Fassarar Ma'anonin Alqura'ni - Fassarar Kanadiy - Bashir Maisuri

Lambar shafi:close

external-link copy
21 : 18

وَكَذٰلِكَ اَعْثَرْنَا عَلَیْهِمْ لِیَعْلَمُوْۤا اَنَّ وَعْدَ اللّٰهِ حَقٌّ وَّاَنَّ السَّاعَةَ لَا رَیْبَ فِیْهَا ۚۗ— اِذْ یَتَنَازَعُوْنَ بَیْنَهُمْ اَمْرَهُمْ فَقَالُوا ابْنُوْا عَلَیْهِمْ بُنْیَانًا ؕ— رَبُّهُمْ اَعْلَمُ بِهِمْ ؕ— قَالَ الَّذِیْنَ غَلَبُوْا عَلٰۤی اَمْرِهِمْ لَنَتَّخِذَنَّ عَلَیْهِمْ مَّسْجِدًا ۟

ನಾವು ಇದೇ ಪ್ರಕಾರ ಜನರಿಗೆ ಅವರ ಸ್ಥಿತಿಯನ್ನು ತಿಳಿಸಿಕೊಟ್ಟೆವು. ಇದು ಅಲ್ಲಾಹನ ವಾಗ್ದಾನವು ಸತ್ಯವಾಗಿದೆಯೆಂದು ಮತ್ತು ಪುನರುತ್ಥಾನದ ದಿನದಲ್ಲಿ ಯಾವುದೇ ಸಂಶಯವಿಲ್ಲವೆAದು ಅವರು ಅರಿತುಕೊಳ್ಳಲೆಂದಾಗಿತ್ತು. ಇದು ಅವರು (ಆನಾಡಿನವರು) ತಮ್ಮ ವಿಚಾರದಲ್ಲಿ ಪರಸ್ಪರರ ನಡುವೆ ತರ್ಕಿಸುತ್ತಿದ್ದ ಸಂದರ್ಭದಲ್ಲಾಗಿತ್ತು. (ಗುಹಾವಾಸದವರ ಮರಣದ ನಂತರ) ಕೆಲವರೆಂದರು: ನೀವು ಅವರ ಗುಹೆಯ ಮೇಲೆ ಒಂದು ಕಟ್ಟಡವನ್ನು ನಿರ್ಮಿಸಿರಿ. ಅವರ ಸ್ಥಿತಿಯನ್ನು ಅವರ ಪ್ರಭುವೇ ಚೆನ್ನಾಗಿ ಬಲ್ಲನು ಅವರ ವಿಚಾರದಲ್ಲಿ ಮೇಲುಗೈ ಸಾಧಿಸಿದವರೆಂದರು: ನಾವಂತು ಅವರ ಹತ್ತಿರದಲ್ಲೇ ಮಸೀದಿಯೊಂದನ್ನು ನಿರ್ಮಿಸುತ್ತೇವೆ. info
التفاسير:

external-link copy
22 : 18

سَیَقُوْلُوْنَ ثَلٰثَةٌ رَّابِعُهُمْ كَلْبُهُمْ ۚ— وَیَقُوْلُوْنَ خَمْسَةٌ سَادِسُهُمْ كَلْبُهُمْ رَجْمًا بِالْغَیْبِ ۚ— وَیَقُوْلُوْنَ سَبْعَةٌ وَّثَامِنُهُمْ كَلْبُهُمْ ؕ— قُلْ رَّبِّیْۤ اَعْلَمُ بِعِدَّتِهِمْ مَّا یَعْلَمُهُمْ اِلَّا قَلِیْلٌ ۫۬— فَلَا تُمَارِ فِیْهِمْ اِلَّا مِرَآءً ظَاهِرًا ۪— وَّلَا تَسْتَفْتِ فِیْهِمْ مِّنْهُمْ اَحَدًا ۟۠

ಕೆಲವರು ಹೇಳುತ್ತಾರೆ: ಗುಹಾ ವಾಸಿಗಳು ಮೂವರಿದ್ದರು ಮತ್ತು ನಾಲ್ಕನೆಯದು ಅವರ ನಾಯಿಯಾಗಿತ್ತು. ಇನ್ನು ಕೆಲವರು ಹೇಳುತ್ತಾರೆ: ಐವರಿದ್ದರು ಮತ್ತು ಆರನೆಯದು ಅವರ ನಾಯಿಯಾಗಿತ್ತು. ಅವರು ಅದೃಶ್ಯ ವಿಷಯದಲ್ಲಿ (ಕಾಲ್ಪನಿಕ) ಊಹೆಯನ್ನು ತಾಳುತ್ತಿದ್ದಾರಷ್ಟೆ. ಕೆಲವರಂತು ಹೇಳುತ್ತಾರೆ: ಅವರು ಏಳು ಮಂದಿಯಿದ್ದು, ಮತ್ತು ಎಂಟನೆಯದು ಅವರ ನಾಯಿಯಾಗಿತ್ತು. ಹೇಳಿ: ನನ್ನ ಪ್ರಭುವೇ ಅವರ ಸಂಖ್ಯೆಯನ್ನು ಚೆನ್ನಾಗಿ ಬಲ್ಲನು. ಅವರ ಬಗ್ಗೆ ಅತ್ಯಲ್ಪ ಮಂದಿಯೇ ತಿಳಿದಿರುತ್ತಾರೆ. ಇನ್ನು ನೀವು ಅವರೊಂದಿಗೆ ಸ್ಪಷ್ಟ ವಿಚಾರದ ಹೊರತು ವಾದಿಸಬೇಡಿರಿ ಮತ್ತು ಅವರ ಪೈಕಿ ಯಾರಲ್ಲೂ ಅವರ ಬಗ್ಗೆ ವಿಚಾರಿಸುವುದು ಬೇಡ. info
التفاسير:

external-link copy
23 : 18

وَلَا تَقُوْلَنَّ لِشَایْءٍ اِنِّیْ فَاعِلٌ ذٰلِكَ غَدًا ۟ۙ

(ಓ ಪೈಗಂಬರರೇ) ನೀವೆಂದಿಗೂ ಯಾವುದೇ ಕಾರ್ಯದ ಬಗ್ಗೆ ನಾನದನ್ನು ನಾಳೆ ಖಂಡಿತ ಮಾಡುವೆನೆಂದು. ಹೇಳಬೇಡಿರಿ. info
التفاسير:

external-link copy
24 : 18

اِلَّاۤ اَنْ یَّشَآءَ اللّٰهُ ؗ— وَاذْكُرْ رَّبَّكَ اِذَا نَسِیْتَ وَقُلْ عَسٰۤی اَنْ یَّهْدِیَنِ رَبِّیْ لِاَقْرَبَ مِنْ هٰذَا رَشَدًا ۟

ಆದರೆ ಜೊತೆಗೇ ಇನ್‌ಶಾಅಲ್ಲಾಹ್ ಹೇಳಿ (ಅಲ್ಲಾಹನು ಇಚ್ಛಿಸುವುದರ ಹೊರತು) ಇನ್ನು ನೀವು ಮರೆತಾಗ ನಿಮ್ಮ ಪ್ರಭುವನ್ನು ಸ್ಮರಿಸಿರಿ ಮತ್ತು ನನ್ನ ಪ್ರಭುವು ಇದಕ್ಕಿಂತಲೂ ಹೆಚ್ಚು ಸನ್ಮಾರ್ಗಕ್ಕೆ ಹತ್ತಿರವಿರುವ ದಾರಿಯನ್ನು ತೋರಿಸಿಕೊಡುವನೆಂದು ಹೇಳಿರಿ. info
التفاسير:

external-link copy
25 : 18

وَلَبِثُوْا فِیْ كَهْفِهِمْ ثَلٰثَ مِائَةٍ سِنِیْنَ وَازْدَادُوْا تِسْعًا ۟

ಅವರು ತಮ್ಮ ಗುಹೆಯಲ್ಲಿ ಮುನ್ನೂರು ವರ್ಷಗಳ ಕಾಲ ತಂಗಿದ್ದರು. ಚಂದ್ರಮಾನ ಗಣನೆಯ ಪ್ರಕಾರ ಇನ್ನೂ ಒಂಬತ್ತು ವರ್ಷ ಹೆಚ್ಚುತ್ತದೆ. info
التفاسير:

external-link copy
26 : 18

قُلِ اللّٰهُ اَعْلَمُ بِمَا لَبِثُوْا ۚ— لَهٗ غَیْبُ السَّمٰوٰتِ وَالْاَرْضِ ؕ— اَبْصِرْ بِهٖ وَاَسْمِعْ ؕ— مَا لَهُمْ مِّنْ دُوْنِهٖ مِنْ وَّلِیٍّ ؗ— وَّلَا یُشْرِكُ فِیْ حُكْمِهٖۤ اَحَدًا ۟

ಹೇಳಿರಿ: ಅವರು ಎಷ್ಟು ಕಾಲ ವಾಸಿಸಿದ್ದರೆಂದು ಅಲ್ಲಾಹನೇ ಚೆನ್ನಾಗಿ ಬಲ್ಲನು. ಆಕಾಶಗಳ ಮತ್ತು ಭೂಮಿಯ ಅಗೋಚರ ಜ್ಞಾನವು ಅವನಿಗೆ ಮಾತ್ರವಿದೆ. ಅವನು ಅತ್ಯಂತ ಚೆನ್ನಾಗಿ ನೋಡುವವನು, ಕೇಳುವವನು ಆಗಿರುವನು. ಅವರಿಗೆ ಅಲ್ಲಾಹನ ಹೊರತು ಯಾವೊಬ್ಬ ರಕ್ಷಕ ಮಿತ್ರನಿಲ್ಲ. ಹಾಗೂ ಅವನು ತನ್ನ ಆಜ್ಞಾಧಿಕಾರದಲ್ಲಿ ಯಾರನ್ನೂ ಸಹಭಾಗಿಯನ್ನಾಗಿ ನಿಶ್ಚಯಿಸಿರುವುದಿಲ್ಲ. info
التفاسير:

external-link copy
27 : 18

وَاتْلُ مَاۤ اُوْحِیَ اِلَیْكَ مِنْ كِتَابِ رَبِّكَ ؕ— لَا مُبَدِّلَ لِكَلِمٰتِهٖ ۫ۚ— وَلَنْ تَجِدَ مِنْ دُوْنِهٖ مُلْتَحَدًا ۟

(ಓ ಪೈಗಂಬರರೇ) ನೀವು ನಿಮ್ಮ ಪ್ರಭುವಿನ ಗ್ರಂಥದಿAದ ನಿಮ್ಮಡೆಗೆ ಅವತೀರ್ಣಗೊಂಡಿರುವುದನ್ನು ಓದಿ ತಿಳಿಸಿರಿ. ಅವನ ವಚನಗಳನ್ನು ಬದಲಾಯಿಸುವವನಾರಿಲ್ಲ. ಖಂಡಿತವಾಗಿಯೂ ನೀವು ಅವನ ಹೊರತು ಯಾವುದೇ ಆಶ್ರಯ ದಾಣವನ್ನು ಪಡೆಲಾರಿರಿ. info
التفاسير: