Qurani Kərimin mənaca tərcüməsi - Kannad dilinə tərcümə - Həmzə Batur.

Səhifənin rəqəmi:close

external-link copy
118 : 9

وَّعَلَی الثَّلٰثَةِ الَّذِیْنَ خُلِّفُوْا ؕ— حَتّٰۤی اِذَا ضَاقَتْ عَلَیْهِمُ الْاَرْضُ بِمَا رَحُبَتْ وَضَاقَتْ عَلَیْهِمْ اَنْفُسُهُمْ وَظَنُّوْۤا اَنْ لَّا مَلْجَاَ مِنَ اللّٰهِ اِلَّاۤ اِلَیْهِ ؕ— ثُمَّ تَابَ عَلَیْهِمْ لِیَتُوْبُوْا ؕ— اِنَّ اللّٰهَ هُوَ التَّوَّابُ الرَّحِیْمُ ۟۠

ತೀರ್ಪು ಕಾದಿರಿಸಲಾದ ಆ ಮೂವರನ್ನೂ (ಅಲ್ಲಾಹು ಕ್ಷಮಿಸಿದ್ದಾನೆ).[1] ಎಲ್ಲಿಯವರೆಗೆಂದರೆ, ಭೂಮಿಯು ವಿಶಾಲವಾಗಿದ್ದೂ ಸಹ ಅವರಿಗೆ ಅದು ಇಕ್ಕಟ್ಟಾದಂತೆ ತೋರಿತು, ಅವರ ಹೃದಯಗಳು ಅವರಿಗೆ ಇಕ್ಕಟ್ಟಾಗಿ ಪರಿಣಮಿಸಿತು ಮತ್ತು ಅಲ್ಲಾಹನಿಗೆ ವಿರುದ್ಧವಾಗಿ ಅವನ ಬಳಿಯೇ ಹೊರತು ಬೇರೆ ಆಶ್ರಯವಿಲ್ಲವೆಂದು ಅವರಿಗೆ ಖಾತ್ರಿಯಾಯಿತು. ಆದ್ದರಿಂದ ಅವರು ಪಶ್ಚಾತ್ತಾಪಪಟ್ಟು ಮರಳುವುದಕ್ಕಾಗಿ ಅಲ್ಲಾಹು ಅವರನ್ನು ಕ್ಷಮಿಸಿದನು. ನಿಶ್ಚಯವಾಗಿಯೂ ಅಲ್ಲಾಹು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ದಯೆ ತೋರುವವನಾಗಿದ್ದಾನೆ. info

[1] ತೀರ್ಪು ಕಾದಿರಿಸಲಾದವರು ಎಂದು 106ನೇ ವಚನದಲ್ಲಿ ಹೇಳಿದ್ದು ಈ ಮೂವರ ಬಗ್ಗೆ. ಅವರು ಕಅ‌ಬ್ ಬಿನ್ ಮಾಲಿಕ್, ಹಿಲಾಲ್ ಬಿನ್ ಉಮಯ್ಯಃ ಮತ್ತು ಮುರಾರ ಬಿನ್ ರಬೀಅ್. ಇವರು ತಬೂಕ್ ಯುದ್ಧಕ್ಕೆ ಹೋಗದಿರಲು ಸೂಕ್ತ ಕಾರಣಗಳೇನೂ ಇಲ್ಲದಿದ್ದರೂ ಸಹ ಹೋಗಿರಲಿಲ್ಲ.

التفاسير:

external-link copy
119 : 9

یٰۤاَیُّهَا الَّذِیْنَ اٰمَنُوا اتَّقُوا اللّٰهَ وَكُوْنُوْا مَعَ الصّٰدِقِیْنَ ۟

ಓ ಸತ್ಯವಿಶ್ವಾಸಿಗಳೇ! ಅಲ್ಲಾಹನನ್ನು ಭಯಪಡಿರಿ ಮತ್ತು ಸತ್ಯವಂತರಲ್ಲಿ ಸೇರಿಕೊಳ್ಳಿ. info
التفاسير:

external-link copy
120 : 9

مَا كَانَ لِاَهْلِ الْمَدِیْنَةِ وَمَنْ حَوْلَهُمْ مِّنَ الْاَعْرَابِ اَنْ یَّتَخَلَّفُوْا عَنْ رَّسُوْلِ اللّٰهِ وَلَا یَرْغَبُوْا بِاَنْفُسِهِمْ عَنْ نَّفْسِهٖ ؕ— ذٰلِكَ بِاَنَّهُمْ لَا یُصِیْبُهُمْ ظَمَاٌ وَّلَا نَصَبٌ وَّلَا مَخْمَصَةٌ فِیْ سَبِیْلِ اللّٰهِ وَلَا یَطَـُٔوْنَ مَوْطِئًا یَّغِیْظُ الْكُفَّارَ وَلَا یَنَالُوْنَ مِنْ عَدُوٍّ نَّیْلًا اِلَّا كُتِبَ لَهُمْ بِهٖ عَمَلٌ صَالِحٌ ؕ— اِنَّ اللّٰهَ لَا یُضِیْعُ اَجْرَ الْمُحْسِنِیْنَ ۟ۙ

ಪ್ರವಾದಿಯವರನ್ನು ಬಿಟ್ಟು ಹಿಂದೆ ಉಳಿಯುವುದು (ಯುದ್ಧಕ್ಕೆ ಹೋಗದೆ ಮನೆಯಲ್ಲೇ ಕುಳಿತುಕೊಳ್ಳುವುದು) ಮತ್ತು ಅವರಿಗಿಂತಲೂ ಹೆಚ್ಚು ತಮ್ಮ ಕೆಲಸ-ಕಾರ್ಯಗಳಿಗೆ ಪ್ರಾಶಸ್ತ್ಯ ನೀಡುವುದು ಮದೀನಾ ನಿವಾಸಿಗಳಿಗೆ ಮತ್ತು ಅದರ ಸುತ್ತಲಿರುವ ಮರುಭೂಮಿ ನಿವಾಸಿಗಳಾದ ಅರಬ್ಬಿಗಳಿಗೆ ಭೂಷಣವಲ್ಲ. ಅದೇಕೆಂದರೆ, ಅಲ್ಲಾಹನ ಮಾರ್ಗದಲ್ಲಿ ಅವರಿಗೆ ಯಾವುದೇ ದಾಹ, ಆಯಾಸ ಅಥವಾ ಹಸಿವು ಸಂಭವಿಸಿದರೂ, ಸತ್ಯನಿಷೇಧಿಗಳನ್ನು ಕೆರಳಿಸುವ ಯಾವುದೇ ಪ್ರದೇಶದಲ್ಲಿ ಅವರು ಕಾಲೂರಿದರೂ, ಅಥವಾ ವೈರಿಗಳಿಗೆ ಅವರು ಯಾವುದೇ ನಾಶ-ನಷ್ಟ ತಂದಿಟ್ಟರೂ, ಅವುಗಳಿಗೆ ಬದಲಿಯಾಗಿ ಅವರಿಗೆ ಒಂದು ಸತ್ಕರ್ಮವನ್ನು ದಾಖಲಿಸಲಾಗುವುದು. ಒಳಿತು ಮಾಡುವವರ ಕರ್ಮಗಳನ್ನು ಅಲ್ಲಾಹು ವ್ಯರ್ಥಗೊಳಿಸುವುದಿಲ್ಲ. info
التفاسير:

external-link copy
121 : 9

وَلَا یُنْفِقُوْنَ نَفَقَةً صَغِیْرَةً وَّلَا كَبِیْرَةً وَّلَا یَقْطَعُوْنَ وَادِیًا اِلَّا كُتِبَ لَهُمْ لِیَجْزِیَهُمُ اللّٰهُ اَحْسَنَ مَا كَانُوْا یَعْمَلُوْنَ ۟

ಅವರು ಸಣ್ಣ ಮೊತ್ತದಲ್ಲಿ ಅಥವಾ ದೊಡ್ಡ ಮೊತ್ತದಲ್ಲಿ ಖರ್ಚು ಮಾಡಿದರೂ, ಅಥವಾ ಯಾವುದೇ ಕಣಿವೆಯನ್ನು ದಾಟಿದರೂ—ಅವರು ಮಾಡಿದ ಕರ್ಮಗಳಿಗೆ ಅತ್ಯುತ್ತಮ ಪ್ರತಿಫಲ ನೀಡುವುದಕ್ಕಾಗಿ ಇವೆಲ್ಲವನ್ನೂ ದಾಖಲಿಸಿಡಲಾಗುವುದು. info
التفاسير:

external-link copy
122 : 9

وَمَا كَانَ الْمُؤْمِنُوْنَ لِیَنْفِرُوْا كَآفَّةً ؕ— فَلَوْلَا نَفَرَ مِنْ كُلِّ فِرْقَةٍ مِّنْهُمْ طَآىِٕفَةٌ لِّیَتَفَقَّهُوْا فِی الدِّیْنِ وَلِیُنْذِرُوْا قَوْمَهُمْ اِذَا رَجَعُوْۤا اِلَیْهِمْ لَعَلَّهُمْ یَحْذَرُوْنَ ۟۠

ಸತ್ಯವಿಶ್ವಾಸಿಗಳೆಲ್ಲರೂ ಒಟ್ಟಿಗೆ ಯುದ್ಧಕ್ಕೆ ಹೊರಡುವುದು ಸರಿಯಲ್ಲ. ಬದಲಿಗೆ, ಅವರಲ್ಲಿರುವ ಒಂದೊಂದು ವಿಭಾಗದಿಂದ ಒಂದೊಂದು ಗುಂಪು ಜನರು ಯುದ್ಧಕ್ಕೆ ಹೊರಟು, ಉಳಿದವರು ಧರ್ಮದ ಬಗ್ಗೆ ತಿಳುವಳಿಕೆಯನ್ನು ಪಡೆದು, ನಂತರ ಆ ಜನರು ತಮ್ಮ ಬಳಿಗೆ ಮರಳಿ ಬಂದಾಗ, ಅವರು (ಅಲ್ಲಾಹನನ್ನು) ಭಯಪಟ್ಟು ಜೀವಿಸುವುದಕ್ಕಾಗಿ ಅವರಿಗೆ (ಧಾರ್ಮಿಕ ನಿಯಮಗಳ ಬಗ್ಗೆ) ತಿಳುವಳಿಕೆ ನೀಡಬಾರದೇಕೆ? info
التفاسير: