ترجمهٔ معانی قرآن کریم - ترجمه‌ى كنادى ـ بشير ميسورى

ಅನ್ನೂರ್

external-link copy
1 : 24

سُوْرَةٌ اَنْزَلْنٰهَا وَفَرَضْنٰهَا وَاَنْزَلْنَا فِیْهَاۤ اٰیٰتٍۢ بَیِّنٰتٍ لَّعَلَّكُمْ تَذَكَّرُوْنَ ۟

ಇದು ನಾವು ಅವತೀರ್ಣಗೊಳಿಸಿರುವ ಮತ್ತು ಕಡ್ಡಾಯಗೊಳಿಸಿರುವ ಒಂದು ಅಧ್ಯಾಯವಾಗಿದೆ ಮತ್ತು ನೀವು ಸ್ಮರಿಸಿಕೊಳ್ಳಲೆಂದು ನಾವಿದರಲ್ಲಿ ಸುಸ್ಪಷ್ಟವಾದ (ನಿಯಮ)ಗಳನ್ನು ಇಳಿಸಿರುತ್ತೇವೆ. info
التفاسير:

external-link copy
2 : 24

اَلزَّانِیَةُ وَالزَّانِیْ فَاجْلِدُوْا كُلَّ وَاحِدٍ مِّنْهُمَا مِائَةَ جَلْدَةٍ ۪— وَّلَا تَاْخُذْكُمْ بِهِمَا رَاْفَةٌ فِیْ دِیْنِ اللّٰهِ اِنْ كُنْتُمْ تُؤْمِنُوْنَ بِاللّٰهِ وَالْیَوْمِ الْاٰخِرِ ۚ— وَلْیَشْهَدْ عَذَابَهُمَا طَآىِٕفَةٌ مِّنَ الْمُؤْمِنِیْنَ ۟

ವ್ಯಭಿಚಾರಣಿ ಹಾಗೂ ವ್ಯಭಿಚಾರಿಗಳಿಬ್ಬರಲ್ಲಿ (ಅವಿವಾಹಿತ) ಪ್ರತಿಯೊಬ್ಬರಿಗೂ ನೂರು ಚಾಟಿಯೇಟುಗಳನ್ನು ಕೊಡಿರಿ ಮತ್ತು ನೀವು ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ ವಿಶ್ವಾಸಿವಿರಿಸುವವರಾಗಿದ್ದರೆ ಅಲ್ಲಾಹನ ನಿಯಮವನ್ನು ಜಾರಿಗೊಳಿಸುವಾಗ ಅವರ ಮೇಲೆ ನಿಮಗೆ ಎಂದಿಗೂ ಕನಿಕರವುಂಟಾಗ ಕೂಡದು. ಅವರ ಶಿಕ್ಷೆಯ ಸಂದರ್ಭದಲ್ಲಿ ಸತ್ಯವಿಶ್ವಾಸಿಗಳ ಒಂದು ಸಮೂಹವು ಉಪಸ್ಥಿತವಿರಿಲಿ. info
التفاسير:

external-link copy
3 : 24

اَلزَّانِیْ لَا یَنْكِحُ اِلَّا زَانِیَةً اَوْ مُشْرِكَةً ؗ— وَّالزَّانِیَةُ لَا یَنْكِحُهَاۤ اِلَّا زَانٍ اَوْ مُشْرِكٌ ۚ— وَحُرِّمَ ذٰلِكَ عَلَی الْمُؤْمِنِیْنَ ۟

ವ್ಯಾಭಿಚಾರಿಯು ವ್ಯಭಿಚಾರಿಣಿ ಅಥವಾ ಬಹುದೇವಾರಾಧಕಿಯ ಹೊರತು ಇನ್ನಾರನ್ನೂ ವಿವಾಹವಾಗಲಾರನು. ಮತ್ತು ವ್ಯಭಿಚಾರಿಣಿಯು ವ್ಯಭಿಚಾರಿ ಅಥವಾ ಬಹುದೇವಾರಾಧಕನ ಹೊರತು ಇನ್ನಾರನ್ನೂ ವಿವಾಹವಾಗಲಾರಳು ಮತ್ತು ಇದು ಸತ್ಯ ವಿಶ್ವಾಸಿಗಳ ಮೇಲೆ ನಿಷಿದ್ಧಗೊಳಿಸಲಾಗಿದೆ. info
التفاسير:

external-link copy
4 : 24

وَالَّذِیْنَ یَرْمُوْنَ الْمُحْصَنٰتِ ثُمَّ لَمْ یَاْتُوْا بِاَرْبَعَةِ شُهَدَآءَ فَاجْلِدُوْهُمْ ثَمٰنِیْنَ جَلْدَةً وَّلَا تَقْبَلُوْا لَهُمْ شَهَادَةً اَبَدًا ۚ— وَاُولٰٓىِٕكَ هُمُ الْفٰسِقُوْنَ ۟ۙ

ಯಾರು ಸುಶೀಲೆ ಸ್ತಿçÃಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವರೋ ಆ ಬಳಿಕ ನಾಲ್ಕು ಸಾಕ್ಷಿಗಳನ್ನು ತರಲಾರರೋ ಅಂತವರಿಗೆ ನೀವು ಎಂಬತ್ತು ಚಾಟಿಯೇಟು ಕೊಡಿರಿ ಮತ್ತು ಎಂದಿಗೂ ಅವರ ಸಾಕ್ಷö್ಯವನ್ನು ಸ್ವೀಕರಿಸಬೇಡಿರಿ. ಅವರು ಆಜ್ಞೋಲ್ಲಂಘಕ ಜನರಾಗಿದ್ದಾರೆ. info
التفاسير:

external-link copy
5 : 24

اِلَّا الَّذِیْنَ تَابُوْا مِنْ بَعْدِ ذٰلِكَ وَاَصْلَحُوْا ۚ— فَاِنَّ اللّٰهَ غَفُوْرٌ رَّحِیْمٌ ۟

ಆದರೆ ಪಶ್ಚಾತ್ತಾಪ ಪಟ್ಟು ಸುಧಾರಣೆ ಮಾಡಿಕೊಂಡವರ ಹೊರತು ನಿಶ್ಚಯವಾಗಿಯೂ ಅಲ್ಲಾಹನು ಕ್ಷಮಾಶೀಲನು ಕರುಣಾನಿಧಿಯು ಆಗಿರುತ್ತಾನೆ. info
التفاسير:

external-link copy
6 : 24

وَالَّذِیْنَ یَرْمُوْنَ اَزْوَاجَهُمْ وَلَمْ یَكُنْ لَّهُمْ شُهَدَآءُ اِلَّاۤ اَنْفُسُهُمْ فَشَهَادَةُ اَحَدِهِمْ اَرْبَعُ شَهٰدٰتٍۢ بِاللّٰهِ ۙ— اِنَّهٗ لَمِنَ الصّٰدِقِیْنَ ۟

ಯಾರು ತಮ್ಮ ಪತ್ನಿಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುತ್ತಾರೋ ಹಾಗೂ ಅವರಿಗೆ ಸ್ವತಃ ತಮ್ಮ ಹೊರತು ಇನ್ನಾರೂ ಸಾಕ್ಷಿಗಳಿರದಿದ್ದರೆ ಅಂತಹವರಲ್ಲಿ ಪ್ರತಿಯೊಬ್ಬನ ಪುರಾವೆಯೇನೆಂದರೆ ಅಲ್ಲಾಹನ ಮೇಲೆ ನಾಲ್ಕು ಬಾರಿ ಆಣೆ ಹಾಕಿ ನಾನು ಸತ್ಯವಂತನಾಗಿರುವೆನೆAದು ಹೇಳಬೇಕಾಗಿರುತ್ತದೆ. info
التفاسير:

external-link copy
7 : 24

وَالْخَامِسَةُ اَنَّ لَعْنَتَ اللّٰهِ عَلَیْهِ اِنْ كَانَ مِنَ الْكٰذِبِیْنَ ۟

ಐದನೆಯ ಬಾರಿ ನಾನು ಸುಳ್ಳುನಾಗಿದ್ದರೆ ನನ್ನ ಮೇಲೆ ಅಲ್ಲಾಹನ ಶಾಪವಿರಲಿ ಎಂದು ಹೇಳಬೇಕು. info
التفاسير:

external-link copy
8 : 24

وَیَدْرَؤُا عَنْهَا الْعَذَابَ اَنْ تَشْهَدَ اَرْبَعَ شَهٰدٰتٍۢ بِاللّٰهِ ۙ— اِنَّهٗ لَمِنَ الْكٰذِبِیْنَ ۟ۙ

ಆಕೆಯನ್ನು ಶಿಕ್ಷೆಯಿಂದ ತಪ್ಪಿಸುವ ಕ್ರಮವೇನೆಂದರೆ ಆಕೆಯು ನಾಲ್ಕು ಬಾರಿ ಅಲ್ಲಾಹನ ಮೇಲೆ ಆಣೆ ಹಾಕಿ ನಿಜವಾಗಿಯೂ ಅವನು (ಪತಿಯು) ಸುಳ್ಳಾರೋಪಿಯೆಂದು ಹೇಳಬೇಕು. info
التفاسير:

external-link copy
9 : 24

وَالْخَامِسَةَ اَنَّ غَضَبَ اللّٰهِ عَلَیْهَاۤ اِنْ كَانَ مِنَ الصّٰدِقِیْنَ ۟

ಐದನೆಯ ಬಾರಿ ಅವನು ಸತ್ಯವಂತರಲ್ಲಾಗಿದ್ದರೆ ತನ್ನ ಮೇಲೆ ಖಂಡಿತ ಅಲ್ಲಾಹನ ಶಾಪವಿರಲಿ ಎಂದು ಹೇಳಬೇಕು. info
التفاسير:

external-link copy
10 : 24

وَلَوْلَا فَضْلُ اللّٰهِ عَلَیْكُمْ وَرَحْمَتُهٗ وَاَنَّ اللّٰهَ تَوَّابٌ حَكِیْمٌ ۟۠

ಅಲ್ಲಾಹನ ಅನುಗ್ರಹವೂ ಮತ್ತು ಅವನ ಕರುಣೆಯೂ ನಿಮ್ಮ ಮೇಲೆ ಇಲ್ಲದಿರುತ್ತಿದ್ದರೆ (ನಿಮ್ಮ ಮೇಲೆ ವಿಪತ್ತು ಎರಗಿಬಿಡುತ್ತಿತ್ತು.) ಮತ್ತು ಖಂಡಿತವಾಗಿಯೂ ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನು, ಯುಕ್ತಿಪೂರ್ಣನು ಆಗಿದ್ದಾನೆ. info
التفاسير: