Qurani Kərimin mənaca tərcüməsi - Kannad dilinə tərcümə - Həmzə Batur.

Səhifənin rəqəmi: 194:187 close

external-link copy
48 : 9

لَقَدِ ابْتَغَوُا الْفِتْنَةَ مِنْ قَبْلُ وَقَلَّبُوْا لَكَ الْاُمُوْرَ حَتّٰی جَآءَ الْحَقُّ وَظَهَرَ اَمْرُ اللّٰهِ وَهُمْ كٰرِهُوْنَ ۟

ಅವರು ಇದಕ್ಕೆ ಮೊದಲು ಕೂಡ ಒಡಕು ಮೂಡಿಸಲು ಹವಣಿಸಿದ್ದರು ಮತ್ತು ನಿಮ್ಮ ಮುಂದೆ ಕಾರ್ಯಗಳನ್ನು ತಲೆಕೆಳಗೆ ಮಾಡಿದ್ದರು. ಎಲ್ಲಿಯವರೆಗೆಂದರೆ, ಸತ್ಯವು ಬಂದು ಅಲ್ಲಾಹನ ಆಜ್ಞೆಯು ಪ್ರಕಟವಾಗುವ ತನಕ. ಅದು ಅವರಿಗೆ ಎಷ್ಟು ಅಪ್ರಿಯವಾಗಿದ್ದರೂ ಸಹ. info
التفاسير:

external-link copy
49 : 9

وَمِنْهُمْ مَّنْ یَّقُوْلُ ائْذَنْ لِّیْ وَلَا تَفْتِنِّیْ ؕ— اَلَا فِی الْفِتْنَةِ سَقَطُوْا ؕ— وَاِنَّ جَهَنَّمَ لَمُحِیْطَةٌ بِالْكٰفِرِیْنَ ۟

ಅವರಲ್ಲಿ, “ನನಗೆ (ಮನೆಯಲ್ಲಿರಲು) ಅನುಮತಿ ನೀಡಿರಿ. ನನ್ನನ್ನು ಪರೀಕ್ಷೆಗೆ ಸಿಲುಕಿಸಬೇಡಿ” ಎಂದು ಹೇಳುವವರಿದ್ದಾರೆ. ತಿಳಿಯಿರಿ! ಅವರು ಪರೀಕ್ಷೆಯಲ್ಲೇ ಬಿದ್ದಿದ್ದಾರೆ. ನಿಶ್ಚಯವಾಗಿಯೂ ನರಕಾಗ್ನಿಯು ಸತ್ಯನಿಷೇಧಿಗಳನ್ನು ಆವರಿಸಿಕೊಂಡಿದೆ. info
التفاسير:

external-link copy
50 : 9

اِنْ تُصِبْكَ حَسَنَةٌ تَسُؤْهُمْ ۚ— وَاِنْ تُصِبْكَ مُصِیْبَةٌ یَّقُوْلُوْا قَدْ اَخَذْنَاۤ اَمْرَنَا مِنْ قَبْلُ وَیَتَوَلَّوْا وَّهُمْ فَرِحُوْنَ ۟

ನಿಮಗೆ ಒಳಿತಾದರೆ ಅವರಿಗೆ ಸಂಕಟವಾಗುತ್ತದೆ. ನಿಮಗೆ ಕೆಡುಕು ಸಂಭವಿಸಿದರೆ ಅವರು ಹೇಳುತ್ತಾರೆ: “ನಾವು ಮೊದಲೇ ನಮ್ಮ ವಿಷಯದಲ್ಲಿ ಜಾಗರೂಕರಾಗಿದ್ದೆವು.” ನಂತರ ಅವರು ಸಂತೋಷಪಡುತ್ತಾ ಮರಳಿ ಹೋಗುತ್ತಾರೆ. info
التفاسير:

external-link copy
51 : 9

قُلْ لَّنْ یُّصِیْبَنَاۤ اِلَّا مَا كَتَبَ اللّٰهُ لَنَا ۚ— هُوَ مَوْلٰىنَا ۚ— وَعَلَی اللّٰهِ فَلْیَتَوَكَّلِ الْمُؤْمِنُوْنَ ۟

ಹೇಳಿರಿ: “ಅಲ್ಲಾಹು ನಮಗೆ ವಿಧಿಸಿದ್ದಲ್ಲದೆ ಬೇರೇನೂ ನಮಗೆ ಸಂಭವಿಸುವುದಿಲ್ಲ. ಅವನೇ ನಮ್ಮ ರಕ್ಷಕ.” ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ. info
التفاسير:

external-link copy
52 : 9

قُلْ هَلْ تَرَبَّصُوْنَ بِنَاۤ اِلَّاۤ اِحْدَی الْحُسْنَیَیْنِ ؕ— وَنَحْنُ نَتَرَبَّصُ بِكُمْ اَنْ یُّصِیْبَكُمُ اللّٰهُ بِعَذَابٍ مِّنْ عِنْدِهٖۤ اَوْ بِاَیْدِیْنَا ۖؗۗ— فَتَرَبَّصُوْۤا اِنَّا مَعَكُمْ مُّتَرَبِّصُوْنَ ۟

ಹೇಳಿರಿ: “ನೀವು ನಮ್ಮ ವಿಷಯದಲ್ಲಿ ಇವೆರಡರಲ್ಲಿ (ಹುತಾತ್ಮರಾಗುವುದು ಅಥವಾ ವಿಜಯ ಪತಾಕೆಯೊಂದಿಗೆ ಮರಳುವುದು) ಒಂದರ ಹೊರತು ಬೇರೇನು ಕಾಯುತ್ತೀರಿ? ಆದರೆ ಅಲ್ಲಾಹು ನಿಮಗೆ ಅವನ ಕಡೆಯಿಂದ ಅಥವಾ ನಮ್ಮ ಕೈಗಳಿಂದ ಶಿಕ್ಷೆ ನೀಡಬೇಕೆಂದು ನಾವು ಕಾಯುತ್ತೇವೆ. ಆದ್ದರಿಂದ ನೀವು ಕಾಯಿರಿ. ನಿಶ್ಚಯವಾಗಿಯೂ ನಾವೂ ನಿಮ್ಮೊಂದಿಗೆ ಕಾಯುತ್ತೇವೆ.” info
التفاسير:

external-link copy
53 : 9

قُلْ اَنْفِقُوْا طَوْعًا اَوْ كَرْهًا لَّنْ یُّتَقَبَّلَ مِنْكُمْ ؕ— اِنَّكُمْ كُنْتُمْ قَوْمًا فٰسِقِیْنَ ۟

ಹೇಳಿರಿ: “ನೀವು (ಅಲ್ಲಾಹನ ಮಾರ್ಗದಲ್ಲಿ) ನಿಮ್ಮ ಇಚ್ಛೆಯಿಂದ ಅಥವಾ ನಿಮ್ಮ ಇಚ್ಛೆಗೆ ವಿರುದ್ಧವಾಗಿ ಖರ್ಚು ಮಾಡಿರಿ. (ನೀವು ಯಾವ ರೀತಿಯಲ್ಲಿ ಖರ್ಚು ಮಾಡಿದರೂ) ಅದು ನಿಮ್ಮಿಂದ ಸ್ವೀಕಾರವಾಗುವುದಿಲ್ಲ. ನಿಶ್ಚಯವಾಗಿಯೂ ನೀವು ದುಷ್ಕರ್ಮಿಗಳಾದ ಜನರಾಗಿದ್ದಿರಿ.” info
التفاسير:

external-link copy
54 : 9

وَمَا مَنَعَهُمْ اَنْ تُقْبَلَ مِنْهُمْ نَفَقٰتُهُمْ اِلَّاۤ اَنَّهُمْ كَفَرُوْا بِاللّٰهِ وَبِرَسُوْلِهٖ وَلَا یَاْتُوْنَ الصَّلٰوةَ اِلَّا وَهُمْ كُسَالٰی وَلَا یُنْفِقُوْنَ اِلَّا وَهُمْ كٰرِهُوْنَ ۟

(ಅಲ್ಲಾಹನ ಮಾರ್ಗದಲ್ಲಿ) ಅವರು ಮಾಡುವ ಖರ್ಚುಗಳು ಅವರಿಂದ ಸ್ವೀಕಾರವಾಗದಂತೆ ತಡೆಯಾಗಿರುವುದು ಅವರು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸಿರುವುದು, ಉದಾಸೀನವಾಗಿಯೇ ನಮಾಝ್ ಮಾಡಲು ಬರುವುದು ಮತ್ತು ಒಲ್ಲದ ಮನಸ್ಸಿನಿಂದ ಖರ್ಚು ಮಾಡುವುದು ಮುಂತಾದವುಗಳಲ್ಲದೆ ಇನ್ನೇನೂ ಅಲ್ಲ. info
التفاسير: