クルアーンの対訳 - カンナダ語対訳 - Hamza Batur

ページ番号:close

external-link copy
141 : 4

١لَّذِیْنَ یَتَرَبَّصُوْنَ بِكُمْ ۚ— فَاِنْ كَانَ لَكُمْ فَتْحٌ مِّنَ اللّٰهِ قَالُوْۤا اَلَمْ نَكُنْ مَّعَكُمْ ۖؗ— وَاِنْ كَانَ لِلْكٰفِرِیْنَ نَصِیْبٌ ۙ— قَالُوْۤا اَلَمْ نَسْتَحْوِذْ عَلَیْكُمْ وَنَمْنَعْكُمْ مِّنَ الْمُؤْمِنِیْنَ ؕ— فَاللّٰهُ یَحْكُمُ بَیْنَكُمْ یَوْمَ الْقِیٰمَةِ ؕ— وَلَنْ یَّجْعَلَ اللّٰهُ لِلْكٰفِرِیْنَ عَلَی الْمُؤْمِنِیْنَ سَبِیْلًا ۟۠

ಅವರು ನಿಮ್ಮನ್ನು ಕಾದು ನೋಡುತ್ತಾರೆ. ನಿಮಗೆ ಅಲ್ಲಾಹನಿಂದ ಗೆಲುವು ಪ್ರಾಪ್ತವಾದರೆ, “ನಾವು ನಿಮ್ಮೊಂದಿಗೆ ಇರಲಿಲ್ಲವೇ?” ಎಂದು ಅವರು (ನಿಮ್ಮೊಂದಿಗೆ) ಕೇಳುತ್ತಾರೆ. ಗೆಲುವು ಸತ್ಯನಿಷೇಧಿಗಳ ಪಾಲಾದರೆ (ಅವರ ಬಳಿಗೆ ಹೋಗಿ), “ನಿಮ್ಮ ಮೇಲೆ ಗೆಲುವು ಪಡೆಯುವ ಸಾಧ್ಯತೆಯಿದ್ದೂ ಸಹ ನಾವು ನಿಮ್ಮನ್ನು ಸತ್ಯವಿಶ್ವಾಸಿಗಳಿಂದ ರಕ್ಷಿಸಲಿಲ್ಲವೇ?” ಎಂದು ಕೇಳುತ್ತಾರೆ. ಪುನರುತ್ಥಾನ ದಿನದಂದು ಅಲ್ಲಾಹು ನಿಮ್ಮ ನಡುವೆ ತೀರ್ಪು ನೀಡುವನು. ಅಲ್ಲಾಹು ಸತ್ಯವಿಶ್ವಾಸಿಗಳ ಮೇಲೆ ಸತ್ಯನಿಷೇಧಿಗಳಿಗೆ ಯಾವುದೇ ಮಾರ್ಗವನ್ನು ಮಾಡಿಕೊಡುವುದಿಲ್ಲ. info
التفاسير:

external-link copy
142 : 4

اِنَّ الْمُنٰفِقِیْنَ یُخٰدِعُوْنَ اللّٰهَ وَهُوَ خَادِعُهُمْ ۚ— وَاِذَا قَامُوْۤا اِلَی الصَّلٰوةِ قَامُوْا كُسَالٰی ۙ— یُرَآءُوْنَ النَّاسَ وَلَا یَذْكُرُوْنَ اللّٰهَ اِلَّا قَلِیْلًا ۟ؗۙ

ನಿಶ್ಚಯವಾಗಿಯೂ ಕಪಟವಿಶ್ವಾಸಿಗಳು ಅಲ್ಲಾಹನನ್ನು ವಂಚಿಸಬಹುದೆಂದು (ಭಾವಿಸುತ್ತಾರೆ). ಆದರೆ, (ವಾಸ್ತವವಾಗಿ) ಅಲ್ಲಾಹನೇ ಅವರನ್ನು ವಂಚಿಸುತ್ತಿದ್ದಾನೆ.[1] ಅವರು ನಮಾಝ್ ಮಾಡಲು ನಿಲ್ಲುವಾಗ ಉದಾಸೀನರಾಗಿ ಮತ್ತು ಜನರಿಗೆ ತೋರಿಸುವುದಕ್ಕಾಗಿ ನಿಲ್ಲುತ್ತಾರೆ. ಅವರು ಅಲ್ಲಾಹನನ್ನು ಸ್ವಲ್ಪ ಮಾತ್ರ ಸ್ಮರಿಸುತ್ತಾರೆ. info

[1] ಅಲ್ಲಾಹು ಅವರನ್ನು ವಂಚಿಸುತ್ತಿದ್ದಾನೆ ಎಂದರೆ ಅವರು ಮಾಡಿದ ವಂಚನೆಯ ಫಲವನ್ನು ಅವರೇ ಉಣ್ಣುವಂತೆ ಮಾಡುತ್ತಿದ್ದಾನೆ ಎಂದರ್ಥ.

التفاسير:

external-link copy
143 : 4

مُّذَبْذَبِیْنَ بَیْنَ ذٰلِكَ ۖۗ— لَاۤ اِلٰی هٰۤؤُلَآءِ وَلَاۤ اِلٰی هٰۤؤُلَآءِ ؕ— وَمَنْ یُّضْلِلِ اللّٰهُ فَلَنْ تَجِدَ لَهٗ سَبِیْلًا ۟

ಅವರು ಎರಡು ಗುಂಪುಗಳ ಮಧ್ಯೆ ತೊಳಲಾಡುತ್ತಾರೆ. ಆ ಗುಂಪಿಗೂ ಸೇರುವುದಿಲ್ಲ; ಈ ಗುಂಪಿಗೂ ಸೇರುವುದಿಲ್ಲ. ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಯಾವುದೇ ದಾರಿಯನ್ನು ನೀವು ಕಾಣಲಾರಿರಿ. info
التفاسير:

external-link copy
144 : 4

یٰۤاَیُّهَا الَّذِیْنَ اٰمَنُوْا لَا تَتَّخِذُوا الْكٰفِرِیْنَ اَوْلِیَآءَ مِنْ دُوْنِ الْمُؤْمِنِیْنَ ؕ— اَتُرِیْدُوْنَ اَنْ تَجْعَلُوْا لِلّٰهِ عَلَیْكُمْ سُلْطٰنًا مُّبِیْنًا ۟

ಓ ಸತ್ಯವಿಶ್ವಾಸಿಗಳೇ! ನೀವು ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಸ್ವೀಕರಿಸಬೇಡಿ. ನಿಮ್ಮ ವಿರುದ್ಧ ಅಲ್ಲಾಹನಿಗೆ ಸ್ಪಷ್ಟ ಸಾಕ್ಷ್ಯಾಧಾರವನ್ನು ಮಾಡಿಕೊಡಲು ನೀವು ಬಯಸುತ್ತೀರಾ? info
التفاسير:

external-link copy
145 : 4

اِنَّ الْمُنٰفِقِیْنَ فِی الدَّرْكِ الْاَسْفَلِ مِنَ النَّارِ ۚ— وَلَنْ تَجِدَ لَهُمْ نَصِیْرًا ۟ۙ

ನಿಶ್ಚಯವಾಗಿಯೂ ಕಪಟ ವಿಶ್ವಾಸಿಗಳು ನರಕದ ಅತ್ಯಂತ ತಳಮಟ್ಟದಲ್ಲಿರುತ್ತಾರೆ. ನೀವು ಅವರಿಗೆ ಯಾವುದೇ ಸಹಾಯಕನನ್ನು ಕಾಣಲಾರಿರಿ. info
التفاسير:

external-link copy
146 : 4

اِلَّا الَّذِیْنَ تَابُوْا وَاَصْلَحُوْا وَاعْتَصَمُوْا بِاللّٰهِ وَاَخْلَصُوْا دِیْنَهُمْ لِلّٰهِ فَاُولٰٓىِٕكَ مَعَ الْمُؤْمِنِیْنَ ؕ— وَسَوْفَ یُؤْتِ اللّٰهُ الْمُؤْمِنِیْنَ اَجْرًا عَظِیْمًا ۟

ಆದರೆ ಪಶ್ಚಾತ್ತಾಪಪಡುವವರು, ಸುಧಾರಿಸಿಕೊಳ್ಳುವವರು, ಅಲ್ಲಾಹನನ್ನು ಬಿಗಿಯಾಗಿ ಹಿಡಿದುಕೊಳ್ಳುವವರು ಮತ್ತು ತಮ್ಮ ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸುವವರು ಇದರಿಂದ ಹೊರತಾಗಿದ್ದಾರೆ. ಅವರು ಸತ್ಯವಿಶ್ವಾಸಿಗಳಲ್ಲಿ ಸೇರಿದವರು. ಅಲ್ಲಾಹು ಸತ್ಯವಿಶ್ವಾಸಿಗಳಿಗೆ ಮಹಾ ಪ್ರತಿಫಲವನ್ನು ನೀಡುವನು. info
التفاسير:

external-link copy
147 : 4

مَا یَفْعَلُ اللّٰهُ بِعَذَابِكُمْ اِنْ شَكَرْتُمْ وَاٰمَنْتُمْ ؕ— وَكَانَ اللّٰهُ شَاكِرًا عَلِیْمًا ۟

ನೀವು ಕೃತಜ್ಞರಾಗಿ ಜೀವಿಸಿದರೆ ಮತ್ತು ಸತ್ಯವಿಶ್ವಾಸಿಗಳಾದರೆ, ನಿಮ್ಮನ್ನು ಶಿಕ್ಷಿಸಿ ಅಲ್ಲಾಹು ಮಾಡುವುದೇನು? ಅಲ್ಲಾಹು ಶ್ಲಾಘನಾರ್ಹನು ಮತ್ತು ಸರ್ವಜ್ಞನಾಗಿದ್ದಾನೆ. info
التفاسير: