَسَوْفَ نُؤْتِیْهِ اَجْرًا عَظِیْمًا ۟

ಅವರು ಮಾಡುವ ಗೂಢ ಮಾತುಕತೆಗಳಲ್ಲಿ ಯಾವುದೇ ಒಳಿತಿಲ್ಲ. ದಾನ-ಧರ್ಮ ಮಾಡಲು, ಒಳಿತು ಮಾಡಲು ಮತ್ತು ಜನರ ನಡುವೆ ಸಾಮರಸ್ಯ ಮೂಡಿಸಲು ಆದೇಶಿಸುವವರ ಹೊರತು. ಯಾರು ಅಲ್ಲಾಹನ ಸಂಪ್ರೀತಿಯನ್ನು ಬಯಸಿ ಅದನ್ನು ಮಾಡುತ್ತಾನೋ ಅವನಿಗೆ ನಾವು ಸದ್ಯವೇ ಮಹಾ ಪ್ರತಿಫಲವನ್ನು ದಯಪಾಲಿಸುವೆವು. info
التفاسير:

external-link copy
115 : 4

وَمَنْ یُّشَاقِقِ الرَّسُوْلَ مِنْ بَعْدِ مَا تَبَیَّنَ لَهُ الْهُدٰی وَیَتَّبِعْ غَیْرَ سَبِیْلِ الْمُؤْمِنِیْنَ نُوَلِّهٖ مَا تَوَلّٰی وَنُصْلِهٖ جَهَنَّمَ ؕ— وَسَآءَتْ مَصِیْرًا ۟۠

ಸನ್ಮಾರ್ಗವು ಸ್ಪಷ್ಟವಾದ ಬಳಿಕ ಯಾರು ಸಂದೇಶವಾಹಕರಿಗೆ ವಿರುದ್ಧವಾಗಿ ಚಲಿಸುತ್ತಾನೋ ಮತ್ತು ಸತ್ಯವಿಶ್ವಾಸಿಗಳದ್ದಲ್ಲದ[1] ಮಾರ್ಗವನ್ನು ಅನುಸರಿಸುತ್ತಾನೋ ಅವನು ತಿರುಗಿದ ಮಾರ್ಗಕ್ಕೆ ನಾವು ಅವನನ್ನು ತಿರುಗಿಸುವೆವು ಮತ್ತು ನರಕಾಗ್ನಿಗೆ ಹಾಕಿ ಉರಿಸುವೆವು. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ! info

[1] ಇಲ್ಲಿ ಸತ್ಯವಿಶ್ವಾಸಿಗಳು ಎಂದರೆ ಸಹಾಬಿಗಳು [ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂಗಡಿಗರು].

التفاسير:

external-link copy
116 : 4

اِنَّ اللّٰهَ لَا یَغْفِرُ اَنْ یُّشْرَكَ بِهٖ وَیَغْفِرُ مَا دُوْنَ ذٰلِكَ لِمَنْ یَّشَآءُ ؕ— وَمَنْ یُّشْرِكْ بِاللّٰهِ فَقَدْ ضَلَّ ضَلٰلًا بَعِیْدًا ۟

ತನ್ನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಲಾಗುವುದನ್ನು ಅಲ್ಲಾಹು ಎಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತಾದ ಪಾಪಗಳನ್ನು ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ. ಯಾರು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾನೋ ಅವನು ವಿದೂರ ದುರ್ಮಾರ್ಗದಲ್ಲಿ ಬಿದ್ದಿದ್ದಾನೆ. info
التفاسير:

external-link copy
117 : 4

اِنْ یَّدْعُوْنَ مِنْ دُوْنِهٖۤ اِلَّاۤ اِنٰثًا ۚ— وَاِنْ یَّدْعُوْنَ اِلَّا شَیْطٰنًا مَّرِیْدًا ۟ۙ

ಅವರು ಅಲ್ಲಾಹನನ್ನು ಬಿಟ್ಟು ಕೆಲವು ದೇವತೆಗಳನ್ನು ಮಾತ್ರ ಕರೆದು ಪ್ರಾರ್ಥಿಸುತ್ತಾರೆ. (ವಾಸ್ತವದಲ್ಲಿ) ಅವರು ಕಡು ಧಿಕ್ಕಾರಿಯಾದ ಶೈತಾನನನ್ನೇ ಕರೆದು ಪ್ರಾರ್ಥಿಸುತ್ತಾರೆ. info
التفاسير:

external-link copy
118 : 4

لَّعَنَهُ اللّٰهُ ۘ— وَقَالَ لَاَتَّخِذَنَّ مِنْ عِبَادِكَ نَصِیْبًا مَّفْرُوْضًا ۟ۙ

ಅಲ್ಲಾಹು ಅವನನ್ನು (ಶೈತಾನನನ್ನು) ಶಪಿಸಿದ್ದಾನೆ. ಅವನು ಹೇಳಿದನು: “ನಿನ್ನ ದಾಸರಲ್ಲಿ ಒಂದು ನಿಶ್ಚಿತ ಪಾಲನ್ನು ನಾನು ವಶಪಡಿಸಿಯೇ ತೀರುವೆನು. info
التفاسير:

external-link copy
119 : 4

وَّلَاُضِلَّنَّهُمْ وَلَاُمَنِّیَنَّهُمْ وَلَاٰمُرَنَّهُمْ فَلَیُبَتِّكُنَّ اٰذَانَ الْاَنْعَامِ وَلَاٰمُرَنَّهُمْ فَلَیُغَیِّرُنَّ خَلْقَ اللّٰهِ ؕ— وَمَنْ یَّتَّخِذِ الشَّیْطٰنَ وَلِیًّا مِّنْ دُوْنِ اللّٰهِ فَقَدْ خَسِرَ خُسْرَانًا مُّبِیْنًا ۟ؕ

ನಾನು ಅವರನ್ನು ಖಂಡಿತ ದಾರಿತಪ್ಪಿಸುವೆನು ಮತ್ತು ಅವರಲ್ಲಿ ಆಸೆಗಳನ್ನು ಹುಟ್ಟಿಸುವೆನು. ನಾನು ಅವರಿಗೆ ಆದೇಶಿಸಿದಾಗ, ಅವರು ಜಾನುವಾರುಗಳ ಕಿವಿಗಳನ್ನು ಹರಿಯುವರು. ನಾನು ಅವರಿಗೆ ಆದೇಶಿಸಿದಾಗ, ಅವರು ಅಲ್ಲಾಹನ ಸಹಜ ಪ್ರಕೃತಿಯನ್ನು ಬದಲಾಯಿಸುವರು.” ಯಾರು ಅಲ್ಲಾಹನನ್ನು ಬಿಟ್ಟು ಶೈತಾನನನ್ನು ರಕ್ಷಕನನ್ನಾಗಿ ಸ್ವೀಕರಿಸುತ್ತಾನೋ—ಅವನು ಅತ್ಯಂತ ಸ್ಪಷ್ಟವಾದ ನಷ್ಟಕ್ಕೊಳಗಾದನು. info
التفاسير:

external-link copy
120 : 4

یَعِدُهُمْ وَیُمَنِّیْهِمْ ؕ— وَمَا یَعِدُهُمُ الشَّیْطٰنُ اِلَّا غُرُوْرًا ۟

ಅವನು (ಶೈತಾನನು) ಅವರಿಗೆ ಆಶ್ವಾಸನೆಗಳನ್ನು ನೀಡುತ್ತಾನೆ ಮತ್ತು ಅವರಲ್ಲಿ ಆಸೆಗಳನ್ನು ಹುಟ್ಟಿಸುತ್ತಾನೆ. ಆದರೆ ಶೈತಾನನು ಅವರಿಗೆ ನೀಡುವ ಆಶ್ವಾಸನೆಗಳು ವಂಚನೆಯಲ್ಲದೆ ಇನ್ನೇನಲ್ಲ. info
التفاسير:

external-link copy
121 : 4

اُولٰٓىِٕكَ مَاْوٰىهُمْ جَهَنَّمُ ؗ— وَلَا یَجِدُوْنَ عَنْهَا مَحِیْصًا ۟

ಅವರ ವಾಸಸ್ಥಳವು ನರಕಾಗ್ನಿಯಾಗಿದೆ. ಅದರಿಂದ ತಪ್ಪಿಸಿಕೊಳ್ಳಲು ಅವರು ಯಾವುದೇ ದಾರಿಯನ್ನೂ ಕಾಣಲಾರರು. info
التفاسير: