Qurani Kərimin mənaca tərcüməsi - Kannad dilinə tərcümə - Həmzə Batur.

Səhifənin rəqəmi:close

external-link copy
62 : 2

اِنَّ الَّذِیْنَ اٰمَنُوْا وَالَّذِیْنَ هَادُوْا وَالنَّصٰرٰی وَالصّٰبِـِٕیْنَ مَنْ اٰمَنَ بِاللّٰهِ وَالْیَوْمِ الْاٰخِرِ وَعَمِلَ صَالِحًا فَلَهُمْ اَجْرُهُمْ عِنْدَ رَبِّهِمْ ۪ۚ— وَلَا خَوْفٌ عَلَیْهِمْ وَلَا هُمْ یَحْزَنُوْنَ ۟

ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಯಹೂದಿಗಳು, ಕ್ರೈಸ್ತರು ಅಥವಾ ಸಾಬಿಗಳು—ಇವರ ಪೈಕಿ ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಟ್ಟವರು ಹಾಗೂ ಸತ್ಕರ್ಮವೆಸಗಿದವರು ಯಾರೋ, ಅವರಿಗೆ ಅವರ ಪ್ರತಿಫಲವು ಅವರ ಪರಿಪಾಲಕನ (ಅಲ್ಲಾಹನ) ಬಳಿಯಿದೆ. ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.[1] info

[1] ಕೆಲವರು ಈ ವಚನವನ್ನು ತಪ್ಪಾಗಿ ಅರ್ಥಮಾಡಿಕೊಂಡು 'ಧರ್ಮಗಳ ಏಕತೆ' ಎಂಬ ಹೊಸ ಸಿದ್ಧಾಂತವನ್ನು ಸ್ಥಾಪಿಸಿದ್ದಾರೆ. ಅವರ ಪ್ರಕಾರ ಇಸ್ಲಾಂ ಧರ್ಮದಲ್ಲಿ ವಿಶ್ವಾಸವಿಡುವುದು ಕಡ್ಡಾಯವಲ್ಲ. ಯಾವುದೇ ಧರ್ಮದಲ್ಲಿದ್ದು ಏಕದೇವನನ್ನು ಆರಾಧಿಸಿ ಒಳಿತು ಮಾಡಿದರೆ ಅವರಿಗೆ ಮೋಕ್ಷ ಸಿಗುತ್ತದೆ. ಇದು ಅತ್ಯಂತ ಹೊಲಸು ಸಿದ್ಧಾಂತವಾಗಿದ್ದು ಕುರ್‌ಆನಿನ ಬೋಧನೆಗಳಿಗೆ ವಿರುದ್ಧವಾಗಿದೆ. ಈ ವಚನದ ನಿಜವಾದ ಅರ್ಥವೇನೆಂದರೆ, ಮೇಲಿನ ವಚನಗಳಲ್ಲಿ ಯಹೂದಿಗಳ ಅವಿಧೇಯತೆ, ಅಹಂಕಾರ ಮತ್ತು ಅತಿರೇಕಗಳ ಬಗ್ಗೆ ಪ್ರಸ್ತಾಪಿಸಿ, ಅವರಿಗೆ ನೀಡಲಾದ ಶಿಕ್ಷೆಯ ಬಗ್ಗೆಯೂ ಪ್ರಸ್ತಾಪಿಸಲಾದಾಗ, ಸ್ವಾಭಾವಿಕವಾಗಿ ಒಂದು ಪ್ರಶ್ನೆ ಉದ್ಭವವಾಗುತ್ತದೆ. ಹಾಗಾದರೆ, ಯಹೂದಿಗಳಲ್ಲಿ ಒಳ್ಳೆಯವರು ಯಾರೂ ಇರಲಿಲ್ಲವೇ? ಇದ್ದರೆ ಅವರಿಗೆ ಅಲ್ಲಾಹು ಏನು ಪ್ರತಿಫಲ ನೀಡಿದ್ದಾನೆ? ಇದಕ್ಕೆ ಉತ್ತರವಾಗಿ, ಈ ವಚನ ಅವತೀರ್ಣವಾಗಿದೆ. ಅಂದರೆ, ಯಹೂದಿಗಳಲ್ಲಿ ಮಾತ್ರವಲ್ಲ, ಕ್ರೈಸ್ತರು, ಸಾಬಿಗಳು ಮುಂತಾದವರಲ್ಲಿಯೂ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಆಗಮನಕ್ಕೆ ಮುಂಚೆ ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿಟ್ಟು, ಸತ್ಕಾರ್ಯಗಳನ್ನು ಮಾಡಿದ್ದರೆ ಅವರೆಲ್ಲರೂ ಮೋಕ್ಷ ಪಡೆಯುತ್ತಾರೆ. ಅದೇ ರೀತಿ, ಈಗ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ಸಂದೇಶದಲ್ಲಿ ವಿಶ್ವಾಸವಿಡುವವರು ಕೂಡ ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ಸರಿಯಾಗಿ ವಿಶ್ವಾಸವಿಟ್ಟು ಸತ್ಕಾರ್ಯಗಳನ್ನು ಮಾಡಿದರೆ ಅವರು ಕೂಡ ಮೋಕ್ಷ ಪಡೆಯುತ್ತಾರೆ. [ನೋಡಿ: 3:19, 3:85]

التفاسير:

external-link copy
63 : 2

وَاِذْ اَخَذْنَا مِیْثَاقَكُمْ وَرَفَعْنَا فَوْقَكُمُ الطُّوْرَ ؕ— خُذُوْا مَاۤ اٰتَیْنٰكُمْ بِقُوَّةٍ وَّاذْكُرُوْا مَا فِیْهِ لَعَلَّكُمْ تَتَّقُوْنَ ۟

ನಾವು ನಿಮ್ಮಿಂದ ಕರಾರನ್ನು ಪಡೆದುಕೊಂಡ ಮತ್ತು ನಿಮ್ಮ ಮೇಲೆ ತೂರ್ ಪರ್ವತವನ್ನು ಎತ್ತಿಹಿಡಿದ ಸಂದರ್ಭ. (ನಾವು ಹೇಳಿದೆವು): “ನಾವು ನಿಮಗೆ ನೀಡಿದ್ದನ್ನು ಬಿಗಿಯಾಗಿ ಹಿಡಿಯಿರಿ ಮತ್ತು ಅದರಲ್ಲಿರುವುದನ್ನು ನೆನಪಿಟ್ಟುಕೊಳ್ಳಿರಿ; ನೀವು ದೇವಭಯವುಳ್ಳವರಾಗುವುದಕ್ಕಾಗಿ.” info
التفاسير:

external-link copy
64 : 2

ثُمَّ تَوَلَّیْتُمْ مِّنْ بَعْدِ ذٰلِكَ ۚ— فَلَوْلَا فَضْلُ اللّٰهِ عَلَیْكُمْ وَرَحْمَتُهٗ لَكُنْتُمْ مِّنَ الْخٰسِرِیْنَ ۟

ನಂತರ, ಅದರ ಬಳಿಕವೂ ನೀವು ವಿಮುಖರಾದಿರಿ. ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ, ನೀವು ನಷ್ಟ ಹೊಂದಿದವರಲ್ಲಿ ಸೇರುತ್ತಿದ್ದಿರಿ. info
التفاسير:

external-link copy
65 : 2

وَلَقَدْ عَلِمْتُمُ الَّذِیْنَ اعْتَدَوْا مِنْكُمْ فِی السَّبْتِ فَقُلْنَا لَهُمْ كُوْنُوْا قِرَدَةً خٰسِـِٕیْنَ ۟ۚ

ನಿಮ್ಮ ಪೈಕಿ ಸಬ್ಬತ್‌ನ[1] ವಿಷಯದಲ್ಲಿ ಅತಿರೇಕವೆಸಗಿದವರ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ನಾವು ಅವರೊಡನೆ ಹೇಳಿದೆವು: “ನೀವು ಹೊಲಸು ಕಪಿಗಳಾಗಿ ಬಿಡಿ.” info

[1] ಸಬ್ಬತ್ ಎಂದರೆ ಶನಿವಾರ. ಅಂದು ಯಹೂದಿಗಳಿಗೆ ಮೀನು ಹಿಡಿಯುವುದು ಹಾಗೂ ಇತರ ಎಲ್ಲಾ ಲೌಕಿಕ ಕೆಲಸ ಮಾಡುವುದನ್ನು ನಿಷೇಧಿಸಲಾಗಿತ್ತು. ಅವರಿಗೆ ಒಂದು ಪರೀಕ್ಷೆಯೋ ಎಂಬಂತೆ ಶನಿವಾರ ಮೀನುಗಳು ಹೆಚ್ಚು ಹೆಚ್ಚಾಗಿ ಕಾಣುತ್ತಿದ್ದವು. ಆದ್ದರಿಂದ, ಅವರು ಶನಿವಾರ ಬಲೆ ಹಾಕಿ ಭಾನುವಾರ ಮೀನು ಹಿಡಿಯುವ ಉಪಾಯ ಮಾಡಿದರು. ಇದು ದೈವಿಕ ಆಜ್ಞೆಯ ಸ್ಪಷ್ಟ ಉಲ್ಲಂಘನೆಯಾಗಿತ್ತು.

التفاسير:

external-link copy
66 : 2

فَجَعَلْنٰهَا نَكَالًا لِّمَا بَیْنَ یَدَیْهَا وَمَا خَلْفَهَا وَمَوْعِظَةً لِّلْمُتَّقِیْنَ ۟

ನಾವು ಅದನ್ನು ಆ ಕಾಲದವರಿಗೂ, ಅದರ ನಂತರದವರಿಗೂ ಒಂದು ನೀತಿಪಾಠ ಮತ್ತು ದೇವಭಯವುಳ್ಳವರಿಗೆ ಉಪದೇಶವೆಂಬಂತೆ ಮಾಡಿದೆವು. info
التفاسير:

external-link copy
67 : 2

وَاِذْ قَالَ مُوْسٰی لِقَوْمِهٖۤ اِنَّ اللّٰهَ یَاْمُرُكُمْ اَنْ تَذْبَحُوْا بَقَرَةً ؕ— قَالُوْۤا اَتَتَّخِذُنَا هُزُوًا ؕ— قَالَ اَعُوْذُ بِاللّٰهِ اَنْ اَكُوْنَ مِنَ الْجٰهِلِیْنَ ۟

ಮೂಸಾ ತಮ್ಮ ಜನರೊಡನೆ ಹೇಳಿದ ಸಂದರ್ಭ: “ಅಲ್ಲಾಹು ನಿಮ್ಮೊಡನೆ ಒಂದು ಹಸುವನ್ನು ಕೊಯ್ಯಲು ಆದೇಶಿಸುತ್ತಿದ್ದಾನೆ.”[1] ಅವರು ಕೇಳಿದರು: “ಏನು ನೀವು ನಮ್ಮನ್ನು ಅಣಕಿಸುತ್ತಿದ್ದೀರಾ?” ಮೂಸಾ ಹೇಳಿದರು: “ಅವಿವೇಕಿಗಳಲ್ಲಿ ಸೇರದಂತೆ ನಾನು ಅಲ್ಲಾಹನಲ್ಲಿ ಅಭಯ ಕೋರುತ್ತೇನೆ.” info

[1] ಇಸ್ರಾಯೇಲರಲ್ಲಿ ಒಬ್ಬ ಮಕ್ಕಳಿಲ್ಲದ ಶ್ರೀಮಂತ ವ್ಯಕ್ತಿಯಿದ್ದ. ಅವನ ಸೋದರಳಿಯ ಮಾತ್ರ ಅವನ ವಾರೀಸುದಾರನಾಗಿದ್ದ. ಒಂದು ರಾತ್ರಿ ಸೋದರಳಿಯ ಚಿಕ್ಕಪ್ಪನನ್ನು ಕೊಂದು ಶವವನ್ನು ಬೇರೊಬ್ಬ ವ್ಯಕ್ತಿಯ ಮನೆಯ ಬಾಗಿಲ ಬಳಿ ಹಾಕಿದ. ಬೆಳಗಾದಾಗ, ಕೊಲೆಗಾರನ ಹುಡುಕಾಟದಲ್ಲಿ ಇಸ್ರಾಯೇಲರು ಪರಸ್ಪರ ಜಗಳ ಮಾಡತೊಡಗಿದರು. ಅಂತಿಮವಾಗಿ, ವಿಷಯವು ಮೂಸಾರ (ಅವರ ಮೇಲೆ ಶಾಂತಿಯಿರಲಿ) ಬಳಿ ತಲುಪಿತು. ಆಗ ಅವರು, "ಒಂದು ಹಸುವನ್ನು ಕೊಯ್ದು ಅದರ ಒಂದು ಅಂಗದಿಂದ ಸತ್ತ ವ್ಯಕ್ತಿಗೆ ಬಡಿಯಿರಿ; ಆಗ ಆತ ಜೀವಂತ ಎದ್ದು ಕೊಲೆಗಾರ ಯಾರೆಂದು ಹೇಳುತ್ತಾನೆ" ಎಂದರು. ಮೂಸಾರ ಮಾತು ಕೇಳಿದಾಗ ಅವರೆಲ್ಲರೂ ಗೊಳ್ಳೆಂದು ನಕ್ಕರು.

التفاسير:

external-link copy
68 : 2

قَالُوا ادْعُ لَنَا رَبَّكَ یُبَیِّنْ لَّنَا مَا هِیَ ؕ— قَالَ اِنَّهٗ یَقُوْلُ اِنَّهَا بَقَرَةٌ لَّا فَارِضٌ وَّلَا بِكْرٌ ؕ— عَوَانٌ بَیْنَ ذٰلِكَ ؕ— فَافْعَلُوْا مَا تُؤْمَرُوْنَ ۟

ಅವರು ಹೇಳಿದರು:”ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ; ಅದು (ಹಸು) ಯಾವುದೆಂದು ಅವನು ನಮಗೆ ವಿವರಿಸಿಕೊಡಲಿ.” ಮೂಸಾ ಹೇಳಿದರು: “ಅದು ಮುದಿ ಪ್ರಾಯದ್ದೋ ಅಥವಾ ಎಳೆಯ ಪ್ರಾಯದ್ದೋ ಅಲ್ಲದ ಅದರ ನಡುವಿನ ಪ್ರಾಯದ ಹಸುವಾಗಿದೆಯೆಂದು ಅವನು ಹೇಳುತ್ತಿದ್ದಾನೆ. ಆದ್ದರಿಂದ ನಿಮಗೆ ಆದೇಶಿಸಲಾಗುವಂತೆ ಕಾರ್ಯೋನ್ಮುಖರಾಗಿರಿ.” info
التفاسير:

external-link copy
69 : 2

قَالُوا ادْعُ لَنَا رَبَّكَ یُبَیِّنْ لَّنَا مَا لَوْنُهَا ؕ— قَالَ اِنَّهٗ یَقُوْلُ اِنَّهَا بَقَرَةٌ صَفْرَآءُ ۙ— فَاقِعٌ لَّوْنُهَا تَسُرُّ النّٰظِرِیْنَ ۟

ಅವರು ಹೇಳಿದರು: “ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿರಿ; ಅದರ ಬಣ್ಣ ಯಾವುದೆಂದು ಅವನು ನಮಗೆ ವಿವರಿಸಿಕೊಡಲಿ.” ಮೂಸಾ ಹೇಳಿದರು: “ಅದು ಶುಭ್ರ ಹಳದಿ ಬಣ್ಣದ ಹಸುವಾಗಿದ್ದು ನೋಡುಗರನ್ನು ಮುದಗೊಳಿಸುತ್ತದೆ ಎಂದು ಅವನು (ಅಲ್ಲಾಹು) ಹೇಳುತ್ತಿದ್ದಾನೆ.” info
التفاسير: