ನೀವು ಅವರ ಬೇಡಿಕೆಯ ಪ್ರಕಾರ ಯಾವುದೇ ದೃಷ್ಟಾಂತಗಳನ್ನು ಅವರ ಮುಂದೆ ಪ್ರಕಟಗೊಳಿಸದಿದ್ದರೆ. ಅವರು (ಹಾಸ್ಯದೊಂದಿಗೆ) ಹೇಳುವರು: ನೀವು ಈ ದೃಷ್ಟಾಂತವನ್ನೇಕೆ ಸ್ವತಃ ರಚಿಸಿ ತರಲಿಲ್ಲ? ಹೇಳಿರಿ: ನನ್ನ ಪ್ರಭುವಿನ ವತಿಯಿಂದ ನನ್ನ ಮೇಲೆ ಕಳುಹಿಸಲಾಗುವ ಆದೇಶವನ್ನು ನಾನು ಅನುಸರಿಸುತ್ತಿದ್ದೇನೆ. ಇವು ನಿಮ್ಮ ಪ್ರಭುವಿನ ಕಡೆಯ ಸಾಕಷ್ಟು ಪುರಾವೆಗಳಾಗಿವೆ ಮತ್ತು ವಿಶ್ವಾಸವಿಡುವ ಜನತೆಗೆ ಮಾರ್ಗದರ್ಶನವೂ, ಕಾರುಣ್ಯವೂ ಆಗಿದೆ.
ಖಂಡಿತವಾಗಿಯು ನಿಮ್ಮ ಪ್ರಭುವಿನ ಬಳಿಯಿರುವವರು (ದೇವಚರರು) ಅವನ ಆರಾಧನೆ ಮಾಡುವುದರಿಂದ ಅಹಂಕಾರ ತೋರುವುದಿಲ್ಲ ಮತ್ತು ಅವರು ಅವನ ಪಾವನತೆಯನ್ನು ಕೊಂಡಾಡುತ್ತಾರೆ ಮತ್ತು ಅವನಿಗೆ ಸಾಷ್ಟಾಂಗವೆರಗುತ್ತಾರೆ.