ವ್ಯಭಿಚಾರಣಿ ಹಾಗೂ ವ್ಯಭಿಚಾರಿಗಳಿಬ್ಬರಲ್ಲಿ (ಅವಿವಾಹಿತ) ಪ್ರತಿಯೊಬ್ಬರಿಗೂ ನೂರು ಚಾಟಿಯೇಟುಗಳನ್ನು ಕೊಡಿರಿ ಮತ್ತು ನೀವು ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ ವಿಶ್ವಾಸಿವಿರಿಸುವವರಾಗಿದ್ದರೆ ಅಲ್ಲಾಹನ ನಿಯಮವನ್ನು ಜಾರಿಗೊಳಿಸುವಾಗ ಅವರ ಮೇಲೆ ನಿಮಗೆ ಎಂದಿಗೂ ಕನಿಕರವುಂಟಾಗ ಕೂಡದು. ಅವರ ಶಿಕ್ಷೆಯ ಸಂದರ್ಭದಲ್ಲಿ ಸತ್ಯವಿಶ್ವಾಸಿಗಳ ಒಂದು ಸಮೂಹವು ಉಪಸ್ಥಿತವಿರಿಲಿ.
ವ್ಯಾಭಿಚಾರಿಯು ವ್ಯಭಿಚಾರಿಣಿ ಅಥವಾ ಬಹುದೇವಾರಾಧಕಿಯ ಹೊರತು ಇನ್ನಾರನ್ನೂ ವಿವಾಹವಾಗಲಾರನು. ಮತ್ತು ವ್ಯಭಿಚಾರಿಣಿಯು ವ್ಯಭಿಚಾರಿ ಅಥವಾ ಬಹುದೇವಾರಾಧಕನ ಹೊರತು ಇನ್ನಾರನ್ನೂ ವಿವಾಹವಾಗಲಾರಳು ಮತ್ತು ಇದು ಸತ್ಯ ವಿಶ್ವಾಸಿಗಳ ಮೇಲೆ ನಿಷಿದ್ಧಗೊಳಿಸಲಾಗಿದೆ.
ಯಾರು ಸುಶೀಲೆ ಸ್ತಿçÃಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವರೋ ಆ ಬಳಿಕ ನಾಲ್ಕು ಸಾಕ್ಷಿಗಳನ್ನು ತರಲಾರರೋ ಅಂತವರಿಗೆ ನೀವು ಎಂಬತ್ತು ಚಾಟಿಯೇಟು ಕೊಡಿರಿ ಮತ್ತು ಎಂದಿಗೂ ಅವರ ಸಾಕ್ಷö್ಯವನ್ನು ಸ್ವೀಕರಿಸಬೇಡಿರಿ. ಅವರು ಆಜ್ಞೋಲ್ಲಂಘಕ ಜನರಾಗಿದ್ದಾರೆ.
ಯಾರು ತಮ್ಮ ಪತ್ನಿಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುತ್ತಾರೋ ಹಾಗೂ ಅವರಿಗೆ ಸ್ವತಃ ತಮ್ಮ ಹೊರತು ಇನ್ನಾರೂ ಸಾಕ್ಷಿಗಳಿರದಿದ್ದರೆ ಅಂತಹವರಲ್ಲಿ ಪ್ರತಿಯೊಬ್ಬನ ಪುರಾವೆಯೇನೆಂದರೆ ಅಲ್ಲಾಹನ ಮೇಲೆ ನಾಲ್ಕು ಬಾರಿ ಆಣೆ ಹಾಕಿ ನಾನು ಸತ್ಯವಂತನಾಗಿರುವೆನೆAದು ಹೇಳಬೇಕಾಗಿರುತ್ತದೆ.
ಅಲ್ಲಾಹನ ಅನುಗ್ರಹವೂ ಮತ್ತು ಅವನ ಕರುಣೆಯೂ ನಿಮ್ಮ ಮೇಲೆ ಇಲ್ಲದಿರುತ್ತಿದ್ದರೆ (ನಿಮ್ಮ ಮೇಲೆ ವಿಪತ್ತು ಎರಗಿಬಿಡುತ್ತಿತ್ತು.) ಮತ್ತು ಖಂಡಿತವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನು, ಯುಕ್ತಿಪೂರ್ಣನು ಆಗಿದ್ದಾನೆ.