Fassarar Ma'anonin Alqura'ni - Fassarar Kanadiy - Bashir Maisuri

external-link copy
22 : 18

سَیَقُوْلُوْنَ ثَلٰثَةٌ رَّابِعُهُمْ كَلْبُهُمْ ۚ— وَیَقُوْلُوْنَ خَمْسَةٌ سَادِسُهُمْ كَلْبُهُمْ رَجْمًا بِالْغَیْبِ ۚ— وَیَقُوْلُوْنَ سَبْعَةٌ وَّثَامِنُهُمْ كَلْبُهُمْ ؕ— قُلْ رَّبِّیْۤ اَعْلَمُ بِعِدَّتِهِمْ مَّا یَعْلَمُهُمْ اِلَّا قَلِیْلٌ ۫۬— فَلَا تُمَارِ فِیْهِمْ اِلَّا مِرَآءً ظَاهِرًا ۪— وَّلَا تَسْتَفْتِ فِیْهِمْ مِّنْهُمْ اَحَدًا ۟۠

ಕೆಲವರು ಹೇಳುತ್ತಾರೆ: ಗುಹಾ ವಾಸಿಗಳು ಮೂವರಿದ್ದರು ಮತ್ತು ನಾಲ್ಕನೆಯದು ಅವರ ನಾಯಿಯಾಗಿತ್ತು. ಇನ್ನು ಕೆಲವರು ಹೇಳುತ್ತಾರೆ: ಐವರಿದ್ದರು ಮತ್ತು ಆರನೆಯದು ಅವರ ನಾಯಿಯಾಗಿತ್ತು. ಅವರು ಅದೃಶ್ಯ ವಿಷಯದಲ್ಲಿ (ಕಾಲ್ಪನಿಕ) ಊಹೆಯನ್ನು ತಾಳುತ್ತಿದ್ದಾರಷ್ಟೆ. ಕೆಲವರಂತು ಹೇಳುತ್ತಾರೆ: ಅವರು ಏಳು ಮಂದಿಯಿದ್ದು, ಮತ್ತು ಎಂಟನೆಯದು ಅವರ ನಾಯಿಯಾಗಿತ್ತು. ಹೇಳಿ: ನನ್ನ ಪ್ರಭುವೇ ಅವರ ಸಂಖ್ಯೆಯನ್ನು ಚೆನ್ನಾಗಿ ಬಲ್ಲನು. ಅವರ ಬಗ್ಗೆ ಅತ್ಯಲ್ಪ ಮಂದಿಯೇ ತಿಳಿದಿರುತ್ತಾರೆ. ಇನ್ನು ನೀವು ಅವರೊಂದಿಗೆ ಸ್ಪಷ್ಟ ವಿಚಾರದ ಹೊರತು ವಾದಿಸಬೇಡಿರಿ ಮತ್ತು ಅವರ ಪೈಕಿ ಯಾರಲ್ಲೂ ಅವರ ಬಗ್ಗೆ ವಿಚಾರಿಸುವುದು ಬೇಡ. info
التفاسير: